ಮ್ಯಾನ್ಮಾರ್: 99 ಮಿಲಿಯನ್ ವರ್ಷಗಳಷ್ಟು (99 Million Years Old) ಹಿಂದೆ ಇದ್ದ ಹೂವಿನ (Flowers) ಪ್ರಬೇಧವನ್ನು ಸಂಶೋಧಕರು ಸಂರಕ್ಷಿಸಿ ಇಟ್ಟಿದ್ದಾರೆ. ಹೌದು ಬರ್ಮೀಸ್ ಅಂಬರ್ನಲ್ಲಿ (Burmese Amber) ಬರೊಬ್ಬರಿ 99 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಎರಡು ಹೂವುಗಳನ್ನು ಸಂರಕ್ಷಿಸಿಡಲಾಗಿದೆ. ಈ ಹೂವುಗಳನ್ನು'ಇಯೋಫಿಲಿಕಾ ಪ್ರಿಸ್ಕಾಟೆಲ್ಲಾಟಾ' ಮತ್ತು 'ಫಿಲಿಕಾ ಪಿಲೋಬರ್ಮೆನ್ಸಿಸ್' ಎಂದು ಹೆಸರಿಸಲಾಗಿದೆ.ಈ ಎರಡು ಹೂವುಗಳು ಈಗಿನ ಮ್ಯಾನ್ಮಾರ್ (Myanmar) ಪ್ರದೇಶದಲ್ಲಿ ಅರಳಿದ್ದವು ಎಂದು ಸಂಬಂಧ ಪಟ್ಟ ಅಧ್ಯಯನವು ಬಹಿರಂಗಪಡಿಸಿದೆ, ಸಂಶೋಧನೆಯ ಲೇಖಕರು ಹೇಳುವ ಪ್ರಕಾರ ಎರಡು ಹೂವುಗಳು ಆಧುನಿಕ ಹೂವಿನ ಸಂಬಂಧಿಗಳಿಗೆ ಹೋಲುತ್ತವೆ ಎಂದು ಹೇಳಿದ್ದಾರೆ. 2016ರ ಮೊದಲು ಕೆಲವು ಸ್ಥಳೀಯ ಮಾರಾಟಗಾರರಿಂದ ಅಂಬರ್ ಅನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಬರ್ಮೀಸ್ ಅಂಬರ್ ಅನ್ನು ಬರ್ಮೈಟ್ ಅಥವಾ ಕಚಿನ್ ಅಂಬರ್ ಎಂದೂ ಕರೆಯಲಾಗುತ್ತದೆ, ಇದು ಉತ್ತರ ಮ್ಯಾನ್ಮಾರ್ನಹುಕಾಂಗ್ ಕಣಿವೆಯಿಂದ ಅಂಬರ್ ಆಗಿದೆ.
99 ಮಿಲಿಯನ್ ವರ್ಷಗಳಷ್ಟು ಪುರಾತನ ಹೂವುಗಳು
ಹೊಸ ಅಧ್ಯಯನದ ಪ್ರಕಾರ ಬರ್ಮೀಸ್ ಅಂಬರ್ನ ಪ್ರದೇಶದಲ್ಲಿ ಸಂಪೂರ್ಣವಾಗಿ ಸಂರಕ್ಷಿಸಲ್ಪಟ್ಟ ಈ ಎರಡು ಹೂವುಗಳು 99 ಮಿಲಿಯನ್ ವರ್ಷಗಳಷ್ಟು ಹಳೆಯವು ಎಂದು ಅಂದಾಜಿಸಲಾಗಿದೆ. ಸಂಶೋಧನೆಗಳ ಪ್ರಕಾರ, ಎರಡು ಹೂವುಗಳು ಒಮ್ಮೆಈಗಿನ ಮ್ಯಾನ್ಮಾರ್ನಲ್ಲಿರುವ ಡೈನೋಸಾರ್ಗಳ ಪಾದಗಳಲ್ಲಿ ಅರಳಿದವು. ಸಂಪೂರ್ಣವಾಗಿ ಸಂರಕ್ಷಿಸಲ್ಪಟ್ಟ ಈ ಹೂವುಗಳ ಸಸ್ಯಗಳು ಹೇಗೆ ವಿಕಸನಗೊಂಡಿತು ಎಂಬುದರ ಮೇಲೆ ಬೆಳಕು ಚೆಲ್ಲುತ್ತದೆ ಸಂಶೋಧಕರ ಈ ವರದಿ.
ಅಧ್ಯಯನ ಕೈಗೊಂಡ ಲೇಖಕರು ಹೇಳೋದೇನು?
ಹೂವುಗಳ ಬಗ್ಗೆ ಅಧ್ಯಯನ ಮಾಡಿದ ಲೇಖಕ ರಾಬರ್ ಸ್ಪೈಸರ್ ಹೇಳಿರುವ ಪ್ರಕಾರ ಎಲೆಗಳು ಹೂವುಗಳಿಗಿಂತ ಹೆಚ್ಚು ದೃಢವಾಗಿರುತ್ತವೆ ಮತ್ತು ಆದ್ದರಿಂದ ಹೆಚ್ಚಿನ ಸಂರಕ್ಷಣೆ ಸಾಮರ್ಥ್ಯವನ್ನು ಹೊಂದಿವೆ ಎಂದು ತಿಳಿಸಿದ್ದಾರೆ. ರಾಬರ್ಟ್ ಸ್ಪೈಸರ್ ಯುಕೆಯಲ್ಲಿನ ಓಪನ್ ಯೂನಿವರ್ಸಿಟಿಯಲ್ಲಿ ಸ್ಕೂಲ್ ಆಫ್ ಎನ್ವಿರಾನ್ಮೆಂಟ್, ಅರ್ಥ್ ಮತ್ತು ಇಕೋಸಿಸ್ಟಮ್ ಸೈನ್ಸಸ್ನಲ್ಲಿ ಗೌರವಾನ್ವಿತ ಪ್ರೊಫೆಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಸಂರಕ್ಷಿಸಲ್ಪಟ್ಟ ಹೂವಿನ ಅಧ್ಯಯನವನ್ನು ಕೂಲಂಕುಷವಾಗಿ ಮಾಡುತ್ತಿದ್ದಾರೆ.
ಇದನ್ನೂ ಓದಿ: Swedenನಲ್ಲಿ ಕಾಗೆಗಳಿಗೆ ರಸ್ತೆಯಲ್ಲಿರುವ ಸಿಗರೇಟ್ ತುಂಡನ್ನು ಸಂಗ್ರಹಿಸುವ ಕೆಲಸ - ಸಂಬಳದ ಬದಲಿಗೆ ಊಟ ಮಾತ್ರ
ಅಂಬರ್ನಲ್ಲಿ ಕಂಡುಬರುವ ಹೂವುಗಳು ಈಗಿನ ಹೂವಿನ ಪ್ರಭೇದಗಳಿಗೆ ಯಾವುದೇ ಪ್ರಮುಖ ವ್ಯತ್ಯಾಸಗಳಿಲ್ಲದೆ ಬಹುತೇಕ ಹೋಲುತ್ತವೆ ಎಂದು ಅವರು ಹೇಳಿದ್ದಾರೆ. "ಹೂಬಿಡುವ ಸಸ್ಯಗಳು ಇತರೆ ಸಸ್ಯಗಳ ಸಂಕೀರ್ಣವಾದ ಸಂತಾನೋತ್ಪತ್ತಿ ಕಾರ್ಯವಿಧಾನಗಳನ್ನು ಹೊಂದುವುದಕ್ಕಿಂತ ಹೆಚ್ಚು ವೇಗವಾಗಿ ಸಂತಾನೋತ್ಪತ್ತಿ ಮಾಡುತ್ತವೆ. ವಿವಿಧ ರೀತಿಯ ಹೂವಿನ ರೂಪಗಳು, ಉದಾಹರಣೆಗೆ, ಪರಾಗಸ್ಪರ್ಶಕಗಳೊಂದಿಗೆ ನಿಕಟ ಸಹಭಾಗಿತ್ವ,ಇದು ಸಸ್ಯಗಳು ಮತ್ತು ಪ್ರಾಣಿಗಳ ಅನೇಕ ವಂಶಾವಳಿಗಳ ಪರಸ್ಪರ ಸಹಜೀವನವನ್ನು ನಡೆಸುತ್ತದೆ ಮತ್ತು ಪರಿಸರ ವ್ಯವಸ್ಥೆಗಳನ್ನು ರೂಪಿಸುತ್ತದೆ ಎಂದು ಸ್ಪೈಸರ್ ಹೇಳಿದ್ದಾರೆ.
ಈ ಅಪರೂಪದ ಹೂವುಗಳು ಯಾವುವು?
ಸಂರಕ್ಷಿಸಲ್ಪಟ್ಟ ಹೂವುಗಳಲ್ಲಿ ಒಂದನ್ನು ಸಂಶೋಧಕರು 'ಇಯೋಫಿಲಿಕಾ ಪ್ರಿಸ್ಕಾಟೆಲ್ಲಾಟಾ' ಎಂದು ಹೆಸರಿಸಿದ್ದಾರೆ. ಇನ್ನೊಂದಕ್ಕೆ 'ಫಿಲಿಕಾ ಪೈಲೋಬರ್ಮೆನ್ಸಿಸ್' ಎಂದು ಹೆಸರಿಸಲಾಗಿದೆ. ಅರೆ-ಶುಷ್ಕ ಭೂದೃಶ್ಯಗಳಲ್ಲಿ ಅನೇಕ ಆರಂಭಿಕ ಹೂವುಗಳು ಬೆಂಕಿಗೆ ಒಡ್ಡಿಕೊಂಡಿವೆ ಎಂದು ಸ್ಪೈಸರ್ ತಿಳಿಸಿದ್ದಾರೆ. ಹೂವುಗಳು ವಿಕಸನಗೊಳ್ಳಲು ದೀರ್ಘಕಾಲದವರೆಗೆ ಬೆಂಕಿಯು ಆಗಾಗ್ಗೆ ಸಂಭವಿಸುತ್ತಿರಬೇಕು ಎಂದಿದ್ದಾರೆ.
ಡೈನೋಸಾರ್ ಯುಗದ ಅಂಬರ್ ಪಳೆಯುಳಿಕೆಗಳು ಹೆಚ್ಚಾಗಿ ನಿಕ್ಷೇಪಗಳು ಉತ್ತರ ಮ್ಯಾನ್ಮಾರ್ನ ಕಚಿನ್ ರಾಜ್ಯದಲ್ಲಿ ಮಾತ್ರ ಲಭ್ಯವಿವೆ. ಇಂತಹ ಹೂವುಗಳನ್ನು ಹೊಂದಿರುವ ಅಂಬರ್ ಅನ್ನು 2016ರ ಮೊದಲು ಕೆಲವು ಸ್ಥಳೀಯ ಮಾರಾಟಗಾರರಿಂದ ಸ್ವಾಧೀನಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: Viral Story: ಮ್ಯಾಜಿಕ್ ಮಂತ್ರಕ್ಕೆ ತಬ್ಬಿಬ್ಬಾಯ್ತು ಮಂಗ, ಮೃಗಾಲಯದಲ್ಲಿ ಇದೆಂಥಾ ಆಟ ಎಂದ್ರು ನೆಟ್ಟಿಗರು
ಅತ್ತ ಚೀನಾದಲ್ಲೂ ಸಿಕ್ಕಿದೆ ಡೈನೋಸಾರ್ ಬ್ರೂಣ!
ಸಂಪೂರ್ಣವಾಗಿ ಸಂರಕ್ಷಿಸಲ್ಪಟ್ಟ ಪುರಾತನ ವಿಷಯಗಳ ಕುರಿತು ನೋಡುವುದಾದರೆ, ಚೀನಾದ ವಿಜ್ಞಾನಿಗಳು ಕಳೆದ ವರ್ಷ ಗನ್ಝೌನಲ್ಲಿ ಪಳೆಯುಳಿಕೆಗೊಂಡ ಮೊಟ್ಟೆಯಿಂದ ಡೈನೋಸಾರ್ ಭ್ರೂಣದ ಆವಿಷ್ಕಾರವನ್ನು ಘೋಷಿಸಿದರು.
ವಿಜ್ಞಾನಿಗಳು ಎಣಿಸಿದ ಮಾದರಿಯು ಕೋಳಿಯಂತೆಯೇ ಮೊಟ್ಟೆಯೊಡೆಯಲು ತಯಾರಿ ನಡೆಸುತ್ತಿದೆ, ಇದುವರೆಗೆ ಕಂಡುಹಿಡಿದ ಸಂಪೂರ್ಣ ಡೈನೋಸಾರ್ ಭ್ರೂಣಗಳಲ್ಲಿ ಇದು ಒಂದಾಗಿದೆ. 72 ರಿಂದ 66 ಮಿಲಿಯನ್ ವರ್ಷಗಳಷ್ಟು ಹಳೆಯದು ಎಂದು ಭಾವಿಸಲಾದ ಭ್ರೂಣಕ್ಕೆ ಬೇಬಿ ಯಿಂಗ್ಲಿಯಾಂಗ್ ಎಂದು ಹೆಸರಿಸಲಾಯಿತು.
ವಿಜ್ಞಾನಿಗಳು ಯಿಂಗ್ಲಿಯಾಂಗ್ ಮಗುವನ್ನು ಹಲ್ಲಿಲ್ಲದ ಥೆರೋಪಾಡ್ ಡೈನೋಸಾರ್ ಅಥವಾ ಓವಿರಾಪ್ಟೋರೋಸಾರ್ ಎಂದು ತೀರ್ಮಾನಿಸಿದರು. ಮೊಟ್ಟೆಯು 7cm-ಉದ್ದ ಮತ್ತು 8cm-ಅಗಲ, ಮತ್ತು ಅಸ್ಥಿಪಂಜರವು 24cm ಉದ್ದವಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ