ವಿಪರೀತ ನೀಲಿ ಚಿತ್ರ ವೀಕ್ಷಿಸುವ ಚಟದಿಂದ 1 ಕೋಟಿ ರೂ. ದಂಡ ತೆತ್ತ ನಿರ್ಮಾಪಕ!

ಅಂದಹಾಗೆಯೇ ಇಲ್ಲೊಬ್ಬ ನಿರ್ಮಾಪಕನಿಗೆ ವಿಪರೀತ ನೀಲಿ ಚಿತ್ರ (Blue Film) ವೀಕ್ಷಿಸುವ ಚಟ. ಆದರೀಗ ಆತನ ಚಟದಿಂದಾಗಿ ಒಂದು ಕೋಟಿ (Crore) ದಂಡ ತ್ತೆತ್ತಬೇಕಾದ ಸನ್ನಿವೇಷ ಆತನಿದೆ ಎದುರಾಗಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಎಲ್ಲವೂ ಮಿತಿಯೊಳಗಿದ್ದರೆ ಜೀವನ ಚೆನ್ನಾಗಿರುತ್ತದೆ. ಆದರೆ ಕೆಲವರು ಹಾಗಿಲ್ಲ, ವಿಪರೀತ ಚಟವನ್ನು ಹೊಂದಿರುತ್ತಾರೆ. ಕೆಲವರಿಗೆ ಆನ್​ಲೈನ್​ ಗೇಮ್​ ಚಟ, ಇನ್ನು ಕೆಲವರಿಗೆ ಮದ್ಯಪಾನ ಮಾಡುವ ಚಟ, ಮತ್ತೆ ಹಲವರಿಗೆ ಧೂಮಪಾನ ಮಾಡುವ ಚಟವಿರುತ್ತದೆ, ಆದರೆ ಇವೆಲ್ಲವು ಒಂದು ಮಿತಿಯಲ್ಲಿದ್ದರೆ ಒಳ್ಳೆಯದು. ಒಂದು ವೇಳೆ ಮಿತಿ ಮೀರಿದರೆ ವಿವೇಕ ಕಳೆದುಕೊಳ್ಳುವುದರಲ್ಲಿ ಅನುಮಾನವೇ ಇಲ್ಲ.

  ಅಂದಹಾಗೆಯೇ ಇಲ್ಲೊಬ್ಬ ನಿರ್ಮಾಪಕನಿಗೆ ವಿಪರೀತ ನೀಲಿ ಚಿತ್ರ (Blue Film) ವೀಕ್ಷಿಸುವ ಚಟ. ಆದರೀಗ ಆತನ ಚಟದಿಂದಾಗಿ ಒಂದು ಕೋಟಿ (Crore) ದಂಡ ತ್ತೆತ್ತಬೇಕಾದ ಸನ್ನಿವೇಷ ಆತನಿದೆ ಎದುರಾಗಿದೆ.

  ಹೌದು. ಮಾರ್ಕ್​ ಜೊಹಾನ್ (Mark Johan)​ ಎಂಬ ಸಾಕ್ಷ್ಯಚಿತ್ರಗಳನ್ನು (Shortmovies) ನಿರ್ಮಿಸುತ್ತಿದ್ದ ನಿರ್ಮಾಪಕ (Producer) ವಿಪರೀತ ನೀಲಿ ಚಿತ್ರವನ್ನು ವೀಕ್ಷಿಸುವ ದುಶ್ಚಟವನ್ನು ಹೊಂದಿದ್ದರು. ಸಿಕ್ಕ ಸಿಕ್ಕ ವೆಬ್​ಸೈಟ್​ಗೆ ತೆರಳಿ ಅದರಲ್ಲಿರುವ ಬ್ಲೂ ಫಿಲ್ಮಂಗಳನ್ನು ಹುಡುಕಿ ವೀಕ್ಷಿಸುತ್ತಿದ್ದರು. ಅಷ್ಟೇ ಏಕೆ ಕೆಲವು ವೆಬ್​ಸೈಟ್​​ಗಳು ಹಣ ನೀಡದೆ ನೀಲಿ ಚಿತ್ರವನ್ನು ಒದಗಿಸುವುದಿಲ್ಲ. ಹಾಗಾಗಿ ಹಣ ನೀಡಿ ವೆಬ್​ಸೈಟ್​ಗೆ ಭೇಟಿ ನೀಡಿ ಸೆಕ್ಸ್​ ಸಿನಿಮಾ ವೀಕ್ಷಿಸುತ್ತಿದ್ದರು.

  ಮಾರ್ಕ್​ ಜೊಹಾನ್ ಗಂಟೆಗಟ್ಟಲೆ ನೀಲಿ ವೀಕ್ಷಿಸುತ್ತಿದ್ದರಂತೆ. ಕೆಲವು ನೇರ ಪ್ರಸಾರಕ್ಕಾಗಿ ದುಬಾರಿ ಟಿಕೆಟ್​ ಖರೀದಿಸಿ ವೀಕ್ಷಿಸುತ್ತಿದ್ದರಂತೆ. ಹೀಗೆ ಮಾರ್ಕ್​ ​ ಜೊಹಾನ್​ನಲ್ಲಿ ಇದೊಂದು ಚಟ ಆಳವಾಗಿ ಬೇರೂರಿತ್ತು.

  ಮಾರ್ಕ್​ ಜೊಹಾನ್ ನೀಲಿ ಚಿತ್ರ ವೀಕ್ಷಿಸುವ ಚಾಳಿಗೆ ಬಿದ್ದು, ತನ್ನ ಆದಾಯವನ್ನೆಲ್ಲಾ ನೀಲಿ ಚಿತ್ರ  ವೀಕ್ಷಿಸುವುದರಲ್ಲಿ ಖಾಲಿಯಾಗಿತು. ನಂತರ ತಾನು ಕೆಲಸ ಮಾಡುತ್ತಿದ್ದ ಕಂಪನಿಯ ಕ್ರೆಡಿಟ್​ ಕಾರ್ಡ್​ ಬಳಸಲು ಆರಂಭಿಸಿದ್ದ, ಹೀಗೆ ಬಳಸಿ ಭಾರಿ ವೆಚ್ಚವನ್ನು ಇದಕ್ಕಾಗಿ ಬಳಸಿಕೊಂಡಿದ್ದಾನೆಂದು ತಿಳಿದು ಬಂದಿದೆ.

  ಮಾರ್ಕ್​ ಜೊಹಾನ್ ಮಾಡಿರುವ ಕೆಲಸ ನೋಡಿ ಕಂಪನಿ ಕೋರ್ಟ್​ ಮೊರೆ ಹೋಗಿದೆ. ನಂತರ ಮಾರ್ಕ್​ ಜೊಹಾನ್​ಗೆ ನ್ಯಾಯಾಲಯ  1 ಕೋಟಿ ದಂಡವನ್ನು ವಿಧಿಸಿದೆ.
  Published by:Sharath Sharma Kalagaru
  First published: