ಬಡ ತರಕಾರಿ ಮಾರಾಟಗಾರರ ಮೇಲೆ ಪಂಜಾಬ್ ಪೊಲೀಸ್ ದರ್ಪ: ವಿಡಿಯೋ ವೈರಲ್ ಆಗುತ್ತಿದ್ದಂತೆ ಅಮಾನತು!

ತರಕಾರಿ ಮಾರಾಟಗಾರನೊಬ್ಬನ ತರಕಾರಿ ಬುಟ್ಟಿಯನ್ನು ಒದ್ದು ಹಾಳು ಮಾಡಿದ ಪೊಲೀಸ್ ಅಧಿಕಾರಿಯ ದರ್ಪದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದರ್ಪ ತೋರಿದ ಪೊಲೀಸ್ ಅಧಿಕಾರಿಯ ಹೆಸರು ನವದೀಪ್ ಸಿಂಗ್ ಎಂದು ಹೇಳಲಾಗಿದೆ.

Image Credits: Twitter/@brarkhushh

Image Credits: Twitter/@brarkhushh

  • Share this:
ಕೊರೋನಾ ನಿಯಂತ್ರಣಕ್ಕಾಗಿ ದೇಶದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಕರ್ಫ್ಯೂ ಮತ್ತು ಲಾಕ್‌ಡೌನ್ ಮಾಡಲಾಗಿದೆ. ಕೊರೋನಾದಿಂದ ಕರ್ಫ್ಯೂ ಮತ್ತು ಲಾಕ್‌ಡೌನ್‌ನಂತಹ ಕ್ರಮ ಕೈಗೊಂಡ ನಂತರ ದಿನಗೂಲಿ ಕಾರ್ಮಿಕರಿಗೆ ಸಂಕಷ್ಟ ಎದುರಾಗಿದೆ. ಈ ನಡುವೆ ಪೊಲೀಸರು ಜನರು ಹೊರ ಬರದಂತೆ ಕಟ್ಟೆಚ್ಚರ ವಹಿಸಿದ್ದಾರೆ. ಆದರೆ ಕೆಲವು ಪೊಲೀಸ್ ಅಧಿಕಾರಿಗಳು ದರ್ಪ ತೋರಿಸುತ್ತಿದ್ದಾರೆ. ಇತ್ತೀಚೆಗೆ ಪಂಜಾಬ್‌ನಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ದರ್ಪದ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದ್ದು ಜನರ ಹುಬ್ಬೇರಿಸುವಂತೆ ಮಾಡಿದೆ.

ತರಕಾರಿ ಮಾರಾಟಗಾರನೊಬ್ಬನ ತರಕಾರಿ ಬುಟ್ಟಿಯನ್ನು ಒದ್ದು ಹಾಳು ಮಾಡಿದ ಪೊಲೀಸ್ ಅಧಿಕಾರಿಯ ದರ್ಪದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದರ್ಪ ತೋರಿದ ಪೊಲೀಸ್ ಅಧಿಕಾರಿಯ ಹೆಸರು ನವದೀಪ್ ಸಿಂಗ್ ಎಂದು ಹೇಳಲಾಗಿದೆ. ವಿಡಿಯೋ ವೈರಲ್‌ ಆಗುತ್ತಿದ್ದಂತೆ ಪೊಲೀಸ್ ಅಧಿಕಾರಿ ನವದೀಪ್ ಸಿಂಗ್‌ನನ್ನು ಅಮಾನತು ಮಾಡಿದ್ದು, ಈ ಬಗ್ಗೆ ಪಂಜಾಬ್ ಪೊಲೀಸ್ ಮಹಾನಿರ್ದೇಶಕ ದಿನಾರ್ ಗುಪ್ತಾ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಪೊಲೀಸ್ ಕಪುರ್ಥಾಲಾದ ಹಿರಿಯ ಸೂಪರಿಂಟೆಂಡೆಂಟ್, ಕನ್ವರ್‌ದೀಪ್ ಕೌರ್, ಅಧಿಕಾರಿಯನ್ನು ಅಮಾನತುಗೊಳಿಸಿದ್ದಾರೆ ಮತ್ತು ಅವರ ವಿರುದ್ಧ ಇಲಾಖಾ ವಿಚಾರಣೆಯನ್ನು ಪ್ರಾರಂಭಿಸಿದ್ದಾರೆ.

ಮಾರಾಟಗಾರನಿಗೆ ಸೇರಿದ ತರಕಾರಿಗಳನ್ನು ಸಾಗಿಸುವ ಬುಟ್ಟಿಯನ್ನು ಅಧಿಕಾರಿ ಒದೆಯುವುದನ್ನು ವಿಡಿಯೊದಲ್ಲಿ ತೋರಿಸಲಾಗಿದೆ.

ಸುದ್ದಿ ಸಂಸ್ಥೆ ಪಿಟಿಐಯೊಂದಿಗೆ ಮಾತನಾಡಿದ ಕಪುರ್ಥಾಲಾ ಎಸ್‌ಎಸ್‌ಪಿ ಕನ್ವರ್‌ದೀಪ್ ಕೌರ್, ಎಸ್‌ಎಚ್‌ಒ ಅವರ ಈ ನಡವಳಿಕೆಯು ಅವರ ಕೃತ್ಯವು ಸಂಪೂರ್ಣವಾಗಿ ವಿರುದ್ಧವಾಗಿದ್ದು, ಈ ದರ್ಪ ಖಂಡನೀಯ ಎಂದು ಹೇಳಿದರು. ಈ ಘಟನೆಯು ಇಡೀ ಪೊಲೀಸ್ ವ್ಯವಸ್ಥೆಗೆ ಕೆಟ್ಟ ಹೆಸರನ್ನು ತಂದಿದೆ ಎಂದು ಅವರು ಹೇಳಿದರು. ಕಪುರ್ಥಾಲಾದ ಪೊಲೀಸರು ರಸ್ತೆ ಬದಿ ಮಾರಾಟಗಾರರ ನಷ್ಟಕ್ಕೆ ನ್ಯಾಯ ಒದಗಿಸಲು ನಿರ್ಧರಿಸಿದ್ದು, ಅವರಿಗೆ ಪೊಲೀಸರು ತಮ್ಮ ಸಂಬಳದಿಂದ ಹಣದಲ್ಲಿ ಸಹಾಯ ಮಾಡಲು ಮುಂದಾಗಿದ್ದಾರೆ.

ಪಂಜಾಬ್ ರಾಜ್ಯದಲ್ಲಿ ಕೊರೋನಾ ಸೊಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿದ್ದರ ಪರಿಣಾಮ, ಅಲ್ಲಿನ ರಾಜ್ಯ ಸರ್ಕಾರವು ಕಟ್ಟುನಿಟ್ಟಾದ ಕೋವಿಡ್ ನಿರ್ಬಂಧಗಳನ್ನು ವಿಧಿಸಿದೆ. ಈ ಸಮಯದಲ್ಲಿ, ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ಅಂಗಡಿಗಳನ್ನು ಬಂದ್ ಮಾಡಿಸಲಾಗಿತ್ತು.

ರಸ್ತೆಯಲ್ಲಿ ತರಕಾರಿ ಮಾರಾಟಮಾಡುವವರಿಗೆ ಅಂತರ ಕಾಯ್ದುಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ಪಂಜಾಬ್‌ನಲ್ಲಿ ಕಳೆದ ಬುಧವಾರ ಒಟ್ಟು 8015 ಹೊಸ ಕೊರೊನಾ ವೈರಸ್ ಪ್ರಕರಣಗಳು ಮತ್ತು 182 ಸಾವುಗಳು ದಾಖಲಾಗಿವೆ. ರಾಜ್ಯವು ಪ್ರಸ್ತುತ COVID-19 ಸೋಂಕಿನ 63000 ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳನ್ನು ದಾಖಲಾಗಿವೆ.

ದೆಹಲಿ, ಉತ್ತರ ಪ್ರದೇಶ, ರಾಜಸ್ಥಾನ, ಬಿಹಾರ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಕೊರೊನಾ ಸೋಂಕಿನಿಂದ ಪ್ರಕರಣಗಳ ಉಲ್ಬಣವನ್ನು ನಿಯಂತ್ರಿಸಲು ನಿರ್ಬಂಧಗಳನ್ನು ವಿಧಿಸಿವೆ.

ಕೊರೋನಾ ಸೋಂಕಿನಿಂದ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಮುಂದುವರೆದಿದ್ದು, ಭಾರತದಲ್ಲಿ 4.12 ಲಕ್ಷ ಹೊಸ ಪ್ರಕರಣಗಳು ಮತ್ತು 3,980 ಸಾವಿನ ವರದಿ ದಾಖಲಾಗಿವೆ.
First published: