Viral News ಕೃಷ್ಣನ ಭಜನೆ ಜಪಿಸಿದ ಐಎಎಸ್​ ಅಧಿಕಾರಿ; ಸಿಕ್ಕಾಪಟ್ಟೆ ವೈರಲ್​ ಆಯ್ತು ಹಾಡು

ಪಂಜಾಬ್​ ಅಧಿಕಾರಿ ರಾಖಿ ಗುಪ್ತಾ ಎಂಬ ಅಧಿಕಾರಿ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ್ದಾರೆ. ಇದಕ್ಕೆ ಕಾರಣ ಇವರು ಹಾಡಿರುವ ಹಾಡು.

ಪಂಜಾಬ್​ ಅಧಿಕಾರಿ ರಾಖಿ ಗುಪ್ತಾ ಎಂಬ ಅಧಿಕಾರಿ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ್ದಾರೆ. ಇದಕ್ಕೆ ಕಾರಣ ಇವರು ಹಾಡಿರುವ ಹಾಡು.

ಪಂಜಾಬ್​ ಅಧಿಕಾರಿ ರಾಖಿ ಗುಪ್ತಾ ಎಂಬ ಅಧಿಕಾರಿ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ್ದಾರೆ. ಇದಕ್ಕೆ ಕಾರಣ ಇವರು ಹಾಡಿರುವ ಹಾಡು.

 • Share this:
  ಬಿಡುವಿಲ್ಲದ ಕೆಲಸ, ಒತ್ತಡದ ಜೀವನದ ಮಧ್ಯೆ ಐಎಎಸ್​ ಅಧಿಕಾರಿಗಳು ತಮ್ಮ ಹವ್ಯಾಸ, ಪ್ರವೃತ್ತಿಗಳನ್ನು ಕೆಲವೊಮ್ಮೆ ಮರೆಯುವುದು ಸಹಜ. ಆದರೆ, ಈ ಅಧಿಕಾರಿ ಎಲ್ಲರಿಗಿಂತ ವಿಭಿನ್ನವಾಗಿದ್ದಾರೆ. ಪಂಜಾಬ್​ ಅಧಿಕಾರಿ ರಾಖಿ ಗುಪ್ತಾ ಎಂಬ ಅಧಿಕಾರಿ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ್ದಾರೆ. ಇದಕ್ಕೆ ಕಾರಣ ಇವರು ಹಾಡಿರುವ ಹಾಡು. ಉತ್ತಮ ಮಾಧುರ್ಯದ ಕಂಠ ಹೊಂದಿರುವ ಇವರು ಕೃಷ್ಣನ ಭಜನೆ ಎಲ್ಲರ ಮನಸು ಗೆದ್ದಿದೆ. ಅಷ್ಟೇ ಅಲ್ಲದೇ ಈ ಹಾಡಿಗೆ ಆಲ್ಬಂ ಸ್ವರೂಪ ನೀಡಲಾಗಿದೆ. ಈ ಆಲ್ಬಂ ನಲ್ಲಿ ಖುದ್ದು ಐಎಎಸ್​ ಅಧಿಕಾರಿ ಕಾಣಿಸಿಕೊಂಡಿದ್ದು, ಸುಂದರವಾಗಿ ಚಿತ್ರೀಕರಣ ನಡೆಸಲಾಗಿದೆ. ಮಥುರಾ, ಬೃಂದಾವನ ಕೃಷ್ಣನ ಭಜನೆ ಹಾಡಿರುವ ಯೂಟ್ಯೂಬ್​ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ.

  ಭಕ್ತಿಗೀತೆ ಮೂಲಕ ಎಲ್ಲರ ಮೆಚ್ಚುಗೆ ಪಡೆದಿರುವ 47 ವರ್ಷದ ಈ ಐಎಎಸ್​ ಅಧಿಕಾರಿ ಸದ್ಯ ದೆಹಲಿಯಲ್ಲಿ ಪಂಜಾಬ್​ ರೆಸಿಡೆಂಟ್​ ಕಮಿಷನರ್​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ಇನ್ನು ಈ ಹಾಡಿಗೆ ಗೌರವ್​ ದೇವ್​ ಮತ್ತು ಕಾರ್ತಿಕ್​ ಎಂಬುವವರು ಸಂಗೀತ ಸಂಯೋಜಿಸಿದ್ದಾರೆ. ಈ ಹಾಡು ಟೈಮ್ಸ್​ ಮ್ಯೂಸಿಕ್​ ಸ್ಪಿರುಚುಯಲ್​ ಯೂಟ್ಯೂಬ್​ ಚಾನೆಲ್​ನಲ್ಲಿ ಈಗಾಗಲೇ 98 ಸಾವಿರ ಲೈಕ್​ ಗಳಿಸಿದೆ.  ಇನ್ನು ಈ ಕುರಿತು ಮಾತನಾಡಿರುವ ಅಧಿಕಾರಿ, ಇದು ನನ್ನ ಹವ್ಯಾಸವಾಗಿದೆ. ಬಾಲ್ಯದಿಂದಲೂ ನಾನು ಹಾಡು ಹೇಳುತ್ತಿದ್ದೇನೆ. ಶಾಲಾ ಕಾರ್ಯಕ್ರಮ, ಕುಟುಂಬದ ಸಮಾರಂಭದಲ್ಲಿ ನಾನು ಹಾಡುತ್ತಿದ್ದೆ ಎಂದಿದ್ದಾರೆ.

  ಕೃಷ್ಣನ ಕುರಿತು ಹಾಡಿನಲ್ಲಿ ಭಕ್ತಿ ಭಾವ ಮೆರೆದಿರುವ ಅಧಿಕಾರಿ ಈ ಹಾಡನ್ನು ತಮ್ಮ ತಾಯಿಗೆ ಸಮರ್ಪಣೆ ಮಾಡಿದ್ದಾರೆ.
  Published by:Seema R
  First published: