ಆಸ್ಟ್ರೇಲಿಯದಲ್ಲಿ ರೈತ ದಂಪತಿಯ ಮದುವೆಗೆ ಅಡ್ಡಿಪಡಿಸಿದ ಗರ್ಭಿಣಿ ಹಸು!; ರಿಸೆಪ್ಷನ್‌ ವೇಳೆ ಕರುವಿಗೆ ಜನ್ಮ ನೀಡಿದ ಗೋಮಾತೆ

ವಿಕ್ಟೋರಿಯಾದ ಪೋರ್ಟ್‌ಲ್ಯಾಂಡ್‌ ಬಳಿಯ ತಮ್ಮ ಗೋರೆ ಫಾರ್ಮ್‌ನಲ್ಲಿ ಜೆಸ್ಸಾ ಲಾಸ್ (32) ಮತ್ತು ಬೆನ್ ಲಾಸ್ (38) ಅವರ ವಿವಾಹ ಸಮಾರಂಭದಲ್ಲಿ ಈ ಘಟನೆ ನಡೆದಿದೆ.

Photo:Google

Photo:Google

  • Share this:
ಆಸ್ಟ್ರೇಲಿಯದಲ್ಲಿ ಹಸುವೊಂದು ಕರುವಿಗೆ ಜನ್ಮ ನೀಡಿದ್ದರಿಂದ ವಿವಾಹದ ರಿಸೆಪ್ಷನ್‌ ಸಮಾರಂಭಕ್ಕೆ ಅಡ್ಡಿಯಾಯಿತು. ವಿಕ್ಟೋರಿಯಾದ ಪೋರ್ಟ್‌ಲ್ಯಾಂಡ್‌ ಬಳಿಯ ತಮ್ಮ ಗೋರೆ ಫಾರ್ಮ್‌ನಲ್ಲಿ ಜೆಸ್ಸಾ ಲಾಸ್ (32) ಮತ್ತು ಬೆನ್ ಲಾಸ್ (38) ಅವರ ವಿವಾಹ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ಸುಮಾರು 100 ಅತಿಥಿಗಳ ಸಮ್ಮುಖದಲ್ಲೇಅವರ ಹಸು ಫ್ಲೆಯಾಸ್ ಜಾಕೋಟ್ ಡ್ರಾಮಾ ಕೆಂಪು ಮತ್ತು ಬಿಳಿ ಕರುವಿಗೆ ಜನ್ಮ ನೀಡಿತು.

ಅದರಿಂದ ತನ್ನ ಮದುವೆಯ ಗೌನ್‌ ಸಂಪೂರ್ಣವಾಗಿ ಕಸದ ಬುಟ್ಟಿಗೆ ಎಸೆಯುವಂತಾಯಿತು" ಎಂದು ಜೆಸ್ಸಾ ಡೈಲಿ ಮೇಲ್‌ಗೆ ಹೇಳಿದರು. ಆದರೆ "ಮರೆಯಲಾಗದ ಅನುಭವ" ಕ್ಕೆ ಹೋಲಿಸಿದರೆ ಇದನ್ನು "ಅಸಂಭವ" ಎಂದು ಕರೆದರು. ಮದುವೆಗೆ ಕೆಲವು ದಿನಗಳ ಮೊದಲು ಕರುವಿಗೆ ಜನ್ಮ ನೀಡಬೇಕಿತ್ತು. ಆದರೆ, ಫ್ಲೆಯಾಸ್ ಜಾಕೋಟ್ ಡ್ರಾಮಾ ಎಂಬ ಹೆಸರು ಇಟ್ಟುಕೊಂಡಿರುವ ಅದು ವಿವಾಹ ಸಮಾರಂಭದಲ್ಲಿ ಜನ್ಮ ನೀಡಲಿದೆ ಎಂದು ಖಚಿತವಾಗಿ ನಂಬಿದ್ದರು. ಇಡೀ ದಿನ ಮೇಲ್ವಿಚಾರಣೆ ನಡೆಸಿದರೂ ಸಂಜೆ 7 ಗಂಟೆಗೆ ವಿವಾಹ ಸಮಾರಂಭದ ನಂತರದ ಅಂತಿಮ ವಿವಾಹ ಭಾಷಣದ ವೇಳೆ ಡ್ರಾಮಾ ಜನ್ಮ ನೀಡಿದಳು'' ಎಂದು ಹೇಳಿದ್ದಾರೆ.

ಈ ದಿನವನ್ನು ನೆನಪಿಸಿಕೊಳ್ಳುತ್ತಾ, ಸ್ನೇಹಿತೆಯೊಬ್ಬರು ಬಂದು ತನ್ನ ಭುಜವನ್ನು ಮುಟ್ಟಿ "ಎರಡು ಕಾಲು ತೋರಿಸುತ್ತಿದೆ'' ಎಂದು ಹೇಳಿದಳು. ಮತ್ತು   ಅಲ್ಲಿ ನೆರೆದಿದ್ದ ರೈತ ಸ್ನೇಹಿತರ ಸಹಾಯದಿಂದ, ದಂಪತಿ ಕರುವಿನ ಜನನ ಸುಗಮವಾಗುವಂತೆ ನೋಡಿಕೊಂಡರು. ಆದರೂ, ಜನ್ಮವು ಕಷ್ಟಕರವಾಗಿತ್ತು. ಏಕೆಂದರೆ ಸುಮಾರು 15 ಅತಿಥಿಗಳು ದೊಡ್ಡ ಕರುವನ್ನು ಡೆಲಿವರಿ ಮಾಡಿದರು ಎಂದೂ ಆಕೆ ಹೇಳಿದರು.

ಆ ಸಮಯದಲ್ಲಿ ಅಡುಗೆಮನೆಯಲ್ಲಿದ್ದ ಬೆನ್‌ಗೆ, ಸ್ನೇಹಿತರೊಬ್ಬರು ಯಶಸ್ವಿ ಡೆಲಿವರಿಯಾಗಿರುವ ಬಗ್ಗೆ ತಿಳಿಸಿದರು. ಇದಕ್ಕೆ ಜೆಸ್ಸಾ ಕೆಸರಿನಲ್ಲಿ ಇಳಿದಿದ್ದಾಳೆ, ಅಲ್ಲವೇ?" ಎಂದು ಬೆನ್‌ ಕೇಳಿದರು. ಇನ್ನು, ಫಾರ್ಮ್‌ನ ಹೊಸ ಸದಸ್ಯ ದಂಪತಿಯ ಮದುವೆಯ ಸಮಯದಲ್ಲಿ ಹುಟ್ಟಿದ ಕಾರಣದಿಂದ ಅದಕ್ಕೆ ‘ಡೆಸ್ಟಿನಿ’ ಎಂದು ದಂಪತಿ ಹೆಸರಿಟ್ಟಿದ್ದಾರೆ.

ಸಮಾರಂಭದ ನಂತರ ಕಾರ್ಬ್ ಲುಂಡ್ ಅವರ Cows Around ಎಂಬ ಹಾಡನ್ನು ಹಾಡಲಾಗಿದೆ ಎಂದು ಜೆಸ್ಸಾ ಹಂಚಿಕೊಂಡಿದ್ದಾರೆ. ಇನ್ನು, ನವ ವಿವಾಹಿತರು ಮೂರು ವರ್ಷಗಳ ಹಿಂದೆ ಪಬ್‌ನಲ್ಲಿ ಭೇಟಿಯಾದರು ಮತ್ತು ಹಸುಗಳ ಬಗ್ಗೆ ಮಾತನಾಡುತ್ತಾ ಅವರ ಮಧ್ಯೆ ಬಾಂಧವ್ಯ ಹುಟ್ಟಿತು ಎಂದು ಜೆಸ್ಸಾ ಹಂಚಿಕೊಂಡಿದ್ದಾಳೆ.

ಅಲ್ಲದೆ, ತನ್ನ ಮದುವೆಯ ಡ್ರೆಸ್ ಅನ್ನು ಡ್ರೈ ಕ್ಲೀನರ್‌ಗೆ ನೀಡಲಾಗಿದ್ದು, ಮೊದಲಿದ್ದ ಸ್ಥಿತಿಯಲ್ಲಿ ಮರಳಿ ಪಡೆಯುವ ಭರವಸೆ ಇದೆ. ಆದರೆ “ಕರುವು ಕೆಸರಲ್ಲಿ ಬಿದ್ದು ಜನನವಾಗಿದ್ದು, ತನ್ನ ಮದುವೆಯ ಡ್ರೆಸ್‌ಗಾದ ಸ್ಥಿತಿಗಿಂತ ನೆನಪುಗಳು ಹೆಚ್ಚು ಯೋಗ್ಯವಾಗಿವೆ.” ಎಂದು ಹೇಳಿದ್ದಾರೆ.
First published: