Hybrid Chillies: ಹೈಬ್ರಿಡ್‌ ಮೆಣಸಿನಕಾಯಿ ಬೀಜಗಳ ಉತ್ಪಾದನೆಯಿಂದ ಕೋಟಿ ಆದಾಯ ಗಳಿಸುತ್ತಿರುವ ಪಂಜಾಬಿನ ರೈತ..!

Gurbir Singh: ಈ ಘಟನೆ ನಡೆದದ್ದು 2000ನೇ ಇಸವಿಯಲ್ಲಿ. ಮೂರು ಮಕ್ಕಳಲ್ಲಿ ದೊಡ್ಡ ಮಗನಾಗಿದ್ದ ಗುರ್‍ಬೀರ್ ಆರ್ಥಿಕ ಜವಾಬ್ಧಾರಿಯನ್ನು ತನ್ನ ಹೆಗಲಿಗೆ ಏರಿಸಿಕೊಳ್ಳುವುದು ಅನಿವಾರ್ಯವಾಗಿತ್ತು.

ಮೆಣಸು

ಮೆಣಸು

 • Share this:
  ಪಂಜಾಬಿನ (Punjab) ಅಮೃತಸರದ (Amritsar) ಬರೋಶಿ ರಜಪೂತ ಗ್ರಾಮದ ಗುರ್‍ಬೀರ್ ಸಿಂಗ್ (Gurbir Singh ), ಸಾಂಪ್ರದಾಯಿಕ ಬೆಳೆಗಳನ್ನು ಕನಿಷ್ಟ ಪ್ರಮಾಣದಲ್ಲಿ ಬೆಳೆಯುತ್ತಿದ್ದ ಒಬ್ಬ ರೈತ. ಆದರೂ, ಕೃಷಿಯಿಂದ ಹೊರಗೆ ವೃತ್ತಿ ಅವಕಾಶಗಳನ್ನು ಹುಡುಕುವ ಬಯಕೆ ಅವರದಾಗಿತ್ತು. ಅವರಿಗೆ 19 ವರ್ಷ ವಯಸ್ಸಿದ್ದಾಗ, ಬದುಕಿನಲ್ಲಿ ದುರ್ಘಟನೆಯೊಂದು ನಡೆಯಿತು. 

  “ನಾನು ಕಲಾ ಪದವಿ ಓದುತ್ತಿದ್ದ ಕಾಲದಲ್ಲಿ, ಒಂದು ದಿನ ನನ್ನ ತಂದೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದು ತಿಳಿದು ಬಂತು. ನನ್ನ ಕುಟುಂಬ ಸಾಲದಲ್ಲಿ ಮುಳುಗಿತ್ತು” ಎಂದು ಆ ದುರ್ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ ಗುರ್‍ಬೀರ್ ಸಿಂಗ್.

  ಈ ಘಟನೆ ನಡೆದದ್ದು 2000ನೇ ಇಸವಿಯಲ್ಲಿ. ಮೂರು ಮಕ್ಕಳಲ್ಲಿ ದೊಡ್ಡ ಮಗನಾಗಿದ್ದ ಗುರ್‍ಬೀರ್ ಆರ್ಥಿಕ ಜವಾಬ್ಧಾರಿಯನ್ನು ತನ್ನ ಹೆಗಲಿಗೆ ಏರಿಸಿಕೊಳ್ಳುವುದು ಅನಿವಾರ್ಯವಾಗಿತ್ತು.

  “ಆ ಅಪಘಾತ ನನ್ನ ಕುಟುಂಬವನ್ನು ನಡುಗಿಸಿತು. ನಾನು ಓದನ್ನು ನಿಲ್ಲಿಸುವುದು ಮತ್ತು ಕೃಷಿಗೆ ಮರಳುವುದು ಬಿಟ್ಟರೆ ಬೇರೆ ಆಯ್ಕೆ ಇರಲಿಲ್ಲ” ಎಂದು ಹಿಂದಿನ ನೋವಿನ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ 41 ವರ್ಷದ ಗುರ್‍ಬೀರ್.

  ಈ ಎರಡು ದಶಕಗಳಲ್ಲಿ, ಕೃಷಿಯಲ್ಲಿ ಪ್ರಗತಿ ಪರ ತಂತ್ರಗಳನ್ನು ಅಳವಡಿಕೊಳ್ಳುವ ಮೂಲಕ ಯಶಸ್ಸನ್ನು ಪಡೆದಿರುವ ಗುರ್‍ಬೀರ್ , ಇತರರಿಗೆ ಮಾದರಿಯಾಗಿ ಬೆಳೆದಿದ್ದಾರೆ. ಅವರು ಒಬ್ಬ ಬೀಜ ಮಾರಾಟಗಾರರಾಗಿದ್ದು, ಕೋಟಿ ಆದಾಯ ಗಳಿಸುತ್ತಿದ್ದಾರೆ.

  ಹೈಬ್ರಿಡ್‌ ಮಾರ್ಗದ ಕಲಿಕೆ

  ಗುರ್‍ಬೀರ್, ತಮ್ಮ ತಂದೆಯ ನಷ್ಟವನ್ನು ನೀಗಿಸಲು, ಕುಟುಂಬದ 2.5 ಎಕರೆ ಭೂಮಿಯಲ್ಲಿ ಸಾಂಪ್ರದಾಯಿಕ ತರಕಾರಿ ಕೃಷಿ ಮುಂದುವರೆಸುವ ಮೂಲಕ ತಂದೆಯ ಹೆಜ್ಜೆಯಲ್ಲೇ ನಡೆಯತೊಡಗಿದರು. ಆದರೆ, ಬಹಳ ಬೇಗ ನವೀನ ಕೃಷಿ ವಿಧಾನಗಳಿಗೆ ಹೆಸರುವಾಸಿಯಾಗಿರುವ ಪಂಜಾಬ್ ಕೃಷಿ ವಿಶ್ವ ವಿದ್ಯಾನಿಲಯದ ಸಂಪರ್ಕಕ್ಕೆ ಬಂದರು. ಅದು ಕೃಷಿಕರಿಗೆ ಹಲವು ರೀತಿಗಳಲ್ಲಿ ಸಹಾಯ ಮಾಡುತ್ತದೆ. ಗುರ್‍ಬೀರ್ , ವಿಶ್ವ ವಿದ್ಯಾನಿಲಯದ ಕೃಷಿ ಸಲಹಾ ಯೋಜನೆಯ ಮುಖ್ಯಸ್ಥರಾಗಿದ್ದ ಡಾ.ನರೀಂದರ್‍ಪಾಲ್ ಸಿಂಗ್ ಅವರನ್ನು ಭೇಟಿಯಾದರು ಮತ್ತು ಅಲ್ಲಿ ಅವರ ಹೈಬ್ರಿಡ್ ಮೆಣಸಿನ ಬೀಜಗಳ ಬಗ್ಗೆ ತಿಳಿದುಕೊಂಡರು. ಅವುಗಳ ಗುಣಲಕ್ಷಣಗಳು ಗುರ್‍ಬೀರ್‍ಗೆ ಮೆಚ್ಚುಗೆಯಾದವು.

  Read Also: Haveri: ಪೊಲೀಸರ ಜೊತೆ ಬಾಗಿಲು ಒಡೆದು ಒಳಗೆ ಬನ್ನಿ ಅಂತಾ ಹಾಕಲಾಗಿದ್ದ ಬೋರ್ಡ್ ನೋಡಿ ಬೆಚ್ಚಿಬಿದ್ದ ಜನ..!

  “ ಈ ಮೆಣಸಿನಕಾಯಿಗಳಿಗೆ ಕೀಟಗಳು, ಶಿಲೀಂಧ್ರಗಳು ಮತ್ತು ಇತರ ಕಾಯಿಲೆಗಳು ಬಾಧಿಸುವ ಸಾಧ್ಯತೆ ಕಡಿಮೆ. ಅವು ಸುದೀರ್ಘ ಜೀವಿತಾವಧಿ , ಉತ್ತಮ ರುಚಿ, ಸುಧಾರಿತ ಇಳುವರಿಯ ಖಾತರಿ ಮತ್ತು ಕಲಾತ್ಮಕ ಮೌಲ್ಯವನ್ನು ಹೊಂದಿದೆ. ಅವು ಒಂದು ವಿಶೇಷ ಮಿಶ್ರಣ ಮತ್ತು ಅನುಕೂಲಕಾರಿಯಾಗಿ ಕಾರ್ಯ ನಿರ್ವಹಿಸುತ್ತವೆ” ಎನ್ನುತ್ತಾರೆ ಗುರ್‍ಬೀರ್.

  ಆ ಬಳಿಕ ಗುರ್‍ಬೀರ್ , ಗುಣಮಟ್ಟದ ಹೈಬ್ರಿಡ್ ಮೆಣಸಿನಕಾಯಿಗಳನ್ನು ಉತ್ಪಾದಿಸುವ ಕಲೆಯನ್ನು ಕರಗತ ಮಾಡಿಕೊಂಡರು. “ ನಾನು ಸೈಟೋಪ್ಲಾಸ್ಮಿಕ್ ಮೇಲ್ ಸ್ಟೆರಿಲಿಟಿ ವಿಧಾನ ಅಳವಡಿಸಿಕೊಂಡೆ. ಅದು ಒಂದು ಹೈಬ್ರಿಡ್ ಬೀಜವನ್ನು ಎರಡು ತಳೀಯವಾಗಿ ವಿಭಿನ್ನ ರೇಖೆಗಳ ನಡುವಿನ ಮಧ್ಯದಿಂದ ಪಡೆಯುವ ಒಂದು ವಿಧಾನವಾಗಿದೆ, ಅದರಿಂದಾಗಿ ದೊಡ್ಡ ಸಸ್ಯದಿಂದ ಹೊಸ ಪ್ರಭೇಧಗಳ ಸಂತಾನೋತ್ಪತ್ತಿ ಮಾಡುವುದು ಸಾಧ್ಯವಾಗುತ್ತದೆ” ಎಂದು ತಮ್ಮ ಕೃಷಿಯ ಬಗ್ಗೆ ವಿವರಿಸುತ್ತಾರೆ ಗುರ್‍ಬೀರ್.  ಅವರು ಹೂಕೋಸು , ಎಲೆಕೋಸು , ಟೊಮ್ಯಾಟೋ ಮತ್ತು ಇತರ ತರಕಾರಿಗಳನ್ನು ಬೆಳೆಸುವ ಸಾಂಪ್ರದಾಯಿಕ ಕೃಷಿ ಪದ್ಧತಿ ಮುಂದುವರೆಸಿದ್ದು ಮಾತ್ರವಲ್ಲದೆ, ರೈತರಿಗೆ ಬೀಜಗಳನ್ನು ಮತ್ತು ಸಸಿಗಳನ್ನು ಮಾರಾಟ ಮಾಡಲು ಗೋಬಿನ್‍ಪುರ ನರ್ಸರಿಯನ್ನು ಕೂಡ ಸ್ಥಾಪಿಸಿದರು. ಈಗ ಅವರ ನರ್ಸರಿಯಲ್ಲಿ ಎಲ್ಲಾ ತರಕಾರಿಗಳಿಗೆ 18 ಎಕರೆ ತೋಟವಿದ್ದು, ಕೋಟಿ ಆದಾಯ ನೀಡುತ್ತಿದೆ. “ಇಷ್ಟು ವರ್ಷಗಳ ಸ್ಥಿರ ಉತ್ಪಾದನೆ ಮತ್ತು ಗುಣಮಟ್ಟ ಕಾಪಾಡಿಕೊಂಡ ಕಾರಣದಿಂದ ನನ್ನ ಆದಾಯ ಹೆಚ್ಚಿಸಲು ಸಾಧ್ಯವಾಗಿದೆ. ರೈತರು ಬೀಜಗಳ ಗುಣಮಟ್ಟ ಗುರುತಿಸಿದರು ಮತ್ತು ಅದರಿಂದ ಲಾಭ ಪಡೆದರು. ರೈತರಿಗೆ ಸಿಕ್ಕ ಲಾಭ ಮಾರುಕಟ್ಟೆಯಲ್ಲಿ ನನ್ನ ವಿಶ್ವಾಸಾರ್ಹತೆ ಹೆಚ್ಚಿಸಿದೆ. ಗುಣಮಟ್ಟದ ಬೀಜಗಳನ್ನು ಬೆಳೆಯುವ ನನ್ನ ಪ್ರ್ರಾಮಾಣಿಕತೆ ಮತ್ತು ಶ್ರಮವನ್ನು ರೈತರು ಶ್ಲಾಘಿಸಿದ್ದಾರೆ” ಎನ್ನುತ್ತಾರೆ ಗುರ್‍ಬೀರ್.

  Read Also: Piles Remedies: ಬಹಳ ದಿನಗಳಿಂದ ಪೈಲ್ಸ್​ ಸಮಸ್ಯೆ ಕಾಡುತ್ತಿದ್ರೆ ಈ ಮನೆಮದ್ದುಗಳನ್ನು ಬಳಸಿ

  ಎರಡು ದಶಕಗಳ ಸುದೀರ್ಘ ಪಯಣದಲ್ಲಿ ಹಲವಾರು ಸವಾಲುಗಳನ್ನು ಎದುರಿಸಿದರೂ, ಗುರ್‍ಬೀರ್ ಅವರ ಕೃಷಿ ಭೂಮಿ 25 ಎಕರೆಗೆ ವಿಸ್ತರಿಸಿದೆ. ಸವಾಲುಗಳು ಎಲ್ಲಾ ವೃತ್ತಿಯಲ್ಲಿ ಇರುತ್ತವೆ. ಪ್ರತಿಯೊಂದು ಉದ್ಯಮದಲ್ಲಿ ಲಾಭ ನಷ್ಟ ಸಾಮಾನ್ಯ ಮತ್ತು ಎಲ್ಲರೂ ಅದರ ಮೂಲಕ ಸಾಗಲೇಬೇಕು ಎನ್ನುತ್ತಾರೆ ಅವರು.

  “ಅನೇಕ ಯುವಕರು ತಮ್ಮ ಕೃಷಿ ಸಂಪ್ರದಾಯ ತೊರೆಯುತ್ತಿದ್ದಾರೆ ಮತ್ತು ಉತ್ತಮ ಉದ್ಯೋಗ ಹಾಗೂ ಆದಾಯದ ಅವಕಾಶಗಳಿಗಾಗಿ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಆದರೆ, ಭಾರತದ ಆರ್ಥಿಕತೆ ಬೆಂಬಲಿಸುತ್ತಿರುವುದು ಕೃಷಿ ಮತ್ತು ನಾವು ಕೃಷಿಯ ಮೇಲಿನಿಂದ ನಂಬಿಕೆ ಕಳೆದುಕೊಳ್ಳಬಾರದು” ಎಂದು ಅವರು ಹೇಳುತ್ತಾರೆ.
  First published: