• Home
  • »
  • News
  • »
  • trend
  • »
  • Psychology: ನರ್ವಸ್ ಭಾವನೆಯನ್ನು ಹೋಗಲಾಡಿಸೋಕೆ ಮಾಡ್ಬೇಕಿರೋದೇನು ಗೊತ್ತಾ?

Psychology: ನರ್ವಸ್ ಭಾವನೆಯನ್ನು ಹೋಗಲಾಡಿಸೋಕೆ ಮಾಡ್ಬೇಕಿರೋದೇನು ಗೊತ್ತಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಟಿಕ್‌ ಟಾಕ್‌ ನಲ್ಲಿ ಇತ್ತೀಚೆಗೆ ವೈರಲ್ ಆದ ವೀಡಿಯೋದಲ್ಲಿ, ಮನಃಶಾಸ್ತ್ರದ ವಿದ್ಯಾರ್ಥಿನಿಯು ಆತಂಕವನ್ನು ಹೋಗಲಾಡಿಸಲು 'ಕ್ವಿಕ್ ಫಿಕ್ಸ್' ಅನ್ನು ಹಂಚಿಕೊಂಡಿದ್ದಾರೆ. ಇದು ದೊಡ್ಡ ಹಿಟ್ ಆಗಿರುವುದಷ್ಟೇ ಅಲ್ಲ, ಬದಲಾಗಿ ಆ ಉಪಾಯ ಕೆಲಸ ಮಾಡುತ್ತೆ ಅನ್ನೋದಕ್ಕೆ ಮತ್ತೊಂದು ಸಾಕ್ಷಿಯಾಗಿದೆ.

ಮುಂದೆ ಓದಿ ...
  • Share this:

ಮಾನವನ ಮೆದುಳು ಬಹಳ ಆಸಕ್ತಿದಾಯಕವಾದದ್ದು. ಇಡೀ ದೇಹವನ್ನು ಮಾನಸಿಕವಾಗಿ ಕಂಟ್ರೋಲ್‌ ಮಾಡುವ ಶಕ್ತಿ ಅದಕ್ಕಿದೆ. ಕೆಲವೊಮ್ಮೆ ನೀವು ಹೆಚ್ಚು ಸಂತೋಷವಾಗಿರುತ್ತೀರಿ. ಇನ್ನೂ ಕೆಲವೊಮ್ಮೆ ಕಡಿಮೆ ಖುಷಿಯನ್ನ ದುಃಖವನ್ನ ಹೊಂದಿರುತ್ತೀರಿ. ನಮ್ಮ ಮೆದುಳು ಆ ಕ್ಷಣದಲ್ಲಿ ನಮಗೆ ಏನನ್ನು ಸಂಕೇತಿಸುತ್ತದೆ ಎಂಬುದರ ಮೇಲೆ ನಮ್ಮ ಭಾವನೆಗಳು ನಿಂತಿರುತ್ತವೆ. ಕೆಲವೊಮ್ಮೆ ನೀವು ತುಂಬಾ ನರ್ವಸ್‌ ಆಗಿರುವಂತೆ ಫೀಲ್‌ (Feel) ಆಗುತ್ತೀರಿ. ಭಯ - ಬೇಸರದಲ್ಲಿರುತ್ತೀರಿ.  ಶಕ್ತಿಯೇ ಇಲ್ಲವೆಂಬಂತೆ ಭಾಸವಾಗುತ್ತಿರುತ್ತದೆ. ಪ್ರತಿಯೊಬ್ಬರಿಗೂ ಇಂಥದ್ದೊಂದು ನರ್ವಸ್‌ ಫೀಲಿಂಗ್‌ ಉಂಟಾಗಿರುತ್ತದೆ. ಹಾಗಿದ್ರೆ ಇದಕ್ಕೆ ಕಾರಣವೇನು? ಇದರಿಂದ ಹೇಗೆ ಹೊರಬರೋದು ಅನ್ನೋದ್ರ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ? ಅದಕ್ಕೊಂದು ಸುಲಭವಾದ (Easy) ಉಪಾಯವಿದೆ. ಪ್ರಯತ್ನ ಪಟ್ಟರೆ ತುಂಬಾ ಸರಳವಾಗಿ ನೀವು ಇದರಿಂದ ಆಚೆ ಬರಬಹುದು.


ಮನಶ್ಶಾಸ್ತ್ರದ ವಿದ್ಯಾರ್ಥಿಯೊಬ್ಬಳು ಇಂಥದ್ದೊಂದು ಪರಿಣಾಮಕಾರಿಯಾದ ಉಪಾಯವನ್ನ ಹಂಚಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿರುವ ಈ ವಿಡಿಯೋ ಸಖತ್‌ ವೈರಲ್‌ ಆಗಿದೆ.


ಅಧೈರ್ಯದ ಭಾವನೆ ಹೋಗಲಾಡಿಸಲು ಸರಳ ಉಪಾಯ!


ಹೌದು, ಟಿಕ್‌ ಟಾಕ್‌ ನಲ್ಲಿ ಇತ್ತೀಚಿನ ವೈರಲ್ ವೀಡಿಯೊದಲ್ಲಿ, ಮನಶ್ಶಾಸ್ತ್ರದ ವಿದ್ಯಾರ್ಥಿಯು ಆತಂಕ ವನ್ನು ಹೋಗಲಾಡಿಸಲು 'ಕ್ವಿಕ್ ಫಿಕ್ಸ್' ಅನ್ನು ಹಂಚಿಕೊಂಡಿದ್ದಾರೆ. ಇದು ದೊಡ್ಡ ಹಿಟ್ ಆಗಿರುವುದೊಂದೇ ಅಲ್ಲ ಬದಲಾಗಿ ಆ ಉಪಾಯ ಕೆಲಸ ಮಾಡುತ್ತೆ ಅನ್ನೋದು ವೈರಲ್‌ ಆಗಿರೋದಕ್ಕೆ ಮತ್ತೊಂದು ಕಾರಣವಾಗಿದೆ.


ಇದನ್ನೂ ಓದಿ:  ಕೊರೊನಾದಿಂದ ಕಂಗೆಟ್ಟ ಚೀನಾದಲ್ಲಿ ಹೊಸ ಡೇಟಿಂಗ್ ಸಂಸ್ಕೃತಿ, ಮಾಸ್ಕ್ ಹಾಕೊಳ್ಳಿ ಅನ್ನೋ ಬದ್ಲು ಕಿಸ್ ಮಾಡಿ ಅಂತಿದ್ದಾರೆ ಇಲ್ಲಿನ ಪ್ರೇಮಿಗಳು!

ಅಂದಹಾಗೆ ಮನಃಶಾಸ್ತ್ರ ವಿದ್ಯಾರ್ಥಿನಿ, ಮೊಲ್ಲಿ ಟ್ರೈನರ್, ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿದ್ದಾಳೆ. ಅದರಲ್ಲಿ ಅವರು ನರ್ವಸ್‌ ಭಾವನೆಯನ್ನು ತಪ್ಪಿಸಲು ಸರಳವಾದ ಹ್ಯಾಕ್ ಅನ್ನು ಹಂಚಿಕೊಂಡಿದ್ದಾರೆ. ಟ್ರಿಕ್ ಕೇವಲ ಮೂರು ಪದಗಳನ್ನು ಹೊಂದಿದೆ ಅನ್ನೋದು ಗಮನಾರ್ಹ.ಈ ವೀಡಿಯೊವನ್ನು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿಯೂ ಹಂಚಿಕೊಳ್ಳಲಾಗಿದೆ.


ಏನದು ಮೂರು ಪದದ ಹ್ಯಾಕ್?‌


ಟಿಕ್‌ಟಾಕ್‌ನಲ್ಲಿ ಮೊಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಅವರು ಇನ್ನೊಬ್ಬ ಬಳಕೆದಾರರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು. "ಸಾಮಾಜಿಕ ವಿಜ್ಞಾನಿಗಳೇ, ಮಾನವ ನಡವಳಿಕೆಯ ಬಗ್ಗೆ ನಿಮಗೆ ತಿಳಿದಿರುವ ಯಾವ ಒಂದು ವಿಷಯವನ್ನು ನಿಜ ಎಂದು ನೀವು ಒಪ್ಪಿಕೊಳ್ಳಲು ಸಾಧ್ಯವಿಲ್ಲ?" ಎಂಬುದಾಗಿ ಸಾಮಾಜಿಕ ಮಾಧ್ಯಮ ಬಳಕೆದಾರರು ಮೊಲ್ಲಿಯನ್ನು ಪ್ರಶ್ನಿಸಿದರು.Psychology, Anxiety, Student, ಮನಃಶಾಸ್ತ್ರ, ಆತಂಕ, ವಿದ್ಯಾರ್ಥಿ, Kannada News, Karnataka News, Psychology student shares effective hack to avoid feeling nervous, ಭಯವನ್ನು ಹೇಗೆ ಹೋಗಲಾಡಿಸುವುದು, ಯಾಕೆ ಭಯ ಆಗುತ್ತೆ
ಸಾಂದರ್ಭಿಕ ಚಿತ್ರ

ಅದಕ್ಕೆ ಪ್ರತಿಯಾಗಿ ಮೊಲ್ಲಿ, "ಭವಿಷ್ಯದಲ್ಲಿ ಏನಾದರೂ ಆಗಿಬಿಡುತ್ತದೆ ಎಂಬ ಬಗ್ಗೆ ಅಥವಾ ನೀವು ಮೊದಲು ಮಾಡಿದ ಕೆಲಸದ ಬಗ್ಗೆ ಅಥವಾ ಘಟನೆಯ ಬಗ್ಗೆ ಆತಂಕವಿದೆಯೇ? ಬಹುಶಃ ನೀವು ಪ್ರಸ್ತುತ ಅಥವಾ ಯಾವುದೋ ವಿಷಯಕ್ಕಾಗಿ ಕೊರಗುತ್ತಿರಬಹುದು. ಆದ್ದರಿಂದ ನೀವು ಉದ್ವೇಗ, ಆತಂಕದಿಂದ ಬಳಲುತ್ತಿರಬಹುದು. ಆದ್ರೆ ಅಂಥ ಸಮಯದಲ್ಲಿ ನೀವು ಕೇವಲ ಉದ್ವೇಗಕ್ಕಿಂತ ಹೆಚ್ಚಾಗಿ ಉತ್ಸುಕರಾಗಿದ್ದೀರಿ ಎಂದು ಯೋಚಿಸಲು ಆರಂಭಿಸಿ.


“ನಾನು ಉತ್ಸುಕನಾಗಿದ್ದೇನೆ” (I am excited)ಎಂದು ನಿಮಗೆ ನೀವು ಗಟ್ಟಿಯಾಗಿ ಹೇಳಿಕೊಳ್ಳಿ. ನೀವು ಉತ್ಸುಕರಾಗಿದ್ದೀರಿ ಎಂದು ಯೋಚಿಸುವಂತೆ ನಿಮ್ಮ ಮನಸ್ಸನ್ನು ಮೋಸಗೊಳಿಸಿ” ಎಂಬುದಾಗಿ ಹೇಳುತ್ತಾರೆ. ಇದೇ ಆ ಸರಳವಾದ ಹ್ಯಾಕ್‌ ಮತ್ತು ಖಂಡಿತವಾಗಿಯೂ ಪರಿಹಾರ ಕೊಡುತ್ತೆ ಎಂಬುದಾಗಿ ಅವರು ಹೇಳುತ್ತಾರೆ.


ಒಟ್ಟಾರೆ, ಅಂದಹಾಗೆ ನಾವು ನಮ್ಮ ಮೆದುಳಿಗೆ ಹೇಗೆ ತರಬೇತಿ ನೀಡುತ್ತೇವೆಯೋ ಅದು ಹಾಗೆ ನಡೆದುಕೊಳ್ಳುತ್ತದೆ. ಇಂಟೆರೆಸ್ಟಿಂಗ್‌ ಹ್ಯಾಕ್‌ ಇದು ಅನ್ನೋದ್ರಲ್ಲಿ ಡೌಟಿಲ್ಲ. ಮನಃಶಾಸ್ತ್ರ ವಿದ್ಯಾರ್ಥಿನಿಯೇ ಹೇಳಿದ್ದರಿಂದ ಇದನ್ನು ಟ್ರೈ ಮಾಡಹುದು ಕೂಡ. ಅಲ್ದೇ ಸರಳವಾದ ಉಪಾಯ ಕೂಡ. ಉದ್ವಿಘ್ನತೆ, ಆತಂಕ, ಭಯ, ಶಕ್ತಿ ಕಳೆದುಕೊಂಡಂತಹ ಭಾವನೆ, ಇಂಥದ್ದನ್ನು ಬಹುತೇಕ ಎಲ್ಲರೂ ಅನುಭವಿಸುತ್ತಾರೆ. ಯಾವುದೇ ಸೈಡ್‌ ಇಫೆಕ್ಟ್‌ ಇಲ್ಲದಂತಹ ಈ ಉಪಾಯವನ್ನು ಎಲ್ಲರೂ ಒಮ್ಮೆ ಪ್ರಯತ್ನಿಸಿ ನೋಡಬಹುದು.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು