ಭಾರತೀಯಳಾಗಿದ್ದರ ಲಾಭ ಏನು? ಪ್ರಶ್ನೆಗೆ Priyanka Chopra ಉತ್ತರ ಹೇಳಿದ ವಿಡಿಯೋ ವೈರಲ್  

ಅಂದಿನ ಪಾರ್ಟಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ  ವೈರಲ್ (Priyana Chopra Video Viral) ಆಗುತ್ತಿದೆ. ಭಾರತೀಯಳಾಗಿದ್ದಕ್ಕೆ ಏನು ಲಾಭ ಅಂತ ಅಲ್ಲಿದ್ದ ಎಲ್ಲರೂ ತಮ್ಮ ಅಭಿಪ್ರಾಯ ಹೇಳಿಕೊಂಡಿದ್ದಾರೆ. ಅದೇ ರೀತಿ ಪ್ರಿಯಾಂಕಾ ಸಹ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕಾ ಚೋಪ್ರಾ

  • Share this:
ಬಾಲಿವುಡ್ ನಟಿ ದೇಶಿ ಗರ್ಲ್ ಪ್ರಿಯಾಂಕಾ ಚೋಪ್ರಾ ಜೋನಸ್​ (Priyanka Chopra Jonas) ವಿದೇಶದಲ್ಲಿದ್ರೂ ವಿಡಿಯೋಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿ (Social Media) ಸದ್ದು ಮಾಡುತ್ತಿರುತ್ತಾರೆ. ಕೆಲ ದಿನಗಳ ಹಿಂದೆ ಮನೆಯಲ್ಲಿ ದೀಪವಾಳಿ ಹಬ್ಬದ (Deepavali Celebration 2021) ಹಿನ್ನೆಲೆ ಮಹಾಲಕ್ಷ್ಮಿ ಪೂಜೆಯ (Mahalaxmi Pooja) ಫೋಟೋಗಳನ್ನು ಹಂಚಿಕೊಂಡಿದ್ದರು. ಅದಕ್ಕೂ ಮೊದಲು ದೀಪಾವಳಿ ಹಬ್ಬದ ಹಿನ್ನೆಲೆ ಆಪ್ತರೆಲ್ಲ ಒಂದೆಡೆ ಸೇರಿ ಸಂಭ್ರಮಾಚರಣೆ ಮಾಡಿದದ್ರು. ಅಂದಿನ ಪಾರ್ಟಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ  ವೈರಲ್ (Priyana Chopra Video Viral) ಆಗುತ್ತಿದೆ. ಭಾರತೀಯಳಾಗಿದ್ದಕ್ಕೆ ಏನು ಲಾಭ ಅಂತ ಅಲ್ಲಿದ್ದ ಎಲ್ಲರೂ ತಮ್ಮ ಅಭಿಪ್ರಾಯ ಹೇಳಿಕೊಂಡಿದ್ದಾರೆ. ಅದೇ ರೀತಿ ಪ್ರಿಯಾಂಕಾ ಸಹ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಭಾರತೀಯಳಾಗಿದ್ದು ಯಾವ ಕಾರಣಕ್ಕೆ ಉತ್ತಮ ಪ್ರಶ್ಮೆಗೆ ಪ್ರಿಯಾಂಕಾ ಫನ್ನಿ ಉತ್ತರ ನೀಡಿದ್ದಾರೆ. ಭಾರತೀಯಳಾಗಿದ್ದಕ್ಕೆ ನಾನು ಹೆಚ್ಚು ಹೆಚ್ಚು ಮೆಣಸಿನಕಾಯಿ ತಿನ್ನಬಲ್ಲೇ ಎಂದು ಹೇಳಿದ್ದಾರೆ. ಮತ್ತೊಂದು ವಿಡಿಯೋದಲ್ಲಿ ‘ಮುಂಡಯಾ ತೋ ಬಚ್ ಕೇ’ ಹಾಡಿಗೆ ಪ್ರಿಯಾಂಕಾ ಹೆಜ್ಜೆ ಹಾಕಿದ್ದಾರೆ.

ಸಾಂಪ್ರದಾಯಿಕ ಉಡುಗೆಯಲ್ಲಿ ಪ್ರಿಯಾಂಕಾ ಮತ್ತು ನಿಕ್

ಮನೆಯಲ್ಲಿ ದೀಪಾವಳಿ ಆಚರಿಸಿರುವ ಫೋಟೋಗಳನ್ನು ಇನ್ ಸ್ಟಾಗ್ರಾಂನಲ್ಲಿ ಪ್ರಿಯಾಂಕಾ ಶೇರ್ ಮಾಡಿಕೊಂಡಿದ್ದರು. ಪ್ರಿಯಾಂಕಾ ದೀಪಾವಳಿ ಆಚರಣೆಯ ಫೋಟೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ನಿಕ್ ಜೋನಸ್ (Nick Jonas) ಕುಟುಂಬಕ್ಕೆ ಹಬ್ಬದ ಶುಭಾಶಯಗಳನ್ನು ತಿಳಿಸಿದ್ರು. ಪ್ರಿಯಾಂಕಾ ಹಳದಿ ಬಣ್ಣದ ಸೀರೆ ಮತ್ತು ನಿಕ್ ಶ್ವೇತ ವರ್ಣದ ಕುರ್ತಾ ಧರಿಸಿ ಸಾಂಪ್ರದಾಯಿಕ ಲುಕ್ ನಲ್ಲಿರೋದನ್ನು ಫೋಟೋಗಳಲ್ಲಿ ನೋಡಬಹುದಾಗಿದೆ.
ಇದನ್ನೂ ಓದಿ:  Viral Video: ವೇದಿಕೆಯಲ್ಲೇ ವರನ ಗೆಳೆಯರಿಗೆ ಚಮಕ್ ಕೊಟ್ಟ ವಧುವಿನ ವಿಡಿಯೋ ವೈರಲ್

ಫೋಟೋ ಶೇರ್ ಮಾಡಿಕೊಂಡಿರುವ ಪ್ರಿಯಾಂಕಾ, ಯಾ ದೇವೀ ಸರ್ವಭೂತೇಷು ಲಕ್ಷ್ಮೀ ರೂಪೇನ್ ಸಂಸ್ಥಾ । ನಮಸ್ತಸ್ಯ ನಮಸ್ತಸ್ಯ ನಮಸ್ತಸ್ಯ ನಮೋ ನಮಃ ಎಂದು ಬರೆದುಕೊಂಡು ಎಲ್ಲರಿಗೂ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಜೊತೆಗೆ ಮನೆಯಲ್ಲಿ ಮಹಾಲಕ್ಷ್ಮಿ ದೇವಿಯ ಪೂಜೆ ಮಾಡಿರುವ ವಿಷಯವನ್ನು ಸಹ ಹಂಚಿಕೊಂಡಿದ್ದಾರೆ.

ನಿಶ್ಚಿತಾರ್ಥದ ಉಂಗುರ

ಕೆಲಸದ ನಿಮಿತ್ತ ಪ್ರಿಯಾಂಕಾ ಚೋಪ್ರಾ ದುಬೈಗೆ ಹೋದ ವೇಳೆ ಅಲ್ಲಿ ಒಂದು ಇವೆಂಟ್​ನಲ್ಲಿ ಭಾಗಿಯಾಗಿದ್ದರು . ನಂತರ ವೋಗ್ ಅರೆಬಿಯಾಗೆ ಸಂದರ್ಶನ ಸಹ ನೀಡಿದ್ದರು. ಈ ಸಂದರ್ಶನದಲ್ಲಿ ತಮ್ಮ ಬಳಿ ಇರುವ ಸ್ಟನ್ನಿಂಗ್​ ಆರಂಭರಣದ ಬಗ್ಗೆಯೂ ಮಾತನಾಡಿದ್ದರು. ಅವರ ಜೀವನದಲ್ಲಿ ಅವರ ನಿಶ್ಚಿತಾರ್ಥದಂದು ನಿಕ್​ ಜೋನಸ್​ ಕೊಟ್ಟು ಉಂಗುರ ತುಂಬಾ ವಿಶೇಷವಂತೆ. ಹೀಗೆಂದು ಹೇಳದೇ ಹೋದರೆ ನಿಕ್​ ತನ್ನನ್ನು ಕೊಂದು ಬಿಡುತ್ತಾರೆ ಎಂದು ತಮಾಷೆ ಮಾಡಿದ್ದರು.

ಇದನ್ನೂ ಓದಿ:  Viral News: ದೇಹದ ಒಂದು ಅಂಗಕ್ಕೆ ರೂಪದರ್ಶಿಯ 13 ಕೋಟಿ ವಿಮೆ

2 ಕೋಟಿ ಮೌಲ್ಯದ ನಿಶ್ಚಿತಾರ್ಥದ ಉಂಗುರ

ನಿಕ್ ಜೋನಸ್​ ಕೊಟ್ಟಿರುವ 2 ಕೋಟಿ ಮೌಲ್ಯದ ನಿಶ್ಚಿತಾರ್ಥದ ಉಂಗುರ ತುಂಬಾ ಸ್ಪೆಷಲ್​ ಅಂತೆ. ಕಾರಣ ಅದು ತುಂಬಾ ಅನಿರೀಕ್ಷಿತವಾಗಿ ಪ್ರಿಯಾಂಕಾ ಅವರಿಗೆ ಸಿಕ್ಕಿದ್ದಂತೆ. ಇದನ್ನು ಸದಾ ನಾನು ನನ್ನ ಬಳಿ ಇಟ್ಟುಕೊಂಡಿರುತ್ತೇನೆ ಎಂದಿದ್ದಾರೆ.

ಕಳೆದ ವರ್ಷವೂ ಪ್ರಿಯಾಂಕಾ ಚೋಪ್ರಾ ಇನ್​ಸ್ಟಾಗ್ರಾಂನಲ್ಲಿ ಫೋಟೋ ಹಾಕಿಕೊಂಡು ದೇಶದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದ್ರು. ಗೋಲ್ಡನ್​ ಬಣ್ಣದ ಸೀರೆಯನ್ನು ಧರಿಸಿ, ಕಿವಿಗೆ ಚಿನ್ನದ ಓಲೆಯನ್ನು ಹಾಕಿಕೊಂಡು ಪತಿ ನಿಕ್​ ಜೊತೆ ಫೋಟೋಗೆ ಫೋಸು ನೀಡಿದ್ದರು.

2018 ಡಿಸೆಂಬರ್ 1ರಂದು ಜೋಧಪುರ ನಗರದ ಉಮೈದ್ ಭವನದಲ್ಲಿ ಪ್ರಿಯಾಂಕಾ ಚೋಪ್ರಾ ಮದುವೆಯಾಗಿದ್ದರು. ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ನಡೆದಿತ್ತು. ಮದುವೆಗೆ ಕೇವಲ ಅತ್ಯಾಪ್ತರನ್ನು ಮಾತ್ರ ಆಹ್ವಾನಿಸಿತ್ತು. ಸದ್ಯ ಪ್ರಿಯಾಂಕಾ ಚೋಪ್ರಾ ಹಾಲಿವುಡ್ ನಲ್ಲಿ ಬ್ಯುಸಿಯಾಗಿದ್ದಾರೆ.
Published by:Mahmadrafik K
First published: