ಪ್ರೀವೆಡ್ಡಿಂಗ್‌ ಫೋಟೋಶೂಟ್​​​​​ಗೆ ಹೇಳಿ ಮಾಡಿಸಿದ ತಾಣ ನಂದಿ ಹಿಲ್ಸ್​​!

news18
Updated:June 29, 2018, 12:31 PM IST
ಪ್ರೀವೆಡ್ಡಿಂಗ್‌ ಫೋಟೋಶೂಟ್​​​​​ಗೆ  ಹೇಳಿ ಮಾಡಿಸಿದ ತಾಣ ನಂದಿ ಹಿಲ್ಸ್​​!
news18
Updated: June 29, 2018, 12:31 PM IST
-ನವೀನ್, ನ್ಯೂಸ್ 18 ಕನ್ನಡ

ಚಿಕ್ಕಬಳ್ಳಾಪುರ,(ಜೂ.29): ಇತ್ತಿಚೇಗೆ ಪ್ರೀವೆಡ್ಡಿಂಗ್‌ ಫೋಟೋಶೂಟ್‌ ಟ್ರೆಂಡ್‌ ಶುರುವಾಗಿದೆ. ಹಸೆಮಣೆಗೆ ಏರುವ ಮುನ್ನ ಸತಿ-ಪತಿಯಾಗುವ ಜೋಡಿಗಳು ಪೋಟೋ ಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ. ಹಚ್ಚ ಹಸಿರಿನ ತಾಣಗಳು, ಗಿರಿ ಶ್ರೇಣಿಗಳ ಸಾಲು ಪೋಟ್ ಶೂಟ್ ಗೆ ಮೆಚ್ಚಿನ ತಾಣಗಳು. ಪ್ರೀವೆಡ್ಡಿಂಗ್ ಪೋಟೋ ಶೂಟ್ ಗಾಗಿ ಮಲೆನಾಡಿನ ಜಲಪಾತಕ್ಕೋ, ಶಿಲ್ಪಕಲೆಗಳನ್ನು ಮೈತುಂಬಿಕೊಂಡಿರುವ ದೇವಾಲಯಕ್ಕೆ ಹೋಗುತ್ತಾರೆ. ಇಂತಹ ಎಲ್ಲಾ ವೈಭವಗಳನ್ನ ಹೊಂದಿರುವುದು ನಂದಿಗಿರಿಧಾಮ. ಇತ್ತೀಚೇಗೆ ನಂದಿಹಿಲ್ಸ್ ನಲ್ಲಿ ಪ್ರೀವೆಡ್ಡಿಂಗ್ ಶೂಟ್ ಭರ್ಜರಿಯಾಗಿ ನಡೆಯುತ್ತಿದೆ.ಮಲೆನಾಡನ್ನೇ ನಾಚಿಸುವ ಸೌಂದರ್ಯ, ಊಟಿ ಪಡಿಯಂಚ್ಚಿನಂತ್ತಿರುವ ಗಿರಿಶ್ರೇಣಿಗಳು, ಮಳೆಗಾಲದಲ್ಲಿ ಮಂಜಿನ ಮಹಬತ್, ಕಲಾ ವೈಭವವನ್ನೇ ಮೈತಳೆದು ನಿಂತಿರುವ ದೇವಾಲಯ, ಪೋಟೋಗ್ರಫಿಗೆ ಹೇಳಿ ಮಾಡಿಸಿದ ತಾಣ ಇದು. ಹೌದು ಬೆಂಗಳೂರಿನ ಕೂಗಳತೆಯ ದೂರದಲ್ಲಿರುವ ನಂದಿಗಿರಿಧಾಮ ಪೋಟೋಗ್ರಾಫರನ್ನ ಕೈ ಬೀಸಿ ಕರೆಯುತ್ತಿದೆ.. ಹಾಗೆಯೇ ಹಸೆಮಣೆ ಏರಲು ಸಿದ್ದರಿರುವ ದಂಪತಿಯ ಮೆಚ್ಚಿನ ತಾಣವಾಗಿ. ವಿವಾಹ ಮುನ್ನ ಪೋಟೋ ಶೂಟ್ ಮಾಡಿಸಿಕೊಳ್ಳುವ ಕಾರಣಕ್ಕೆ ನಂದಿಬೆಟ್ಟೆಕ್ಕೆ ಜೋಡಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ.ಪ್ರಿವೆಡ್ಡಿಂಗ್‌ ಫೋಟೋಶೂಟ್‌ಗೆ ಸೂಕ್ತವಾದ ತಾಣ ನಂದಿಹಿಲ್ಸ್ ಅದಕ್ಕೆ ಸಾಕ್ಷಿ ಹೇರ್‌ಪಿನ್‌ ರಸ್ತೆಗಳಲ್ಲಿ ಜೋಡಿ ವಾಕ್‌ ಮಾಡುವ ಸನ್‌ಸೆಟ್‌ ನಲ್ಲಿ ವೀಕ್ಷಣಾ ಮಂದಿರದಲ್ಲಿ ನಿಂತು ಫೋಟೋ ತೆಗೆಸಿಕೊಳ್ಳುವ ಸೊಗಸೇ ಬೇರೆ. ಚಳಿಗಾಲದಲ್ಲಿ ಈ ರಸ್ತೆಗಳು ಹಿಮವದ್‌ ಗೋಪಾಲಸ್ವಾಮಿ ಬೆಟ್ಟದ ಮೇಲೆ ಮಂಜು ಆವರಿಸಿದಂತೆ ತೋರುವುದರಿಂದ ತಾಜಾ ಫೋಟೋಗಳನ್ನು ನಿರೀಕ್ಷಿಸಬಹುದು ಇಲ್ಲಿ. ಇಲ್ಲಿನ ಬಿದಿರಿನ ಮನೆಗಳಲ್ಲೂ ಅದ್ಭುತ ಸೌಂದರ್ಯವನ್ನು ಸೆರೆಹಿಡಿಯಬಹುದು. ಬಂಡೆಕಲ್ಲುಗಳ ಮೇಲೆ ನಿಂತೂ ಜೋಡಿ ನಗುವನ್ನು ಹೊಮ್ಮಿಸಬಹುದು. ಇದೇ ಕಾರಣಕ್ಕಾಲ್ಲ ಪ್ರೀವೆಡ್ಡಿಂಗ್ ಜೋಡಿಗಳನ್ನ ನಂದಿಗಿರಿಧಾಮ ಕೈ ಬೀಸಿ ಕರೆಯುತ್ತಿರುವುದು. ಬೆಂಗಳೂರಿನ ಯಲಹಂಕದ ಜೋಡಿಯಾದ ದೀಪಕ್ ಕುಮಾರ್ ಮತ್ತು ವಾಣಿ ದಂಪತಿ ನಾಲ್ಕು ವರ್ಷಗಳ ಹಿಂದೆ ಪ್ರೀವೆಡ್ಡಿಂಗ್ ಶೂಟ್ ಮಾಡಿಸಿಕೊಂಡಿದ್ದು ಇದೇ ನಂದಿಹಿಲ್ಸ್ ನಲ್ಲಿ. ಪ್ರಿವೆಡ್ಡಿಂಗ್ ಪೋಟೋಗಳನ್ನ ನೋಡಿದರೆ ಖುಷಿಯಾಗುತ್ತೆ. ಇದೇ ಕಾರಣಕ್ಕೆ ಮಗಳ ನಾಮಕರಣದ ಶೂಟಿಂಗ್ ಸಹ ಇಲ್ಲಿಯೇ ಮಾಡಿರುವುದಾಗಿ ತಮ್ಮ ಖುಷಿಯನ್ನ ಹಂಚಿಕೊಂಡರು. ಇನ್ನೂ ಪೋಟೋ ಗ್ರಾಫರ್ ಸಹ ನಂದಿಬೆಟ್ಟ ಪ್ರೋಟೋಗ್ರಾಫಿಗೆ ಸೂಕ್ತವಾದ ತಾಣವಾಗಿದೆ. ಅಲ್ಲದೆ ಬೆಂಗಳೂರಿಗೆ ಹತ್ತಿರ ಇರುವ ಕಾರಣಕ್ಕೆ ಪ್ರೀವೆಡ್ಡಿಂಗ್ ಶೂಟ್ ಗೆ ನಂದಿಹಿಲ್ಸ್ ನಮ್ಮ ಮೊದಲ ಆಯ್ಕೆಯಾಗಿರುತ್ತದೆ  ಎಂದರು.


Loading...

ನಂದಿಬೆಟ್ಟ ಪೋಟೋಗ್ರಾಫಿಗೆ ಸೂಕ್ತವಾದ ತಾಣವಾಗಿದೆ ಇದೇ ಕಾರಣಕ್ಕೆ ಇವತ್ತು ಹೆಚ್ಚಿನ ಸಂಖ್ಯೆಯಲ್ಲಿ ಪ್ರಿವೆಡ್ಡಿಂಗ್ ಜೋಡಿಗಳು ಪೋಟೋ ಶೂಟ್ ಗಾಗಿ ಬರುತ್ತಿದ್ದಾರೆ. ಅದರೆ ನಂದಿಬೆಟ್ಟದಲ್ಲಿ ಹೆಚ್ಚಾಗಿರುವ ಕೋತಿಗಳ ಕಾಟ. ಮೂಲಭೂತ ಸೌಲಭ್ಯಗಳ ಕೊರತೆ ಪೋಟೋ ಶೂಟ್ ಗೆ ದೊಡ್ಡ ಸಮಸ್ಯೆಯಾಗಿದೆ. ಈ ಸಮಸ್ಯೆಗಳನ್ನ ಅದಷ್ಟು ಶೀಘ್ರವಾಗಿ ಪರಿಹರಿಸ ಬೇಕೆನ್ನುವುದು ಪ್ರವಾಸಿಗರ ಮನವಿ. ಹಾಗೆಯೇ ಪೋಟೋ ಶೂಟ್ ಮಾಡಲು ತೋಟಗಾರಿಕೆ ಇಲಾಖೆಯಿಂದ ಅನುಮತಿ ಪಡೆಯೋದು ಕಡ್ಡಾಯ. ನಿಗದಿತ ಶುಲ್ಕ ಪಾವತಿಸದ ನಂತರ ಪೋಟೋ ಶೂಟ್ ಗೆ ಅನುಮತಿ ನೀಡಲಾಗುತ್ತಿದೆ. ಇದರಿಂದ ಸರ್ಕಾರಕ್ಕೆ ವರಮಾನ ಸಹ ಬರುತ್ತಿದೆ.ಪ್ರಿವೆಡ್ಡಿಂಗ್ ಕಲ್ಪನೆ ಪ್ರೋಟೋಗ್ರಾಫರ್ ಗಳಿಗೆ ಹೊಸದೊಂದು ವರಮಾನದ ದಾರಿ ಮಾಡಿಕೊಟ್ಟಿದೆ. ಜೊತೆಗೆ ಸರ್ಕಾರದ ಖಜಾನೆಗೂ ಹಣ ತುಂಬುತ್ತಿದೆ. ಇದರ ಜೊತೆ ನವ ಜೋಡಿಗಳ ಖುಷಿಗೂ ಕಾರಣವಾಗುತ್ತಿದೆ.
First published:June 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ