Pregnancy Cravings: ಪ್ರೆಗ್ನೆನ್ಸಿ ವೇಳೆ ಕದ್ದುಮುಚ್ಚಿ ನಾಯಿ ಬಿಸ್ಕತ್ತು​ ತಿನ್ನುತ್ತಿದ್ದ ಪತ್ನಿ, ಸತ್ಯ ತಿಳಿದ ಪತಿಗೆ ಆಶ್ಚರ್ಯ!

ಮಹಿಳೆ ತನ್ನ ಗರ್ಭಾವಸ್ಥೆಯಲ್ಲಿ ನಾಯಿಗಳಿಗೆ ಹಾಕುವ ಬಿಸ್ಕತ್ತುಗಳನ್ನು ತಿನ್ನುತ್ತಿದ್ದಳು. ಆಕೆ ಈ ವಿಚಾರವನ್ನು ಎಷ್ಟರಮಟ್ಟಿಗೆಂದರೆ ರಹಸ್ಯವಾಗಿಟ್ಟಿದ್ದಳೆಂದರೆ, ಆಕೆಯ ಪತಿಗೂ ಈ ವಿಚಿತ್ರ ಹಂಬಲದ ಬಗ್ಗೆ ಪತಿಗೆ ಏನೂ ತಿಳಿದಿರಲಿಲ್ಲ. ಆದರೆ ವಾಸ್ತವ ವಿಚಾರ ತಿಳಿದಾಗ ಗಂಡ ತಬ್ಬಿಬ್ಬಾಗಿದ್ದಾನೆ.

Pregnancy Cravings

Pregnancy Cravings

  • Share this:
    ನವದೆಹಲಿ(ಆ.04): ಗರ್ಭಾವಸ್ಥೆಯು (Pregnancy) ಪ್ರತಿಯೊಬ್ಬ ಮಹಿಳೆಯ ಜೀವನದಲ್ಲಿ ಅತ್ಯಂತ ವಿಭಿನ್ನ ಮತ್ತು ಸುಂದರವಾದ ಭಾವನೆಯಾಗಿದೆ. ಈ ಸಮಯದಲ್ಲಿ ಅವರು ಅನೇಕ ಹೊಸ ಅನುಭವಗಳನ್ನು ಪಡೆಯುತ್ತಾರೆ, ಅಲ್ಲದೇ ವಿಭಿನ್ನ ಅಭ್ಯಾಸ ಹೊಂದಿರುತ್ತಾರೆ. ಈ ವಿಚಿತ್ರಗಳಲ್ಲಿ ಒಂದು ಆಹಾರ ಪದಾರ್ಥಗಳ ಹಂಬಲ. ಕೆಲವು ಮಹಿಳೆಯರು ಸಿಹಿ ಮತ್ತು ಹುಳಿ ಏನನ್ನಾದರೂ ತಿನ್ನಲು ಬಯಸುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ಪ್ರೆಗ್ನೆನ್ಸಿ ವೇಳೆ ನಾಯಿ ಬಿಸ್ಕೆಟ್ (Dog Biscuits) ತಿನ್ನಲಾರಂಭಿಸಿದ್ದಾಳೆ.

    ಇದನ್ನೂ ಓದಿ:  Pregnancy Food: ಗರ್ಭಿಣಿಯರು ಯಾವ ಆಹಾರ ತಿನ್ನಬೇಕು? ತಿನ್ನಬಾರದು? ವೈದ್ಯರು ವಿವರಿಸಿದ್ದಾರೆ

    ಗರ್ಭಾವಸ್ಥೆಯಲ್ಲಿ ಮಹಿಳೆ ಏನು ತಿನ್ನಲು ಬಯಸುತ್ತಾಳೆ, ಆಕೆಗೆ ಯಾವ ಆಹಾರವನ್ನು ನೀಡಬೇಕು ಎಂದು ಹಿರಿಯರು ಹೇಳುತ್ತಾರೆ. ಆದರೆ ಬೇಕಾಬಿಟ್ಟಿ ಇಷ್ಟಪಟ್ಟದ್ದನ್ನೆಲ್ಲಾ ತಿನ್ನಲು ಕೇಳಿದರೆ, ಯಾರೂ ಅದನ್ನು ತಿನ್ನಲು ಅನುಮತಿ ಕೊಡುವುದಿಲ್ಲ. ಹೀಗಾಗೇ ಈ ಮಹಿಳೆ ಗರ್ಭಾವಸ್ಥೆಯಲ್ಲಿ ನಾಯಿಗಳ ಬಿಸ್ಕತ್‌ಗಳನ್ನು ರಹಸ್ಯವಾಗಿ ತಿನ್ನಲು ಕಾರಣವಾಗಿದೆ. ಎಷ್ಟರಮಟ್ಟಿಗೆಂದರೆ, ತಿಂಗಳಾನುಗಟ್ಟಲೆ ಹೆಂಡತಿಯ ಈ ರಹಸ್ಯ ಹಂಬಲ ಆಕೆಯ ಗಂಡನಿಗೂ ಗೊತ್ತಿರಲಿಲ್ಲ.

    ಮಹಿಳೆ ತನ್ನ ಗಂಡನಿಗೂ ತಿಳಿಸದೆ ರಹಸ್ಯವಾಗಿ ನಾಯಿ ಬಿಸ್ಕತ್ತುಗಳನ್ನು ತಿನ್ನುತ್ತಿದ್ದಳು

    ರೆಡ್ಡಿಟ್‌ನಲ್ಲಿ, ಮಹಿಳೆ ತನ್ನೊಂದಿಗಿನ ಈ ಅನುಭವದ ಬಗ್ಗೆ ಹೇಳಿದ್ದಾಳೆ. ಗರ್ಭಿಣಿಯಾದ 5 ವಾರಗಳ ನಂತರ ತನಗೆ ಈ ವಿಚಿತ್ರ ಆಸೆ ಹುಟ್ಟಿಕೊಂಡಿದೆ ಎಂದು ಮಹಿಳೆ ಹೇಳಿದ್ದಾರೆ. ಗರ್ಭಾವಸ್ಥೆಯಲ್ಲಿ ಪ್ರತಿಯೊಬ್ಬರೂ ಕೆಲವು ಒಳ್ಳೆಯ ವಿಷಯಗಳಿಗಾಗಿ ಹಂಬಲಿಸುವಾಗ, ಈ ಮಹಿಳೆಗೆ ವಿಭಿನ್ನವಾದ ಕೆಟ್ಟ ಬಯಕೆ ಹುಟ್ಟಿಕೊಂಡಿದೆ. ಹೀಗಾಗೇ ತಾನು ಪತಿಯಿಂದ ಬಚ್ಚಿಟ್ಟುಕೊಂಡು ನಾಯಿ ಬಿಸ್ಕೆಟ್ ತಿನ್ನಲು ಪ್ರಾರಂಭಿಸಿದೆ ಎಂದು ಅವರು ಹೇಳಿದ್ದಾರೆ. ನಾಯಿ ಬಿಸ್ಕೆಟ್ ತಿನ್ನಲು ಇಷ್ಟಪಡುತ್ತೇನೆ ಎಂದು ಹೇಳಲು ನನಗೆ ಮುಜುಗರವಾಯಿತು ಎಂದು ಮಹಿಳೆ ಹೇಳಿದ್ದಾರೆ. ತಾನು ತನ್ನ ಸ್ನೇಹಿತರಿಗೆ ಈ ವಿಷಯವನ್ನು ಹೇಳಿದ್ದೆ ಆದರೆ ಯಾರಿಗೂ ತನ್ನಂತಹ ಅನುಭವ ಆಗಿರಲಿಲ್ಲ ಎಂದು ಮಹಿಳೆ ಹೇಳಿದ್ದಾರೆ.

    ಇದನ್ನೂ ಓದಿ:  Thyroid ಸಮಸ್ಯೆ ಇದ್ದವರಿಗೆ ಮಕ್ಕಳಾಗೋದು ಕಷ್ಟವಾ? ಇದಕ್ಕೆ ಏನು ಮಾಡ್ಬಹುದು ಅಂತ ವೈದ್ಯರು ವಿವರಿಸಿದ್ದಾರೆ

    ಪತ್ನಿಯ ಸತ್ಯ ಕಂಡುಕೊಂಡ ಪತಿ ದಿಗ್ಭ್ರಮೆ

    ಕೆಲವು ತಿಂಗಳುಗಳ ಕಾಲ ಮಹಿಳೆಯ ಈ ರಹಸ್ಯ ಮರೆಯಾಗಿಯೇ ಉಳಿದಿತ್ತು, ಆದರೆ ಒಂದು ದಿನ ಆಕೆ ರಹಸ್ಯವಾಗಿ ನಾಯಿ ಬಿಸ್ಕತ್ತುಗಳನ್ನು ತಿನ್ನುವುದನ್ನು ನೋಡಿದ ಪತಿ ದಿಗ್ಭ್ರಮೆಗೊಂಡಿದ್ದಾನೆ. ಮೊದಮೊದಲು ಇವು ಯಾವ ಬಿಸ್ಕತ್ ಎಂದು ಅರ್ಥವಾಗಲಿಲ್ಲ, ಆದರೆ ಕೆಲವು ದಿನಗಳ ನಂತರ ಅವಳ ಪತಿಗೆ ಈ ರಹಸ್ಯ ತಿಳಿದಿದೆ. ಪುಣ್ಯಕ್ಕೆ ಪತಿ ಇದ್ಯಾವುದಕ್ಕೂ ಕೆಟ್ಟದಾಗಿ ಪ್ರತಿಕ್ರಿಯಿಸದಿರುವುದು ಸಮಾಧಾನದ ವಿಚಾರವಾಗಿತ್ತು. ಈ ಪೋಸ್ಟ್‌ಗೆ ಜನರು ತುಂಬಾ ತಮಾಷೆಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
    Published by:Precilla Olivia Dias
    First published: