• Home
  • »
  • News
  • »
  • trend
  • »
  • Viral Video: ಹಾವು ಮೆಟ್ಟಿಲೇರೋ ಈ ದೃಶ್ಯ ನೋಡಿದ್ರೆ ಮೈ ನಡುಗುತ್ತೆ!

Viral Video: ಹಾವು ಮೆಟ್ಟಿಲೇರೋ ಈ ದೃಶ್ಯ ನೋಡಿದ್ರೆ ಮೈ ನಡುಗುತ್ತೆ!

ಹೆಬ್ಬಾವು

ಹೆಬ್ಬಾವು

ಹೆಬ್ಬಾವು ಮೆಟ್ಟಿಲೇರೋ ವಿಡಿಯೋವನ್ನು ಒಂದನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಸಂತಾ ನಂದಾ ಅವರು ಸೋಮವಾರ ತಮ್ಮ ಟ್ವಿಟರ್ ಖಾತೆಯ ಪುಟದಲ್ಲಿ ಪೋಸ್ಟ್ ಮಾಡಿದ್ದಾರೆ.

  • Trending Desk
  • Last Updated :
  • New Delhi, India
  • Share this:

ಮೊದಲೆಲ್ಲಾ ಈ ನಾಗರಹಾವುಗಳ ಮತ್ತು ಹೆಬ್ಬಾವುಗಳ (Python) ವೀಡಿಯೋ ತುಣುಕುಗಳು ನೋಡೋಕೆ ಸಿಗೋದು ತುಂಬಾನೇ ಅಪರೂಪವಾಗಿತ್ತು, ಆದರೆ ಈ ಸಾಮಾಜಿಕ ಮಾಧ್ಯಮಗಳು (Social Media) ಹುಟ್ಟಿಕೊಂಡ ಮೇಲಂತೂ ಬೇರೆ ಬೇರೆ ರೀತಿಯ ಹಾವುಗಳ ವಿಡಿಯೋಗಳು (Video) ನಮಗೆ ತುಂಬಾನೇ ನೋಡಲು ಸಿಗುತ್ತಿವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹೌದು ಬೇರೆ ರಾಷ್ಟದಲ್ಲಿ ದೊಡ್ಡ ದೊಡ್ಡ ಹೆಬ್ಬಾವುಗಳು ಮನೆಯಲ್ಲಿ (Home) ರಾಜಾರೋಷವಾಗಿ ಟೇಬಲ್, ಕುರ್ಚಿ ಮತ್ತು ನೆಲದ ಮೇಲೆ ತೆವಳಿಕೊಂಡು ಹೋಗುತ್ತಿರುವುದನ್ನು ನಾವು ಈ ಹಿಂದೆ ಒಂದು ವೈರಲ್ ವೀಡಿಯೋದಲ್ಲಿ ನೋಡಿದ್ದೆವು.


ಒಟ್ಟಿನಲ್ಲಿ ಹೇಳುವುದಾದರೆ ಈ ಸಾಮಾಜಿಕ ಮಾಧ್ಯಮವು ಅಸಾಮಾನ್ಯ ವಿಷಯಗಳ ಭಂಡಾರವಾಗಿದೆ. ಇಂತಹ ಹಾವುಗಳ ಭಯಾನಕ ವೀಡಿಯೋಗಳು ನೋಡುಗರನ್ನು ಬೆಚ್ಚಿ ಬೀಳಿಸುವಂತೆ ಮಾಡುತ್ತವೆ. ಅಂತದ್ದೆ ಇನ್ನೊಂದು ವೀಡಿಯೋ ಈಗ ಅಂತರ್ಜಾಲದಲ್ಲಿ ಕಾಣಿಸಿಕೊಂಡಿದೆ ನೋಡಿ. ಅದರಲ್ಲಿ ಒಂದು ಉದ್ದವಾದ ಹೆಬ್ಬಾವು ಮನೆಯಲ್ಲಿರುವ ಒಂದು ಗೋಡೆಯ ಮೇಲೆ ಮೆಲ್ಲಗೆ ತೆವಳಿಕೊಂಡು ಹೋಗುತ್ತಿರುವುದನ್ನು ನಾವು ನೋಡಬಹುದು.


ಹೆಬ್ಬಾವಿನ ವೀಡಿಯೋ ಹಂಚಿಕೊಂಡ ಐಎಫ್ಎಸ್ ಅಧಿಕಾರಿ


ಈ ಭಯಾನಕ ವೀಡಿಯೋವನ್ನು ಭಾರತೀಯ ಅರಣ್ಯ ಸೇವೆ (ಐಎಫ್ಎಸ್) ಅಧಿಕಾರಿ ಸುಸಂತಾ ನಂದಾ ಅವರು ಸೋಮವಾರ ತಮ್ಮ ಟ್ವಿಟರ್ ಖಾತೆಯ ಪುಟದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಅನ್ನು ಹಂಚಿಕೊಳ್ಳುವಾಗ, ನಂದಾ ಅವರು "ಮೇಲಕ್ಕೆ ಹೋಗಲು, ಪ್ರತಿ ಬಾರಿಯೂ ಮೆಟ್ಟಿಲುಗಳ ಅಗತ್ಯವಿಲ್ಲ" ಎಂಬ ಶೀರ್ಷಿಕೆ ಬರೆದಿದ್ದಾರೆ.


32 ಸೆಕೆಂಡುಗಳ ಈ ಚಿಕ್ಕ ಕ್ಲಿಪ್ ನಲ್ಲಿ ದೊಡ್ಡ ಹೆಬ್ಬಾವು ಮೆಟ್ಟಿಲುಗಳನ್ನು ಹತ್ತುವಾಗ ಬಳಸುವ ಒಂದು ಚಿಕ್ಕ ಅಡ್ಡ ಗೋಡೆಯ ಮೇಲೆ ಹೆಬ್ಬಾವು ತೆವಳಿಕೊಂಡು ಮೇಲಕ್ಕೆ ಹತ್ತಲು ಪ್ರಯತ್ನಿಸುತ್ತಿರುವುದನ್ನು ನಾವು ನೋಡಬಹುದಾಗಿದೆ.


ಕೆಲವೇ ಗಂಟೆಗಳಲ್ಲಿ ವೈರಲ್ ಆಯ್ತು ಈ ವೀಡಿಯೋ..


ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ 10,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 400 ಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ. ಹಲವಾರು ಟ್ವಿಟ್ಟರ್ ಬಳಕೆದಾರರು ಈ ಪೋಸ್ಟ್ ಅನ್ನು ಮರು ಹಂಚಿಕೊಂಡಿದ್ದಾರೆ. ಈ ಕ್ಲಿಪ್ ಪೋಸ್ಟ್ ನ ಕಾಮೆಂಟ್ ವಿಭಾಗವು ಮಿಶ್ರ ಪ್ರತಿಕ್ರಿಯೆಗಳೊಂದಿಗೆ ತುಂಬಿದೆ ಅಂತ ಹೇಳಬಹುದು. ಇದುವರೆಗೂ ಈ ವೀಡಿಯೋವನ್ನು 40,000 ಬಾರಿ ನೋಡಿದ್ದಾರೆ ಮತ್ತು 1,200 ಲೈಕ್ ಗಳು ಸಹ ಲಭಿಸಿವೆ.


ಇದನ್ನೂ ಓದಿ: ಅಬ್ಬಬ್ಬಬ್ಬಬ್ಬಾ ಇಷ್ಟು ದೊಡ್ಡ ಇರುತ್ತಾ ಕೋಳಿ ಮೊಟ್ಟೆ? ನೋಡಿದ್ರೆ ಆಶ್ಚರ್ಯಪಡುತ್ತೀರಿ


ವೀಡಿಯೋ ನೋಡಿ ಕಾಮೆಂಟ್ ಹಾಕಿದ ನೆಟ್ಟಿಗರು


"ಅದು ಹೀಗೆ ಗೋಡೆ ಏರುತ್ತಿರೋದನ್ನ  ನೋಡಿದರೆ ಅತ್ಯಂತ ಎತ್ತರದ ಮರವನ್ನು ಸಹ ಇದು ಏರಬಹುದು ಮತ್ತು ಅದನ್ನು ನೆನೆಸಿಕೊಂಡರೆ ನನ್ನ ಹೃದಯಾಘಾತವಾಗುತ್ತೆ" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಬರೆದಿದ್ದಾರೆ.


"ವಿಡಿಯೋ ಚಿತ್ರೀಕರಿಸಿದ ವ್ಯಕ್ತಿಯ ಧೈರ್ಯವನ್ನು ನಾವು ಮೆಚ್ಚಲೇ ಬೇಕು" ಎಂದು ಇನ್ನೊಬ್ಬ ಬಳಕೆದಾರರು ಹೇಳಿದರು. ಆದಾಗ್ಯೂ, ಈ ಹೆಬ್ಬಾವಿನ ಗಾತ್ರವನ್ನು ವಿಡಿಯೋದಲ್ಲಿ ದೃಢಪಡಿಸಲಾಗಿಲ್ಲ, ಆದರೆ ಟ್ವಿಟ್ಟರ್ ಬಳಕೆದಾರರು ಅದು ಎಷ್ಟು ದೊಡ್ಡದಾಗಿದೆ ಎಂದು ನೋಡಿಯೇ ಬೆಚ್ಚಿ ಬಿದ್ದಿದ್ದಾರೆ ಅಂತ ಹೇಳಲಾಗುತ್ತಿದೆ.


ಕೈಯಲ್ಲಿ ಹೆಬ್ಬಾವು ಹಿಡಿದ ವೀಡಿಯೋ ವೈರಲ್ ಆಗಿತ್ತು..



ಹೆಬ್ಬಾವುಗಳ ವೀಡಿಯೋಗಳನ್ನು ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತದೆ. ಆದಾಗ್ಯೂ, ಕೆಲವರು ಈ ಮಾರಣಾಂತಿಕ ಸರೀಸೃಪಗಳನ್ನು ಸಾಕುಪ್ರಾಣಿಗಳಾಗಿ ಇಟ್ಟುಕೊಳ್ಳುತ್ತಾರೆ. ಇತ್ತೀಚೆಗೆ, ಜೇ ಬ್ರೂವರ್ ಎಂಬ ಮೃಗಾಲಯದಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬ ತನ್ನ ಕೈಯಲ್ಲಿ ಒಂದು ಹೆಬ್ಬಾವನ್ನು ಹಿಡಿದಿರುವ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು.


ಇದನ್ನೂ ಓದಿ: 10 ವರ್ಷಗಳ ಬಳಿಕ ಮತ್ತೆ ಒಂದಾದ ಜೋಡಿ! ಇವರ ಲವ್‌ ಸ್ಟೋರಿ ಯಾವ ಸಿನಿಮಾಗಿಂತಲೂ ಕಡಿಮೆಯಿಲ್ಲ!


ಆ ವಿಡಿಯೋದಲ್ಲಿ ಅವರು ಹಲವಾರು ವರ್ಷಗಳಿಂದ ಹೆಬ್ಬಾವನ್ನು ನೋಡಿಕೊಳ್ಳುತ್ತಿದ್ದಾರೆ ಮತ್ತು ಈಗ ಇಬ್ಬರು ಸ್ನೇಹಿತರಾಗಿದ್ದಾರೆ ಎಂದು ಅವರು ಹೇಳಿದ್ದರು. ಈ ಕ್ಲಿಪ್ ನ ಕೊನೆಯಲ್ಲಿ, ಬ್ರೂವರ್ ಆ ಹಾವನ್ನು ಮುದ್ದಾಡುವುದನ್ನು ಸಹ ನೋಡಬಹುದಾಗಿತ್ತು.

First published: