Viral Video: ಜೈಲಿನಿಂದ ಎಸ್ಕೇಪ್ ಆಗೋದು ಹೇಗೆ ಅಂತ ಪೊಲೀಸರಿಗೆ ಡೆಮೋ ಕೊಟ್ಟ ಖೈದಿ

ಖೈದಿಯ ಡೆಮೋ (Prisoner Demo Video) ನೋಡಿ ಪೊಲೀಸರೇ ಶಾಕ್ ಆಗಿದ್ದಾರೆ. ಸಪೂರ ದೇಹದ ಓರ್ವ ಖೈದಿ, ಕಂಬಿಗಳ ಮಧ್ಯೆ ಸಲೀಸಾಗಿ ಹೊರ ಬರೋದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಡೆಮೋ

ಡೆಮೋ

  • Share this:
ಜೈಲುಗಳು (Prison) ಅಂದ್ರೆ ಹಾಗೆ, ಹೀಗೆ ಇರುತ್ತೆ ಅನ್ನೋದನ್ನು ಸಿನಿಮಾ(Cinema)ಗಳಲ್ಲಿ ನೋಡಿರುತ್ತವೆ. ಎಷ್ಟೇ ಭದ್ರತೆ ಇದ್ರೂ ಕೆಲವೊಮ್ಮೆ ಖೈದಿಗಳು ಪೊಲೀಸರಿಗೆ (Police) ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಆಗಿರುವ ಉದಾಹರಣೆಗಳು ನಮ್ಮ ಮುಂದಿವೆ. ಹಾಗಾಗಿ ಪೊಲೀಸರು ಭದ್ರತೆ (Security) ವಿಚಾರದಲ್ಲಿ ಹೆಚ್ಚು ಗಮನ ನೀಡುತ್ತಿರುತ್ತಾರೆ. ಇದೀಗ ಸೋಶಿಯಲ್ ಮೀಡಿಯಾ(Social Media)ದಲ್ಲಿ ವಿಡಿಯೋ ವೈರಲ್ (Viral Video) ಆಗಿದ್ದು, ಖೈದಿ ಜೈಲಿನಿಂದ ಹೇಗೆ ಎಸ್ಕೇಪ್ ಆಗೋದು ಅಂತ ಡೆಮೋ ತೋರಿಸಿದ್ದಾನೆ. ಖೈದಿಯ ಡೆಮೋ (Prisoner Demo Video) ನೋಡಿ ಪೊಲೀಸರೇ ಶಾಕ್ ಆಗಿದ್ದಾರೆ. ಸಪೂರ ದೇಹದ ಓರ್ವ ಖೈದಿ, ಕಂಬಿಗಳ ಮಧ್ಯೆ ಸಲೀಸಾಗಿ ಹೊರ ಬರೋದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಮಹಾರಾಷ್ಟ್ರದ ಪಿಂಪ್ರಿ-ಚಿಂಚ್ ವಾಡ್ ಚಕನ್ ಪೊಲೀಸ್ ಠಾಣೆಯಲ್ಲಿ ಈ ವಿಶೇಷ ಡೆಮೋ ನಡೆದಿದೆ. ಜೈಲಿನ ದ್ವಾರಕ್ಕೆ ಬೀಗ ಹಾಕಿದ್ರೂ, ಖೈದಿ ಬೀಗ ತೆಗೆಯದೇ ಕಂಬಿಗಳ ಮಧ್ಯದಿಂದ ತುಂಬಾ ಸರಳವಾಗಿ ಬಂದಿದ್ದಾನೆ. ಡೆಮೋ ನೀಡಿದ ಖೈದಿಯನ್ನು ಪೊಲೀಸರು ಅದೇ ಲಾಕಪ್ ಗೆ ಹಾಕಿದ್ದಾರೆ.

ನೋಡ ನೋಡುತ್ತದ್ದಂತೆ ಕಂಬಿಗಳ ಮಧ್ಯದಿಂದ ಹೊರ ಬಂದ

ಈ ವಿಡಿಯೋದಲ್ಲಿ ಆರೋಪಿಗೆ ಪೊಲೀಸರು ಹೇಗೆ ತಪ್ಪಿಸಿಕೊಂಡೆ ಎಂದು ಕೇಳುತ್ತಾರೆ. ಆಗ ಲಾಕಪ್ ಒಳಗಿದ್ದ ಆರೋಪಿ ಹೊರಗೆ ಬರುತ್ತಾನೆ. ಒಂದು ವೇಳೆ ಖೈದಿಗಳು ಸಪೂರ ಅಥವಾ ತೆಳ್ಳಗೆ ಇದ್ರೆ ಸಲೀಸಾಗಿ ಈ ಕಂಬಿಗಳಿಂದ ಹೊರ ಬರುವ ಸಾಧ್ಯತೆಗಳಿವೆ ಎಂಬ ಸಂದೇಶವನ್ನು ಚಕನ್ ಠಾಣೆಯ ಪೊಲೀಸರು ಇತರೆ ಸ್ಟೇಶನ್ ಗಳಿಗೆ ಸಂದೇಶ ರವಾನಿಸಿದ್ದಾರೆ.

ವಿಡಿಯೋ ನೋಡಿದ ನೆಟ್ಟಿಗರಿಂದ ಕಮೆಂಟ್

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದ ವಿವಿಧ ವೇದಿಕೆಗಳಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು, ಇನ್ಮುಂದೆ ಜೈಲಿನಿಂದ ಅಥವಾ ಲಾಕಪ್ ನಿಂದ ಎಸ್ಕೇಪ್ ಆಗಬೇಕಾದ್ರೆ ಡಯಟ್ ಮಾಡಿ ಎಂದು ಸಲಹೆ ನೀಡಿದ್ದಾರೆ. ಪೊಲೀಸ್ ಇಲಾಖೆ ಕಂಬಿಗಳ ಮಧ್ಯದಲ್ಲಿರುವ ಅಂತರವನ್ನು ಇಳಿಸಬೇಕು ಎಂದು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ:  Toilet Theft: ಸಾರ್ವಜನಿಕರೇ ಗಮನಿಸಿ, ಯಾವುದು ಸೇಫ್ ಅಲ್ಲ: ಶೌಚಾಲಯವನ್ನೇ ಕದ್ದು ನೀರು ಕುಡಿದ ಕಳ್ಳರು



ಅಂಗೈಯಲ್ಲಿಯೇ ಹಾವಿಗೆ ನೀರು ಕುಡಿಸಿದ ವ್ಯಕ್ತಿಯ ವಿಡಿಯೋ ನೋಡಿ

ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಿಯೋರ್ವ ಹಸಿರು ಬಣ್ಣದ ಹಾವಿಗೆ (Snake) ನೀರು ಕುಡಿಸುತ್ತಿರುವ ವೈರಲ್ ಆಗಿದೆ. ಇನ್ನೂ ಈ ವಿಡಿಯೋ ನೋಡಿದ ನೆಟ್ಟಿಗರು, ಹಾವುಗಳ ಸಹ ಜೀವಿಗಳು. ಬೇಸಿಗೆಯಲ್ಲಿ ನೀರು ಮತ್ತು ಆಹಾರ (Food And Water) ಅರಸಿ ಜನ ವಸತಿ ಪ್ರದೇಶಗಳತ್ತ ಬರೋದು ಸಾಮಾನ್ಯ. ಹಾಗಾಗಿ ಅವುಗಳನ್ನು ಕೊಲ್ಲದೇ, ರಕ್ಷಿಸಿ ಅರಣ್ಯ ಪ್ರದೇಶಕ್ಕೆ (Forest) ಬಿಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಈ ವಿಡಿಯೋವನ್ನು ಐಎಫ್ಎಸ್ ಅಧಿಕಾರಿ (Indian Forest Service officer) ಸುಶಾಂತ್ ನಂದಾ ತಮ್ಮ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಕೆಲವು ಸಾಲುಗಳನ್ನು ಸಹ ಸುಶಾಂತ್ ನಂದಾ ಬರೆದುಕೊಂಡಿದ್ದಾರೆ.

ಬೇಸಿಗೆ ಸಮೀಪಿಸುತ್ತಿದೆ. ನೀವೂ ನೀಡುವ ಕೆಲವು ಹನಿಗಳು ಇನ್ನೊಬ್ಬರ ಜೀವವನ್ನು ಉಳಿಸಬಹುದು. ನಿಮ್ಮ ತೋಟದಲ್ಲಿ ಸ್ವಲ್ಪ ನೀರನ್ನು ಪಾತ್ರೆಯಲ್ಲಿ ಇರಿಸಿ. ಅದು ಅನೇಕ ಪ್ರಾಣಿಗಳಿಗೆ ಜೀವನ ಮತ್ತು ಸಾವಿನ ಪ್ರಶ್ನೆಯನ್ನ ನಿರ್ಧರಿಸುತ್ತದೆ ಎಂದು ಸುಶಾಂತ್ ನಂದಾ ಹೇಳಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ ಏನಿದೆ?

ವ್ಯಕ್ತಿಯೋರ್ವ ತನ್ನ ಅಂಗೈಯಲ್ಲಿ ಬಾಟಲ್ ನಿಂದ ನಿಧಾನವಾಗಿ ನೀರು ಹಾಕಿಕೊಳ್ಳುತ್ತಿದ್ದಾರೆ. ಇತ್ತ ದಾಹದಿಂದ ದಣಿದ ಹಾವು ನಿಧಾನವಾಗಿ ನೀರು ಕುಡಿಯುತ್ತಿದೆ. ಈ ಹೃದಯಸ್ಪರ್ಧಿ ವಿಡಿಯೋ ವೈರಲ್ ಆಗಿದ್ದು, ಜನರು ನೀರು ಕುಡಿಸಿದ ವ್ಯಕ್ತಿಗೆ ಧನ್ಯವಾದವನ್ನು ಸಲ್ಲಿಸುತ್ತಿದ್ದಾರೆ.



ಇದನ್ನೂ ಓದಿ:  Viral News: ಹಸುಗೂಸಿಗೆ ಡಯಟ್, ಈ ತಾಯಿಯ ಕಷ್ಟ ಕೇಳಿದ್ರೆ ನಿಮ್ಮ ಕಣ್ಣಂಚಲಿ ನೀರು ಬರುತ್ತೆ!

ಈ ರೀತಿ ಪ್ರಯತ್ನಿಸಬೇಡಿ

ಈ ರೀತಿ ಯಾರೂ ಹಾವುಗಳಿಗೆ ನೀರು ಕುಡಿಸಲು ಪ್ರಯತ್ನಿಸಬೇಡಿ. ಇದು ತುಂಬಾ ಅಪಾಯಕಾರಿ ಪ್ರಯತ್ನ ಆಗಿರುತ್ತದೆ. ಬಹುಶಃ ಈ ವ್ಯಕ್ತಿಗೆ ಹಾವುಗಳ ಬಗ್ಗೆ ಸಂಪೂರ್ಣ ಮಾಹಿತಿ ಇರಬೇಕು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಈ ರೀತಿ ಹಾವುಗಳಿಗೆ ನೀರು ಕುಡಿಸಲು ಸೂಕ್ತ ತರಬೇತಿಯ ಅಗತ್ಯ ಇರುತ್ತದೆ ಎಂದು ನೆಟ್ಟಿಗರು ಹೇಳಿದ್ದಾರೆ
Published by:Mahmadrafik K
First published: