• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • The Hemp Cafe: ಸೆಣಬಿನಿಂದ ತಯಾರಾದ ಆರೋಗ್ಯಕರ ಖಾದ್ಯಗಳನ್ನು ನೀವೂ ಸವಿಯಬೇಕಾ? ಹಾಗಿದ್ರೆ ಈ ಕೆಫೆಗೆ ಭೇಟಿ ಕೊಡಿ

The Hemp Cafe: ಸೆಣಬಿನಿಂದ ತಯಾರಾದ ಆರೋಗ್ಯಕರ ಖಾದ್ಯಗಳನ್ನು ನೀವೂ ಸವಿಯಬೇಕಾ? ಹಾಗಿದ್ರೆ ಈ ಕೆಫೆಗೆ ಭೇಟಿ ಕೊಡಿ

ಪುಣೆಯಲ್ಲಿ ಪ್ರಪ್ರಥಮ ಬಾರಿಗೆ ಸೆಣಬಿನ ಖಾದ್ಯಗಳ ಕೆಫೆ

ಪುಣೆಯಲ್ಲಿ ಪ್ರಪ್ರಥಮ ಬಾರಿಗೆ ಸೆಣಬಿನ ಖಾದ್ಯಗಳ ಕೆಫೆ

ಪುಣೆಯಲ್ಲಿ ಈಗ ಪ್ರಪ್ರಥಮ ಬಾರಿಗೆ, ಸೆಣಬನ್ನು ಸೇರಿಸಿ ತಯಾರಿಸಲಾಗುವ ಖಾದ್ಯಗಳನ್ನು ನೀಡುವ ಕೆಫೆಯೊಂದನ್ನು ಆರಂಭಿಸಲಾಗಿದೆ. ಈ ಕೆಫೆಯ ಮೆನುವಿನಲ್ಲಿ ಯಾವ ಯಾವ ಸೆಣಬು ಆಧರಿತ ಖಾದ್ಯಗಳಿವೆ ಗೊತ್ತೇ? ಭಾಂಗ್ ಸ್ಯಾಂಡ್‍ವಿಚ್, ಸೆಣಬಿನ ಸ್ಮೂದಿ ಮತ್ತು ಸೆಣಬು ಬಿಸ್ಕತ್ತು. ಸೆಣಬಿನಿಂದ ತಯಾರಿಸಿದ ಖಾದ್ಯಗಳು ಅತ್ಯಂತ ಆರೋಗ್ಯಕರ ಕೂಡ.

ಮುಂದೆ ಓದಿ ...
  • Share this:

ಸೆಣಬಿನ ಬೀಜ(Hemp) ಎಷ್ಟು ಆರೋಗ್ಯಕರ ಎಂಬ ಮಾಹಿತಿ ಬಹಳಷ್ಟು ಮಂದಿಗೆ ಇಲ್ಲ, ಅಲ್ಲದೇ ಸೆಣಬಿನ ಬಗ್ಗೆ ಸಾಕಷ್ಟು ತಪ್ಪು ಕಲ್ಪನೆಗಳು ಕೂಡ ಇವೆ. ಇಂತಹ ತಪ್ಪು ಕಲ್ಪನೆಗಳನ್ನು ಪಕ್ಕಕ್ಕಿಟ್ಟು, ಸೆಣಬಿನ ಖಾದ್ಯಗಳನ್ನು ಸವಿಯುವ ಆಸೆ ನಿಮಗಿದ್ದರೆ, ನೀವು ಖಂಡಿತಾ ಪುಣೆಗೆ (Pune) ಭೇಟಿ ನೀಡಲೇಬೇಕು. ಪುಣೆಯಲ್ಲಿ ಈಗ ಪ್ರಪ್ರಥಮ ಬಾರಿಗೆ, ಸೆಣಬನ್ನು ಸೇರಿಸಿ ತಯಾರಿಸಲಾಗುವ ಖಾದ್ಯಗಳನ್ನು ನೀಡುವ ಕೆಫೆಯೊಂದನ್ನು (Cafe) ಆರಂಭಿಸಲಾಗಿದೆ. ಈ ಕೆಫೆಯ ಮೆನುವಿನಲ್ಲಿ (Menu) ಯಾವ ಯಾವ ಸೆಣಬು ಆಧರಿತ ಖಾದ್ಯಗಳಿವೆ ಗೊತ್ತೇ? ಭಾಂಗ್ ಸ್ಯಾಂಡ್‍ವಿಚ್(Sandwich), ಸೆಣಬಿನ ಸ್ಮೂದಿ (Smoothie) ಮತ್ತು ಸೆಣಬು ಬಿಸ್ಕತ್ತು (Biscuit). ಸೆಣಬಿನಿಂದ ತಯಾರಿಸಿದ ಖಾದ್ಯಗಳು ಅತ್ಯಂತ ಆರೋಗ್ಯಕರ ಕೂಡ.


ವಿಟಮಿನ್‍ಗಳು ಮತ್ತು ಆರೋಗ್ಯಕರ ಕೊಬ್ಬುಗಳ ಖಜಾನೆ
ಈ ಕೆಫೆಯ ಸಹ -ಸಂಸ್ಥಾಪಕಿ, ಮೂವತ್ತು ವರ್ಷ ವಯಸ್ಸಿನ ಅಮೃತಾ ಶಿಟೋಲೆ ಅವರು ಹೇಳುವ ಪ್ರಕಾರ, ಸೆಣಬು, ವಿಟಮಿನ್‍ಗಳು ಮತ್ತು ಆರೋಗ್ಯಕರ ಕೊಬ್ಬುಗಳ ಖಜಾನೆಯಾಗಿದೆ. ಅಮೃತಾ ಶಿಟೋಲೆ ಅವರು ತಮ್ಮ ಸಹೋದರ ವಿಶಾಲ್ ಜೊತೆ ಸದಾಶಿವ ಪೇಟ್‍ನಲ್ಲಿ ಕೆಫೆಯನ್ನು ನಡೆಸುತ್ತಿದ್ದಾರೆ.


ಕೆಫೆಯ ಬಗ್ಗೆ ಅಮೃತಾ ಅವರು ಹೇಳಿದ್ದು ಹೀಗೆ
“ನಾಲ್ಕು ವರ್ಷಗಳ ಹಿಂದೆ ಉತ್ತರಾಖಂಡಕ್ಕೆ ಪ್ರವಾಸ ಹೋಗಿದ್ದಾಗ ನನಗೆ ಸೆಣಬಿನ ಬಗ್ಗೆ ತಿಳಿಯಿತು. ಸೆಣಬನ್ನು ಕೈಗಾರಿಕಾ ಬಳಕೆಯ ಉದ್ದೇಶಕ್ಕಾಗಿ ಕಾನೂನುಬದ್ಧಗೊಳಿಸಿದ ದೇಶದ ಮೊದಲ ರಾಜ್ಯ ಉತ್ತರಾಖಂಡ. ಪ್ರವಾಸದ ಸಮಯದಲ್ಲಿ, ಚಟ್ನಿಗಳು ಮತ್ತು ಆಯುರ್ವೇದ ಔಷಧಿಗಳಲ್ಲಿ ಸೆಣಬಿನ ಬೀಜದ ದಿನನಿತ್ಯದ ಬಳಕೆಯ ಕುರಿತು ನನಗೆ ಗೊತ್ತಾಯಿತು. ನಾನು ಸೆಣಬಿನ ಬೀಜದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮತ್ತು ಅದರ ವಿವಿಧ ಉಪಯೋಗಗಳು ಹಾಗೂ ಲಭ್ಯತೆಯ ಬಗ್ಗೆ ಕಲಿಯಲು ಆರಂಭಿಸಿದೆ” ಎಂದು ಹೇಳುತ್ತಾರೆ ಅಮೃತಾ.


ಇದನ್ನೂ ಓದಿ: Mann Ki Baat: ಮನ್ ಕೀ ಬಾತ್‌ ಪ್ರೇರಣೆ; ಯಶಸ್ವಿ ಉದ್ಯಮಿಯಾಗುವತ್ತ ಹಳ್ಳಿಗಾಡಿನ ಮಹಿಳೆ


ಗಾಂಜಾಗೆ ಹೋಲಿಸಿದರೆ, ಸೆಣಬಿನಲ್ಲಿ ಕಡಿಮೆ ಮಟ್ಟದ ಟೆಟ್ರಾಹೈಡ್ರೋಕ್ಯಾನಾಬಿನಾಲ್ (ಟಿಹೆಚ್‍ಸಿ) ಇದ್ದು, ಶೇಕಡಾ 0.3 ಕ್ಕಿಂತ ಕಡಿಮೆ ಪ್ರಮಾಣದಲ್ಲಿದೆ. ಇದು ಫುಡ್ ಸೇಫ್ಟಿ ಅಂಡ್ ಸ್ಟ್ಯಾಂಡಡ್ರ್ಸ್ ಅಥಾರಿಟಿ ಆಫ್ ಇಂಡಿಯಾ (ಎಫ್‍ಎಸ್‍ಎಸ್‍ಎಐ) ಗೆ 2021 ರ ನವಂಬರ್ 15 ರಂದು “ ಸೆಣಬಿನ ಬೀಜ, ಸೆಣಬಿನ ಬೀಜದ ಎಣ್ಣೆ ಮತ್ತು ಸೆಣಬಿನ ಬೀಜದ ಹಿಟ್ಟನ್ನು ಆಹಾರವಾಗಿ ಮಾರಾಟ ಮಾಡಬೇಕು ಅಥವಾ ಮಾನದಂಡಕ್ಕೆ ಅನುಗುಣವಾಗಿ, ಮಾರಾಟದ ಆಹಾರದಲ್ಲಿ ಘಟಕಾಂಶವಾಗಿ ಬಳಸಬೇಕು” ಎಂದು ಅಧಿಸೂಚನೆ ಹೊರಡಿಸಲು ಪ್ರೇರೆಪಣೆ ನೀಡಿತು.


ಈ ಕೆಫೆಯ ಮುಖ್ಯ ಉದ್ದೇಶವೇನು?
ಅಮೃತಾ ಈ ಅಧಿಸೂಚನೆಯಿಂದ ಸಿಕ್ಕ ಅವಕಾಶವನ್ನು ಬಳಸಿಕೊಂಡರು. ಅಂದರೆ, ಮೇ 2022 ರಲ್ಲಿ ಆರಂಭವಾದ ತಮ್ಮ ಕೆಫೆಯಲ್ಲಿ ಸೆಣಬಿನ ಬೀಜ ಮತ್ತು ಹಿಟ್ಟಿನ ಕುರಿತು ತಮಗಿದ್ದ ಎಲ್ಲಾ ಜ್ಞಾನವನ್ನು ಬಳಸಿಕೊಂಡು, ತಮ್ಮ ಕೆಫೆಯಲ್ಲಿ ಅದರ ಖಾದ್ಯಗಳನ್ನು ತಯಾರಿಸಿದರು. “ನಾವು ಭಂಗಿ ಗಿಡದ ಬೀಜಗಳನ್ನು ಬಳಸುತ್ತೇವೆ, ಎಲೆಗಳನ್ನಲ್ಲ. ನಮ್ಮಲ್ಲಿ ಬಹಳಷ್ಟು ಮಂದಿಗೆ ಸೆಣಬಿನ ಕುರಿತು ತಪ್ಪು ಕಲ್ಪನೆ ಇದೆ. ಸೆಣಬಿನಲ್ಲಿ ಜಾದೂ ಇದೆ , ಆದರೆ ಸಾಮಾನ್ಯ ಜನರು ಸೆಣಬಿನ ಖಾದ್ಯಗಳನ್ನು ಏಕೆ ತಿನ್ನುವುದಿಲ್ಲ? ಒಂದು ಕಾರಣ, ಅದಕ್ಕೆ ತಗಲುವ ವೆಚ್ಚ ಮತ್ತು ಇನ್ನೊಂದು ಕಾರಣ ಅದಕ್ಕಿರುವ ಕುಖ್ಯಾತಿ. ಈ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು ನಮ್ಮ ಕೆಫೆಯ ಉದ್ದೇಶವಾಗಿದೆ” ಎನ್ನುತ್ತಾರೆ ಅಮೃತಾ.


ಇದನ್ನೂ ಓದಿ: Business Idea: ಕತ್ತೆ ಫಾರ್ಮ್ ಮಾಡೋಕೆ ಐಟಿ ಕೆಲ್ಸಾನೇ ಬಿಟ್ಟ ಕನ್ನಡಿಗ! ಹಾಲು ಮಾರಿಯೇ ತಿಂಗಳಿಗೆ ಇಷ್ಟು ಹಣ ದುಡಿತಾರೆ


“ಅಮೃತಾ ಮತ್ತು ಅವರ ಬಾಣಸಿಗರು ಕೆಫೆಯಲ್ಲಿ ನಿತ್ಯವೂ ತಾಜಾವಾಗಿ ತಯಾರಿಸಿದ ತಿನಿಸುಗಳನ್ನು ನೀಡುತ್ತಾರೆ. “ಸೆಣಬಿನ ಬೀಜಗಳನ್ನು ಮತ್ತು ಹಿಟ್ಟನ್ನು ಬಳಸುವುದು ತುಂಬಾ ಸುಲಭ. ಸ್ವಲ್ಪ ಮಟ್ಟಿನ ಪ್ರಯೋಗ ಮತ್ತು ಜನರ ಕೆಲವು ಪ್ರತಿಕ್ರಿಯೆಗಳಿಂದ ನನಗೆ ರೆಸಿಪಿಗಳನ್ನು ತಯಾರಿಸಲು ಸಹಾಯವಾಯಿತು” ಎನ್ನುವ ಅಮೃತಾ ಅವರ ಕೆಫೆಯಲ್ಲಿ, ನಿತ್ಯವೂ 1-2 ಕೆಜಿ ಸೆಣಬಿನ ಬೀಜದ ಚಟ್ನಿಯನ್ನು ತಯಾರಿಸಲಾಗುತ್ತದೆ.


ರೈತರಿಗೆ ಲಾಭವನ್ನು ನೀಡುವ ಉದ್ಯಮ
ಮಹಾರಾಷ್ಟ್ರದಲ್ಲಿ ಇದುವರೆಗೂ ಸೆಣಬಿನ ಕೃಷಿಯನ್ನು ಕಾನೂನು ಬದ್ಧಗೊಳಿಸಿಲ್ಲ. ಆದರೆ ಇತರ ವಾಣಿಜ್ಯ ಬೆಳೆಗಳಿಗೆ ಹೋಲಿಸಿದರೆ, ಸೆಣಬಿಗೆ ಕಡಿಮೆ ನೀರು ಸಾಕು ಮತ್ತು ಅದು ಮಣ್ಣಿನ ಫಲವತ್ತತೆಯನ್ನು ಕೂಡ ಹೆಚ್ಚಿಸುತ್ತದೆ, ಅಷ್ಟೇ ಅಲ್ಲ ಇದು ಭವಿಷ್ಯದಲ್ಲಿ ಲಾಭವನ್ನು ನೀಡಬಲ್ಲ ಉದ್ಯಮವಾಗಬಹುದು ಎಂಬುವುದು ರೈತರ ಅಭಿಪ್ರಾಯವಾಗಿದೆ.

top videos
    First published: