HOME » NEWS » Trend » PREDATOR FISH LEAPS OUT OF WATER TO CATCH BIRD VIDEO VIRAL HG

Viral Video: ಅಬ್ಬಾ..! ಹಾರುವ ಹಕ್ಕಿಯನ್ನು ಕ್ಷಣಾರ್ಧದಲ್ಲೇ ಭೇಟೆಯಾಡಿದ ಮೀನು

ನೀಲ ಸಮುದ್ರದ ಮೇಲೆ ಸ್ವಚಂಧವಾಗಿ ಹಕ್ಕಿಯೊಂದು ಹಾರುತ್ತಿದೆ. ರೆಕ್ಕೆ ಬಡಿಯುತ್ತಾ ಸಾಗುತ್ತಿದೆ. ಅಷ್ಟರಲ್ಲಿ ಎಲ್ಲಿಂದೋ ಬಂದಂತೆ ಮೀನೊಂದು ಚೆಂಗನೆ ನೆಗೆದು ಹಾರುವ ಹಕ್ಕಿಯನ್ನು ಹಿಡಿದಿದೆ. ಅಂದಹಾಗೆಯೇ ಎರಡು ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ.

news18-kannada
Updated:May 29, 2021, 4:30 PM IST
Viral Video: ಅಬ್ಬಾ..! ಹಾರುವ ಹಕ್ಕಿಯನ್ನು ಕ್ಷಣಾರ್ಧದಲ್ಲೇ ಭೇಟೆಯಾಡಿದ ಮೀನು
ಹಕ್ಕಿ ಹಿಡಿಯುತ್ತಿರುವ ಮೀನು
  • Share this:
ಪಕ್ಷಿಗಳು ಮೀನು ಕಂಡು ದೂರದಿಂದ ಹಾರಿಬಂದು ತಿನ್ನುವ ದೃಶ್ಯವನ್ನು ನೋಡಿರಬಹುದು. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಮಿಂಚುಳ್ಳಿ ಹಕ್ಕಿ ಎಂದು ಕರೆಯುವ ಕಿಂಗ್​ ಫಿಶರ್​ ಹಕ್ಕಿ  ಮರದ ಕೊಂಬೆಯಲ್ಲಿ ಕುಳಿತು ದೂರದಲ್ಲಿ ಕಂಡ ಮೀನಿಗೆ ಹೊಂಚು ಹಾಕಿ ಹಿಡಿಯುವ ದೃಶ್ಯವನ್ನು ವೀಕ್ಷಿಸಿರಬಹುದು. ಆದರೆ ಇಲ್ಲೊಂದು ಮೀನು ಹಕ್ಕಿಯನ್ನೇ ಭೇಟೆಯಾಡುತ್ತಿದೆ. ಈ ದೃಶ್ಯವಿದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೌದು. ನೀಲ ಸಮುದ್ರದ ಮೇಲೆ ಸ್ವಚಂಧವಾಗಿ ಹಕ್ಕಿಯೊಂದು ಹಾರುತ್ತಿದೆ. ರೆಕ್ಕೆ ಬಡಿಯುತ್ತಾ ಸಾಗುತ್ತಿದೆ. ಅಷ್ಟರಲ್ಲಿ ಎಲ್ಲಿಂದೋ ಬಂದಂತೆ ಮೀನೊಂದು ಚೆಂಗನೆ ನೆಗೆದು ಹಾರುವ ಹಕ್ಕಿಯನ್ನು ಹಿಡಿದಿದೆ. ಅಂದಹಾಗೆಯೇ ಎರಡು ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ.
ನೀರಿನ ಮೇಲಿಂದ ಹಾರುವ ಹಕ್ಕಿಯನ್ನು ಹೊಂಚು ಹಾಕುವ ಈ ಮೀನು ಪರಭಕ್ಷವೇ ಸರಿ. ಅಂದಹಾಗೆಯೇ ಈ ದೃಶ್ಯ ಬಿಬಿಸಿ ಚಾನೆಲ್​ ತನ್ನ ಯ್ಯೂಟೂಬ್​​ ಖಾತೆಯಲ್ಲಿ ಹಂಚಿಕೊಂಡಿದೆ. 2017ರಲ್ಲಿ ಈ ದೃಶ್ಯ ಸೆರೆಯಾಗಿದ್ದು, ಐಎಫ್​ಎಸ್​ ಅಧಿಕಾರಿ ಸುಶಾಂತ ನಂದ ಅವರು ಕೆಲ ದಿನಗಳ ಹಿಂದೆ ತಮ್ಮ ಟ್ವಿಟ್ಟರ್  ಖಾತೆಯಲ್ಲಿ ಶೇರ್​ ಮಾಡಿದ್ದಾರೆ. ಅನೇಕರು ಮೀನು ಹೊಂಚು ಹಾಕಿ ಹಕ್ಕಿಯನ್ನು ಹಿಡಿಯುವ ದೃಶ್ಯವನ್ನು ಗಮನಿಸಿ ಬಗೆ ಬಗೆಯ ಕಾಮೆಂಟ್​ ಬರೆದಿದ್ದಾರೆ.
Published by: Harshith AS
First published: May 29, 2021, 4:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories