#FuelChallenge, ಪೆಟ್ರೋಲ್​ ಬಂಕ್​ ಎದರೇ ಪುಶ್​​ ಅಪ್​ ಮಾಡಿ ಪ್ರತಿಭಟನೆ


Updated:May 29, 2018, 3:06 PM IST
#FuelChallenge, ಪೆಟ್ರೋಲ್​ ಬಂಕ್​ ಎದರೇ ಪುಶ್​​ ಅಪ್​ ಮಾಡಿ ಪ್ರತಿಭಟನೆ

Updated: May 29, 2018, 3:06 PM IST
ಪಾಲಕ್ಕಾಡ್​: ಸದಾ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ಮಾಡುವ ಕೇರಳ ಮಂದಿ ಇದೀಗ ಮತ್ತೊಮ್ಮೆ ಟ್ರೆಂಡ್​ ಆಗಿದ್ದು, ಇತ್ತೀಚಿಗಿನ ಕಚ್ಚಾ ತೈಲ ಬೆಲೆ ಏರಿಕೆ ಕುರಿತು ಪೆಟ್ರೋಲ್​ ಬಂಕ್​ಗಳಲ್ಲೇ ಪುಶ್​​​ಅಪ್​ ಮಾಡುವ ಮೂಲಕ ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.

ಕೇಂದ್ರ ಸಚಿವ ರಾಜ್ಯವರ್ಧನ್​ ಸಿಂಗ್​ ರಾಥೋಡ್​ ಕೆಲದಿನಗಳ ಹಿಂದೆ #HumFitTohIndiaFit ಎಂಬ ಹ್ಯಾಚ್​ಟ್ಯಾಗ್​ನೊಂದಿಗೆ ಜಾಗೃತಿ ಚಳವಳಿಯನ್ನು ಹುಟ್ಟುಹಾಕಿದ್ದರು. ಈ ಚಾಲೆಂಜ್​ಗೆ ಸೆಲೆಬ್ರೆಟಿಗಳು ಸೇರಿದಂತೆ ಹಲವರು ಬೆಂಬಲ ಸೂಚಿಸಿದ್ದರು. ಈ ನಡುವೆ ಪೆಟ್ರೋಲ್​ ಬೆಲೆ ಏರಿಕೆ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಟ್ವಿಟರ್​ನಲ್ಲಿ ಕಿಡಿಕಾರಿದ್ದರು. ಹೀಗಾಗಿ ಫಿಟ್​ನೆಸ್​ ಚಾಲೆಂಜ್​ನೊಂದಿಗೆ #FuelChallenge ಕೂಡಾ ಟ್ರೆಂಡಿಂಗ್​ ಆಗಿದೆ.

ಪೆಟ್ರೋಲ್​ ಬೆಲೆ ಏರಿಕೆಯಾಗಿದೆ ಎಂದು ಹೆಚ್ಚಿನವರು ಟ್ವೀಟ್​ ಸೇರಿದಂತೆ ಒಂದು ದಿನದ ಸಾಂಕೇತಿಕ ಪ್ರತಿಭಟನೆ ಮಾಡಿದ್ದರೆ ಕೇರಳದ ಮಂದಿ ಮಾತ್ರಾ ಪೆಟ್ರೋಲ್​ ಬಂಕ್​ ಮುಂದೆ ಪುಷ್​ ಅಪ್​ ಹಾಗೂ ಇತರೇ ವರ್ಕೌಟ್​ ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.


Loading...
First published:May 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...