ಮೊಲ ನೋಡಿ ಕುಪ್ಪಳಿಸಲಾರಂಭಿಸಿದ ನಾಯಿ ಮರಿ: ವೈರಲ್‌ ವಿಡಿಯೋಗೆ ನೆಟ್ಟಿಗರ ಮೆಚ್ಚುಗೆ

ನಾಯಿ ಮರಿ ಮೊಲದಂತೆ ಕುಪ್ಪಳಿಸಬಲ್ಲದು. ಪುಟ್ಟ ಮುದ್ದಾದ ನಾಯಿ ಮರಿಯೊಂದು  ಅಷ್ಟೇ ಮುದ್ದಾದ ಮೊಲವೊಂದನ್ನು ಅನುಕರಣೆ ಮಾಡುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೈರಲ್ ವಿಡಿಯೋ

ವೈರಲ್ ವಿಡಿಯೋ

  • Share this:
ನವಿಲು ಕುಣಿಯಿತೆಂದು ಕೆಂಭೂತ ತಾನು ಕುಣಿಯಿತಂತೆ’ ಇದು ಅನುಕರಣೆಯನ್ನು ವ್ಯಂಗ್ಯ ಮಾಡುವಾಗ ಬಳಸುವ ನುಡಿಗಟ್ಟು. ಹಾಗಾದರೆ, ಅನುಕರಣೆ ಶ್ಲಾಘಿಸುವಾಗ ಏನು ಹೇಳಬಹುದು? ‘ಮೊಲ ಕುಪ್ಪಳಿಸಿತೆಂದು ನಾಯಿ ಮರಿಯೂ ಕುಪ್ಪಳಿಸಿತಂತೆ’ ಎನ್ನಬಹುದು ! ಅರೆ, ಇದ್ಯಾವ ನುಡಿಗಟ್ಟು... ನಾವೆಲ್ಲೂ ಕೇಳಿಲ್ಲವಲ್ಲ ಎನ್ನುತ್ತೀರಾ? ಇದ್ಯಾವ ನುಡಿಗಟ್ಟೂ ಅಲ್ಲ, ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದನ್ನು ನೋಡಿದರೆ ನಿಮ್ಮ ಮನದಲ್ಲಿ ಮೂಡಬಹುದಾದ ಆಲೋಚನೆ! ಹೌದು, ನಾಯಿ ಮರಿ ಮೊಲದಂತೆ ಕುಪ್ಪಳಿಸಬಲ್ಲದು. ಪುಟ್ಟ ಮುದ್ದಾದ ನಾಯಿ ಮರಿಯೊಂದು  ಅಷ್ಟೇ ಮುದ್ದಾದ ಮೊಲವೊಂದನ್ನು ಅನುಕರಣೆ ಮಾಡುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಖುಷಿಯಿಂದ ಚಪ್ಪಾಳೆ ತಟ್ಟುವಂತೆ ಮಾಡಿದೆ.

ಬುಟೆಂಗ್‍ಬೀಡೆನ್ ಎಂಬ ಟ್ವಿಟ್ಟರ್ ಖಾತೆಯಿಂದ ಹಂಚಿಕೆ ಆಗಿರುವ ಈ ವಿಡಿಯೋ ಇದುವರೆಗೆ ಸುಮಾರು 30 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರಂತೂ ಆ ಪುಟ್ಟ ನಾಯಿ ಮರಿ ಮತ್ತು ಮೊಲದ ಚಿನ್ನಾಟವನ್ನು ಕಂಡು ಮನಮೋಹಿತರಾಗಿದ್ದಾರೆ.

ಸುಮಾರು 8 ಸೆಕೆಂಡಿನ ಈ ವೈರಲ್​ ವಿಡಿಯೋದಲ್ಲಿ ಮೊಲವೊಂದು ನಾಯಿ ಮರಿಯ ಮುಂದೆ ಕುಪ್ಪಳಿಸುತ್ತದೆ. ಮೊಲ ಕುಪ್ಪಳಿಸುವುದನ್ನು ಕಂಡು ನಾಯಿ ಮರಿಯೂ ಅದನ್ನು ಅನುಕರಿಸಲು ಆರಂಭಿಸುತ್ತದೆ. “ನಾಯಿ ಮರಿ ತನ್ನನ್ನು ಮೊಲ ಎಂದು ಭಾವಿಸಿಕೊಂಡಿದೆ” ಎಂಬ ಅಡಿಬರಹವನ್ನು ಈ ವಿಡಿಯೋಗೆ ನೀಡಲಾಗಿದೆ.

ವಿಡಿಯೋದಲ್ಲಿನ ದೃಶ್ಯ ಹೀಗಿದೆ:

ಮೊಲ ಮತ್ತು ನಾಯಿ ಮರಿ ಜೊತೆಯಾಗಿವೆ. ಆಗ ಮೊಲ ಮುಂದಕ್ಕೆ ಕುಪ್ಪಳಿಸುತ್ತದೆ. ನಾಯಿ ಮರಿಯೂ ಕುಪ್ಪಳಿಸುತ್ತದೆ. ಮೊಲ ಮತ್ತೆ ಕುಪ್ಪಳಿಸುತ್ತದೆ. ನಾಯಿ ಮರಿಯೂ ಅದನ್ನು ಅನುಕರಣೆ ಮಾಡುತ್ತಾ ಕುಪ್ಪಳಿಸುತ್ತದೆ. ಮೊಲ ಚಂಗನೆ ಹಿಂದಿರುಗಿ ಕುಪ್ಪಳಿಸುತ್ತದೆ, ಆಗ ನಾಯಿ ಮರಿ ಹಿಂದಕ್ಕೆ ಸರಿಯುತ್ತದೆ. ಮೊಲಕ್ಕೆ ನಾಯಿ ಮರಿಯ ಈ ಅನುಕರಣೆಯ ಬಗ್ಗೆ ಯಾವುದೇ ಉತ್ಸಾಹ ಇದ್ದಂತೆ ಕಾಣಿಸುತ್ತಿಲ್ಲ. ಆದರೆ ನಾಯಿ ಮರಿ ಅದಕ್ಕೆ ತಲೆ ಕೆಡಿಸಿಕೊಳ್ಳದೆ ಮತ್ತೆ ಮೊಲದ ಮುಖವನ್ನು ಮೂಸಲು ಹೋಗುತ್ತದೆ. ಆಗ ಮೊಲ ಮರಳಿ ಮುಂದಕ್ಕೆ ಕುಪ್ಪಳಿಸುತ್ತದೆ. ನಾಯಿ ಮರಿಯೂ ಕುಪ್ಪಳಿಸುತ್ತದೆ. ನಾಯಿ ಮರಿಗೆ ಮೊಲದ ಸ್ನೇಹ ಬೆಳೆಸುವ ಆಸೆ. ಹೀಗೆ ಅವುಗಳ ಚಿನ್ನಾಟ ಮುಂದುವರೆಯುತ್ತದೆ.

ಇದನ್ನೂ ಓದಿ: Deepika Padukone: ಸಾವಿನ ಮನೆಯಲ್ಲಿ ಧರಿಸಿದ್ದ ದುಬಾರಿ ಬೆಲೆಯ ಉಡುಪುಗಳನ್ನು ಮಾರಾಟಕ್ಕಿಟ್ಟು ಟ್ರೋಲ್​ ಆದ ದೀಪಿಕಾ ಪಡುಕೋಣೆ

ಸಾಮಾಜಿಕ ಮಾಧ್ಯಮ ಬಳಕೆದಾರರು ನಾಯಿಯ ಈ ಮುದ್ದು ಅನುಕರಣೆಯನ್ನು ನೋಡಿ ಮಂತ್ರಮುಗ್ಧರಾಗಿದ್ದಾರೆ. “ಅನುಕರಣೆಯು ಹೊಗಳಿಕೆಯ ಅತ್ಯಂತ ಪ್ರಾಮಾಣಿಕ ರೂಪವಾಗಿದೆ. ಮೊಲ ಅದನ್ನು ಮೆಚ್ಚಿದರೆ ಆಶ್ಚರ್ಯ” ಎಂದು ಒಬ್ಬರು ಪ್ರತಿಕ್ರಿಯೆ ಬರೆದಿದ್ದಾರೆ. “ಹಹ . . . ಅದು ಮುದ್ದಾಗಿದೆ” ಎಂದು ಮತ್ತೊಬ್ಬರು ನಾಯಿ ಮರಿಯನ್ನು ಹೊಗಳಿದ್ದಾರೆ. “ಇದು ಮೊಲದೊಂದಿಗೆ ಸ್ನೇಹ ಬೆಳೆಸುವ ನಾಯಿ ಮರಿಯ ವಿಧಾನ ಎಂದು ನನಗನಿಸುತ್ತದೆ” ಎಂದು ಇನ್ನೊಬ್ಬ ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ತೂಕ ಇಳಿಸಿಕೊಂಡ ನಂತರ ಫೋಟೋಶೂಟ್​ಗಳಲ್ಲಿ ಬ್ಯುಸಿಯಾದ ನಟಿ ಮಾನ್ವಿತಾ ಕಾಮತ್​ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
Published by:Anitha E
First published: