ವರ್ಣಭೇದ: ಅಮ್ಮ-ಮಗನನ್ನು ಪಾರ್ಕ್​ನಿಂದಲೇ ಓಡಿಸಿದ ಮಕ್ಕಳು [Viral Video]

news18
Updated:May 25, 2018, 1:45 PM IST
ವರ್ಣಭೇದ: ಅಮ್ಮ-ಮಗನನ್ನು ಪಾರ್ಕ್​ನಿಂದಲೇ ಓಡಿಸಿದ ಮಕ್ಕಳು [Viral Video]
FB : Mario Whyte Caletrio
news18
Updated: May 25, 2018, 1:45 PM IST
ನ್ಯೂಸ್​ 18 ಕನ್ಡ

ಸ್ಪೈನ್​: ಕಪ್ಪು ಬಿಳುಪು ಎಂಬ ವರ್ಣಭೇದ ನೀತಿಯಿಂದ ಒಂದೆಡೆ ಜನ ಕಂಗೆಟ್ಟಿದ್ದರೆ ಸ್ಪೈನ ಬಿಲ್ಬಾವೊದ ಪಾರ್ಕ್​ನಲ್ಲಿ 10ಕ್ಕೂ ಸಣ್ಣ ಪ್ರಾಯದ ಮಕ್ಕಳೇ ಕಪ್ಪು ಬಣ್ಣದವನೆಂಬ ಕಾರಣ ಬಾಲಕನನ್ನು ಪಾರ್ಕ್​ನಿಂದ ಹೊರಗಟ್ಟಿದ ಮನಕಲುಕುವ ಘಟನೆ ನಡೆದಿದೆ.

ಈ ಘಟನೆ ಸುಮಾರು ಒಂದು ತಿಂಗಳ ಹಿಂದೆ ನಡೆದಿದ್ದು, ಪಾರ್ಕ್​ನಲ್ಲಿ ಆಡಲು ಬಂದಿದ್ದ ಬಾಲಕ ತನ್ನ ತಾಯಿಯೊಂದಿಗೆ ಇಳಿಬಂಡಿಯಲ್ಲಿ ಕೂರಲು ಯತ್ನಿಸಿದ್ದಾನೆ, ಈ ವೇಳೆ ಅಲ್ಲೇ ಇದ್ದ ಕೆಲ ಮಕ್ಕಳು ಬಾಲಕನ ಬಣ್ಣ ಕಪ್ಪು ಎಂಬ ಕಾರಣಕ್ಕೆ ಆಟವಾಡಲು ಬಿಡಲಿಲ್ಲ. ಈ ವೇಳೆ ಮಗುವಿನ ತಾಯಿ ಸಹಾಯಕ್ಕೆ ಬಂದರೂ ಮಕ್ಕಳು ಮಾತ್ರಾ ಇದ್ಯಾವುದಕ್ಕೂ ಜಗ್ಗಲಿಲ್ಲ.ಹೀಗಾಗಿ ತಾಯಿ ಮತ್ತು ಮಗ ಬೇರೆ ಸ್ಥಳದಲ್ಲಿ ಆಡಲು ತೆರಳಿದ್ದಾರೆ, ಇಷ್ಟಕ್ಕೇ ಸುಮ್ಮನಾಗದ ಸಣ್ಣ ಮಕ್ಕಳು ಅಲ್ಲಿಗೂ ಬಂದು ಬಾಲಕನ ಕೂದಲೆಳೆದಿದ್ದಾರೆ, ಅಲ್ಲದೇ ಬ್ಲಾಕ್​ ಬಾಯ್​ ಎಂದು ಕೂಗಿದ್ದಾರೆ. ಇವೆಲ್ಲವನ್ನೂ ನೋಡುತ್ತಿದ್ದ ಪೋಷಕರು ಯಾವುದೇ ಕಾರಣಕ್ಕೂ ಮಕ್ಕಳನ್ನು ತಡೆಯುವ ಪ್ರಯತ್ನ ಕೂಡಾ ಮಾಡಿಲ್ಲ. ಬದಲಾಗಿ ತಮ್ಮಷ್ಟಕ್ಕೆ ತಾವೇ ಮೌನವಹಿಸಿದ್ದಾರೆ,

ಇದನ್ನೆಲ್ಲಾ ಕಂಡು ಬೇಸರಗೊಂಡ ಮಗು ಮತ್ತು ತಾಯಿ ಇಬ್ಬರೂ ಬೇರೆ ಪಾರ್ಕ್​ಗೆ ತೆರಳಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಆದರೆ ಕೆಲವೇ ದಿನಗಳಲ್ಲಿ 20 ಮಿಲಿಯನ್​ ವೀಕ್ಷಣೆಯಾಗಿದೆ.
First published:May 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ