ನೆಚ್ಚಿನ ನಟನ ಹಾಡು ಕೇಳಬೇಕೆಂಬ ಖೈದಿಯ ಆಸೆ ಈಡೇರಿಸಿದ ನ್ಯಾಯಾಧೀಶರು: ಆದರೂ ಹಾಡು ಕೇಳದ ಖೈದಿ..!

Prisoner favourite song played at Jail: ಪೂಜಪ್ಪುರ ಜೈಲಿನ ರೇಡಿಯೋ ಸ್ಟೇಶನ್‍ನಲ್ಲಿ ‘ಸ್ವಾತಂತ್ರ್ಯ ಸ್ವರಮೇಳ’ ಮೂರು ತಿಂಗಳ ಹಿಂದೆ ಕಾರ್ಯ ನಿರ್ವಹಿಸಲು ಆರಂಭಿಸಿತ್ತು. ‘ಸ್ವಾತಂತ್ರ್ಯ ಸ್ವರಮೇಳ’ ದಲ್ಲಿ ತಮ್ಮ ಮೆಚ್ಚಿನ ಹಾಡನ್ನು ಕೇಳಬೇಕು ಎಂದು ಆಸೆ ಪಡುವ ಖೈದಿಗಳು, ಅದಕ್ಕಾಗಿ ಲಿಖಿತ ಮನವಿ ನೀಡಬೇಕಿತ್ತು. ಆ ಲಿಖಿತ ಮನವಿಯನ್ನು ಜೈಲಿನ ಸ್ಟೋರ್‌ನಲ್ಲಿ ಸಲ್ಲಿಸಬೇಕಿತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಕೇರಳದ(Kerala) ತಿರುವನಂತಪುರದಲ್ಲಿ ಜಿಲ್ಲಾ ಸೆಶನ್ಸ್ ನ್ಯಾಯಾಲಯದ ನ್ಯಾಯಾಧೀಶರು(Judge), ನಟ ಜಯನ್ ಅಭಿನಯಿಸಿರುವ ಅಂಗಡಿ ಚಿತ್ರದ ಕಣ್ಣುಮ್ ಕಣ್ಣುಮ್ ತಮ್ಮಿಲ್ ತಮ್ಮಿಲ್ ಎಂಬ ಹಾಡನ್ನು, ಪೂಜಪ್ಪುರ ಸೆಂಟ್ರಲ್ ಜೈಲಿನ ಖೈದಿಯೊಬ್ಬನಿಗೋಸ್ಕರ ಜೈಲಿನಲ್ಲಿ ಕೇಳಿಸಿದ್ದಾರೆ. ಶನಿವಾರ ಸಂಜೆ, ಪೂಜಪ್ಪುರ ಜೈಲಿನ ರೇಡಿಯೋ ಸ್ಟೇಶನ್‍ನಲ್ಲಿ ಸ್ವಾತಂತ್ರ್ಯ ಸ್ವರ ಮೇಳದಲ್ಲಿ ಕಣ್ಣುಮ್ ಕಣ್ಣುಮ್ ತಮ್ಮಿಲ್ ತಮ್ಮಿಲ್ ಹಾಡನ್ನು ನುಡಿಸಲಾಯಿತು.


ಆದರೆ, ಆ ಹಾಡನ್ನು ಕೇಳಬೇಕೆಂದು ಮನವಿ ಸಲ್ಲಿಸಿದ ಖೈದಿಗೆ ಅದನ್ನು ಕೇಳಲು ಸಾಧ್ಯವಾಗಲೇ ಇಲ್ಲ. ಏಕೆಂದರೆ ಆ ಕೈದಿ ಪೂಜಪ್ಪುರ ಜೈಲಿನಲ್ಲಿ ಅಂದು ಇರಲೇ ಇಲ್ಲ. ಖೈದಿ ಅಂದು ಜೈಲಿನಲ್ಲಿ ಇರಲಿಲ್ಲ ಎಂದರೆ ಓಡಿ ಹೋದನೇ?ಎಂದುಕೊಳ್ಳಬೇಡಿ. ಆತ ಓಡಿ ಹೋಗಿಲ್ಲ, ಬೇರೆ ಜೈಲಿಗೂ ವರ್ಗಾಯಿಸಲ್ಪಟ್ಟಿಲ್ಲ, ಮತ್ತು ಆತ ಸುರಕ್ಷಿತವಾಗಿದ್ದಾನೆ ಕೂಡ.


ಜೈಲಿನಲ್ಲಿ, ಹಾಡು ಕೇಳುವ ಬದಲು, ಹೊರ ಪ್ರಪಂಚದಲ್ಲಿದ್ದು ತನಗಿಷ್ಟ ಬಂದಷ್ಟು ಬಾರಿ ಹಾಡು ಕೇಳುವ ಅದೃಷ್ಟವೀಗ ಆತನದ್ದು. ಅಂದರೆ, ಶಿಕ್ಷೆ ಪೂರ್ಣಗೊಳಿಸಿರುವ ಆತನನ್ನು ಸುಮಾರು ಒಂದು ತಿಂಗಳ ಹಿಂದೆಯೇ ಬಿಡುಗಡೆ ಮಾಡಲಾಗಿದೆ. ಆ ಖೈದಿ, ತಿರುವನಂತಪುರದ ಚನ್ನಂಕರದ ಸ್ಥಳೀಯ ನಿವಾಸಿ. ಆತನನ್ನು ಅಬಕಾರಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಒಂದು ವರ್ಷಗಳ ಕಾಲ ಜೈಲು ಶಿಕ್ಷೆಗೆ ಒಳಪಡಿಸಲಾಗಿತ್ತು.


ಇದನ್ನೂ ಓದಿ: ಸೆಪ್ಟೆಂಬರ್ 17 ರಿಂದ ದಿನಸಿ ಪೂರೈಕೆ ಸ್ಥಗಿತ ಮಾಡಲಿರುವ ಜೊಮ್ಯಾಟೊ

ಪೂಜಪ್ಪುರ ಜೈಲಿನ ರೇಡಿಯೋ ಸ್ಟೇಶನ್‍ನಲ್ಲಿ ‘ಸ್ವಾತಂತ್ರ್ಯ ಸ್ವರಮೇಳ’ ಮೂರು ತಿಂಗಳ ಹಿಂದೆ ಕಾರ್ಯ ನಿರ್ವಹಿಸಲು ಆರಂಭಿಸಿತ್ತು. ‘ಸ್ವಾತಂತ್ರ್ಯ ಸ್ವರಮೇಳ’ ದಲ್ಲಿ ತಮ್ಮ ಮೆಚ್ಚಿನ ಹಾಡನ್ನು ಕೇಳಬೇಕು ಎಂದು ಆಸೆ ಪಡುವ ಖೈದಿಗಳು, ಅದಕ್ಕಾಗಿ ಲಿಖಿತ ಮನವಿ ನೀಡಬೇಕಿತ್ತು. ಆ ಲಿಖಿತ ಮನವಿಯನ್ನು ಜೈಲಿನ ಸ್ಟೋರ್‌ನಲ್ಲಿ ಸಲ್ಲಿಸಬೇಕಿತ್ತು.


ಪೂಜಪ್ಪುರ ಜೈಲಿನ ಖೈದಿಯೊಬ್ಬನಿಗೆ ಜಯನ್ ಅಚ್ಚುಮೆಚ್ಚಿನ ನಟ, ಕಣ್ಣುಮ್ ಕಣ್ಣುಮ್ ತಮ್ಮಿಲ್ ತಮ್ಮಿಲ್ ಅಚ್ಚುಮೆಚ್ಚಿನ ಹಾಡು. ಹಾಗಾಗಿ ತಾನು ಕೂಡ ‘ಸ್ವಾತಂತ್ರ್ಯ ಸ್ವರಮೇಳ’ ಕಾರ್ಯಕ್ರಮದಲ್ಲಿ ಆ ಹಾಡನ್ನು ಕೇಳಲು ಮನವಿ ಸಲ್ಲಿಸಬೇಕೆಂದು ಇಚ್ಚಿಸಿದ ಆ ಖೈದಿ.


ಆದರೆ, ತನ್ನ ನೆಚ್ಚಿನ ಹಾಡಿಗೆ ಮನವಿ ಸಲ್ಲಿಸುವ ತರಾತುರಿಯಲ್ಲಿ, ಆ ಖೈದಿ ಮಾಡಿದ ಎಡವಟ್ಟು , ಆತ ಜೈಲಿನಲ್ಲಿರುವಾಗಲೇ ಅದನ್ನು ಕೇಳುವ ಅವಕಾಶವನ್ನು ತಪ್ಪಿಸಿತು! ಆತ ಮಾಡಿದ ಎಡವಟ್ಟೇನೆಂದರೆ, ತನ್ನ ಮನವಿಯನ್ನು ಜೈಲ್ ಸ್ಟೋರ್‌ಗೆ ಕೊಡುವ ಬದಲು, ಜಿಲ್ಲಾ ನ್ಯಾಯಾಧೀಶರಿಗೆ ದೂರು ಸಲ್ಲಿಸಲು ಇಟ್ಟಿದ್ದ ಬಾಕ್ಸ್‌ನೊಳಗೆ ಹಾಕಿದ್ದು.


ಜಿಲ್ಲಾ ನ್ಯಾಯಾಧೀಶರಿಗೆ ದೂರು ನೀಡುವ ಬಾಕ್ಸನ್ನು ಪ್ರತೀ ತಿಂಗಳ ಏಳನೇ ತಾರೀಖಿಗೆ ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಖೈದಿ ಮನವಿಯನ್ನು ಹಾಕಿದ್ದ ಬಾಕ್ಸ್ ನ್ಯಾಯಾಲಯ ತಲುಪುವ ಸಮಯಕ್ಕೆ, ಆತನಿಗೆ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು.


ಖೈದಿಯ ಮನವಿ ನ್ಯಾಯಾಧೀಶರ ಕೈಗೆ ತಲುಪಿ, ಅವರು ಅದನ್ನು ಜೈಲಿನ ಸುಪರಿಂಟೆಂಡೆಂಟ್‍ಗೆ ಹಸ್ತಾಂತರಿಸಿದ್ದರು. ಜೊತೆಗೆ ಅವನ ನೆಚ್ಚಿನ ಹಾಡು ಕೇಳಬೇಕೆಂಬ ಆತನ ಹಾಡಿನ ಮನವಿ ಈಡೇರಿಸಬೇಕು ಎಂಬ ಸೂಚನೆಯನ್ನೂ ನೀಡಿದ್ದರು.


ಇದನ್ನೂ ಓದಿ: ಐಸ್ ಕ್ರೀಂ ಸವಿದು ನೋಡೊದೇ ಒಂದು ಕೆಲಸ! ಸಂಬಳದ ಬಗ್ಗೆ ಟೆನ್ಷನ್ ಬೇಡ!

ಕೆಲವೊಮ್ಮೆ ಹಾಗೆ ಖೈದಿಗಳು ನ್ಯಾಯಧೀಶರ ಮುಂದೆ ವಿಭಿನ್ನವಾದ ಬೇಡಿಕೆಗಳನ್ನು ಇಡುತ್ತಾರೆ. ಕೆಲವೊಂದು ಬೇಡಿಕೆಗಳನ್ನು ಈಡೇರಿಸಬಹುದು, ಆದರೆ ಕೆಲವೊಂದು ಸಾಧ್ಯವಾಗುವುದಿಲ್ಲ.
First published: