• Home
 • »
 • News
 • »
 • trend
 • »
 • Prince Harry- Meghan Markle: ರಾಜಮನೆತನದಿಂದ ಹೊರಗುಳಿಯಲಿದ್ದಾರಾ ಪ್ರಿನ್ಸ್ ಹ್ಯಾರಿ, ಮೇಘನ್ ಮಾರ್ಕೆಲ್?

Prince Harry- Meghan Markle: ರಾಜಮನೆತನದಿಂದ ಹೊರಗುಳಿಯಲಿದ್ದಾರಾ ಪ್ರಿನ್ಸ್ ಹ್ಯಾರಿ, ಮೇಘನ್ ಮಾರ್ಕೆಲ್?

ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ಮಾರ್ಕೆಲ್‌

ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ಮಾರ್ಕೆಲ್‌

ರಾಜಮನೆತನದಿಂದ ಹ್ಯಾರಿ ಹಾಗೂ ಮೇಘನ್ ಅವರನ್ನು ತೆಗೆದುಹಾಕುವಂತೆ ಕಾಣುತ್ತಿದೆ ಈ ಕುರಿತು ಅವರು ಕಾಳಜಿವಹಿಸಬೇಕು ಎಂಬುದಾಗಿ ರಾಜಮನೆತನದ ಜೀವನಚರಿತ್ರೆಕಾರ ಫಿಲ್ ಡಾಂಪಿಯರ್ ತಿಳಿಸಿದ್ದಾರೆ.

 • Share this:

  ಸಸೆಕ್ಸ್‌ನ ಡ್ಯೂಕ್ ಹಾಗೂ ಡಚೆಸ್‌ ಪ್ರಿನ್ಸ್ ಹ್ಯಾರಿ (Prince Harry) ಹಾಗೂ ಮೇಘನ್ ಮಾರ್ಕೆಲ್ (Meghan Markle) ರಾಜಮನೆತನದಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಳ್ಳುವ ಬಗ್ಗೆ ಚಿಂತಿತರಾಗಿದ್ದಾರೆ ಎಂದು ರಾಜಮನೆತನದಿಂದ ದೊರಕಿರುವ ಸುದ್ದಿಗಳಿಂದ ತಿಳಿದು ಬಂದಿದೆ. ಡ್ಯೂಕ್ ಹಾಗೂ ಡಚೆಸ್ ಅವರ ಹೆಸರನ್ನು ಈ ವಾರ ರಾಜಮನೆತನದ ಅಧಿಕೃತ ವೆಬ್‌ಸೈಟ್‌ನ ಕೆಳಭಾಗಕ್ಕೆ ಸರಿಸಲಾಗಿದ್ದು, ರಾಜಕುಮಾರ ಆ್ಯಂಡ್ರ್ಯೂ ಹೆಸರಿನ ಮೇಲಿರಿಸಲಾಗಿದೆ.


  ಕೆಳಕ್ಕಿಳಿದ ಹ್ಯಾರಿ ದಂಪತಿಗಳ ಸ್ಥಾನ


  ಅವಮಾನಿತ ಪ್ರಿನ್ಸ್ ಆ್ಯಂಡ್ರ್ಯೂ ಅವರ ಹೆಸರಿನೊಂದಿಗೆ ಪ್ರಿನ್ಸ್ ಹ್ಯಾರಿ ಹಾಗೂ ಮೇಘನ್ ಮಾರ್ಕೆಲ್ ಹೆಸರುಗಳನ್ನು ರಾಜಮನೆತನದ ಸದಸ್ಯರ ಪಟ್ಟಿಯಲ್ಲಿ ಕೆಳಕ್ಕೆ ತಳ್ಳಲಾಗಿದೆ ಎಂದು ವರದಿಯಿಂದ ತಿಳಿದು ಬಂದಿದೆ. ಅಲ್ಲದೇ, ಪಟ್ಟಿಯಲ್ಲಿ ಮೇಲ್ದರ್ಜೆಗೆ ಏರುವ ಯಾವುದೇ ಅವಕಾಶ ಹೊಂದಿಲ್ಲ ಎಂಬುದು ಇಲ್ಲಿ ಮುಖ್ಯವಾದುದು ಎಂದು ವರದಿ ತಿಳಿಸಿದೆ


  ರಾಜಮನೆತನದಿಂದ ಹ್ಯಾರಿ ಹಾಗೂ ಮೇಘನ್ ಅವರನ್ನು ತೆಗೆದುಹಾಕುವಂತೆ ಕಾಣುತ್ತಿದೆ ಈ ಕುರಿತು ಅವರು ಕಾಳಜಿವಹಿಸಬೇಕು ಎಂಬುದಾಗಿ ರಾಜಮನೆತನದ ಜೀವನಚರಿತ್ರೆಕಾರ ಫಿಲ್ ಡಾಂಪಿಯರ್ ತಿಳಿಸಿದ್ದಾರೆ. ಕಿಂಗ್ ಚಾರ್ಲ್ಸ್ ಅವರು ಹ್ಯಾರಿ ಹಾಗೂ ಮೇಘನ್ ಮಕ್ಕಳಾದ ಆರ್ಚಿ (3) ಲಿಲಿಬೆಟ್ (1) ಮಕ್ಕಳಿಗೆ ಪ್ರಿನ್ಸ್ ಹಾಗೂ ಪ್ರಿನ್ಸಸ್ ಬಿರುದನ್ನು ನೀಡದಿರಬಹುದು. ಇದಕ್ಕೆ ಕಾರಣ ಹ್ಯಾರಿ ಹಾಗೂ ಮೇಘನ್ ರಾಜಮನೆತನದ ಕಾರ್ಯಗಳಿಂದ ದೂರವಿರುವುದು ಎಂದು ಫಿಲ್ ತಿಳಿಸಿದ್ದಾರೆ.


  1917 ರಲ್ಲಿ ಕಿಂಗ್ ಜಾರ್ಜ್ V ಸ್ಥಾಪಿಸಿದ ನಿಯಮಗಳ ಅಡಿಯಲ್ಲಿ ರಾಯಲ್ ಹೈನೆಸ್ ಬಿರುದು ಮತ್ತು ರಾಜಕುಮಾರ ಅಥವಾ ರಾಜಕುಮಾರಿಯ ಬಿರುದನ್ನು ಸ್ವಯಂಚಾಲಿತವಾಗಿ ಸಾರ್ವಭೌಮ ಸಂತತಿ ಮತ್ತು ಮೊಮ್ಮಕ್ಕಳಿಗೆ ನೀಡಲಾಗುತ್ತದೆ.


  ರಾಜಮನೆತನದ ವೆಬ್‌ಸೈಟ್‌ನಲ್ಲಿ ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ಮಾರ್ಕೆಲ್ ಅವರ ಹೆಸರುಗಳನ್ನು ಸದಸ್ಯರ ಪಟ್ಟಿಯಿಂದ ಕೆಳಭಾಗಕ್ಕೆ ತಳ್ಳಿರುವ ಘಟನೆಯನ್ನು ಡಾಂಪಿಯರ್ ಉಲ್ಲೇಖಿಸಿದ್ದಾರೆ. ಸಸೆಕ್ಸ್‌ನ ಡ್ಯೂಕ್ ಮತ್ತು ಡಚೆಸ್ ಇನ್ನೂ ಕುಟುಂಬದ ಸದಸ್ಯರಾಗಿದ್ದರೂ, ಅವರ ಗುರುತನ್ನು ಇದೀಗ ಎಲ್ಲಾ ಸದಸ್ಯರಿಗಿಂತ ಕೆಳಕ್ಕೆ ಮಾಡಲಾಗಿದೆ. ಡಾಂಪಿಯರ್ ತಿಳಿಸಿರುವಂತೆ ಹ್ಯಾರಿ ಹಾಗೂ ಮೇಘನ್ ಕಾರ್ಯನಿರತ ರಾಜಮನೆತನದವರಂತೆ ಕಾಣುತ್ತಿಲ್ಲ ಎಂಬುದು ಡಾಂಪಿಯರ್ ತಿಳಿಸಿದ್ದಾರೆ


  ಇದನ್ನೂ ಓದಿ: Viral Video: ಬರಿಗೈಲಿ ಟಾಯ್ಲೆಟ್ ಕ್ಲೀನ್ ಮಾಡಿದ ಬಿಜೆಪಿ ಸಂಸದ! ವಿಡಿಯೋ ಫುಲ್ ವೈರಲ್


  ರಾಣಿಯ ಅಂತಿಮ ವೀಕ್ಷಣೆಗೆ ಅನುಮತಿಸಿರಲಿಲ್ಲ


  ರಾಣಿ ಮರಣಶಯ್ಯೆಯಲ್ಲಿರುವಾಗ ಕಿಂಗ್ ಚಾರ್ಲ್ಸ್ ಹ್ಯಾರಿ ದಂಪತಿಗಳನ್ನು ಅಂತಿಮ ವೀಕ್ಷಣೆಗೆ ಅವಕಾಶ ನೀಡಿರಲಿಲ್ಲ ಎಂಬ ವದಂತಿಗಳೂ ಇದೆ. ರಾಜಕುಮಾರ ಹ್ಯಾರಿ ಸೇರಿದಂತೆ ರಾಜಮನೆತನದ ಹಿರಿಯ ಸದಸ್ಯರು ರಾಣಿಯ ಅನಾರೋಗ್ಯದ ಸುದ್ದಿಯ ನಂತರ ಸ್ಕಾಟ್ಲೆಂಡ್‌ಗೆ ಪ್ರಯಾಣ ಬೆಳೆಸಿದರು. ದ ಕಿಂಗ್ ಬಿರುದಿಗೆ ಭಾಜನರಾಗುವ ಚಾರ್ಲ್ಸ್, ಮೇಘನ್ ಮಾರ್ಕೆಲ್ ಬಾಲ್ಮೋರಲ್ ಕ್ಯಾಸಲ್‌ಗೆ ಪ್ರಯಾಣಿಸುವುದಿಲ್ಲ. ಲಂಡನ್‌ನಲ್ಲಿಯೇ ಉಳಿಯುತ್ತಾರೆ ಎಂದು ನಿರ್ಧರಿಸಿದರು. ಏಕೆಂದರೆ ಮೇಘನ್ ರಾಣಿಯನ್ನು ಭೇಟಿ ಮಾಡುವುದು ಅನುಚಿತ ಎಂಬುದಾಗಿ ಪರಿಗಣಿಸಲಾಗಿತ್ತು.


  ರಾಣಿ ಹ್ಯಾರಿ ಹಾಗೂ ಮೇಘನ್‌ಗೆ ಯಾವ ಸಂದೇಶವನ್ನು ನೀಡಿದ್ದರು


  ಚಾರ್ಲ್ಸ್ ಅವರು ದಿ ಕಿಂಗ್ ಪಟ್ಟ ಅಲಂಕರಿಸಿದ ಸ್ವಲ್ಪ ಸಮಯದ ನಂತರ ದೂರದರ್ಶನದ ಭಾಷಣದಲ್ಲಿ ಹ್ಯಾರಿ ಹಾಗೂ ಮೇಘನ್‌ಗೆ ಸಂದೇಶವನ್ನು ನೀಡಿ, ವಿದೇಶದಲ್ಲಿ ಜೀವನ ನಿರ್ವಹಿಸುತ್ತಿರುವ ಹ್ಯಾರಿ ದಂಪತಿಗಳಿಗೆ ನನ್ನ ಪ್ರೀತಿಯನ್ನು ವ್ಯಕ್ತಪಡಿಸಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.


  ಇದನ್ನೂ ಓದಿ: PFI ವಿರುದ್ಧ ದಾಳಿ ನಡೆಸಿದ್ದೇಕೆ ಇಡಿ? ಮೋದಿ ವಿರುದ್ಧ ಸಂಚು, ಪಾಟ್ನಾ ರ್‍ಯಾಲಿ ರಹಸ್ಯ ಬಿಚ್ಚಿಟ್ಟ ಅಧಿಕಾರಿಗಳು


  ರಾಜಮನೆತನದಿಂದ ಹೊರನಡೆದ ನಂತರ ಸಾರ್ವಜನಿಕ ಜೀವನ ನಡೆಸುತ್ತಿರುವ ಸಮಯದಲ್ಲಿ ಜವಾಬ್ದಾರಿಗಳು ಮತ್ತು ಕರ್ತವ್ಯಗಳನ್ನು ಮುಂದುವರಿಸುವುದು ಅಸಾಧ್ಯವೆಂದು ತಿಳಿಯಪಡಿಸಿದ ರಾಣಿ, ಮೇಘನ್ ಹಾಗೂ ಹ್ಯಾರಿ ಒಂದಾ ರಾಜಮನೆತನದಲ್ಲಿರಬೇಕು ಇಲ್ಲದಿದ್ದರೆ ಹೊರನಡೆಯಬೇಕು ಎಂದು ಸ್ಪಷ್ಟಪಡಿಸಿದ್ದರು ಎಂದು ಡ್ಯಾಂಪಿಯರ್ ತಿಳಿಸಿದ್ದಾರೆ. ಇನ್ನು ಇದೇ ರೀತಿಯಲ್ಲೇ ಕಿಂಗ್ ಚಾರ್ಲ್ಸ್ ಹಾಗೂ ಪ್ರಿನ್ಸ್ ವಿಲಿಯಮ್ ಭಾವಿಸುತ್ತಾರೆ ಎಂಬುದು ಡ್ಯಾಂಪಿಯರ್ ಹೇಳಿಕೆಯಾಗಿದೆ.

  Published by:Seema R
  First published: