Viral News: ಕ್ರೇಜ್ ಅಂದ್ರೆ ಹೇಗೆಲ್ಲಾ ಇರುತ್ತೆ! ಇಷ್ಟದ ಗಾಯಕನಿಗಾಗಿ ಸೈಕಲ್, ಬಸ್ ಏರಿ 185 ಕಿಮೀ ದೂರ ಬಂದ 14ರ ಹುಡುಗ!

ಅಭಿಮಾನಿಗಳುತಮ್ಮ ನೆಚ್ಚಿನ ತಾರೆಯರನ್ನು, ಕಲಾವಿದರನ್ನು ಭೇಟಿ ಮಾಡಲು ಏನೆಲ್ಲ ಹರಸಾಹಸ ಪಡುತ್ತಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾದಂತಾಗಿದೆ.

ಸಿಧು ಮೂಸೇವಾಲಾ

ಸಿಧು ಮೂಸೇವಾಲಾ

  • Share this:
ವಯಸ್ಕರಾದ ಅಭಿಮಾನಿಗಳು ತಮ್ಮ ನೆಚ್ಚಿನ ನಟ/ನಟಿ ಅಥವಾ ಗಾಯಕರನ್ನು ಮೀಟ್ ಮಾಡಲೆಂದು ಬೇರೆ ಊರುಗಳಿಗೆ ತೆರಳುವುದು ಅಷ್ಟೊಂದು ದೊಡ್ಡ ಸುದ್ದಿಯೇನಲ್ಲ ಬಿಡಿ. ಆದರೆ, ಇನ್ನೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುವ 14 ವರ್ಷದ ವಿದಾರ್ಥಿಯೊಬ್ಬ ತನ್ನ ನೆಚ್ಚಿನ ಗಾಯಕನನ್ನು ನೋಡಲೆಂದು ಸೈಕಲ್ ಹಾಗೂ ಬಸ್ಸಿನ ಮೂಲಕ 185 ಕಿ.ಮೀ ಪ್ರಯಾಣಿಸುವುದೆಂದರೆ ಸುಲಭದ ಮಾತಲ್ಲ. ಅಂತಹ ಸುದ್ದಿಯೊಂದು ಪಂಜಾಬ್ ಪ್ರಾಂತ್ಯದಿಂದ ವರದಿಯಾಗಿದೆ. ಸಿಧು ಮೂಸೇವಾಲಾ (Punjabi singer Sidhu Moosewala) ಎಂಬುವವರು ಒಬ್ಬ ಜನಪ್ರಿಯ ಪಂಜಾಬಿ ಗಾಯಕರಾಗಿದ್ದಾರೆ. ಸ್ಥಳೀಯವಾಗಿ ಸಾಕಷ್ಟು ಹಿರಿಯ ಹಾಗೂ ಕಿರಿಯ ಅಭಿಮಾನಿಗಳನ್ನು ಈ ಗಾಯಕ ಹೊಂದಿದ್ದಾರೆ. ಇವರ ಅಪ್ಪಟ ಅಭಿಮಾನಿಯಾಗಿದ್ದ ಹದಿನಾಲ್ಕು ವರ್ಷದ ಶಾಲಾ ವಿದ್ಯಾರ್ಥಿಯೊಬ್ಬ (School Student) ತನ್ನ ನೆಚ್ಚಿನ ಗಾಯಕನನ್ನು ಮೀಟ್ ಮಾಡಲು ಸಾಹಸ ಮಾಡಿದ್ದಾರೆ.

ಶಾಲೆಗೆ ಹೋಗಬೇಕಾದವ ಹೋಗಿದ್ದೆಲ್ಲಿ?
ಮೂಲತಃ ಮಾಹಿಲ್ಪುರದ ಬೇಹ್ಬಲ್ಪೂರ್ ಗ್ರಾಮದ ಈ ವಿದ್ಯಾರ್ಥಿ ಬಂಗಾ ಎಂಬಲ್ಲಿನ ಖಾಸಗಿ ಶಾಲೆಯೊಂದರಲ್ಲಿ ಓದುತ್ತಿದ್ದು, ಇವನ ಜೊತೆ ಇವನ ಇಬ್ಬರು ಸಹೋದರಿಯರೂ ಸಹ ಅದೇ ಶಾಲೆಯಲ್ಲಿ ಓದುತ್ತಿದ್ದರು. ಕಳೆದ ಶನಿವಾರದಂದು ಈ ವಿದ್ಯಾರ್ಥಿ ತನ್ನ ನೆಚ್ಚಿನ ಗಾಯಕನನ್ನು ಮೀಟ್ ಮಾಡುವ ಉದ್ದೇಶದಿಂದ ಶಾಲೆಗೆಂದು ಹೋಗಿದ್ದಾನೆ. ಆದರೆ ತರಗತಿ ಪ್ರವೇಶಿಸಿಲ್ಲ. ಬದಲಾಗಿ, ಬಸ್ ನಿಲ್ದಾಣಕ್ಕೆ ತೆರಳಿದ್ದಾನೆ.

ಮೊಬೈಲ್ ಸ್ವಿಚ್ ಆಫ್
ಇದಕ್ಕೂ ಮುಂಚೆ ಎಂದಿನಂತೆ ಶಾಲೆ ಬಿಟ್ಟ ಮೇಲೆ ತನ್ನ ಇಬ್ಬರು ಸಹೋದರಿಯರೊಂದಿಗೆ ಬರದ ವಿದ್ಯಾರ್ಥಿಯ ಬಗ್ಗೆ ಅವನ ಪೋಷಕರು ಚಿಂತೆ ವ್ಯಕ್ತಪಡಿಸಿ ಎಲ್ಲೆಡೆ ಹುಡುಕಿ ತದನಂತರ ಪೊಲೀಸ್ ಠಾಣೆಗೆ ಕಾಣೆಯಾದ ಬಗ್ಗೆ ದೂರು ನೀಡಿದ್ದಾರೆ. ಈ ಸಂದರ್ಭದಲ್ಲಿ ಬಂಗಾದ ಡಿಎಸ್‍ಪಿ ಅವರಾದ ಗುರುಪ್ರೀತ್ ಸಿಂಗ್ ಈ ಬಗ್ಗೆ ದೂರು ದಾಖಲಿಸಿಕೊಂಡು ಮೊದಲಿಗೆ ಆ ವಿದ್ಯಾರ್ಥಿ ಬಳಿ ಇದ್ದ ಮೊಬೈಲ್ ಟ್ರ್ಯಾಕ್ ಮಾಡಲು ಪ್ರಯತ್ನಿಸಿದ್ದಾರೆ. ಆದರೆ, ಅದಾಗಲೇ ಮೊಬೈಲ್ ಸ್ವಿಚ್ ಆಫ್ ಆಗಿತ್ತು.

ಇದನ್ನೂ ಓದಿ: Viral Video: ಇದುವರೆಗೂ ಯಾರೂ ಮಾಡದ ಸ್ಟೈಲ್ ನಲ್ಲಿ ಕಚ್ಚಾ ಬದಾಮ್ ಹಾಡಿಗೆ ಮಹಿಳೆಯ ಡ್ಯಾನ್ಸ್; ವಿಡಿಯೋ ನೋಡಿ

ತದನಂತರ ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಿದಾಗ ಅದರಲ್ಲಿ ವಿದ್ಯಾರ್ಥಿ ಶಾಲೆಗೆ ಹೋಗಿಲ್ಲದೆ ಇರುವುದು ಕಂಡುಬಂದಿದೆ ಹಾಗೂ ಆತ ಅಂಗಡಿಯೊಂದರಲ್ಲಿ ಚಿಪ್ಸ್ ಖರೀಸುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಒಟ್ಟಿನಲ್ಲಿ ವಿದ್ಯಾರ್ಥಿ ತನ್ನ ನೆಚ್ಚಿನ ಪಂಜಾಬಿ ಗಾಯಕನನ್ನು ಮೀಟ್ ಮಾಡಲೆಂದು ಸುಮಾರು 25 ಕಿ.ಮೀ ಸೈಕಲ್ ತುಳಿದಿದ್ದಾನೆ ಹಾಗೂ ಎರಡು ಬಸ್ಸುಗಳನ್ನು ಬದಲಾಯಿಸಿಕೊಂಡು 160 ಕಿ.ಮೀ ಪ್ರಯಾಣಿಸಿ ಮನ್ಸಾ ಎಂಬ ಪ್ರದೇಶವನ್ನು ತಲುಪಿದ್ದಾನೆನ್ನಲಾಗಿದೆ.

ಮತ್ತೆ ಪೋಷಕರನ್ನು ಸೇರಿದ್ದು ಹೇಗೆ?
ಈ ಸಂದರ್ಭದಲ್ಲಿ ಖಾಸಗಿ ಬಸ್‌ ಚಾಲಕರೊಬ್ಬರು ಈ ಹುಡುಗನನ್ನು ಗಮನಿಸಿದ್ದು, ಅವರ ಸಮಯೋಚಿತ ಪ್ರಜ್ಞೆಯಿಂದಾಗಿ ಬಾಲಕ ಮತ್ತೆ ತನ್ನ ಪೋಷಕರನ್ನು ಸೇರಿದ್ದು ಪೊಲೀಸರಿಗೆ ಹಾಗೂ ಪೋಷಕರಿಗೆ ನಿಟ್ಟುಸಿರು ಬಿಡುವಂತೆ ಮಾಡಿದೆ. ಅಭಿಮಾನಿಗಳುತಮ್ಮ ನೆಚ್ಚಿನ ತಾರೆಯರನ್ನು, ಕಲಾವಿದರನ್ನು ಭೇಟಿ ಮಾಡಲು ಏನೆಲ್ಲ ಹರಸಾಹಸ ಪಡುತ್ತಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾದಂತಾಗಿದೆ.

ಇದನ್ನೂ Viral Video: ಕ್ರಿಸ್ಟಿಯಾನೋ ರೊನಾಲ್ಡೊಗೆ ಸ್ಪರ್ಧೆ ನೀಡುವಂತೆ Football ಆಡುತ್ತೆ ಈ ಕೋಳಿ: ವಿಡಿಯೋ ನೋಡಿ

ಕೆಲ ವರ್ಷಗಳ ಹಿಂದೆ ಗುಜರಾತಿನ ಪರ್ಬತ್ ಎಂಬಾತ ಬಾಲಿವುಡ್ ತಾರೆ ಅಕ್ಷಯ ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದು, ಅವರನ್ನು ಮೀಟ್ ಮಾಡಲು ಸುಮಾರು 900 ಕಿ.ಮೀ ಗಳಷ್ಟು ನಡೆದುಕೊಂಡೇ ಹೋಗಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಪರ್ಬತ್ ದ್ವಾರಕೆಯಿಂದ ಮುಂಬೈ ತಲುಪಲು ಸುಮಾರು 18 ದಿನಗಳ ಕಾಲ ನಡೆದು 900 ಕಿ.ಮೀ ಕ್ರಮಿಸಿ ಕೊನೆಗೆ ಅವರ ಯೋಜನೆಯ ಪ್ರಕಾರ ಭಾನುವಾರದಂದು ತನ್ನ ನೆಚ್ಚಿನ ನಟನನ್ನು ಭೇಟಿ ಮಾಡಿದ್ದರು. ಅಕ್ಷಯ್ ಈ ಬಗ್ಗೆ ತಮ್ಮ ಅಭಿಮಾನಿಯ ಈ ಕ್ರಮವನ್ನು ಶ್ಲಾಘಿಸುತ್ತ ಆ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು.
Published by:guruganesh bhat
First published: