ಎರಡಂತಸ್ತಿನ ಮನೆಗೆ 4 ಲಕ್ಷ ವೆಚ್ಚ; 700 ವರ್ಷದ ಹಳೆಯ ತಂತ್ರಜ್ಞಾನ, ಇದು ಮಿಟ್ಟಿ ಮಹಲ್
ಈ ಮನೆ ಕಟ್ಟಲು ತೆಗೆದುಕೊಂಡಿದ್ದು ಬರೋಬ್ಬರಿ 4 ಲಕ್ಷ ರೂಪಾಯಿ ಎಂದು ತಿಳಿದರೆ ಶಾಕ್ ಆಗುತ್ತೀರಿ. ಮನೆಗೆ ಸ್ಥಳೀಯ ವಸ್ತುಗಳನೇ ಬಳಸಿ, ಅನೇಕ ವಸ್ತುಗಳನ್ನು ಮರುಬಳಕೆ ಮಾಡಿರುವುದು ವಿಶೇಷ. ಈ ಮನೆ ನಿರ್ಮಾಣಕ್ಕೆ ಬಿದಿರು, ಕೆಂಪು ಮಣ್ಣು, ಹುಲ್ಲು ಬಳಸಿದ್ದೇವೆ ಎನ್ನುತ್ತಾರೆ ದಂಪತಿ
ಕನಸಿನ ಮನೆಗೆ (dream house)ಪಾರವೇ ಇಲ್ಲ, ಹಲವೆಡೆ ಹುಡುಕಾಡಿ ಡಿಸೈನ್ಗಳನ್ನು (design) ನೋಡಿದಷ್ಟು ಇದೂ ಇರಲಿ, ಇದೂ ಇರಲಿ ಎಂದು ನೋಡುತ್ತಲೇ ಇರುತ್ತೇವೆ. ಆದರೆ ಎಂದಾದರೂ ಎಕೋ ಹೌಸ್ (eco house) ಬಗ್ಗೆ ಆಲೋಚನೆ ಮಾಡಿದ್ದೀವಾ? ಖಂಡಿತಾ ಇಲ್ಲ ಲಕ್ಷ ಮಂದಿ ಹೇಗೆ ಕಟ್ಟಿಸಿದ್ದಾರೋ ನಾವು ಹಾಗೆ ಕಟ್ಟಿಸುತ್ತೇವೆ ಎನ್ನುತ್ತೀರಾ.. ಆದರೆ ಇಲ್ಲೊಂದು ಜೋಡಿ ತುಂಬಾನೇ ಯೋಚನೆ ಮಾಡಿ ಎಕೋ ಹೌಸ್ ಕಟ್ಟಿದ್ದಾರೆ. ಏನಿದು ಎಕೋ ಹೌಸ್ ಅಂತೀರಾ? ಇದು ಪರಿಸರಕ್ಕೆ ಹಾನಿಯಾಗದಂತೆ ಕಟ್ಟುವ ಮನೆ. ಪರಿಸರಕ್ಕೆ (nature)ಆದಷ್ಟು ಕಡಿಮೆ ಹಾನಿಯಾಗುವಂಥ ಡಿಸೈನ್ನಲ್ಲಿ ಈ ಮನೆ ಕಟ್ಟಲಾಗುತ್ತದೆ. ರೈನ್ ವಾಟರ್(rain water) ಹಾರ್ವೆಸ್ಟಿಂಗ್, ರೀಸೈಕಲ್, ಗ್ಲೋಬಲ್ ವಾರ್ಮಿಂಗ್ ತಡೆಗಟ್ಟುವುದು ಹೀಗೆ ಹಲವು ವಿಷಯಗಳನ್ನು ಗಮನದಲ್ಲಿಡಲಾಗುತ್ತದೆ. ಅದರಂತೆ ಪುಣೆ ದಂಪತಿಗಳು 700 ವರ್ಷದ ಹಳೆಯ(700-Year-Old Technique) ತಂತ್ರವನ್ನು ಬಳಸಿ 2-ಅಂತಸ್ತಿನ (2 floor)ಮಣ್ಣಿನ ಮನೆಯನ್ನು ನಿರ್ಮಿಸಿರುವುದು ಜನರನ್ನು ಆಕರ್ಷಿಸುವಂತೆ ಮಾಡಿದೆ. ಮಹಾರಾಷ್ಟ್ರದ ಪುಣೆಯಲ್ಲಿರುವ (Maharashtra’s Pune)ಈ ದಂಪತಿಗಳು ತಮ್ಮ ಸೃಜನಶೀಲತೆಯನ್ನು ಮೆರೆದು ತಮ್ಮ ಕೈಯಿಂದಲೇ ಎರಡು ಅಂತಸ್ತಿನ ಮಣ್ಣಿನ ಮನೆಯನ್ನು(Mud House ) ಕಟ್ಟಿದ್ದಾರೆ.
ಯೋಜನೆ ಕೈಬಿಡುವಂತೆ ಹೇಳಿದ್ದರು
ಯುಗಾ ಅಖರೆ ಮತ್ತು ಸಾಗರ್ ಶಿರುಡೆ ಅವರು ಮಹಾರಾಷ್ಟ್ರದ ವಾಘೇಶ್ವರ ಗ್ರಾಮದಲ್ಲಿ ಫಾರ್ಮ್ಹೌಸ್ ಮಾಡಲು ಯೋಜಿಸಿದ್ದರು. ಬಿದಿರು ಮತ್ತು ಜೇಡಿಮಣ್ಣಿನಿಂದ ಈ ಮನೆ ಕಟ್ಟಲು ತಿರ್ಮಾನಿಸಿದ್ದರು. ಆದರೆ ಈ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದ ಪರಿಣಾಮ ಯೋಜನೆ ಕೈಬಿಡುವಂತೆ ಗ್ರಾಮದ ಜನರು ಸಲಹೆ ನೀಡಿದರು.
ಯುಗ ಮತ್ತು ಸಾಗರ್ ಬಿಡಲು ಸಿದ್ಧರಿರಲಿಲ್ಲ. ಮಹಾರಾಷ್ಟ್ರದ ಹಲವಾರು ಭಾಗಗಳಲ್ಲಿ ಈಗಲೂ ಇರುವ ಹಳೆಯ ಕಾಲದಲ್ಲಿ ನಿರ್ಮಿಸಲಾದ ಮನೆಗಳು ಬಗ್ಗೆ ಉದಾಹರಣೆಗಳನ್ನು ಅವರು ಜನರಿಗೆ ನೀಡಿದರು.
ಯುಗಾ ಮತ್ತು ಸಾಗರ್ 2014 ರಲ್ಲಿ ಪುಣೆಯ ಕಾಲೇಜಿನಲ್ಲಿ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ನಂತರ ಇಬ್ಬರೂ ಸಾಗಾ ಅಸೋಸಿಯೇಟ್ಸ್ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದರು. ಇಬ್ಬರೂ ವಾಸ್ತುಶಿಲ್ಪಿಗಳಾಗಿರುವುದರಿಂದ, ಅನೇಕ ಕಟ್ಟಡಗಳು ಮತ್ತು ಸಂಸ್ಥೆಗಳಿಗೆ ವಿನ್ಯಾಸಗಳನ್ನು ಒಟ್ಟಿಗೆ ಸಿದ್ಧಪಡಿಸಿದ್ದಾರೆ. ಆದರೆ ಅವರ ಮಣ್ಣಿನ ಮನೆ ಬಹಳ ವಿಶೇಷವಾಗಿತ್ತು. ಅದಕ್ಕೆ ಮಿಟ್ಟಿ ಮಹಲ್ ಎಂದು ಹೆಸರಿಟ್ಟಿದ್ದಾರೆ. ಅಲ್ಲದೇ ಮಣ್ಣುನಿಂದ ಅದ್ಬುತವಾದ ಮನೆ ನಿರ್ಮಿಸಿ ಸೈಎನಿಸಿಕೊಂಡಿದ್ದಾರೆ.
4 ಲಕ್ಷ ರೂಪಾಯಿ ವೆಚ್ಚ
ಈ ಮನೆ ಕಟ್ಟಲು ತೆಗೆದುಕೊಂಡಿದ್ದು ಬರಿ 4 ಲಕ್ಷ ರೂಪಾಯಿ ಎಂದು ತಿಳಿದರೆ ಶಾಕ್ ಆಗುತ್ತೀರಿ. ಅವರ ಮನೆಗೆ ಸ್ಥಳೀಯ ವಸ್ತುಗಳನೇ ಬಳಸಿ, ಅನೇಕ ವಸ್ತುಗಳನ್ನು ಮರುಬಳಕೆ ಮಾಡಿರುವುದು ವಿಶೇಷ. ಈ ಮನೆ ನಿರ್ಮಾಣಕ್ಕೆ ಬಿದಿರು, ಕೆಂಪು ಮಣ್ಣು, ಹುಲ್ಲು ಬಳಸಿದ್ದೇವೆ ಎನ್ನುತ್ತಾರೆ ದಂಪತಿ. ಮನೆ ಕಟ್ಟಲು ಮಣ್ಣನ್ನು ವಿಶೇಷ ರೀತಿಯಲ್ಲಿ ಸಿದ್ಧಪಡಿಸಲಾಗಿತ್ತು. ಅದರಲ್ಲಿ ಹೊಟ್ಟು, ಬೆಲ್ಲ, ಹಿಂಡಿ ಗಿಡದ ರಸವನ್ನು ಬೆರೆಸಿ. ಅದಕ್ಕೆ ಬೇವು, ಗೋಮೂತ್ರ ಮತ್ತು ಸಗಣಿಯನ್ನೂ ಸೇರಿಸಲಾಯಿತು. ನಂತರ ಇಟ್ಟಿಗೆ ಬಳಸಿ ಮಣ್ಣು ಸಿದ್ಧಪಡಿಸಿ ಬಿದಿರಿಗೆ ಅಂಟಿಸಲಾಯಿತು.
ವಿಪರೀತ ಹವಾಮಾನದಿಂದ ಮನೆಯನ್ನು ರಕ್ಷಿಸಲು ದಂಪತಿಗಳು ಬಾಟಲಿ ಮತ್ತು ಡೋಬ್ ತಂತ್ರಜ್ಞಾನವನ್ನು ಬಳಸಿದ್ದಾರೆ. ಈ 700 ವರ್ಷಗಳ ಹಳೆಯ ತಂತ್ರದಲ್ಲಿ, ಮರದ ಅಥವಾ ಬಿದಿರಿನ ತುಂಡುಗಳನ್ನು ಒದ್ದೆಯಾದ ಮಣ್ಣಿನೊಂದಿಗೆ ಒಟ್ಟಿಗೆ ಸೇರಿಸಲಾಗುತ್ತದೆ. ಮನೆಯ ಗೋಡೆಗಳನ್ನು ಬೇಸಿಗೆಯಲ್ಲಿ ತಂಪಾಗಿರುವ ಮತ್ತು ಚಳಿಗಾಲದಲ್ಲಿ ಶಾಖವನ್ನು ಹೀರಿಕೊಳ್ಳುವ ರೀತಿಯಲ್ಲಿ ತಯಾರಿಸಲಾಗುತ್ತದೆ. ಇದು ಪರಿಸರ ಸ್ನೇಹಿ ಮನೆಯಾಗಿರುವ ಕಾರಣ ನೈಸರ್ಗಿಕ ಸಂಪತ್ತಿಗೆ ಹಾನಿಯಾಗದಂತೆ ನೋಡಿಕೊಳ್ಳಬಹುದಾಗಿದೆ.
Published by:vanithasanjevani vanithasanjevani
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ