Mosquito: ಗಂಡು ಸೊಳ್ಳೆ ಕಂಟ್ರೋಲ್‌ಗೆ ಹೆಣ್ಣು ಸೊಳ್ಳೆಯೇ ಮದ್ದಂತೆ! ಭಾರತೀಯ ವಿಜ್ಞಾನಿಗಳಿಂದ ಮಹತ್ವದ ಶೋಧ

ನಿಮ್ಮ ಮನೆಯಲ್ಲಿ ಡೆಂಗ್ಯೂ, ಚಿಕೂನ್ ಗುನ್ಯಾ ಕಂಟ್ರೋಲ್‌ ಮಾಡೋದಕ್ಕೆ ಅಂತಾನೆ ಹೆಣ್ಣು ಸೊಳ್ಳೆಗಳ ಟೀಂ ಬರ್ತಿದೆ. ಅರೇ ಇದೇನಪ್ಪಾ ತಮಾಷೆ ಮಾಡ್ತಿದ್ದಾರೆ ಅಂದುಕೊಂಡಿದ್ದೀರಾ? ಇಲ್ಲ, ನಾವು ಹೇಳ್ತಿರೋದು ನಿಜಾನೇ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪುದುಚೇರಿ: ಮನೆಯಲ್ಲಿ ಸೊಳ್ಳೆ (Mosquito) ಕಾಟ ಜಾಸ್ತಿ, ಯಾವ ಔಷಧಿ (Medicine) ಹಾಕಿದ್ರು ಕಂಟ್ರೋಲ್ (Control) ಆಗ್ತಿಲ್ಲ. ಇನ್ನೇನಪ್ಪಾ ಮಾಡೋದು ಅಂತ ಟೆನ್ಶನ್ ಆಗಿದ್ದೀರಾ? ಹಾಗಿದ್ರೆ ನಿಮ್ಮ ಮನೆಯಲ್ಲಿ ಡೆಂಗ್ಯೂ (Dengue), ಚಿಕೂನ್ ಗುನ್ಯಾ ಕಂಟ್ರೋಲ್‌ (Chikoon Gunya) ಮಾಡೋದಕ್ಕೆ ಅಂತಾನೆ ಹೆಣ್ಣು ಸೊಳ್ಳೆಗಳ ಟೀಂ ಬರ್ತಿದೆ. ಅರೇ ಇದೇನಪ್ಪಾ ತಮಾಷೆ ಮಾಡ್ತಿದ್ದಾರೆ ಅಂದುಕೊಂಡಿದ್ದೀರಾ? ಇಲ್ಲ, ನಾವು ಹೇಳ್ತಿರೋದು ನಿಜಾನೇ. ಡೆಂಗ್ಯೂ , ಚಿಕೂನ್ ಗುನ್ಯೂ ಸೇರಿದಂತೆ ಹಲವು ರೀತಿಯ ರೋಗಗಳನ್ನು ನಿಯಂತ್ರಿಸುವ ಉದ್ದೇಶದಿಂದ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಮತ್ತು ವೆಕ್ಟರ್ ಕಂಟ್ರೋಲ್ ರಿಸರ್ಚ್ ಸೆಂಟರ್ (VCRC) ಡೆಂಗ್ಯೂ ನಿಯಂತ್ರಣಕ್ಕಾಗಿ ಬ್ಯಾಕ್ಟೀರಿಯಾ ಸೋಂಕಿತ ಎರಡು ಸೊಳ್ಳೆಗಳ ತಳಿಗಳನ್ನು ಅಭಿವೃದ್ಧಿಪಡಿಸಿದೆ.

ಪುದುಚೇರಿ ಪ್ರಯೋಗಾಲಯದಲ್ಲಿ ಸಂಶೋಧನೆ

ಪುದುಚೇರಿಯ ಪ್ರಯೋಗಾಲಯದಲ್ಲಿ ರೂಪುಗೊಂಡಿರುವ ಸೊಳ್ಳೆಗಳ ಸೇನೆಯು ಡೆಂಗ್ಯೂ ಮತ್ತು ಚಿಕುನ್‌ಗುನ್ಯಾ ಹರಡುವಿಕೆಯನ್ನು ತಡೆಯುವ ಸಮರಕ್ಕೆ ಅಣಿಯಾಗಿವೆ. ಪ್ರಯೋಗಾಲಯದಿಂದ ಹೊರಡುವ ಹೆಣ್ಣು ಸೊಳ್ಳೆ ಪರಿಸರದಲ್ಲಿನ ಗಂಡು ಸೊಳ್ಳೆಯೊಂದಿಗೆ ಕೂಡುತ್ತವೆ. ಆ ಸೊಳ್ಳೆಯಿಂದ ಉತ್ಪತ್ತಿಯಾಗುವ ಮೊಟ್ಟೆಗಳಿಂದ ಹೊರಬರುವ ಸೊಳ್ಳೆಗಳು ರೋಗಕಾರಕ ವೈರಸ್‌ ಹರಡುವ ಸಾಮರ್ಥ್ಯ ಕಳೆದುಕೊಂಡಿರುತ್ತವೆ.

ವೈರಸ್ ಕಾಯಿಲೆಯನ್ನು ತಡೆಯಲು ಸಹಾಯ

ವೈರಲ್ ಕಾಯಿಲೆಯ ಹರಡುವಿಕೆಯನ್ನು ನಿಧಾನಗೊಳಿಸುವ ಸಲುವಾಗಿ, ಪುದುಚೇರಿಯ ICMR-ವೆಕ್ಟರ್ ನಿಯಂತ್ರಣ ಸಂಶೋಧನಾ ಕೇಂದ್ರ ಸಹಯೋಗದಲ್ಲಿ ಈಡಿಸ್ ಈಜಿಪ್ಟಿಯ ಎರಡು ಹೊಸ ತಳಿಗಳನ್ನು ಅಭಿವೃದ್ಧಿಪಡಿಸಿದೆ.

ಇದನ್ನೂ ಓದಿ: Dengue: ಮಳೆಗಾಲದಲ್ಲಿ ಮನೆ ಬಾಗಿಲಿಗೆ ಬರುತ್ತೆ ಡೆಂಗ್ಯೂ! ಇದರಿಂದ ತಪ್ಪಿಸಿಕೊಳ್ಳುವ ಮಾರ್ಗಗಳೇನು?

4 ವರ್ಷಗಳಿಂದ ಸತತ ಅಧ್ಯಯನ

ಪ್ರಯೋಗಾಲಯದ ಸೊಳ್ಳೆಗಳು ಹೊರಗಿನ ಸೊಳ್ಳೆಗಳೊಂದಿಗೆ ಸೇರಿ, ಅವುಗಳಿಂದ ಬೆಳೆಯುವ ಸೊಳ್ಳೆಗಳಲ್ಲಿ ಡೆಂಗ್ಯೂ ಮತ್ತು ಚಿಕುನ್‌ ಗುನ್ಯಾ ಹರಡುವ ವೈರಸ್‌ಗಳೇ ಇಲ್ಲವಾಗಿರುತ್ತವೆ. ಹಾಗಾಗಿ, ರೋಗ ಹರಡುವುದನ್ನು ತಡೆಯಬಹುದಾಗುತ್ತದೆ. ನಾಲ್ಕು ವರ್ಷಗಳ ಹಿಂದೆಯೇ ಆರಂಭವಾಗಿರುವ ಈ ಅಧ್ಯಯನವು ಈಗ ಪೂರ್ಣಗೊಂಡಿದೆ. ಆದರೆ, ಸರ್ಕಾರದಿಂದ ಅನುಮತಿ ಸಿಗಬೇಕಿರುವುದು ಬಾಕಿ ಇದೆ ಎಂದು ಐಸಿಎಂಆರ್‌-ವಿಸಿಆರ್‌ಸಿಯ ನಿರ್ದೇಶಕ ಡಾ.ಅಶ್ವನಿ ಕುಮಾರ್‌ ಹೇಳಿದ್ದಾರೆ.

ಸೊಳ್ಳೆಗಳಿಗೆ ಬ್ಯಾಕ್ಟೀರಿಯಾ ತಗುಲಿಸಿ ಸಂಶೋಧನೆ

ಡಬ್ಲ್ಯುಮೆಲ್ (wMel) ಮತ್ತು ಡಬ್ಲ್ಯೂಎ1ಬಿಬಿ ವೋಲ್ಬಾಚಿಯಾ (Wolbachia) ತಳಿಗಳ ಬ್ಯಾಕ್ಟೀರಿಯಾ ಸೊಳ್ಳೆಗಳಿಗೆ ತಗುಲುವಂತೆ ಮಾಡಲಾಗಿದೆ. ಇದರ ಬಗ್ಗೆ ಸಂಶೋಧನಾ ಕೇಂದ್ರವು ನಾಲ್ಕು ವರ್ಷಗಳಿಂದ ಅಧ್ಯಯನ ನಡೆಸಿದೆ. ಈ ಬ್ಯಾಕ್ಟೀರಿಯಾಗಳಿಗೆ ಒಳಗಾಗಿರುವ ಸೊಳ್ಳೆಗಳ ಸುಮಾರು ಹತ್ತು ಸಾವಿರ ಮೊಟ್ಟೆಗಳನ್ನು ಆಸ್ಟ್ರೇಲಿಯಾದ ಮೊನಾಶ್‌ ಯೂನಿವರ್ಸಿಟಿಯಿಂದ ತರಿಸಿಕೊಂಡು ಸಂಶೋಧನೆ ನಡೆಸಲಾಗಿದೆ. ಆ ಮೊಟ್ಟೆಗಳಿಂದ ಹೊರಬಂದ ಸೊಳ್ಳೆಗಳನ್ನು ಪುದುಚೇರಿಯ ಈಡಿಸ್‌ ಈಜಿಪ್ಟಿ ಜಾತಿಯ ಸೊಳ್ಳೆಗಳೊಂದಿಗೆ ಸೇರುವಂತೆ ಮಾಡಿ, ವೋಲ್ಬಾಚಿಯಾ ಬ್ಯಾಕ್ಟೀರಿಯಾ ಒಳಗೊಂಡಿರುವ ಸೊಳ್ಳೆಗಳನ್ನು ಸೃಷ್ಟಿಸಲಾಗಿದೆ ಎಂದು ಡಾ.ಅಶ್ವನಿ ಕುಮಾರ್ ವಿವರಿಸಿದ್ದಾರೆ.

ದೇಶಾದ್ಯಂತ ಡೆಂಗ್ಯೂ ಪ್ರಕರಣಗಳು ಉಲ್ಬಣ

ಈ ವರ್ಷ ಮೇ 31 ರ ವೇಳೆಗೆ ಭಾರತದಲ್ಲಿ 10,172 ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದು, ತಮಿಳುನಾಡನಲ್ಲಿ ಅತೀ ಹೆಚ್ಚು ಅಂದರೆ 2,548 ಪ್ರಕರಣಗಳು ದಾಖಲಾಗಿವೆ. ನಂತರದ ಸ್ಥಾನದಲ್ಲಿ ಕರ್ನಾಟಕವಿದ್ದು, ರಾಜ್ಯದಲ್ಲಿ 1,714 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ.

ಮಳೆಗಾಲದಲ್ಲಿ ಡೆಂಗ್ಯೂ ಪ್ರಕರಣ ಉಲ್ಬಣ

ಮಳೆಯಿಂದ ಅಲ್ಲಲ್ಲಿ ಶೇಖರಣೆಯಾಗುವ ನೀರಿನಲ್ಲಿ ಈಡೀಸ್‌ ಸೊಳ್ಳೆಗಳ ಸಂತಾನೋತ್ಪತ್ತಿ ಆಗುತ್ತಿರುವುದು ಡೆಂಗ್ಯೂ ಪ್ರಕರಣ ಉಲ್ಬಣಗೊಳ್ಳಲು ಕಾರಣ. ಆದ್ದರಿಂದ ಮನೆಯಂಗಳ ಅಥವಾ ಸುತ್ತಮುತ್ತಲ ವಾತಾವರಣದಲ್ಲಿನ ಪ್ಲಾಸ್ಟಿಕ್‌, ಟೈರ್‌, ತೆಂಗಿನ ಕರಟ, ತೆರೆದ ತೊಟ್ಟಿ ಸೇರಿದಂತೆ ಇತರೆ ವಸ್ತುಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಎಂಬುದು ಆರೋಗ್ಯ ಇಲಾಖೆ ಅಧಿಕಾರಿಗಳ ಸಲಹೆ.

ಇದನ್ನೂ ಓದಿ: Dengue: ಒಂದೆಡೆ ಕೋವಿಡ್ ಅಬ್ಬರ, ಮತ್ತೊಂಡೆದೆ ಡೆಂಗ್ಯೂ ಜ್ವರ; ಎರಡರ ಮಧ್ಯೆ ರಾಜ್ಯದ ಜನ ತತ್ತರ!

ನೀರು ನಿಲ್ಲದಂತೆ ಎಚ್ಚರ ವಹಿಸಿ

ಡೆಂಗ್ಯೂ ಜ್ವರ ವೈರಸ್‌ನಿಂದ ಬರುವಂಥದ್ದು. ಇದನ್ನು ಈಡೀಸ್‌ ಹೆಣ್ಣು ಸೊಳ್ಳೆ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಬೆಳಗಿನ ವೇಳೆ ಹೆಚ್ಚು ಹಾರಾಡುವ ಈಡೀಸ್‌ ಸೊಳ್ಳೆ ಕಚ್ಚಿದರೆ ಡೆಂಗ್ಯೂ ಹರಡಲಾರಂಭಿಸುತ್ತದೆ. ಈ ಸೊಳ್ಳೆಗಳು ಶುದ್ಧ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಈ ನೀರಿನಲ್ಲೇ ಲಾರ್ವಗಳು ಬೆಳೆದು ಸೊಳ್ಳೆಗಳಾಗಿ ಮಾರ್ಪಡಾಗುತ್ತವೆ. ಹಾಗಾಗಿ ಸುತ್ತಮುತ್ತಲ ವಾತಾವರಣದಲ್ಲಿ ಪ್ಲಾಸ್ಟಿಕ್‌, ತೆರೆದ ತೊಟ್ಟಿ, ತೆರೆದ ಪಾತ್ರೆಗಳು, ತೆಂಗಿನ ಕರಟಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಎಂಬುದು ವೈದ್ಯರ ಸಲಹೆ.
Published by:Annappa Achari
First published: