No Parking: ಇಲ್ಲೊಬ್ಬ ಸ್ಕೂಟರ್​ಗೇ ಒಂದು ಸ್ಮಾರಕ ನಿರ್ಮಿಸಿದ್ದಾನೆ, ಟ್ರಾಫಿಕ್ ಪೊಲೀಸರಿಗೆ ಟಾಂಗ್ ಕೊಡೋಕೆ ಕ್ರಿಯೇಟಿವ್ ಐಡಿಯಾ!

ಇದೇ ವರ್ಷ ಜೂನ್​ 15ರಂದು ಟ್ರಾಫಿಕ್​​ ಪೊಲೀಸರು ಸಚಿನ್​ ಧನಕುಡೆ ಅವರ ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಹೋಗಿದ್ದರು. ನೋ ಪಾರ್ಕಿಂಗ್​ನಲ್ಲಿಟ್ಟಿದ್ದಾರೆಂದು ವಾಹನವನ್ನು ತೆಗೆದುಕೊಂಡು ಹೋಗಿದ್ದಾರೆ.

Photo: Twitter

Photo: Twitter

 • Share this:
  ಯಾರಾದರು ವ್ಯಕ್ತಿ ಸತ್ತಾಗ ಅವರ ನೆನಪಿಗಾಗಿ ಸ್ಮಾರಕ ಕಟ್ಟುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ದ್ವಿಚಕ್ರ ವಾಹನಕ್ಕಾಗಿ ಸ್ಮಾರಕ ನಿರ್ಮಿಸಿದ್ದಾರೆ. ಅಂದಹಾಗೆಯೇ ವ್ಯಕ್ತಿ ಸುಮ್ಮನೆ ಸ್ಮಾರಕ ನಿರ್ಮಿಸಿಲ್ಲ. ಟ್ರಾಫಿಕ್​ ಮತ್ತು ಪಾರ್ಕಿಂಗ್​ ಸಮಸ್ಯೆಯಿಂದ ಬೇಸತ್ತು ವ್ಯಕ್ತಿ ತನ್ನ ಸ್ಮಾರಕ ನಿರ್ಮಿಸಿದ್ದಾರೆ. ಸಮಸ್ಯೆ ಬಗ್ಗೆ ಸಾರಿ ಹೇಳಲು ಈ ರೀತಿ ಮಾಡಿದ್ದಾರೆ. ಅಂದಹಾಗೆಯೇ ಈ ಘಟನೆ ನಡೆದಿದ್ದೆಲ್ಲಿ. ಇಲ್ಲಿದೆ ಮಾಹಿತಿ

  ಪುಣೆ ಮೂಲದ 50 ವರ್ಷದ ಪ್ರಾಯದ  ಸಚಿನ್​ ಧನಕುಡೆ ಅವರು ಪೌಡ್​ ರಸ್ತೆಯ ನಿವಾಸಿಯಾಗಿದ್ದು, ನಗರದಲ್ಲಿ ಪಾಕಿಂಗ್​​ ಮತ್ತು ಟ್ರಾಫಿಕ್​ ಸಮಸಯೆಯನ್ನು ಎತ್ತಿತೋರಿಸಲು ಕೋತ್ರುಡ್​ ಡಿಪೋ ಬಳಿ ತನ್ನ ದ್ವಿಚಕ್ರ ವಾಹನದ ಸ್ಮಾರಕ ನಿರ್ಮಿಸಿದ್ದಾರೆ.

  ಇದೇ ವರ್ಷ ಜೂನ್​ 15ರಂದು ಟ್ರಾಫಿಕ್​​ ಪೊಲೀಸರು ಸಚಿನ್​ ಧನಕುಡೆ ಅವರ ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಹೋಗಿದ್ದರು. ನೋ ಪಾರ್ಕಿಂಗ್​ನಲ್ಲಿಟ್ಟಿದ್ದಾರೆಂದು ವಾಹನವನ್ನು ತೆಗೆದುಕೊಂಡು ಹೋಗಿದ್ದಾರೆ. ಆದರೆ ಸಚಿನ್​ ಧನಕುಡೆ ವಾಹನ ಪಾರ್ಕಿಂಗ್​ ಜಾಗದಲ್ಲಿತ್ತು. ಪೊಲೀಸರು ತೆಗೆದುಕೊಂಡು ಹೋದ ಸಚಿನ್​ ಅವರ ವಾಹವನ್ನು ಸೆಪ್ಟೆಂಬರ್​ 11 ರದು  ಹಿಂದಿರುಗಿಸುತ್ತಾರೆ. ಇದರಿಂದಾಗಿ ಸಚಿನ್​  ಗಣೇಶ ಹಬ್ಬದಂದು ಸ್ಮಾರಕ ನಿರ್ಮಿಸುತ್ತಾರೆ.

  ಸದ್ಯ ಸಚಿನ್​ ಧನಕುಡೆ ಅವರು ತಮ್ಮ ದ್ವಿಚಕ್ರ ವಾಹನಕ್ಕಾಗಿ ನಿರ್ಮಸಿದ ಸ್ಮಾರಕದ ಫೋಟೋ ವೈರಲ್​ ಆಗಿದೆ.

  ಸಚಿನ್​ ಧನಕುಡೆ ಈ ಬಗ್ಗೆ ಮಾತನಾಡಿದ್ದು, ‘‘ಜೂನ್​ 15ರಂದು ಟ್ರಾಫಿಕ್​ ಪೊಲೀಸರು ನನ್ನ ಸ್ಕೂಟರ್​ ಅನ್ನು ತೆಗೆದುಕೊಂಡು ಹೋದರು. ನಾನು ನೋ ಪಾರ್ಕಿಂಗ್​ ಜಾಗದಲ್ಲಿ ವಾಃನ ಇರಿಸಿದ್ದೇನೆಂದು ತೆಗೆದುಕೊಂಡು ಹೋಗಿದ್ದಾರೆ. ಆದರೆ ನನ್ನ ವಾಹನ ನೋ ಪಾರ್ಕಿಂಗ್​ ಜಾಗದಲ್ಲಿ ಇರಲಿಲ್ಲ. ಕೊನೆಗೆ ಇದ್ದ ಒಂದು ವಾಹನವನ್ನು ಮರಳಿ ಪಡೆಯಲು ಸ್ಟೇಷನ್​ಗೆ ಅಳೆಯಬೇಕಾಯಿತು. ಅದರ ಜೊತೆಗೆ ಟ್ರಾಫಿಕ್​ ಮತ್ತು ಪಾರ್ಕಿಂಗ್​ ಸಮಸ್ಯೆ ಬಗ್ಗೆ ಅಧ್ಯಯನ ಮಾಡಿದೆ. ಕೊನೆಗೆ ಸೆಪ್ಟೆಂಬರ್​ 15ರಂದು ಮರಳಿ ಕೊಟ್ಟರು. ಇದರಿಂದ ಬೇಸತ್ತು ಟ್ರಾಫಿಕ್​ ಮತ್ತು ಪಾಕಿಂಗ್​ ಸಮಸ್ಯೆ ಬಗ್ಗೆ ಎಲ್ಲರಿಗೂ ಗೊತ್ತಾಗಬೇಕು ಎಂದು ಸ್ಮಾರಕ ನಿರ್ಮಿಸಿದೆ‘‘ ಎಂದು ಹೇಳಿದರು

  Read Also- Youtube: ಹೊಸ ಫೀಚರ್ ಪರಿಚಯಿಸಿದ ಯುಟ್ಯೂಬ್..ಯಾವುದೇ ಭಾಷೆಯ ಕಾಮೆಂಟ್​​ಗಳನ್ನ ಕನ್ನಡದಲ್ಲೇ ಓದಬಹುದು

  ನಂತರ ಮಾತನಾಡಿದ ಅವರು "ಸಮಸ್ಯೆಯನ್ನು ಯಾವುದೇ ಏಜೆನ್ಸಿಯಿಂದ ಪರಿಹರಿಸಲಾಗುವುದಿಲ್ಲ ಎಂದು ನಾನು ಅರಿತುಕೊಂಡೆ. ಪುಣೆ ಮುನ್ಸಿಪಲ್ ಕಾರ್ಪೊರೇಷನ್ (ಪಿಎಂಸಿ), ನಗರ ಯೋಜನಾ ವಿಭಾಗ, ಟ್ರಾಫಿಕ್ ಪೋಲಿಸರು ಸಮಸ್ಯೆಯನ್ನು ಪರಿಹರಿಸಲು ಕೈಜೋಡಿಸಬೇಕು. ಆದರೆ ದುರದೃಷ್ಟವಶಾತ್, ಇದು ಆಗುತ್ತಿಲ್ಲ. ಆಡಳಿತವು ಇದನ್ನು ಗಮನಿಸದಿದ್ದರೆ ಸಂಚಾರ ಮತ್ತು ಪಾರ್ಕಿಂಗ್ ತೊಂದರೆಗಳನ್ನು ಎತ್ತಿ ತೋರಿಸಲು ನಾನು ನನ್ನ ಖಾಸಗಿ ಭೂಮಿಯಲ್ಲಿ ಶಾಶ್ವತವಾಗಿ ಸ್ಮಾರಕವನ್ನು ಇಡುತ್ತೇನೆ. ಯಾಕೆ  ಜನಸಾಮಾನ್ಯರು ಇಂತಹ ಸಮಸ್ಯೆಯಿಂದ ಬಳಲುತ್ತಿದ್ದಾರೆ? " ಎಂದು ಹೇಳಿದರು.
  Published by:Harshith AS
  First published: