ಸಮಾಜದಲ್ಲಿ ಅನೇಕ ಜನರು ತಮ್ಮ ಮಕ್ಕಳನ್ನು (Children) ಚೆನ್ನಾಗಿ ಬೆಳೆಸಬೇಕು, ಅವರಿಗೆ ಒಳ್ಳೆಯ ಶಿಕ್ಷಣ (Education) ನೀಡಬೇಕು ಅಂತ ಕಷ್ಟಪಟ್ಟು ಕೆಲಸ ಮಾಡುತ್ತಿರುತ್ತಾರೆ. ಅದರಲ್ಲೂ ಪತಿಯನ್ನು ಕಳೆದುಕೊಂಡ ಮಹಿಳೆಯರು (Widow Woman) ಒಂದು ಕಡೆ ಕೆಲಸ ಮಾಡಿಕೊಂಡು ಮತ್ತು ಇನ್ನೊಂದು ಕಡೆ ತಮ್ಮ ಮಕ್ಕಳನ್ನು ನೋಡಿಕೊಳ್ಳುತ್ತಿರುತ್ತಾರೆ. ಮಕ್ಕಳಿಗೆ ತಂದೆ ಮತ್ತು ತಾಯಿ ಇಬ್ಬರೂ ಇದ್ದರೆ ಅವರಿಗೆ ಪೂರ್ಣ ಪ್ರಮಾಣದ ಆರೈಕೆ ದೊರೆಯುತ್ತದೆ. ದುರದೃಷ್ಟವಶಾತ್ ತಂದೆ ಅಥವಾ ತಾಯಿಯನ್ನು ಮಕ್ಕಳು ಕಳೆದುಕೊಂಡರೆ, ಇಡೀ ಸಂಸಾರದ ಮತ್ತು ಮಕ್ಕಳ ಜವಾಬ್ದಾರಿ ಆ ಒಂಟಿ ಪೋಷಕರ (Single Parent) ಮೇಲೆ ಬೀಳುತ್ತದೆ. ಪ್ರತಿದಿನ ನಾವು ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿಯೇ ಅನೇಕ ಮಹಿಳೆಯರು, ತಮ್ಮ ಪತಿಯನ್ನು ಕಳೆದುಕೊಂಡವರು ತಮ್ಮ ಮಕ್ಕಳಿಗಾಗಿ ಕೆಲಸ ಮಾಡುತ್ತಿರುತ್ತಾರೆ.
ತಮ್ಮ ಜೀವನಕ್ಕಾಗಿ ಆಟೋ ಓಡಿಸುತ್ತಿದ್ದಾರೆ ಈ ಮಹಿಳೆ
ಇಲ್ಲಿಯೂ ಸಹ ಒಬ್ಬ ಮಹಿಳೆ ತನ್ನ ಪತಿಯ ಮರಣದ ನಂತರ ತಮ್ಮ ಸಂಸಾರದ ಜೀವನೋಪಾಯಕ್ಕಾಗಿ ಆಟೋ ಓಡಿಸುತ್ತಿದ್ದಾರೆ ನೋಡಿ. ಹೌದು.. ಈ ಮಹಿಳೆ ಮೂಲತಃ ಪಂಜಾಬ್ ನವರಾಗಿದ್ದು, ತಮಗಿರುವ ಹೆಣ್ಣು ಮಕ್ಕಳನ್ನು ಬೆಳೆಸುವುದಕ್ಕೆ ಆಟೋ ಸ್ಟೇರಿಂಗ್ ಹಿಡಿದಿದ್ದಾರೆ. ಈ ಮಹಿಳೆಯ ದಿಟ್ಟತನವನ್ನು ಉದ್ಯಮಿ ಆನಂದ್ ಮಹೀಂದ್ರಾ ಅವರು ತುಂಬಾನೇ ಶ್ಲಾಘಿಸಿದ್ದಾರೆ.
Mid-week Inspiration: Paramjit Kaur, our first female Treo customer in Punjab. After losing her husband, she became the sole bread earner.Her E Alfa Mini helps her support her daughters, one of whom is now in college. She showed how to Rise against the odds #SheIsOnTheRise pic.twitter.com/GXXMe1yyUp
— anand mahindra (@anandmahindra) December 7, 2022
ಪಂಜಾಬ್ ಮಹಿಳೆ ಅನೇಕರಿಗೆ ‘ಸ್ಪೂರ್ತಿ’ ಎಂದಿರುವ ಮಹೀಂದ್ರಾ
ಮಹೀಂದ್ರಾ ಗ್ರೂಪ್ ನ ಅಧ್ಯಕ್ಷರಾದ ಆನಂದ್ ಮಹೀಂದ್ರಾ ಅವರು ತಮ್ಮ ಎಲೆಕ್ಟ್ರಿಕ್ ಆಟೋ ರಿಕ್ಷಾದಲ್ಲಿ ಪರಮ್ಜೀತ್ ಕೌರ್ ಅವರ ಫೋಟೋವನ್ನು ಹಂಚಿಕೊಂಡು ಅವರು ಅನೇಕರಿಗೆ "ಸ್ಫೂರ್ತಿ" ಎಂದು ಶ್ಲಾಘಿಸಿದ್ದಾರೆ. ಮಹೀಂದ್ರಾದ ಆಲ್-ಎಲೆಕ್ಟ್ರಿಕ್ ಪ್ಯಾಸೆಂಜರ್ ಆಟೋ ರಿಕ್ಷಾವಾದ ಇ-ಆಲ್ಫಾ ಮಿನಿಯನ್ನು ಖರೀದಿಸುವುದರೊಂದಿಗೆ ಹೆಮ್ಮೆಯ ಮಾಲೀಕರಾಗಿದ್ದಾರೆ ಕೌರ್ ಅಂತ ಹೇಳಬಹುದು.
"ಮಿಡ್-ವೀಕ್ ಸ್ಫೂರ್ತಿ: ಪರಮ್ಜೀತ್ ಕೌರ್, ಪಂಜಾಬ್ ನಲ್ಲಿ ನಮ್ಮ ಮೊದಲ ಮಹಿಳಾ ಟ್ರೆಯೋ ಗ್ರಾಹಕ. ತನ್ನ ಗಂಡನನ್ನು ಕಳೆದುಕೊಂಡ ನಂತರ, ಅವಳೇ ಅವಳ ಕುಟುಂಬಕ್ಕೆ ಏಕೈಕ ಆಧಾರ. ಅವರ ಇ ಆಲ್ಫಾ ಮಿನಿ ತನ್ನ ಹೆಣ್ಣು ಮಕ್ಕಳನ್ನು ಬೆಳೆಸಲು ಸಹಾಯ ಮಾಡುತ್ತದೆ, ಆಕೆಯ ಇಬ್ಬರು ಹೆಣ್ಣು ಮಕ್ಕಳು ಈಗ ಕಾಲೇಜಿನಲ್ಲಿ ಓದುತ್ತಿದ್ದಾರೆ" ಎಂದು ಆನಂದ್ ಮಹೀಂದ್ರಾ ಅವರು ಟ್ವೀಟ್ ಮಾಡಿದ್ದಾರೆ.
"ಕಷ್ಟಗಳ ವಿರುದ್ಧ ಹೇಗೆ ಹೋರಾಡಬೇಕು ಎನ್ನುವುದನ್ನು ಆಕೆ ತೋರಿಸಿಕೊಟ್ಟಿದ್ದಾಳೆ" ಎಂದು ಮಹೀಂದ್ರಾ ಅವರು ತಮ್ಮ ಪೋಸ್ಟ್ ನ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.
ಈ ವೀಡಿಯೋ ಅನೇಕ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ..
ಕೌರ್ ಕುರಿತ ಅವರ ಪೋಸ್ಟ್ ಗೆ ಇದುವರೆಗೂ ಸುಮಾರು 8,000 ಲೈಕ್ ಗಳು ಮತ್ತು ಮೈಕ್ರೋಬ್ಲಾಗಿಂಗ್ ಪ್ಲಾಟ್ಫಾರ್ಮ್ ನಲ್ಲಿ ನೂರಾರು ಕಾಮೆಂಟ್ ಗಳು ಸಹ ಇದಕ್ಕೆ ಬಂದಿವೆ. ಅನೇಕರು ತನ್ನ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವ ಮಹಿಳೆಯ ಈ ದೃಢ ನಿರ್ಧಾರವನ್ನು ತುಂಬಾನೇ ಶ್ಲಾಘಿಸಿದ್ದಾರೆ.
ಇದನ್ನೂ ಓದಿ: Viral Video: ಟ್ರೈನಿನಲ್ಲಿ ಕೂತು ಹಿಂದಿ ಹಾಡು ಹಾಡಿದ ವಯಸ್ಸಾದ ವ್ಯಕ್ತಿ! ವಿಡಿಯೋ ವೈರಲ್
"ಬಿಟ್ಟುಕೊಡದ ಮತ್ತು ಸಂಪೂರ್ಣ ಪ್ರಾಮಾಣಿಕತೆಯಿಂದ ತನ್ನ ಸಂಸಾರಕ್ಕಾಗಿ ಹೋರಾಡುತ್ತಿರುವ ಈ ಮಹಿಳೆಗೆ ಸೆಲ್ಯೂಟ್" ಎಂದು ಕಾಮೆಂಟ್ ವಿಭಾಗದಲ್ಲಿ ಒಬ್ಬ ವ್ಯಕ್ತಿ ಬರೆದಿದ್ದಾರೆ. "ಅದ್ಭುತ! ಅಡೆತಡೆಗಳನ್ನು ಎದುರಿಸುತ್ತಿರುವ ಎಲ್ಲಾ ಮಹಿಳೆಯರಿಗೆ ಇವರು ಮಾದರಿಯಾಗಿದ್ದಾರೆ" ಎಂದು ಇನ್ನೊಬ್ಬರು ಹೇಳಿದರು.
67 ವರ್ಷದ ಮಹೀಂದ್ರಾ ಅವರು 10 ದಶಲಕ್ಷಕ್ಕೂ ಹೆಚ್ಚು ಫಾಲೋವರ್ ಗಳನ್ನು ಹೊಂದಿರುವ ಸಕ್ರಿಯ ಟ್ವಿಟರ್ ಬಳಕೆದಾರರಾಗಿದ್ದಾರೆ. ಅವರು ಆಗಾಗ್ಗೆ ಸ್ಫೂರ್ತಿದಾಯಕ ಕಥೆಗಳು, ಮೀಮ್ ಗಳು, ಗಮನವನ್ನು ಸೆಳೆಯುವ ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ