• Home
  • »
  • News
  • »
  • trend
  • »
  • Trending News: ಈ ಪಂಜಾಬಿ ಮುದುಕ ಎಷ್ಟು ಚಂದ ಮಲಯಾಳಂ ಮಾತಾಡ್ತಾನೆ ನೋಡಿ!

Trending News: ಈ ಪಂಜಾಬಿ ಮುದುಕ ಎಷ್ಟು ಚಂದ ಮಲಯಾಳಂ ಮಾತಾಡ್ತಾನೆ ನೋಡಿ!

ತ್ರಿಲೋಚನ್ ಸಿಂಗ್ ಮತ್ತವರ ಪತ್ನಿ

ತ್ರಿಲೋಚನ್ ಸಿಂಗ್ ಮತ್ತವರ ಪತ್ನಿ

ಒಂದಕ್ಕೊಂದರ ಸಂಬಂಧ ಎಂಬುದು ಊಹೆಗೂ ನಿಲುಕದ್ದು. ಆದರೂ ಅವರು ಮಲಯಾಳಂ ಭಾಷೆಯನ್ನು ಇಷ್ಟಪಟ್ಟು ಕಲಿತಿದ್ದಾರೆ ಎಂದರೆ ನಿಮಗೆ ನಂಬದೆ ಬೇರೆ ವಿಧಿ ಇಲ್ಲ.

  • Share this:

ಒಮ್ಮೊಮ್ಮೆ ಯಾವುದೇ ರೀತಿಯ ಸಂಬಂಧ (Relationship) ಇಲ್ಲದ ಅಥವಾ ಸಂಬಂಧ ಕಲ್ಪಿಸಿಕೊಳ್ಳಲೂ ಆಗದ ಕೆಲವು ಪ್ರಸಂಗಗಳು ನಡೆಯುತ್ತವೆ. ಅವು ನಮ್ಮನ್ನು ಅಚ್ಚರಿಪಡಿಸುವುದಲ್ಲದೆ ಮತ್ತಿನ್ನೇನೂ ಮಾಡಲಾರವು. ಆದರೂ ಇದು ಹೇಗೆ ಸಾಧ್ಯ, ಎಂಬ ಒಂದು ಪ್ರಶ್ನೆಯನ್ನು (Question) ಅಂತಹ ಘಟನೆಗಳು ಹುಟ್ಟು ಹಾಕಿದರೂ ತಪ್ಪಿಲ್ಲ. ಕೊನೆಗೆ ನಮ್ಮ ಮನಸ್ಸಿಗೆ (Mind) ನಾವೇ ಹೀಗೂ ಉಂಟು ಎಂದಷ್ಟೆ ಹೇಳಿಕೊಂಡು ಸಮಾಧಾನ ಪಡಿಸಿಕೊಳ್ಳಬಹುದಷ್ಟೆ.


ಸದ್ಯ, ಈ ಮಾತು ಏಕೆಂದರೆ ಇಲ್ಲೊಬ್ಬ ಹಿರಿಯ ವ್ಯಕ್ತಿ ಇದ್ದಾರೆ, ಅವರ ಹೆಸರು ತ್ರಿಲೋಚನ್ ಸಿಂಗ್ ಎಂದು. ಅವರ ವಯಸ್ಸು 80 ಹಾಗೂ ಅವರೊಬ್ಬ ಪಂಜಾಬಿ ಸಿಖ್ ಸಮುದಾಯದವರು. ಆದರೆ, ಇವರ ವಿಶೇಷತೆ ಎಂದರೆ ಇವರು ನಿರರ್ಗಳವಾಗಿ ಮಲಯಾಳಂ ಭಾಷೆಯನ್ನು ಮಾತನಾಡುತ್ತಾರೆ. ಎಲ್ಲಿ ಪಂಜಾಬಿ ಮನುಷ್ಯ, ಎತ್ತ ಕೇರಳದ ಮಲಯಾಳಂ ಭಾಷೆ, ಒಂದಕ್ಕೊಂದರ ಸಂಬಂಧ ಎಂಬುದು ಊಹೆಗೂ ನಿಲುಕದ್ದು. ಆದರೂ ಅವರು ಮಲಯಾಳಂ ಭಾಷೆಯನ್ನು ಇಷ್ಟಪಟ್ಟು ಕಲಿತಿದ್ದಾರೆ ಎಂದರೆ ನಿಮಗೆ ನಂಬದೆ ಬೇರೆ ವಿಧಿ ಇಲ್ಲ.


ಈ ಬಗ್ಗೆ ಮಾಧ್ಯಮವೊಂದು ಅವರೊಂದಿಗೆ ಸಂದರ್ಶನ ನಡೆಸಿದಾಗ ಅವರು ತಮ್ಮಲ್ಲಿ ಸಂಗ್ರಹಿಸಿಟ್ಟುಕೊಂಡಿರುವ ಮಲಯಾಳಂ ಭಾಷೆಯ ಅನೇಕ ಪುಸ್ತಕಗಳನ್ನು ಅತಿ ಹೆಮ್ಮೆಯಿಂದ ತೋರಿಸುತ್ತ ಹೇಳುತ್ತಾರೆ, 'ಎನಿಕ ಮಲಯಾಳಂ ಇಷ್ಟಮಾನ್' ಅಂದರೆ ನನಗೆ ಮಲಯಾಳಂ ಇಷ್ಟ ಎಂದು. ಮಲಯಾಳಂ ಮಿಷನ್ ಎಂಬ ಕಾರ್ಯಕ್ರಮ ಅಥವಾ ಅಭಿಯಾನದ ಮೂಲಕ ಅವರು ಈ ಭಾಷೆಯ ಅಧ್ಯಯನವನ್ನು ಮಾಡಿದ್ದಾರೆ.


ಏನಿದು ಮಲಯಾಳಂ ಮಿಷನ್


2005 ರಲ್ಲಿ ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಕೇರಳದ ಅಥವಾ ಮಲಯಾಳಂ ಭಾಷೆಯ ನಂಟಿರುವ ವ್ಯಕ್ತಿಗಳ ಅನುಕೂಲಕ್ಕೆಂದು ಅಂದಿನ ಕೇರಳ ಸರ್ಕಾರದಿಂದ ಈ ಮಿಷನ್ ಗೆ ಚಾಲನೆ ನೀಡಲಾಗಿತ್ತು. ಇದು ಹತ್ತು ವರ್ಷಗಳ ದೀರ್ಘ ಅವಧಿಯ ಒಂದು ಕಲಿಕಾ ತರಬೇತಿಯಾಗಿದೆ. ನಂತರ ಈ ಕಾರ್ಯಕ್ರಮಕ್ಕೆ ಸಂದ ಅಪಾರ ಯಶಸ್ಸಿನಿಂದಾಗಿ 2009 ರಲ್ಲಿ ಕೇರಳದ ಅಂದಿನ ಸಿಎಂ ಅಚ್ಯುತಾನಂದನ್ ಅವರು ಈ ಕಾರ್ಯಕ್ರಮಕ್ಕೆ ಜಗತ್ತಿನಾದ್ಯಂತ ಮಲಯಾಳಂ ಕೇಂದ್ರಗಳಲ್ಲಿ ನಡೆಯುವಂತೆ ಚಾಲನೆ ನೀಡಿದರು.


ಈ ಮಿಷನ್ನಿನ ದೆಹಲಿ ವಲಯದ ಜಂಟಿ ಕಾರ್ಯದರ್ಶಿಯಾಗಿರುವ ಶ್ರೀನಿವಾಸ್ ಅವರು ಹೇಳುವಂತೆ ಈ ಮಿಷನ್ನಿನ ತರಬೇತಿಯಲ್ಲಿ ಲೆಕ್ಕಿಸಲಾಗದಷ್ಟು ಮಲಯಾಳಿ ಮಕ್ಕಳು, ಕೆಲ ವಯಸ್ಕರು, ಕೇರಳದ ನಂಟಿರುವ ಕೆಲ ವ್ಯಕ್ತಿಗಳು ಸೇರಿದಂತೆ ಮಲಯಾಳಂ ಅಥವಾ ಕೇರಳದ ಸಂಬಂಧವೇ ಇಲ್ಲದೆ ಮೂರು ವಿವಿಧ ಹಿನ್ನೆಲೆಯುಳ್ಳ ವ್ಯಕ್ತಿಗಳೂ ಸೇರಿಕೊಂಡಿರುವುದು ಆಸಕ್ತಿಕರ ವಿಷಯವಾಗಿದೆ. ಅವರಲ್ಲಿ ಇಬ್ಬರು ನೇಪಾಳಿ ಯುವಕರಾಗಿದ್ದರೆ ಇನ್ನೊಬ್ಬರು ಪಂಜಾಬಿನ ಸಿಖ್ ಸಮುದಾಯದವರಾದ ತ್ರಿಲೋಚನ್ ಸಿಂಗ್ ಎಂಬುವವರಾಗಿದ್ದಾರೆ.


ಸಿಂಗ್ ಅವರ ಹಿನ್ನೆಲೆ


ಭಾರತದ ವಿಭಜನೆಗೂ ಮುನ್ನ ಸಿಂಗ್ ಅವರು ಪ್ರಸ್ತುತ ಪಾಕಿಸ್ತಾನದ ಲಾಹೋರಿನಲ್ಲಿ ಜನಿಸಿದ್ದಾರೆ. ಭಾರತ ವಿಭಜನೆಯ ನಂತರ ತ್ರಿಲೋಚನ್ ಅವರು ದೆಹಲಿಯಲ್ಲಿ ನೆಲೆಸಿದರು. ದೆಹಲಿಯ ಪಬ್ಲಿಕ್ ವರ್ಕ್ಸ್ ಡಿಪಾರ್ಟ್ಮೆಂಟಿನಲ್ಲಿ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಸಿಂಗ್ ಅವರಿಗೆ ನಿವೃತ್ತಿ ನಂತರ ಭಾಷೆಯ ಬಗ್ಗೆ ಆಕರ್ಷಣೆಯಾಗಿ ಕಲಿತಿರಬಹುದು ಎಂದು ನೀವಂದುಕೊಂಡಿದ್ದರೆ ಅದು ತಪ್ಪು. ಅವರಿಗೆ ಆಗಲೇ ಕೇರಳ ಮೂಲದ ಒಬ್ಬರು ಸ್ನೇಹಿತರಿದ್ದರು. ಮೊದಲಿಗೆ ಅವರು ತಮಿಳು ಭಾಷೆ ಆಕರ್ಷಿಸಿತು. ತದನಂತರ ಗೆಳೆಯನ ಸಹಕಾರದೊಂದಿಗೆ ಅವರ ಮನಸ್ಸು ಮಲಯಾಳಂನತ್ತ ವಾಲಿತು.


ಇದನ್ನೂ ಓದಿ: ಪೇರೆಂಟ್ಸ್​ ಆಗ್ತಾ ಇದ್ದೀವಿ ಅಂತ ಗೊತ್ತಾಗಿ ಗಂಡ ಹೆಂಡ್ತಿ ಕೊಟ್ಟ ಸೇಮ್​ ರಿಯಾಕ್ಷನ್​! ಎಲ್ಲಾ ಕಡೆ ಇವರದ್ದೇ ಹವಾ

ತಮ್ಮ ಅದೇ ಕೇರಳದ ಸ್ನೇಹಿತನ ಸಹೋದರಿಯ ಮದುವೆಗೆಂದು ಒಮ್ಮೆ ಸಿಂಗ್ ಕೇರಳದ ಕೋಳಿಕೋಡ್ ಗೆ ಭೇಟಿ ನೀಡಿದರು. ಆ ಸಮಯದಿಂದ ಅಂದರೆ 1998 ರಿಂದಲೇ ಅವರು ಮಲಯಾಳಂ ಭಾಷೆಯತ್ತ ಆಕರ್ಷಿತರಾಗತೊಡಗಿದರು. ತದನಂತರ ಅವರು ಈ ಭಾಷೆಯಲ್ಲಿ ಹಿಡಿತ ಸಾಧಿಸಲೇಬೇಕೆಂಬ ಅಚಲ ನಿರ್ಧಾರ ಕೈಗೊಂಡು ದೆಹಲಿಗೆ ಮರಳಿದರು. ದೆಹಲಿಯಲ್ಲಿರುವ ಶೈಕ್ಷಣಿಕ ಮಂತ್ರಾಲಯದಿಂದ ಅವರು ಮಲಯಾಳಂ ಪುಸ್ತಕ ಖರೀದಿಸಿ ತಮ್ಮ ಅಧ್ಯಯನಕ್ಕೆ ನಾಂದಿ ಹಾಡಿದರು.


ಮಲಯಾಳಂ ಕಲಿತ ಬಗೆ


ಇನ್ನು, ಭಾಷೆಯನ್ನು ಹೇಗೆ ಕಲಿತರು ಎಂಬುದರ ಬಗ್ಗೆ ಸಿಂಗ್ ಅವರು ಈ ರೀತಿ ಹೇಳುತ್ತಾರೆ, "ಮೊದಲಿಗೆ ನಾನು ಸ್ವತಃ ಪುಸ್ತಕಗಳಿಂದ ಕಲಿಯಲು ಆರಂಭಿಸಿದೆ, ತದನಂತರ ನನಗೆ ಕೆಲ ಮಲಯಾಳಿಗರು ಆಗಾಗ ಸಹಾಯ ಮಾಡುತ್ತಿದ್ದರು. ಕೊನೆಗೆ ನನಗನಿಸಿದ್ದೆಂದರೆ ನಾನು ಭಾಷೆಯನ್ನು ಕಲಿಯಲೇಬೇಕೆಂದಾದಲ್ಲಿ ಅದನ್ನು ಸರಿಯಾದ ರೀತಿಯಲ್ಲೇ ಕಲಿಯಬೇಕು ಅಂತ. ಹಾಗಾಗಿ ನಾನು ಈ ಭಾಷೆಯಲ್ಲಿ ಅಧಿಕೃತವಾಗಿ ಶಿಕ್ಷಣ ಪಡೆಯಲು 2017 ರಿಂದ ಆರಂಭಿಸಿದೆ. ಈಗ ನಾನು ಮಲಯಾಳಂ ನಲ್ಲಿ ಪ್ರಬಂಧ/ನಿಬಂಧಗಳನ್ನೂ ಸಹ ಬರೆಯಬಲ್ಲೆ" ಎಂದು ಹೆಮ್ಮೆಯಿಂದ ನುಡಿಯುತ್ತಾರೆ.


ನೇಪಾಳಿ ಸಹೋದರರ ಮಲಯಾಳಂ ಪ್ರೀತಿ


ಇನ್ನು, ಸಿಂಗ್ ಒಂದೆಡೆಯಾದರೆ ಇನ್ನೊಂದೆಡೆ ನೇಪಾಳಿ ಸಹೋದರರಾದ ಹೇಮಂತ್ (16) ಹಾಗೂ ಪ್ರೇಮ್ (13) ಥಾಪಾ ಇಬ್ಬರೂ ಸಹ ಮಲಯಾಳಂ ಭಾಷೆಯ ಅಭಿಮಾನಿಯಾಗಿದ್ದಾರೆ. ಮಲಯಾಳಿ ಜನರೇ ಹೆಚ್ಚಾಗಿರುವ ಹಸ್ತಸಲ್ ವಿಕಾಸಪುರಿ ಎಂಬಲ್ಲಿ ವಾಸಿಸುವ ಇಬ್ಬರೂ ಸಹೋದರರು ಮಲಯಾಳಂ ಮಿಷನ್ ನಿಂದ ಡಿಪ್ಲೋಮಾ ತರಬೇತಿ ಪಡೆದಿದ್ದಾರೆ. "ನನ್ನ ಸ್ನೇಹಿತರು ಮಲಯಾಳಿಗಳು. ಅವರು ತಮ್ಮ ತಮ್ಮ ಮಧ್ಯೆ ಮಲಯಾಳಂನಲ್ಲಿ ಮಾತನಾಡುತ್ತಿದ್ದಾಗ ಆ ಭಾಷೆಯಿಂದ ನಾನು ತುಂಬ ಆಕರ್ಷಿತನಾದೆ" ಎನ್ನುವ ಹೇಮಂತ್ ಆರನೇ ವಯಸ್ಸಿನಿಂದಲೇ ಮಲಯಾಳಂ ಮಿಷನ್ ನಲ್ಲಿ ತರಬೇತಿ ಪಡೆದಿದ್ದಾರೆ.


ಇದನ್ನೂ ಓದಿ: ಕಾರ್‌ ಮೇಲೆ ಲಿಪ್‌ ಸ್ಟಿಕ್​ನಲ್ಲಿ ಗೀಚಿದ ಪುಟ್ಟ ಪೋರ, ವೈರಲ್‌ ಆಯ್ತು ಪುಟಾಣಿಯ ತುಂಟಾಟ

ಹೇಮಂತ್ ಅವರ ತಂದೆ ಭರತ್ ಥಾಪಾ ಅವರಿಗೆ ಮಲಯಾಳಿ ಟ್ಯೂಷನ್ ಟೀಚರ್ ಒಬ್ಬರು ಮಲಯಾಳಂ ಮಿಷನ್ ಬಗ್ಗೆ ಮೊದಲ ಬಾರಿಗೆ ಹೇಳಿದಾಗ ಭರತ್ ಅವರಿಗೆ ಯಾವುದೇ ಎರಡನೇ ವಿಚಾರ ಬರಲಿಲ್ಲವಂತೆ. ಆ ಬಗ್ಗೆ ಅವರು, "ನಾನು ಈ ರೀತಿಯ ಮಿಷನ್ ಬಗ್ಗೆ ಕೇಳಿದಾಗ ನನಗೆ ಬೇರೆ ಯಾವ ಎರಡನೇ ಆಲೋಚನೆ ಬರಲೇ ಇಲ್ಲ. ಈ ಮೂಲಕ ನನ್ನ ಮಕ್ಕಳು ನಾಲ್ಕು ಭಾಷೆಗಳಲ್ಲಿ ಪ್ರಾವಿಣ್ಯತೆ ಪಡೆದಂತಾಗುತ್ತದೆ (ನೇಪಾಳಿ, ಹಿಂದಿ, ಇಂಗ್ಲೀಷ್ ಹಾಗೂ ಮಲಯಾಳಂ). ನಾನು ಮಲಯಾಳಂ ಭಾಷೆಯೊಂದಿಗಾಗಲಿ, ಕೇರಳ ರಾಜ್ಯದೊಂದಿಗಾಗಲಿ ಯಾವ ರೀತಿಯ ಸಂಬಂಧ ಹೊಂದಿಲ್ಲದೆ ಇದ್ದರೂ ಮುಂದೊಂದು ದಿನ ಖಂಡಿತ ಕೇರಳಕ್ಕೆ ಭೇಟಿ ನೀಡುತ್ತೇನೆ" ಎಂದು ಹೇಳುತ್ತಾರೆ.


First published: