• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • QR Code: ಮಗನ ನೆನಪುಳಿಸಲು ವಿಭಿನ್ನ ಕೆಲಸ ಮಾಡಿದ ಕುಟುಂಬ, ಡಿಜಿಟಲ್​ ರೂಪದಲ್ಲಿ ಅಚ್ಚಾಗಿ ಉಳಿಯಿತು ಮೆಮೋರಿಸ್​!

QR Code: ಮಗನ ನೆನಪುಳಿಸಲು ವಿಭಿನ್ನ ಕೆಲಸ ಮಾಡಿದ ಕುಟುಂಬ, ಡಿಜಿಟಲ್​ ರೂಪದಲ್ಲಿ ಅಚ್ಚಾಗಿ ಉಳಿಯಿತು ಮೆಮೋರಿಸ್​!

ಕ್ಯೂಆರ್​ ಕೋಡ್​

ಕ್ಯೂಆರ್​ ಕೋಡ್​

ಗೈರುಹಾಜರಿಯನ್ನು ಮರೆಯಲಾರದ ಕುಟುಂಬಸ್ಥರು ಅದೇ ತಂತ್ರಜ್ಞಾನದಿಂದ ಅವರ ನೆನಪುಗಳನ್ನು ಜೀವಂತವಾಗಿಡಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ಸಮಾಧಿಯ ಮೇಲೆ ಕ್ಯೂಆರ್ ಕೋಡ್ ಹಾಕಿರೋದು ಚರ್ಚೆಯ ವಿಷಯವಾಗಿದೆ.

  • Share this:
  • published by :

ಇದು ಡಿಜಿಟಲ್ (Digital) ಯುಗ. ನಾವು ಬಟ್ಟೆಗಳನ್ನ ತೆಗೆದುಕೊಳ್ಳುವುದರಿಂದ ಹಿಡಿದು ಮನೆಗೆ ತರುವಂತಹ ತರಕಾರಿಯ ತನಕ ಪ್ರತಿಯೊಂದು ಕೂಡ ಇಂಟರ್ನೆಟ್ ನಲ್ಲೆ ಕೊಂಡುಕೊಳ್ಳಬಹುದು. ನಾವು ಹಣವನ್ನು ಪಾವತಿಸುವುದು ಕೂಡ ಎಲ್ಲಾ ಕ್ಯೂಆರ್ ಕೋಡ್ ಗಳ ಮೂಲಕವೇ. ಒಟ್ಟಿನಲ್ಲಿ ಜಗತ್ತು ತಂತ್ರಜ್ಞಾನ (Technology) ಮಯವಾಗಿದೆ. ಜನರಿಗಾಗಿ ಆರಂಭವಾದ ಈ ತಂತ್ರಜ್ಞಾನ ಸರಿಯಾಗಿ ಸದ್ಬಳಕೆ ಆಗುತ್ತಾ ಇದೆ ಅಂತ ಹೇಳಬಹುದು. ಆದರೆ ಸತ್ತ ನಂತರವೂ ಕೂಡ ಕ್ಯೂಆರ್ ಕೋಡ್ ಅನ್ನು ಬಳಸಬಹುದು ಎಂಬುದಕ್ಕೆ ಇಲ್ಲೊಂದು ಸ್ಟೋರಿ (Story) ಉದಾಹರಣೆಯಾಗಿದೆ.


ಹೌದು, ಒಂದು ಕಾಲದಲ್ಲಿ ಎಲ್ಲಿ ಹೋಗಬೇಕಾದರೂ ಪರ್ಸ್ ನಲ್ಲಿ ತುಂಬಾ ದುಡ್ಡನ್ನ ಅಥವಾ ಬ್ಯಾಂಕಿಗೆ ದುಡ್ಡನ್ನ ಹಾಕಬೇಕಾದರೆ ಪರ್ಸನಲ್ಲಿ ಜೋಪಾನವಾಗಿ ತೆಗೆದುಕೊಂಡು ಹೋಗುತ್ತಿದ್ದ ಉದಾಹರಣೆಗಳಿತ್ತು. ತದ ನಂತರದಲ್ಲಿ ಆನ್ಲೈನ್ ಪೇಮೆಂಟ್ ಬಂದಾದ ಮೇಲೆ ಇದೆಲ್ಲ ಉಲ್ಟಾಪಲ್ಟ ಆಯ್ತು. ತಲೆ ಬಿಸಿಗೆ ಬ್ರೇಕ್ ಬಿದ್ದ ಹಾಗಾಯಿತು. ಕ್ಯೂಆರ್ ಕೋಡ್ ಮೂಲಕವೇ ಪಾವತಿ. ಇದಾದ ನಂತರ ಸುದ್ದಿಗಳನ್ನು ಅಥವಾ ಕಥೆಗಳನ್ನ ಕೇಳಿಸಿಕೊಳ್ಳುವ ರೀತಿ ಫೋರ್ಡ್ ಕಾಸ್ಟ್ಗಳು ಕೂಡ ಆರಂಭವಾದವು. ಜನರಿಗೆ ಇದೊಂದು ರೀತಿಯಾಗಿ ಸಹಾಯ ಆಯ್ತು.


ಇದೀಗ ಇಲ್ಲಿ ಓರ್ವ ವ್ಯಕ್ತಿ ತೀರಿ ಹೋಗಿದ್ದಾರೆ. ಅವರ ಸಮಾಧಿಯ ಮೇಲೆಯೂ ಕ್ಯೂ ಆರ್ ಕೋಡ್ ಇದೆ ಅಂತೆ. ಕಾರಣ ಕೇಳಿದ್ರೆ, ನೀವು ಭಾವುಕರಾಗ್ತೀರ!


ಕ್ಯೂಆರ್​ ಕೋಡ್​


ಆತನ ಹೆಸರು ಎವಿನ್ ಫ್ರಾನ್ಸಿಸ್. ಕೇರಳದ ತ್ರಿಚೂರ್ ನಿವಾಸಿ. ಕೇವಲ ಅಧ್ಯಯನದಲ್ಲಿ ಮಾತ್ರವಲ್ಲ, ಛಾಯಾಗ್ರಹಣ, ಕಂಪ್ಯೂಟರ್ ಸಾಫ್ಟ್ ವೇರ್, ಡಿಕೋಡಿಂಗ್ ಹೀಗೆ ಹಲವು ಪ್ರತಿಭೆಗಳನ್ನು ಹೊಂದಿದ್ದರು. ಇದಕ್ಕೂ ಮೇಲಾಗಿ ಡ್ರಮ್ಸ್, ಗಿಟಾರ್, ಕೀಬೋರ್ಡ್ ನುಡಿಸುವುದರಲ್ಲಿ ನಿಪುಣರಾಗಿದ್ದರು. ಬಹುಮುಖ ಪ್ರತಿಭೆಯಾಗಿದ್ದ ಈತ ಎಲ್ಲೇ ಇದ್ದರೂ ಸುತ್ತಲಿರುವವರಿಗೆ ಸಂತಸ ತರುತಿದ್ದರು.


ಇದನ್ನೂ ಓದಿ: ಮಾರ್ಚ್ 28ರಂದು ಬಾಹ್ಯಾಕಾಶದಲ್ಲಿ ಕೌತುಕ! ಅಪರೂಪದ ದೃಶ್ಯ ನೋಡಲು ಮರೆಯದಿರಿ


ಅಂತಹ ಎವಿನ್ ತನ್ನ 26ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. ಮರಳಿ ಬಾರದ ಲೋಕಕ್ಕೆ ಹೋದರು. ಈ ಘಟನೆ ಕುಟುಂಬಕ್ಕೆ ಆಘಾತವನ್ನುಂಟು ಮಾಡಿತು.


ತ್ರಿಚೂರಿನ ವಟ್ಟಕುಜಿಯ ಫ್ರಾನ್ಸಿಸ್ ಅವರ ಪುತ್ರ ಎವಿನ್. ಮಗ ದೂರ ಹೋಗುತ್ತಿದ್ದಂತೆ ತಂದೆಗೆ ತೀವ್ರ ದುಃಖವಾಯಿತು. ಇದನ್ನು ಗಮನಿಸಿದ ಕುಟುಂಬಸ್ಥರು ಹಾಗೂ ಸಂಬಂಧಿಕರು ಉಪಾಯ ಮಾಡಿದರು. ಡಿಜಿಟಲ್ ರೂಪದಲ್ಲಿ ನೆನಪುಗಳನ್ನು ಪ್ರದರ್ಶಿಸಿದರೆ ಹೇಗಿರುತ್ತದೆ ಎಂದು. ಎವಿನ್ ಸಮಾಧಿಯ ಮೇಲೆ QR ಕೋಡ್ ಅನ್ನು ಇಡಲಾಗಿದೆ.


ಈಗ ಯಾರಾದರೂ ಆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ತಕ್ಷಣ ಮೊಬೈಲ್ ನಲ್ಲಿ ಎವಿನ್ ಕಾಣಿಸುತ್ತದೆ. ಅವರ ಹಾಡುಗಳು ಮತ್ತು ವಿಡಿಯೋಗಳು ಸದ್ದು ಮಾಡುತ್ತಿವೆ. ಎವಿನ್ ಅವರ ಸಹೋದರಿ ಎವೆಲಿನ್ ಒಮಾನ್‌ನಲ್ಲಿ ವಾಸ್ತುಶಿಲ್ಪಿ. ಅವಳು ಈ ವ್ಯವಸ್ಥೆಯನ್ನು ಮಾಡಿದರು.


ಇದನ್ನೂ ಓದಿ: ಮೀಸೆ, ಗಡ್ಡ ಬಂತೆಂದು ಪತ್ನಿಯನ್ನು ಮನೆಯಿಂದ ಹೊರ ಹಾಕಿದ ಪತಿ, ಇದು ಗಡ್ಡ ಬಿಟ್ಟ ಮಹಿಳೆಯ ಕಥೆ!


ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದ ನಂತರ ನೋಡಬಹುದಾದ ವಿಡಿಯೋಗಳು ಮತ್ತು ಫೋಟೋಗಳಿಗಾಗಿ ಎವೆಲಿನ್ ವೆಬ್‌ಸೈಟ್ ಅನ್ನು ರಚಿಸಿದ್ದಾರೆ. ಇದು ಎವಿನ್ ಅವರ ಜೀವನ ಮತ್ತು ಅವರ ಪ್ರತಿಭೆಯ ಪ್ರಮುಖ ಅಂಶಗಳ ವೀಡಿಯೊಗಳನ್ನು ಒಳಗೊಂಡಿದೆ.


ವೈದ್ಯಕೀಯ ಪದವಿ ಪಡೆದ ನಂತರ, ಎವಿನ್ ತನ್ನ ಅಭ್ಯಾಸವನ್ನು ಪ್ರಾರಂಭಿಸಿದನು. ಡಿಸೆಂಬರ್ 22, 2021 ರಂದು ಅವರು ಶಟಲ್ ಕೋರ್ಟ್‌ನಲ್ಲಿ ಬ್ಯಾಡ್ಮಿಂಟನ್ ಆಡುತ್ತಿದ್ದಾಗ ಹಠಾತ್ ಕುಸಿದು ಬಿದ್ದರು. ಅವರು ನಿಧನರಾದರು. ಈಗ ಆ ಕ್ಯೂಆರ್ ಕೋಡ್ ತನ್ನ ನೆನಪುಗಳನ್ನು ಕುಟುಂಬಕ್ಕೆ ಡಿಜಿಟಲ್ ರೂಪದಲ್ಲಿ ತೋರಿಸುತ್ತಿದೆ.




ನೋಡಿ ಭಾವನಾತ್ಮಕವಾಗಿಯು ಕ್ಯೂ ಆರ್ ಕೋಡ್ ಹೆಲ್ಪ್ ಮಾಡ್ತಾ ಇದೇ. ಈ ಘಟನೆಯು ನಿಜಕ್ಕೂ ದುಃಖವನ್ನು ತರುತ್ತದೆ. ಹಾಗೆಯೇ ಈ ಮೂಲಕ ತೀರಿ ಹೋದವರ ಪ್ರತಿಭೆಯನ್ನು ಮತ್ತಷ್ಟು ತೋರಿಸಲ್ಪಡುತ್ತದೆ. ತಂತ್ರಜ್ಞಾನ ಹೀಗೂ ಸಹಾಯ ಮಾಡುತ್ತಿದೆ ಎಂಬುದು ನಿಜಕ್ಕೂ ಸಂತೋಷದ ವಿಷಯ. ಸದ್ಯಕ್ಕೆ ಈ ಸುದ್ದಿ ಮತ್ತು ಕ್ಯೂಆರ್ ಕೋಡ್ ಎಲ್ಲ ಕಡೆ ವೈರಲ್ ಆಗ್ತಾ ಇದೆ.

First published: