ಕೆಲಸದ ಸಮಯದಲ್ಲಿ ಒಮ್ಮೊಮ್ಮೆ ಶೌಚಾಲಯಕ್ಕೆ (Toilet) ಹೋಗಲೂ ಸಮಯವಿರುವುದಿಲ್ಲ ಎಂಬಂತೆ ಬ್ಯುಸಿ (Busy) ಇರುತ್ತೇವೆ. ಒಂದು ಬಾರಿ ಫ್ರೀ ಆಗಿ ಶೌಚಾಲಯಕ್ಕೆ ಹೋದ್ರೆ ಆ ಖುಷಿನೇ ಬೇರೆ ಅಲ್ವಾ? ಆ ಸಮಯದಲ್ಲಿ ಏಕಾಂತವನ್ನು ಬಯಸುವುದು ಸಾಮಾನ್ಯ. ಅದುವೇ ನಾವು ಟ್ರಿಪ್ಗಳಿಗೆ ಅಥವಾ ಹೊರಗಡೆ ಹೋದಾಗ ಸಾರ್ವಜನಿಕ ಶೌಚಾಲಯಗಳಿಗೆ (Public Toilet) ಹೋಗುತ್ತೇವೆ. ಕೆಲವೊಂದಷ್ಟು ಸಾರ್ವಜನಿಕ ಶೌಚಾಲಯಗಳಿಗೆ ಹೋಗೋದು ಅಂದ್ರೇ ಸಾವಿನ ಬಾಗಿಲನ್ನು ತಟ್ಟಿ ಬಂದ ಹಾಗೆಯೇ ಯಾಕಂದ್ರೆ ಅಲ್ಲಿನ ಮೈಂಟೇನಸ್ ಹಾಗಿರುತ್ತೆ. ಮೂಗಿಗೆ ಎರಡೂ ಕೈಗಳನ್ನು ಇಟ್ಟುಕೊಂಡು ಹೋದ್ರೂ ತಲೆತಿರುಗುವಂತ ಸುವಾಸನೆ ಮತ್ತು ಅಘೋರ ದೃಶ್ಯ ಕಾಣುತ್ತೆ. ಆದರೆ, ವಿಧಿ ಇಲ್ಲದೇ ಹೋಗಲೇಬೇಕು. ಈ ಟಾಯ್ಲೆಟ್ ಸ್ಟೋರಿಗಳು ವೈರಲ್ (Viral) ಆಗೋದು ಅಪರೂಪ. ಆದ್ರೆ ಇಲ್ಲಿ ಒಂದು ಸುದ್ಧಿ ಸಖತ್ ವೈರಲ್ (Viral) ಆಗ್ತಾ ಇದೆ!
ವೈರಲ್ ಆಯ್ತು ಸಾರ್ವಜನಿಕ ಶೌಚಾಲಯ!
ಇದರ ಎಂಜಿನಿಯರ್ಗಳು ಯಾರಪ್ಪಾ ಅಂತ ಅನಿಸೋದಂತೂ ಪಕ್ಕಾ ಬಿಡಿ. ಯಾಕಂದ್ರೆ ಟಾಯ್ಲೆಟ್ ಅಂದ್ರೆ ಸ್ವತಂತ್ರ, ಸ್ವತಂತ್ರ ಅಂದ್ರೆ ಟಾಯ್ಲೆಟ್ ಅಂದ್ರೂ ತಪ್ಪಾಗೋಲ್ಲ ಬಿಡಿ. ಇಲ್ಲೊಂದು ಟಾಯ್ಲೆಟ್ ರೂಮ್ನಲ್ಲಿ ಫ್ರೀಡಮ್ ಇಲ್ಲ. ನೋಡಿದ್ರೆ ಪಕ್ಕಾ ಬಿದ್ದು ಬಿದ್ದು ನಗ್ತೀರ. ಹಾಗೆಯೇ ನೂರಾರು ಕಮೆಂಟ್ಗಳು ಕೂಡ ಬಂದಿವೆ.
ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಗೌರಾ ಧುಂಧಾ ಎಂಬ ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯವು ಇದೀಗ ಸಖತ್ ವೈರಲ್ ಆಗ್ತಾ ಇದೆ. ಅರೆ! ಟಾಯ್ಲೆಟ್ ಸುದ್ಧಿ ಯಾಕೆ ವೈರಲ್ ಅಂತ ಹುಬ್ಬು ಏರಿಸ್ತಾ ಇದ್ದೀರಾ? ಮುಂದೆ ಓದಿ..
ಒಂದೇ ರೂಮ್ನಲ್ಲಿ ಎರಡು ಇಂಡಿಯನ್ ಟಾಯ್ಲೆಟ್ ಕಂಡ್ರೀ, ಅಂದ್ರೆ ನಾನೊಂದು ತೀರ ನೀನೊಂದು ತೀರ ಎಂಬ ನೋವು ಯಾರಿಗೂ ಬರಬಾರದು ಎಂಬ ಉದ್ಧೇಶದಿಂದ ಈ ಶೌಚಾಲಯ ಕಟ್ಟಿರಬಹುದೇನೋ ಎಂಬಂತೆ ಇದೆ. ಇದಕ್ಕಾಗಿ ಒಂದಲ್ಲಾ ಎರಡಲ್ಲಾ ಬರೋಬ್ಬರಿ 10 ಲಕ್ಷ ಸುರಿದಿದ್ದಾರೆ ಇಲ್ಲಿನ ಇಜ್ಜತ್ ಘರ್ ಸರ್ಕಾರ.
ಇದನ್ನೂ ಓದಿ: ಅಮೆರಿಕಾ ಲೈಫ್ ಬೋರಾಯ್ತು, ಲಕ್ಷ ಲಕ್ಷ ಸಂಬಳ ಸಾಕಾಯ್ತು! ಐಶಾರಾಮಿ ಜೀವನ ಬಿಟ್ಟು ಸನ್ಯಾಸಿಯಾದ ಯುವಕ!
ಎರಡೂ ಟಾಯ್ಲೆಟ್ಗಳನ್ನು ಒಟ್ಟಿಗೆ ನಿರ್ಮಿಸಲಾಗಿದೆ, ಇನ್ನು ಬಾಗಿಲು ಒಂದು ಏನಕ್ಕೆ ಅಂತ ಅದೂ ಕೂಡ ಇಲ್ಲ ಇಲ್ಲಿನ ಶೌಚಾಲಯಕ್ಕೆ. "ಇದೇನು ಅಸಭ್ಯವಾಗಿ ಶೌಚಾಲಯವನ್ನು ನಿರ್ಮಿಸಲಾಗಿದೆ, ಇದರ ಬಗ್ಗೆ ಯಾರು ಕಿಂಚಿತ್ತು ಯೋಚನೆಗಳನ್ನೇ ಮಾಡಿಲ್ವಾ, ಕೂಡಲೇ ಇದು ಸರಿ ಆಗಬೇಕು" ಎಂದು ಉತ್ತರ ಪ್ರದೇಶದ ಜಿಲ್ಲಾ ಪಂಚಾಯತ್ ರಾಜ್ ಅಧಿಕಾರಿ ನಮ್ರತಾ ಶರಣ್ ಎನ್ಡಿಟಿವಿಗೆ ಹೇಳಿದ್ದಾರೆ.
"ಈ ನಿರ್ಲಕ್ಷ್ಯಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು" ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ನಿರಂಜನ್ ತಿಳಿಸಿದ್ದಾರೆ.
ಅಲ್ಲಾ, ಇಷ್ಟೆಲ್ಲಾ ಹೇಳುವ ಮೊದಲು ಈ ಶೌಚಾಲಯನ್ನು ಕಟ್ಟುವಾಗ ಅಧಿಕಾರಿಗಳು, ಊರಿನ ಜನರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ರಾ ಎಂಬುದು ನೆಟ್ಟಿಗರ ಪ್ರಶ್ನೆ ಆಗಿದೆ. ಬಹುಶಃ ಈ ಎಂಜಿನಿಯರ್ ಆನ್ಲೈನ್ ಕ್ಲಾಸ್ ಅಟೆಂಡ್ ಮಾಡಿದ್ರು ಅನ್ಸುತ್ತೆ ಅಂತ ಒಂದಷ್ಟು ಜನ ಹಾಸ್ಯಾಸ್ಪದವಾಗಿ ಕೇಳಿದ್ರೂ ನಿಜವೆಂಬಂತೆ ಇದೆ. ಪಕ್ಕದಲ್ಲಿ ಇನ್ನೊಂದು ಗೋಡೆ ಕಟ್ಟಲು ಬಹುಶಃ ಮರೆತುಹೋಗಿರಬಹುದು ಪಾಪ ಬಿಡಿ.
ಈ ಹಿಂದೆ ಇದೇ ರೀತಿಯಾಗಿ ಅಡುಗೆ ಮನೆಯೊಳಗೇ ಟಾಯ್ಲೆಟ್ ನಿರ್ಮಿಸಿದ ಘಟನೆ ಸಖತ್ ವೈರಲ್ ಆಗಿತ್ತು. ಏನೋಪಾ ಜನ ಮರುಳೋ, ಜಾತ್ರೆ ಮರುಳೋ ಎಂಬುದೇ ತಿಳಿಯದು. ಇದು ಟ್ರೆಂಡ್ ಆಗದೇ ಇದ್ರೆ ಸಾಕು ಅಂತನೂ ದೇವರಲ್ಲಿ ಪ್ರಾರ್ಥನೆ ಮಾಡ್ತಿದ್ದಾರೆ ನೆಟ್ಟಿಗರು! ಆದ್ರೂ ಅರ್ಜೆಂಟ್ ಆದಾಗ ಈ ಶೌಚಾಲಯವನ್ನು ಬಳಸಿದರೂ ತಪ್ಪಿಲ್ಲ ಬಿಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ