ಖೈದಿಗಳಿಗಾಗಿ ಜೈಲನ್ನು ಬಾಡಿಗೆಗೆ ಪಡೆಯಲಾಗಿದೆ, ಇದಕ್ಕಾಗಿ ಖರ್ಚು ಮಾಡ್ತಿರೋದು ಎಷ್ಟು ಗೊತ್ತಾ? ಎಂಥಾ ಕಾಲ ಬಂತಪ್ಪಾ!

ರಾಜಧಾನಿ ಪ್ರಿಸ್ಟಿನಾದಿಂದ ಸುಮಾರು 50 ಕಿಮೀ ದೂರದಲ್ಲಿರುವ ಜಿಜಿಲಾನ್​ನಲ್ಲಿರುವ ಜೈಲುಗಳನ್ನು ಬಾಡಿಗೆಗೆ ನೀಡುವ ಮೂಲಕ ಮುಂದಿನ 10 ವರ್ಷಗಳಲ್ಲಿ ಒಟ್ಟು 210 ಮಿಲಿಯನ್ ಯುರೋಗಳನ್ನು ಪಡೆಯುವ ನಿರೀಕ್ಷೆಯಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಹೆಚ್ಚುತ್ತಿರುವ ಕೈದಿಗಳ ಕಾರಣದಿಂದಾಗಿ, ಡೆನ್ಮಾರ್ಕ್​ನಲ್ಲಿ (Denmark) ಜೈಲೊಂದನ್ನು(jail) ಬಾಡಿಗೆಗೆ (Rent) ತೆಗೆದುಕೊಂಡಿದೆ. ಈ ನಿಟ್ಟಿನಲ್ಲಿ ಕೊಸೊವೊದೊಂದಿಗೆ (Kosovo) ಒಪ್ಪಂದ ಮಾಡಿಕೊಂಡಿದೆ, ಒಪ್ಪಂದದ ಅಡಿಯಲ್ಲಿ 300 ಜೈಲು ಕೋಣೆಗಳನ್ನು ಬಾಡಿಗೆಗೆ ತೆಗೆದುಕೊಳ್ಳಲಾಗಿದೆ. ಡೆನ್ಮಾರ್ಕ್ ಒಟ್ಟು ಐದು ವರ್ಷಗಳ ಕಾಲ ಬಾಡಿಗೆಗೆ ತೆಗೆದುಕೊಂಡಿದ್ದು, ಪ್ರತಿ ವರ್ಷ ಸುಮಾರು 1,28,17,20,000 ರೂ.ವನ್ನು (15 ಮಿಲಿಯನ್ ಯುರೋಗಳನ್ನು) ಪಾವತಿಸುತ್ತಿದೆ.

  ಸುಮಾರು 800 ಕೋಣೆಗಳು ಖಾಲಿ ಬಿದ್ದಿವೆ

  ಡೆನ್ಮಾರ್ಕ್​​ನಿಂದ ಗಡಿಪಾರು ಮಾಡಿದ ಅಪರಾಧಿಗಳನ್ನು ಈ ಬಾಡಿಗೆ ಜೈಲುಗಳಲ್ಲಿ ಇರಿಸಲಾಗುತ್ತದೆ ಮತ್ತು ಅವರಿಗೆ ಡ್ಯಾನಿಶ್ ಕಾನೂನುಗಳು ಅನ್ವಯಿಸುತ್ತವೆ. ಕೊಸೊವೊ ಜೈಲುಗಳಲ್ಲಿ ಪ್ರಸ್ತುತ 700 ರಿಂದ 800 ಬ್ಯಾರಕ್​ಗಳಿದ್ದು,  ಹೆಚ್ಚಿನವುಗಳನ್ನು ಬಳಸುತ್ತಿಲ್ಲ. ಅದಕ್ಕಾಗಿಯೇ ಈಗ ಈ ಜೈಲುಗಳ ಕೋಣೆಯನ್ನು ಬಾಡಿಗೆಗೆ ನೀಡುವ ಮೂಲಕ ವಾರ್ಷಿಕವಾಗಿ ದೊಡ್ಡ ಹಣವನ್ನು ಗಳಿಸುತ್ತಿದ್ದಾರೆ. ಎರಡು ಸರ್ಕಾರಗಳು ಸೋಮವಾರದಂದು ಈ 'ರಾಜಕೀಯ ಘೋಷಣೆ'ಗೆ ಸಹಿ ಹಾಕಿದ್ದು, ಅದರ ಅಡಿಯಲ್ಲಿ ಜೈಲುಗಳನ್ನು ಬಾಡಿಗೆಗೆ ನೀಡಲಾಗುತ್ತಿದೆ ಎಂದು ಜಂಟಿ ಹೇಳಿಕೆ ತಿಳಿಸಿದೆ.

  ಜೈಲುಗಳ ಮೇಲೆ ಕಡಿಮೆ ಹೊರೆ ಇರುತ್ತದೆ

  ರಾಜಧಾನಿ ಪ್ರಿಸ್ಟಿನಾದಿಂದ ಸುಮಾರು 50 ಕಿಮೀ ದೂರದಲ್ಲಿರುವ ಜಿಜಿಲಾನ್​ನಲ್ಲಿರುವ ಜೈಲುಗಳನ್ನು ಬಾಡಿಗೆಗೆ ನೀಡುವ ಮೂಲಕ ಮುಂದಿನ 10 ವರ್ಷಗಳಲ್ಲಿ ಒಟ್ಟು 210 ಮಿಲಿಯನ್ ಯುರೋಗಳನ್ನು ಪಡೆಯುವ ನಿರೀಕ್ಷೆಯಿದೆ.

  ನಮ್ಮ ಜೈಲುಗಳು ಮತ್ತು ಅದರ ಅಧಿಕಾರಿಗಳ ಹೊರೆಯನ್ನು ಕಡಿಮೆ ಮಾಡುತ್ತದೆ. ಅದೇ ಸಮಯದಲ್ಲಿ, ದೇಶಭ್ರಷ್ಟ ಶಿಕ್ಷೆಗೆ ಒಳಗಾದ ಮೂರನೇ ದೇಶದ ನಾಗರಿಕರಿಗೆ ಭವಿಷ್ಯವು ಡೆನ್ಮಾರ್ಕ್​ನಲ್ಲಿ ಇರುವುದಿಲ್ಲ ಎಂಬ ಸ್ಪಷ್ಟ ಸಂಕೇತವನ್ನು ಸಹ ಕಳುಹಿಸುತ್ತದೆ ಎಂದು ನ್ಯಾಯ ಸಚಿವರಾದ ನಿಕ್ ಹೇಕೆರುಪ್ ಈ ಒಪ್ಪಂದದ ಹೇಳಿಕೆಯಲ್ಲಿ ತಿಳಿಸಿದ್ದಾರೆ

  ಈ ನಿರ್ಧಾರಕ್ಕೆ ವಿರೋಧವೂ ಶುರುವಾಗಿದೆ

  ಅದೇ ಹೊತ್ತಿಗೆ ಈ ನಿರ್ಧಾರಕ್ಕೆ ವಿರೋಧವೂ ಶುರುವಾಗಿದೆ. ಡೆನ್ಮಾರ್ಕ್ ಅನಗತ್ಯ ವಿದೇಶಿ ಅಪರಾಧಿಗಳನ್ನು ಇತರ ದೇಶಗಳಿಗೆ ಅಥವಾ ಅವರ ಕುಟುಂಬಗಳಿಂದ ದೂರ ಕಳುಹಿಸಬಾರದು ಎಂದು ವಿರೋಧಿಗಳು ಹೇಳಿದ್ದಾರೆ. ಆದಾಗ್ಯೂ, ಕೊಸೊವೊದಲ್ಲಿನ ಜೈಲುಗಳಿಗೆ ಡ್ಯಾನಿಶ್ ಕಾನೂನು ಮಾತ್ರ ಅನ್ವಯಿಸುತ್ತದೆ ಮತ್ತು ಕೈದಿಗಳು ಅವರ ಕುಟುಂಬಗಳನ್ನು ಭೇಟಿ ಮಾಡಲು ಅನುಮತಿಸಲಾಗುವುದು ಎಂದು ತಿಳಿಸಿದೆ.

  ಇದನ್ನು ಓದಿ: UAEನಲ್ಲಿ ಇನ್ನು ಅಡಲ್ಟ್ ಸಿನಿಮಾ ನೋಡಲು ಅವಕಾಶ, ಪರ್ಮಿಶನ್ ಕೊಟ್ಟ ಮೊದಲ ಇಸ್ಲಾಮಿಕ್ ರಾಷ್ಟ್ರ

  ಕೊಸೊವೊಗೆ ಕಳುಹಿಸಲಾದ ಅಪರಾಧಿಗಳು ಹೆಚ್ಚಿನ ಅಪಾಯದ ಕೈದಿಗಳಾಗಿರುವುದಿಲ್ಲ ಎಂದು ಕೊಸೊವೊದ ನ್ಯಾಯ ಮಂತ್ರಿ ಅಲ್ಬುಲೆನಾ ಹಾಕ್ಸಿಯು ಹೇಳಿದ್ದಾರೆ. ಭಯೋತ್ಪಾದನೆ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ಅಥವಾ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ಅಪರಾಧಿಗಳನ್ನು ಕೊಸೊವೊಗೆ ಕಳುಹಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

  ಇದನ್ನು ಓದಿ: ಬೆತ್ತಲಾಗಿ ಪ್ರವಾಸ ಮಾಡುತ್ತಿದ್ದಾರೆ ಈ ದಂಪತಿ! ವಿಶ್ವಪರ್ಯಟನೆ ಮಾಡೋದೆ ಇವರ ಮುಖ್ಯ ಉದ್ದೇಶ!

  ಈ ದೇಶಗಳು ಜೈಲನ್ನು ಬಾಡಿಗೆಗೆ ಪಡೆದಿವೆ

  ಯುರೋಪ್ ಕೈದಿಗಳನ್ನು ರಫ್ತು ಮಾಡುವ ಕಲ್ಪನೆಯು ಹೊಸದೇನಲ್ಲ, ಏಕೆಂದರೆ ನಾರ್ವೆ ಮತ್ತು ಬೆಲ್ಜಿಯಂ ಈ ಹಿಂದೆ ನೆದರ್​ಲ್ಯಾಂಡ್​ನಲ್ಲಿ ಜೈಲುಗಳನ್ನು ಬಾಡಿಗೆಗೆ ಪಡೆದಿವೆ. ಜೈಲನ್ನು ಬಾಡಿಗೆಗೆ ನೀಡುವ ನಿರ್ಧಾರವು ರಾಷ್ಟ್ರೀಯ ಹಿತಾಸಕ್ತಿಯಲ್ಲಿದೆ ಎಂದು ಡೆನ್ಮಾರ್ಕ್ ಹೇಳುತ್ತದೆ. ಏಕೆಂದರೆ ದೇಶದ ಜೈಲುಗಳಲ್ಲಿ ಕೈದಿಗಳ ಸಂಖ್ಯೆ ಹೆಚ್ಚುತ್ತಿದೆ ಮತ್ತು ಜೈಲು ಅಧಿಕಾರಿಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ.
  Published by:Harshith AS
  First published: