Queen Elizabeth-II: ಹ್ಯಾಂಡ್ ಬ್ಯಾಗ್​ ಮೂಲಕವೇ ಸಿಬ್ಬಂದಿಗೆ ಸೀಕ್ರೆಟ್​ ಸಿಗ್ನಲ್ ಕೊಡುತ್ತಿದ್ದ ಬ್ರಿಟನ್ ರಾಣಿ!

ರಾಣಿ ಎಲಿಜಬೆತ್‌ ತಮ್ಮ ಅತ್ಯದ್ಭುತ ಉಡುಗೆ ತೊಡುಗೆಯಿಂದ ಮತ್ತಷ್ಟು ಸುಂದರವಾಗಿ ಕಾಣಿಸಿಕೊಳ್ಳುತ್ತಿದ್ದರು. ಇನ್ನು ಅವರು ಉಡುಗೆಗೆ ತಕ್ಕನಾದ ಬ್ಯಾಗ್‌ ಕೊಂಡೊಯ್ಯುತ್ತಿದ್ದರು. ಅವರ ವ್ಯಾನಿಟಿ ಬ್ಯಾಗ್‌ ಕೇವಲ ಅಗತ್ಯ ವಸ್ತುಗಳನ್ನು ಇಟ್ಟುಕೊಳ್ಳುವ ಬದಲಾಗಿ ಅದನ್ನು ರಹಸ್ಯ ಸಂಕೇತಗಳನ್ನು ನೀಡುವ ಸಲುವಾಗಿಯೂ ಎಲಿಜಬೆತ್‌ ಬಳಸುತ್ತಿದ್ದರು.

ಬ್ರಿಟನ್‌ ರಾಣಿ ಎಲಿಜಬೆತ್‌ ಅವರ ಹ್ಯಾಂಡ್ ಬ್ಯಾಗ್

ಬ್ರಿಟನ್‌ ರಾಣಿ ಎಲಿಜಬೆತ್‌ ಅವರ ಹ್ಯಾಂಡ್ ಬ್ಯಾಗ್

  • Share this:
ರಾಣಿ ಎಲಿಜಬೆತ್‌ (Queen Elizabeth) ಸಾವಿನ ನಂತರ ಸಾಕಷ್ಟು ಕುತೂಹಲಕಾರಿ ವಿಚಾರಗಳು ಬೆಳಕಿಗೆ ಬರುತ್ತಿವೆ. ಅವರ ಅಭ್ಯಾಸಗಳು, ಉಡುಗೆ ತೊಡುಗೆ, ವಿಚಾರಗಳು, ರೂಢಿಗಳು, ನಿರ್ಧಾರಗಳು, ಜೀವನಶೈಲಿ (Lifestyle) ಸೇರಿದಂತೆ ಸಾಕಷ್ಟು ವಿಚಾರಗಳು ಅಚ್ಚರಿಗೊಳಿಸುತ್ತವೆ. ಅಂಥ ಹಲವಾರು ವಿಚಾರಗಳಲ್ಲೊಂದು ಅವರ ಬ್ಯಾಗ್‌ ಮತ್ತು ಅದನ್ನು ಬಳಸಲ್ಪಡುತ್ತಿದ್ದ ರೀತಿ. ರಾಣಿ ಎಲಿಜಬೆತ್‌ ಉಡುಗೆ ತೊಡುಗೆ ಬಹಳ ಪ್ರಸಿದ್ಧಿಯೇ.. ಸ್ವಾಭಾವಿಕವಾಗಿಯೇ ಸುಂದರವಾಗಿರುವ ರಾಣಿ ಎಲಿಜಬೆತ್‌ ತಮ್ಮ ಅತ್ಯದ್ಭುತ ಉಡುಗೆ ತೊಡುಗೆಯಿಂದ ಮತ್ತಷ್ಟು ಸುಂದರವಾಗಿ ಕಾಣಿಸಿಕೊಳ್ಳುತ್ತಿದ್ದರು. ಇನ್ನು ಅವರು ಉಡುಗೆಗೆ ತಕ್ಕನಾದ ಬ್ಯಾಗ್‌ ಕೊಂಡೊಯ್ಯುತ್ತಿದ್ದರು. ಅವರ ವ್ಯಾನಿಟಿ ಬ್ಯಾಗ್‌ (Vanity bag) ಕೇವಲ ಅಗತ್ಯ ವಸ್ತುಗಳನ್ನು (Important Things) ಇಟ್ಟುಕೊಳ್ಳುವ ಬದಲಾಗಿ ಅದನ್ನು ರಹಸ್ಯ ಸಂಕೇತಗಳನ್ನು ನೀಡುವ ಸಲುವಾಗಿಯೂ ಎಲಿಜಬೆತ್‌ ಬಳಸುತ್ತಿದ್ದರು.

ಹ್ಯಾಂಡ್ ಬ್ಯಾಗ್ ಮೂಲಕ ಸೀಕ್ರೇಟ್‌ ಸಿಗ್ನಲ್‌ ನೀಡ್ತಿದ್ದ ರಾಣಿ
ಹೌದು.. ಇದು ಆಶ್ಚರ್ಯ ಪಡುವಂಥ ವಿಚಾರವೇ. ತಮ್ಮ ಉಡುಪಿಗೆ ಸೂಟ್‌ ಆಗುವಂಥ ಬ್ಯಾಗ್‌ ಗಳನ್ನು ಕೊಂಡೊಯ್ಯುತ್ತಿದ್ದ ರಾಣಿ ಅದನ್ನು ಯಾವಾಗಲೂ ತೋಳಿನ ಮೇಲೆ ಇಟ್ಟು ಕೊಳ್ಳುತ್ತಿದ್ದರು. ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಸಂದರ್ಭದಲ್ಲಿ ಸೀಕ್ರೇಟ್‌ ಸಿಗ್ನಲ್‌ ನೀಡಲು ಕೂಡ ಬಳಸುತ್ತಿದ್ದರು. ಅದನ್ನು ಹೇಗೆ ಬಳಸುತ್ತಿದ್ದರು.. ಯಾವ ವಿಷಯಕ್ಕೆ ಹೇಗೆ ಬ್ಯಾಗ್‌ ಬಳಸುತ್ತಿದ್ದರು ಅನ್ನೋದು ಇನ್ನೂ ಇಂಟೆರೆಸ್ಟಿಂಗ್‌.

ಸಿಬ್ಬಂದಿಗಳಿಗೆ ಹೇಗೆ ಸೀಕ್ರೆಟ್ ಸಿಗ್ನಲ್ ನೀಡ್ತಿದ್ರು 
ಪ್ರಾಯೋಗಿಕವಾಗಿ, ಫ್ಯಾಷನ್‌ ಸ್ಟೇಟ್‌ ಮೆಂಟ್‌ ಗಳನ್ನು ಮತ್ತು ಮಾತುಕತೆಯನ್ನು ಯಾವಾಗ ಮುಗಿಸಬೇಕು ಅನ್ನೋದನ್ನು ಹೇಳುವಲ್ಲಿ ತಮ್ಮ ಬ್ಯಾಗ್‌ ಅನ್ನು ಬಳಸಿಕೊಳ್ಳುತ್ತಿದ್ದರು. ರಾಣಿ ಎಲಿಜಬೆತ್‌ ಸಾಮಾನ್ಯವಾಗಿ ವಿಐಪಿ ವ್ಯಕ್ತಿಗಳನ್ನು ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದರು. ಈ ಮಾತುಕತೆ ಸಾಕಷ್ಟು ಸಮಯವನ್ನೂ ತೆಗೆದುಕೊಳ್ಳುತ್ತಿತ್ತು. ಇದೇ ಕಾರಣಕ್ಕೆ ಅವರು ಸಾಕಷ್ಟು ಚತುರತೆಯಿಂದ ರಹಸ್ಯ ಸಂಕೇತಗಳನ್ನು ನೀಡಲು ಬ್ಯಾಗ್‌ ಬಳಸುತ್ತಿದ್ದರು. ಇದನ್ನು ಅವರ ಸಿಬ್ಬಂದಿ ಸಾಕಷ್ಟು ಎಚ್ಚರಿಕೆಯಿಂದ ಅರ್ಥಮಾಡಿಕೊಳ್ಳುತ್ತಿದ್ದರು.

ಇದನ್ನೂ ಓದಿ: Queen Elizabeth ಬರೆದ ಪತ್ರ ಓದಲು ಇನ್ನೂ 63 ವರ್ಷ ಕಾಯಬೇಕಂತೆ! ಅಷ್ಟಕ್ಕೂ ಅಂಥದ್ದೇನಿದೆ ಅದರಲ್ಲಿ?

ಬ್ಯಾಗ್ ಅನ್ನು ಒಂದು ತೋಳಿನಿಂದ ಮತ್ತೊಂದು ತೋಳಿಗೆ ಬದಲಾಯಿಸಿದರೆ ಅರ್ಥವೇನು 
ನ್ಯೂಸ್‌ ವೀಕ್‌ ನ ದಿ ರಾಯಲ್‌ ರಿಪೋರ್ಟ್‌ ಪಾಡ್‌ ಕ್ಯಾಸ್ಟ್‌ ನಲ್ಲಿ ಮಾತನಾಡಿದ ರಾಯಲ್‌ ವಿಮರ್ಶಕ ಕ್ರಿಸ್ಟನ್‌ ಮೈಂಜರ್‌ ಹೇಳುವುದೇನೆಂದರೆ, ರಾಣಿ ಎಲಿಜಬೆತ್‌ ತಮ್ಮ ಬ್ಯಾಗ್‌ ಅನ್ನು ಒಂದು ತೋಳಿನಿಂದ ಇನ್ನೊಂದು ತೋಳಿಗೆ ಬದಲಾಯಿಸಿದರೆ ಯಾರಾದರೂ ಬಂದು ತಮ್ಮ ಮಾತಿಗೆ ಅಡ್ಡಿಪಡಿಸಬೇಕೆಂಬ ಸಂಕೇತ ಆಪ್ತ ಸಿಬ್ಬಂದಿಗೆ ಹೋಗುತ್ತಿತ್ತು.

ಬ್ಯಾಗ್ ಅನ್ನು ನೆಲದ ಮೇಲೆ ಇಟ್ಟರೆ?
ಇನ್ನು ರಾಣಿಯು ಬ್ಯಾಗ್‌ ಅನ್ನು ನೆಲದ ಮೇಲಿಟ್ಟರೆ ಅದಕ್ಕೆ ಮತ್ತೊಂದು ಅರ್ಥ. ಯಾವುದೇ ಸಂದರ್ಭವನ್ನು ಅಥವಾ ಜಾಗವನ್ನು ತಕ್ಷವೇ ಬಿಟ್ಟು ಹೊರಡಬೇಕೆಂಬ ಸಂಕೇತವನ್ನು ಅವರು ತಮ್ಮ ಬ್ಯಾಗ್‌ ಅನ್ನು ನೆಲದ ಮೇಲಿಡುವುದರ ಮೂಲಕ ನೀಡುತ್ತಿದ್ದರು. ಅಲ್ಲದೇ, ತಮ್ಮ ಬೆರಳಿಗಿರುವ ಉಂಗುವನ್ನು ತಿರುಗಿಸಿದರೂ ಇದೇ ಅರ್ಥ ಎಂದು ಅವರ ಆಪ್ತ ಸಿಬ್ಬಂದಿಗಳು ಅರ್ಥ ಮಾಡಿಕೊಳ್ಳುತ್ತಿದ್ದರು.

ಬ್ಯಾಗನ್ನು ಟೇಬಲ್ ಮೇಲೆ ಇಡುವುದು? 
ಇನ್ನು ಕೆಲ ಮಾಧ್ಯಮಗಳ ವರದಿಯ ಪ್ರಕಾರ, ಮುಂದಿನ ಐದು ನಿಮಿಷಗಳಲ್ಲಿ ಊಟವನ್ನು ಮುಗಿಸಬೇಕು ಅನ್ನೋ ಅರ್ಥ ಬರುವ ಸಂಕೇತ ನೀಡಲು ಬ್ರಿಟನ್‌ ರಾಣಿ ತಮ್ಮ ಬ್ಯಾಗ್‌ ಅನ್ನು ಟೇಬಲ್‌ ಮೇಲೆ ಇಡುತ್ತಿದ್ದರು.

ಅತಿಥಿಗಳಿಗೆ ಹೋಗಲು ಹೇಳಲು ಕೂಡ ರಹಸ್ಯವಾಗಿ ಸಿಗ್ನಲ್‌ ಇತ್ತಂತೆ 
ಇನ್ನು ರಾಣಿ ಎಲಿಜಬೆತ್‌ ಬಕಿಂಗ್‌ ಹ್ಯಾಮ್‌ ಅರಮನೆಯಲ್ಲಿ ಕರೆಗಳನ್ನು ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಅತಿಥಿಗಳಿಗೆ ಅಲ್ಲಿಂದ ಹೋಗಲು ಹೇಳಲು ಕೂಡ ರಹಸ್ಯವಾಗಿ ಸಿಗ್ನಲ್‌ ನೀಡುತ್ತಿದ್ದರು. ಇದಕ್ಕಾಗಿ ಅವರು ಮರೆಮಾಚುವ ಬಝರ್‌ ಒಂದನ್ನು ಹೊಂದಿದ್ದರು. ಆ ಬಜರ್‌ ಮಾಡಿದರೆ ಸಿಬ್ಬಂದಿಗಳು ನಮ್ರವಾಗಿ ಅತಿಥಿಗಳಿಗೆ ಹೊರಡುವಂತೆ ವಿನಂತಿಸಿಕೊಳ್ಳುತ್ತಿದ್ದರು.

ಇದನ್ನೂ ಓದಿ:  Queen Elizabeth II: ಆ ಕಾರಣದಿಂದ ಮೂರು ದಶಕದ ಹಿಂದೆಯೇ ತಯಾರಾಗಿತ್ತು ರಾಣಿಯ ಶವಪೆಟ್ಟಿಗೆ!

ರಾಣಿ ಯಾವಾಗಲೂ ಕಸ್ಟಮ್‌ ಮೇಡ್‌ ಹ್ಯಾಂಡ್‌ ಬ್ಯಾಗ್‌ ಗಳನ್ನೇ ಬಳಸುತ್ತಿದ್ದರು ಅನ್ನೋದು ವಿಶೇಷ. ಅಲ್ಲದೇ ಅವರು ಹೊರಗೆ ಹೋಗುವಾಗ ಕನ್ನಡಕವನ್ನು ಆರಿಸಿಕೊಂಡ ಬಳಿಕವೇ ತಮ್ಮ ಲಿಪಸ್ಟಿಕ್‌ ಬಣ್ಣವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಹೀಗೆ ಬ್ರಿಟನ್‌ ರಾಣಿ ಎಲಿಜಬೆತ್‌ ವಿಶಿಷ್ಟ ಜೀವನ ಶೈಲಿ ಹೊಂದಿದ್ದರು. ಅಲ್ಲದೇ, ಇಂಥ ವಿಶಿಷ್ಟ ಕಲೆಗಳನ್ನು ಅಳವಡಿಸಿಕೊಂಡಿದ್ದ ಅವರ ಚಾಕಚತ್ಯಕೆಯನ್ನು ಎಂಥವರೂ ಮೆಚ್ಚಲೇಬೇಕು.
Published by:Ashwini Prabhu
First published: