• Home
  • »
  • News
  • »
  • trend
  • »
  • Trending News: ಬೆಲೆ ಗೊತ್ತಿಲ್ಲದೆ ಐಪೋನ್​ ಬೇಡಿಕೆ ಇಟ್ಟ ಇಂಡಿಯನ್​ ಅತ್ತೆ! ಮುಂದೇನಾಯ್ತು ನೋಡಿ

Trending News: ಬೆಲೆ ಗೊತ್ತಿಲ್ಲದೆ ಐಪೋನ್​ ಬೇಡಿಕೆ ಇಟ್ಟ ಇಂಡಿಯನ್​ ಅತ್ತೆ! ಮುಂದೇನಾಯ್ತು ನೋಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಮಕ್ಕಳಿಗಾಗಿ ಅದೆಷ್ಟೋ ತಂದೆ ತಾಯಿ ಕಷ್ಟ ಪಟ್ಟಿರುತ್ತಾರೆ. ತಮ್ಮದೆಲ್ಲವನ್ನೂ ಕಡೆಗಣಿಸಿ ಅವರನ್ನು ಬೆಳೆಸಿರುತ್ತಾರೆ. ಕೆಲವೊಮ್ಮೆ ಏನನ್ನೋ ಕೇಳಿದರು ಎಂದ ಮಾತ್ರಕ್ಕೆ ದೂಷಿಸುವುದೂ ಸರಿಯಲ್ಲ.

  • Share this:

ವಿದೇಶದಲ್ಲಿ ನೆಲೆಸಿದ್ದಾರೆ ಅಂದರೆ ಅವರು ಶ್ರೀಮಂತರಾಗಿರ್ತಾರೆ (Rich), ಸಾಕಷ್ಟು ಗಳಿಸ್ತಾರೆ ಅಂತ ಅಂದುಕೊಳ್ಳೋದು ಸಾಮಾನ್ಯ. ಪೌಂಡ್‌ ಗಳಲ್ಲಿ, ಡಾಲರ್‌ ಗಳಲ್ಲಿ ಸ್ಯಾಲರಿ (Salary) ಪಡೆದು ಆರಾಮಾಗಿರ್ತಾರೆ ಎಂದುಕೊಳ್ಳುತ್ತಾರೆ. ಅನೇಕರ ಮಟ್ಟಿಗೆ ಇದು ಸತ್ಯವಾದರೂ ಹಲವರ ಪರಿಸ್ಥಿತಿ ಇದಕ್ಕೆ ವಿರುದ್ಧವಾಗಿರುತ್ತದೆ. ಪ್ರತಿಯೊಬ್ಬರೂ ಅಲ್ಲಿ ತಮ್ಮದೇ ಜೀವನದ (Life) ಕ್ಲಿಷ್ಟಕರ ಪರಿಸ್ಥಿತಿಯೊಂದಿಗೆ ಹೋರಾಡುತ್ತಿರುತ್ತಾರೆ. ಇತ್ತೀಚೆಗೆ, ಕೆನಡಾದ ಮಹಿಳೆಯೊಬ್ಬರು ರೆಡ್‌ಇಟ್‌ ವೆಬ್‌ ಸೈಟ್‌ ನಲ್ಲಿ ತಮ್ಮ ವಿಚಿತ್ರ ಪರಿಸ್ಥಿತಿಯ ಬಗ್ಗೆ ಹೇಳಿಕೊಂಡಿದ್ದಾರೆ. 'ನನಗೆ ಅರ್ಥಮಾಡಿಕೊಳ್ಳಲು ಸಹಾಯ (Healp) ಮಾಡಿ' ಎಂದು ಕೇಳಿಕೊಂಡಿದ್ದಾರೆ.


ಅವರು ತಮ್ಮ ಪೋಸ್ಟ್‌ನಲ್ಲಿ, "ನಾನು ಕೆನಡಿಯನ್ ಮತ್ತು ನನ್ನ ಪತಿ ಭಾರತೀಯ. ನಾವು ಕೆನಡಾದಲ್ಲಿ ವಾಸಿಸುತ್ತಿದ್ದೇವೆ ಮತ್ತು ಅವರ ಕುಟುಂಬವು ಭಾರತದಲ್ಲಿದೆ. ನಮಗೆ ಕೆಲವೇ ವಾರಗಳಲ್ಲಿ ಮಗುವಾಗುತ್ತಿದೆ. ನಾವು ಶ್ರೀಮಂತರು, ಚೆನ್ನಾಗಿ ಗಳಿಸುತ್ತಿದ್ದೇವೆ ಎಂದು ಅವರ ಕುಟುಂಬದವರು ಅಂದುಕೊಂಡಿದ್ದಾರೆ.


ಮಗುವಿಗಾಗ ಹಣ ಹೂಡಿಕೆ
ಆದ್ರೆ ವಾಸ್ತವದಲ್ಲಿ, ನಾವು ತುಂಬಾ ಮಿತವ್ಯಯಿಗಳು. ಮಗು ಆಗುತ್ತಿರುವುದರಿಂದ ಅಲ್ಪ ಸ್ವಲ್ಪ ಉಳಿತಾಯ ಮಾಡಿಕೊಂಡಿದ್ದೇವೆ. ಇಂದು ಗಂಡನ ಪೋಷಕರು ನಮಗೆ 2 ಐಫೋನ್‌ಗಳನ್ನು ಉಡುಗೊರೆಯಾಗಿ ಖರೀದಿಸಲು ಕೇಳಿದರು. ನನ್ನ ಪತಿ ನಿಜವಾಗಿಯೂ ಅದನ್ನು ಖರೀದಿ ಮಾಡಲು ನಿರ್ಧರಿಸಿರುವುದು ನನಗೆ ಶಾಕ್‌ ಆಗಿದೆ" ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಅವರು ಮಗು ಆಗುತ್ತಿದೆ ಎಂದಾಕ್ಷಣ ದೊಡ್ಡ ಉಡುಗೊರೆಗಳನ್ನು ಕೇಳುವುದು ಸಾಮಾನ್ಯವೇ ಎಂದು ರೆಡ್‌ ಇಟ್‌ ಬಳಕೆದಾರರನ್ನು ಕೇಳಿದ್ದರು.


ಜನರು ಮಾಡಿದ ಕಾಮೆಂಟ್‌ ನೋಡಿ
ಕೆನಡಿಯನ್‌ ಮಹಿಳೆಯ ಈ ಪೋಸ್ಟ್‌ ಗೆ ಸಾಕಷ್ಟು ಜನರು ಕಾಮೆಂಟ್‌ ಮಾಡಿದ್ದಾರೆ. ಕೆಲವರು ಆಕೆಯ ಅತ್ತೆ ಮಾವನನ್ನು ಟೀಕಿಸಿದ್ದಾರೆ. ಇನ್ನೂ ಕೆಲವರು ಸಮಯೋಜಿತ ಸಲಹೆ ನೀಡಿದ್ದಾರೆ.ಅದರಲ್ಲಿ ಒಬ್ಬರು ಬರೆದಿದ್ದಾರೆ, ಇಂಥ ಸಮಯದಲ್ಲಿ ಯಾರು ಉಡುಗೊರೆಗಳನ್ನು ಕೇಳುತ್ತಾರೆ? ಅವರಿಗೆ ಹೇಳಿ "ಅಮ್ಮಾ, ಅಪ್ಪಾ ನಾವು ನಿಮಗೆ ಕೊಡಬಹುದಾದ ಅತ್ಯುತ್ತಮ ಉಡುಗೊರೆಯೆಂದರೆ ನಿಮ್ಮ ಮೊಮ್ಮಗು ಎಂದು ಹೇಳಿ ಅಂತ. ಇನ್ನೊಬ್ಬರು, "ಇದು ತುಂಬಾ ವಿಚಿತ್ರವಾಗಿದೆ" ಎಂದಿದ್ದಾರೆ.


ಇದನ್ನೂ ಓದಿ: Video Viral: ರಸ್ತೆ ಮಧ್ಯೆ ಇದ್ದ ಮ್ಯಾನ್‌ಹೋಲ್‌ ಓಪನ್, ಅಪಾಯ ತಪ್ಪಿಸಲು ಈ ಮಕ್ಕಳು ಮಾಡಿದ್ದೇನು ಗೊತ್ತಾ?


ಸೆಕೆಂಡ್ ಹ್ಯಾಂಡ್ ಐಫೋನ್‌ ಉಡುಗೊರೆ
ಮತ್ತೊಬ್ಬರು, 'ನಾನು ಮೊದಲ ಬಾರಿಗೆ ಇಂತಹದನ್ನು ನೋಡುತ್ತಿರುವುದು. ನಿಮ್ಮ ಪತಿ ಅವರ ಪೋಷಕರಿಗೆ ಐಫೋನ್‌ಗಳನ್ನು ಉಡುಗೊರೆಯಾಗಿ ನೀಡಲು ತುಂಬಾ ಉತ್ಸುಕನಾಗಿದ್ದರೆ, ಅವರಿಗೆ ಸೆಕೆಂಡ್ ಹ್ಯಾಂಡ್ ಐಫೋನ್‌ಗಳನ್ನು ಉಡುಗೊರೆಯಾಗಿ ನೀಡಲು ಹೇಳಿ. ಅದು ನಿಮಗೆ ಸ್ವಲ್ಪ ಹಣವನ್ನು ಉಳಿಸುತ್ತದೆ' ಎಂದು ಸಲಹೆ ನೀಡಿದ್ದಾರೆ.


ಇನ್ನೊಬ್ಬ ರೆಡ್‌ ಇಟ್‌ ಬಳಕೆದಾರರು, "ದಯವಿಟ್ಟು ಸಂಸ್ಕೃತಿ, ಸಂವೇದನಾಶೀಲತೆ ಹೆಸರಿನಲ್ಲಿ ಅತ್ತೆಮಾವನ ಮೂರ್ಖತನದ ಬೇಡಿಕೆಗಳಿಗೆ ಸಮ್ಮತಿಸಬೇಡಿ. ಸಮಸ್ಯೆಯ ಭಾಗವೆಂದರೆ ನಿಮ್ಮ ಪತಿ ಸ್ಪಷ್ಟವಾಗಿ ತಿಳಿಸಿ ಹೇಳದೇ ಇರುವುದು. ಅವನ ಹೆತ್ತವರಿಗೆ ಅವನ ಆರ್ಥಿಕ ಸ್ಥಿತಿ ಬಗ್ಗೆ ಮಾಹಿತಿ ನೀಡದೇ ಇರುವುದು. ಪ್ರಸ್ತುತ ಕ್ಷಣದಲ್ಲಿ ಐಫೋನ್‌ ಗಳನ್ನು ತೆಗೆಸಿಕೊಡಲು ಸಾಧ್ಯವಿಲ್ಲ ಎಂದು ಅವರಿಗೆ ಹೇಳಲು ಹೇಳಿ" ಎಂದು ಸಲಹೆ ನೀಡಿದ್ದಾರೆ.


ರೆಡ್‌ ಇಟ್‌ ಬಳಕೆದಾರರ ಸಲಹೆ
ಅಲ್ಲದೇ, ಕೆಲವೊಮ್ಮ ಪೋಷಕರು ಮಕ್ಕಳಿಗಾಗಿ ಸಾಲ ಮಾಡುವುದು ಸೇರಿದಂತೆ ಬಹಳಷ್ಟು ತ್ಯಾಗ ಮಾಡಿರುತ್ತಾರೆ. ಇದು ಅನಾರೋಗ್ಯಕರ ನಿರೀಕ್ಷೆಗಳನ್ನು ಹೊಂದುವಂತೆ ಮಾಡಿರುತ್ತದೆ ಎಂದಿದ್ದಾರೆ.


ಬಳಿಕ ರೆಡ್‌ ಇಟ್‌ ಬಳಕೆದಾರರು ನೀಡಿದ ಸಲಹೆಗಳಿಗೆ ಧನ್ಯವಾದ ಅರ್ಪಿಸಿರುವ ಮಹಿಳೆ, ಅವರು ಈಗ "ಕೆಲವು ಕಡಿಮೆ ಬೆಲೆಯ, ನವೀಕರಿಸಿದ ಫೋನ್‌ಗಳನ್ನು (ಬಹುಶಃ ಸ್ಯಾಮ್‌ಸಂಗ್ ಮತ್ತು ಅವರು ಬಯಸಿದಂತೆ ಐಫೋನ್ ಅಲ್ಲ) ಖರೀದಿಸುವ ಮೂಲಕ ರಾಜಿ ಮಾಡಿಕೊಳ್ಳುತ್ತಿದ್ದಾರೆ. ಅದನ್ನು ತನ್ನ ಪೋಷಕರಿಗಾಗಿ ಭಾರತಕ್ಕೆ ಕಳುಹಿಸುತ್ತಿದ್ದಾರೆ" ಎಂದು ಬರೆದುಕೊಂಡಿದ್ದಾರೆ.


ಆರ್ಥಿಕ ಪರಿಸ್ಥಿತಿ ಅರ್ಥಮಾಡಿಸಿ
ಒಟ್ಟಾರೆ, ಮಕ್ಕಳಿಗಾಗಿ ಅದೆಷ್ಟೋ ತಂದೆ ತಾಯಿ ಕಷ್ಟ ಪಟ್ಟಿರುತ್ತಾರೆ. ತಮ್ಮದೆಲ್ಲವನ್ನೂ ಕಡೆಗಣಿಸಿ ಅವರನ್ನು ಬೆಳೆಸಿರುತ್ತಾರೆ. ಕೆಲವೊಮ್ಮೆ ಏನನ್ನೋ ಕೇಳಿದರು ಎಂದ ಮಾತ್ರಕ್ಕೆ ದೂಷಿಸುವುದೂ ಸರಿಯಲ್ಲ. ಇನ್ನು ಬದಲಾದ ಪರಿಸ್ಥಿತಿಯಲ್ಲಿ ಪೋಷಕರು ಕೂಡ ಮಕ್ಕಳನ್ನು, ಅವರ ಆರ್ಥಿಕ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು ಎನ್ನುವುದು ಕೂಡ ಅಷ್ಟೇ ಸತ್ಯ.

First published: