Viral Video: ಒಮ್ಮೊಮ್ಮೆ ವೈರಲ್ ವಿಡಿಯೋ ಹೀಗೂ ಉಲ್ಟಾ ಹೊಡೆಯುತ್ತೆ... ಹುಷಾರಾಗಿರಿ

ವಿಡಿಯೋವನ್ನು ವೈರಲ್ ಮಾಡುವ ಭರದಲ್ಲಿ ಕೆಲ ತಪ್ಪುಗಳು ಆಗದಂತೆ ಎಚ್ಚರ ವಹಿಸುವುದು ತುಂಬಾ ಮುಖ್ಯವಾಗುತ್ತದೆ

ಮದುಮಗಳು

ಮದುಮಗಳು

  • Share this:

ಯಾವುದು ಅತಿಯಾಗಬಾರದು, ಅತಿಯಾದರೆ ಅಮೃತವು ವಿಷ ಎನ್ನುವುದಕ್ಕೆ ಇಲ್ಲೊಂದು ಘಟನೆ ಸರಿಯಾದ ಉದಾಹರಣೆಯಾಗಿದೆ. ಅನೇಕ ಜನರು ಈ ಕೋವಿಡ್-19 ಹಾವಳಿಯಿಂದ ಹೇರಲಾಗಿದ್ದ ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿ ಕುಳಿತು ಬೋರಾಗಿ ವಿಭಿನ್ನವಾದಂತಹ ಕೆಲಸಗಳನ್ನು ಮಾಡಿ ತಮ್ಮ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿ ವೈರಲ್ ಆದಂತಹ ಸಂದರ್ಭಗಳನ್ನು ನಾವೆಲ್ಲಾ ತುಂಬಾ ನೋಡಿದ್ದೇವೆ ಮತ್ತು ಕೇಳಿದ್ದೇವೆ. ಆದರೆ ವಿಡಿಯೋವನ್ನು ವೈರಲ್ ಮಾಡುವ ಭರದಲ್ಲಿ ಕೆಲ ತಪ್ಪುಗಳು ಆಗದಂತೆ ಎಚ್ಚರ ವಹಿಸುವುದು ತುಂಬಾ ಮುಖ್ಯವಾಗುತ್ತೆ. ಒಂದೊಂದು ಬಾರಿ ನಾವು ಮಾಡುವಂತಹ ಫಿಲ್ಮಿ ಸೀನ್‌ಗಳ ಅನುಕರಣೆಗಳು ನಮ್ಮ ನಿಜ ಜೀವನದ ಮೇಲೆ ಅತ್ಯಂತ ಘೋರವಾದ ಪರಿಣಾಮ ಬೀರುತ್ತವೆ.



ಪುಣೆಯ 23 ವರ್ಷದ ಮದುಮಗಳೊಬ್ಬಳು ತನ್ನ ಮದುವೆ ಸಮಾರಂಭಕ್ಕೆ ತೆರಳುವ ಮುನ್ನ ದಾರಿಯಲ್ಲಿ ತನ್ನ ಎಸ್ ಯು ವಿ ವಾಹನದ ಬಾನೆಟ್ ಮೇಲೆ ಕುಳಿತು ವಿಡಿಯೋ ತೆಗೆಸಿಕೊಂಡು ಆ ವಿಡಿಯೋವನ್ನು ವೈರಲ್ ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕಿಕೊಂಡಿರುವಂತಹ ಘಟನೆಯೊಂದು ನಡೆದಿದೆ.


ಪೊಲೀಸರು ಮದುಮಗಳ, ಎಸ್ ಯು ವಿ ವಾಹನದಲ್ಲಿದ್ದ ಅವರ ಕುಟುಂಬದವರು, ಕಾರು ಚಾಲಕ ಮತ್ತು ಅವಳ ವಿಡಿಯೋವನ್ನು ಎಸ್ ಯು ವಿ ವಾಹನದಮುಂದೆ ಬೈಕ್‌ನಲ್ಲಿ ಕುಳಿತು ವಿಡಿಯೋ ಮಾಡಿದಂತಹ ವಿಡಿಯೋಗ್ರಾಫರ್ ಮೇಲೆ ಸಹ ಕೇಸು ಹಾಕಿರುವ ಘಟನೆ ಪುಣೆ- ಸಾಸ್ವಾಡ್ ರಸ್ತೆಯ ಮಧ್ಯದಲ್ಲಿ ಮಂಗಳವಾರ ನಡೆದಿದೆ.


ಪುಣೆಯ ಪೊಲೀಸರು ಮದುಮಗಳ ಮತ್ತು ಇತರರ ಮೇಲೆ ಚಲಿಸುವ ಎಸ್ ಯು ವಿ ವಾಹನದ ಮೇಲೆ ಸ್ಟಂಟ್ ಮಾಡಿರುವ ಪ್ರಕರಣವನ್ನು ದಾಖಲಿಸಿದ್ದು, ಮೋಟಾರು ವಾಹನ ಕಾಯ್ದೆಯನ್ನು ಉಲ್ಲಂಘಿಸಿರುವುದಾಗಿ ಅವರ ವಿರುದ್ಧ ಕೇಸನ್ನು ದಾಖಲಿಸಿದ್ದಾರೆ. ಮದುಮಗಳು ಪುಣೆ ಮೂಲದವರಾಗಿದ್ದು ಸಾಸ್ವಾಡ್ ನಲ್ಲಿ ಮದುವೆ ಸಮಾರಂಭವನ್ನು ಏರ್ಪಡಿಸಿದ್ದರು.




ಅವರು ತಮ್ಮ ಮದುವೆಗೆ ಹೋಗುವಾಗ ಪುಣೆ ಮತ್ತು ಸಾಸ್ವಾಡ್ ಮಧ್ಯ ಇರುವಂತಹ ಘಾಟ್ ರಸ್ತೆಯಲ್ಲಿ ನಿಂತು ಮದುಮಗಳು ತಮ್ಮ ಚಲಿಸುತ್ತಿರುವ ಎಸ್ ಯು ವಿ ವಾಹನದ ಬಾನೆಟ್ ಮೇಲೆ ಹೂವುಗಳ ಮಧ್ಯೆ ಕುಳಿತು ಸಿನಿಮೀಯ ರೀತಿಯಲ್ಲಿ ವಿಡಿಯೋ ಮಾಡಿಸಿಕೊಂಡಿದ್ದಾರೆ ಎಂದು ಲೋನಿ ಖಾಲ್ಬಾರ್ ಪೊಲೀಸರು ತಿಳಿಸಿದ್ದಾರೆ. ಚಲಿಸದೆ ನಿಂತಿರುವ ಎಸ್ ಯು ವಿ ವಾಹನದ ಬಾನೆಟ್ ಮೇಲೆ ಕುಳಿತು ಫೋಟೋ ತೆಗೆಸಿಕೊಂಡರೆ ಇಂತಹ ಸಂದರ್ಭ ಎದುರಿಸಬೇಕಾಗುತ್ತಿತ್ತೋ ಇಲ್ಲವೂ, ಆದರೆ ಚಲಿಸುವ ವಾಹನದ ಮೇಲೆ ಕುಳಿತು ಸ್ಟಂಟ್ ಮಾಡಿದ ಹಾಗೆ ಇದು ಬಿಂಬಿತವಾಗಿದ್ದು, ಪೊಲೀಸರು ಇವರೆಲ್ಲರ ಮೇಲೆ ಕೇಸ್ ಹಾಕಿದ್ದಾರೆ.


ವಾಹನದಲ್ಲಿ ಕುಳಿತಿರುವವರು ಸಹ ಯಾರು ಮಾಸ್ಕ್ ಧರಿಸದೇ ಇರುವುದರಿಂದ ಇವರೆಲ್ಲರ ಮೇಲೆ ಮೋಟಾರು ವಾಹನ ಕಾಯ್ದೆ, ಮಹಾರಾಷ್ಟ್ರ ಕೋವಿಡ್ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಕೇಸು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಡಿಯೋದಲ್ಲಿ ಮದುಮಗಳು ಕಾರಿನ ಬಾನೆಟ್ ಮೇಲೆ ಕುಳಿತಿದ್ದು ವಿಡಿಯೋ ಗ್ರಾಫರ್ ಮುಂದೆ ಒಂದು ಬೈಕ್ ಮೇಲೆ ಕುಳಿತು ವಿಡಿಯೋ ಮಾಡಿದ್ದನ್ನು ಕಾಣಬಹುದಾಗಿದೆ.




ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು



First published: