ಯಾವಾಗ ನಿನ್ನ ಮದುವೆ ಎಂದು ದಿನವೂ ಕೇಳುತ್ತಿದ್ದ ನೆರೆಮನೆಯವಳನ್ನು ಕೊಂದ ಯುವಕ

ನಿನ್ನ ವಯಸ್ಸಿನ ಅನೇಕರಿಗೆ ಮದುವೆ ಆಗಿದೆ. ಆದರೆ, ನೀನು ಮಾತ್ರ ಇನ್ನೂ ಮದುವೆಯಾಗದೆ ಉಳಿದುಕೊಂಡಿದ್ದೀಯಾ. ಆದಷ್ಟು ಬೇಗ ಮದುವೆ ಆಗು ಎಂದು ಆಕೆ ಹೇಳಿದ್ದಳು. ಇದು ಆತನಿಗೆ ಕಿರಿಕಿರಿ ಎನಿಸಿದೆ. ಈ ವಿಚಾರವಾಗಿ ಕೊಲೆ ನಡೆದಿದೆ.

Rajesh Duggumane | news18
Updated:November 25, 2019, 3:39 PM IST
ಯಾವಾಗ ನಿನ್ನ ಮದುವೆ ಎಂದು ದಿನವೂ ಕೇಳುತ್ತಿದ್ದ ನೆರೆಮನೆಯವಳನ್ನು ಕೊಂದ ಯುವಕ
ಸಾಂದರ್ಭಿಕ ಚಿತ್ರ
  • News18
  • Last Updated: November 25, 2019, 3:39 PM IST
  • Share this:
‘ನಿನ್ನ ಗೆಳೆಯರ ಮದುವೆ ಆಗುತ್ತಿದೆ. ನಿನ್ನ ವಿವಾಹ ಯಾವಾಗ?’ ವಯಸ್ಸಿಗೆ ಬಂದ ನಂತರ ನೆಂಟರ ಮನೆಗೆ, ವಿಶೇಷ ಕಾರ್ಯಕ್ರಮಗಳಿಗೆ ತೆರಳಿದಾಗ ಕೇಳಿ ಬರುವ ಸಾಮಾನ್ಯ ಪ್ರಶ್ನೆ ಇದು. ನೆರೆ ಮನೆಯವರು, ನೆಂಟರಿಷ್ಟರು ಹೀಗೋಂದು ಪ್ರಶ್ನೆಯನ್ನು ನಿಮ್ಮ ಮುಂದಿಟ್ಟಿರುತ್ತಾರೆ. ಆದರೆ, ಈ ಪ್ರಶ್ನೆಯಿಂದ ಕಿರಿಕಿರಿಗೆ ಒಳಗಾದ ಅದೆಷ್ಟೋ ಮಂದಿ ಇರಬಹುದು. ಇಂಡೋನೇಷ್ಯಾ ಯುವಕನಿಗೂ ಈ ಪ್ರಶ್ನೆಯಿಂದ ಕಿರಿಕಿರಿ ಉಂಟಾಗಿತ್ತು. ಇದರಿಂದ ಸಿಟ್ಟಿಗೆದ್ದ ಆತ ಪ್ರಶ್ನೆ ಕೇಳಿದವರನ್ನೇ ಹತ್ಯೆ ಮಾಡಿದ್ದಾನೆ!

ಇಂಡೋನೇಷ್ಯಾದ ಕಾಪುಂಗ್​ ಪಸಿರ್​ ಜೊಂಗೆಯ ಫೈಜ್​ ನುರಾಜುದ್ದೀನ್​ ಕೊಲೆ ಮಾಡಿದ ವ್ಯಕ್ತಿ. ಈತನ ಮನೆಗೆ ನೆರೆ ಮನೆಯ ಐಷ್ಯಾ (32) ಹೆಸರಿನ ಗರ್ಭಿಣಿ ಯಾವಾಗಲೂ ಮಾತನಾಡಲು ಆಗಮಿಸುತ್ತಿದ್ದಳು. ಆದಿನವೂ ಅವಳು  ಫೈಜ್​ ಮನೆಗೆ ಆಗಮಿಸಿದ್ದಾಳೆ. ಹೀಗೆ ಮಾತನಾಡುತ್ತಾ ಮದುವೆ ವಿಚಾರ ಎತ್ತಿದ್ದಾಳೆ.

“ನಿನ್ನ ವಯಸ್ಸಿನ ಅನೇಕರಿಗೆ ಮದುವೆ ಆಗಿದೆ. ಆದರೆ, ನೀನು ಮಾತ್ರ ಇನ್ನೂ ಮದುವೆಯಾಗದೆ ಉಳಿದುಕೊಂಡಿದ್ದೀಯಾ. ಆದಷ್ಟು ಬೇಗ ಮದುವೆ ಆಗು,” ಎಂದು ಹೇಳಿದ್ದಳು. ಇದು ಆತನಿಗೆ ಕಿರಿಕಿರಿ ಎನಿಸಿದೆ.

ಮರುದಿನ ಮನೆಗೆ ಬರುವಂತೆ ಐಷ್ಯಾಗೆ ಫೈಜ್​ ಆಮಂತ್ರಣ ನೀಡಿದ್ದ. ಆಕೆ ರೂಮ್​ಗೆ ಬರುತ್ತಿದ್ದಂತೆ ಐಷ್ಯಾಳನ್ನು ಈತ ಕೊಲೆ ಮಾಡಿದ್ದ. ನಂತರ ಸ್ಥಳದಿಂದ ಪರಾರಿಯಾಗಿದ್ದ.

ಇದನ್ನೂ ಓದಿ: ಜೂನಿಯರ್​ ರೆಸಿಡೆಂಟ್​ ಹುದ್ದೆಗಳ ನೇಮಕಾತಿಗೆ ನೇರ ಸಂದರ್ಶನ

ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ಆರಂಭಿಸಿದ್ದಾರೆ. ಈ ವೇಳೆ ಮದುವೆ ವಿಚಾರದ ಬಗ್ಗೆ ಆಕೆ ಪದೇ ಪದೇ ಪ್ರಶ್ನೆ ಮಾಡುತ್ತಿದ್ದಳು. ಹೀಗಾಗಿ ಆಕೆಯನ್ನು ಕೊಂದಿರುವುದಾಗಿ ಈತ ಒಪ್ಪಿಕೊಂಡಿದ್ದಾನೆ.
First published: November 25, 2019, 3:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading