HOME » NEWS » Trend » POTENTIALLY HAZARDOUS ASTEROID AS BIG AS THE EIFFEL TOWER WILL SAFELY PASS BY EARTH ON 1 JUNE STG LG

ಐಫೆಲ್‌ ಟವರ್‌ನಷ್ಟು ದೊಡ್ಡ ಅಪಾಯಕಾರಿ ಕ್ಷುದ್ರಗ್ರಹ ಇಂದು ಭೂಮಿಗೆ ಅಪ್ಪಳಿಸಲಿದ್ಯಾ..? ನಾಸಾ ಹೇಳಿದ್ದೇನು..?

2021 ಕೆಟಿ 1 ಕ್ಷುದ್ರಗ್ರಹವು ನಮ್ಮ ಗ್ರಹದ 4.5 ದಶಲಕ್ಷ ಮೈಲಿಗಳ ಒಳಗೆ ಜೂನ್ 1 ರ ಮಂಗಳವಾರ ಸಂಜೆ 7:54 ಗಂಟೆಗೆ ಭಾರತೀಯ ಕಾಲಮಾನದಲ್ಲಿ (ಬೆಳಗ್ಗೆ 10:24 ಇಡಿಟಿ)  ಬರಲಿದೆ. ಭೂಮಿ ಮತ್ತು ಕ್ಷುದ್ರಗ್ರಹದ ನಡುವಿನ ಅಂತರವು ಭೂಮಿಯ ಚಂದ್ರನ ಅಂತರಕ್ಕಿಂತ 19 ಪಟ್ಟು ಹೆಚ್ಚಾಗಿದೆ.

news18-kannada
Updated:June 1, 2021, 1:29 PM IST
ಐಫೆಲ್‌ ಟವರ್‌ನಷ್ಟು ದೊಡ್ಡ ಅಪಾಯಕಾರಿ ಕ್ಷುದ್ರಗ್ರಹ ಇಂದು ಭೂಮಿಗೆ ಅಪ್ಪಳಿಸಲಿದ್ಯಾ..? ನಾಸಾ ಹೇಳಿದ್ದೇನು..?
ಭೂಮಿ
  • Share this:
ಪ್ಯಾರಿಸ್‌ನ ಐಫೆಲ್ ಟವರ್‌ನಷ್ಟು ದೊಡ್ಡದಾದ ಕ್ಷುದ್ರಗ್ರಹವು ಜೂನ್‌ ತಿಂಗಳಲ್ಲಿ ಭೂಮಿಯನ್ನು ಅಪ್ಪಳಿಸಬಹುದು ಎಂದು ಇತ್ತೀಚೆಗೆ ಯುಎಸ್ ಬಾಹ್ಯಾಕಾಶ ಸಂಸ್ಥೆ ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ಎಚ್ಚರಿಸಿದೆ. ದಿ ನ್ಯೂಸ್‌ವೀಕ್‌ನ ವರದಿಯ ಪ್ರಕಾರ, 2021 ಕೆಟಿ 1 ಹೆಸರಿನ ಕ್ಷುದ್ರಗ್ರಹವನ್ನು ನಾಸಾ ‘ಅಪಾಯಕಾರಿ’ ಎಂದು ವರ್ಗೀಕರಿಸಿದೆ. 2021 ಕೆಟಿ 1 ಕ್ಷುದ್ರಗ್ರಹದ ವ್ಯಾಸವು 149.9 ಮೀ. ನಿಂದ 329.7 ಮೀ (492 ಅಡಿ ಮತ್ತು 1,082 ಅಡಿ) ನಡುವೆ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇತರ ಸಣ್ಣ ಕ್ಷುದ್ರಗ್ರಹಗಳು ಇತ್ತೀಚೆಗೆ ಭೂಮಿಯನ್ನು ಸಮೀಪಿಸಿವೆ ಮತ್ತು ಮುಂಬರುವ ತಿಂಗಳುಗಳಲ್ಲಿ ಇದನ್ನು ಮುಂದುವರಿಸುತ್ತವೆ. ಆದರೆ, 500 ಅಡಿಗಳಿಗಿಂತ ದೊಡ್ಡದಾದ ಮತ್ತು ಭೂಮಿಯ 4.6 ದಶಲಕ್ಷ ಮೈಲಿ ವ್ಯಾಪ್ತಿಯಲ್ಲಿರುವ ಕ್ಷುದ್ರಗ್ರಹವನ್ನು ಅಪಾಯಕಾರಿ ಎಂದು ಪರಿಗಣಿಸಲಾಗಿದೆ. 2021 ಕೆಟಿ 1 ಕ್ಷುದ್ರಗ್ರಹವು ನಮ್ಮ ಗ್ರಹದ 4.5 ದಶಲಕ್ಷ ಮೈಲಿಗಳ ಒಳಗೆ ಜೂನ್ 1 ರ ಮಂಗಳವಾರ ಸಂಜೆ 7:54 ಗಂಟೆಗೆ ಭಾರತೀಯ ಕಾಲಮಾನದಲ್ಲಿ (ಬೆಳಗ್ಗೆ 10:24 ಇಡಿಟಿ)  ಬರಲಿದೆ. ಭೂಮಿ ಮತ್ತು ಕ್ಷುದ್ರಗ್ರಹದ ನಡುವಿನ ಅಂತರವು ಭೂಮಿಯ ಚಂದ್ರನ ಅಂತರಕ್ಕಿಂತ 19 ಪಟ್ಟು ಹೆಚ್ಚಾಗಿದೆ.

ಕ್ಷುದ್ರಗ್ರಹವು ಗಂಟೆಗೆ 40,000 ಮೈಲು ವೇಗದಲ್ಲಿ ಚಲಿಸುತ್ತಿದೆ. ಅದು ಭೂಮಿಯಿಂದ ಸುರಕ್ಷಿತವಾಗಿ ಹಾದುಹೋಗಲಿದೆ ಎಂದು ಬಾಹ್ಯಾಕಾಶ ಏಜೆನ್ಸಿ ಹೇಳುತ್ತದೆ.

ಇದನ್ನೂ ಓದಿ:Bank holidays in June 2021: ಬ್ಯಾಂಕ್ ಗ್ರಾಹಕರೇ ಗಮನಿಸಿ..!; ಜೂನ್​ ತಿಂಗಳಿನಲ್ಲಿ 9 ದಿನ ಬ್ಯಾಂಕ್​​ಗಳಿಗೆ​ ರಜೆ

ಅಲ್ಲದೆ, ಮತ್ತೊಂದು ಸಣ್ಣ ಕ್ಷುದ್ರಗ್ರಹ 2018 ಎಲ್‌ಬಿ ಸಹ ಜೂನ್ 1 ರಂದು ಭೂಮಿಗೆ ಹತ್ತಿರ ತಲುಪುತ್ತದೆ. ಇದು ಕೇವಲ 21 ಮೀಟರ್ ಉದ್ದವಿದ್ದು, ಗ್ರಹದ 1,116,885 ಕಿ.ಮೀ ವ್ಯಾಪ್ತಿಯಲ್ಲಿ ಬರಲಿದೆ ಎಂದು WUSA 9 ವರದಿ ಮಾಡಿದೆ. ಇದು ವಿಮಾನದ ಅಂದಾಜು ಗಾತ್ರವಿದೆ ಎನ್ನಲಾಗಿದೆ.

ಕ್ಷುದ್ರಗ್ರಹಗಳಾದ 2021 ಕೆಎನ್ 2 ಮತ್ತು 2021 ಕೆಎಸ್ ಮೇ 31 ರಂದೇ ಭೂಮಿಯನ್ನು ಸಮೀಪಿಸುತ್ತಿದ್ದರೂ, ಅವು ಕ್ರಮವಾಗಿ 21 ಅಡಿ ಮತ್ತು 59 ಅಡಿ ಗಾತ್ರದಲ್ಲಿವೆ.

2021 ಕೆಎಸ್ 18 ಮೀ ಗಾತ್ರವಿದ್ದು, ಮತ್ತು 5,954,573 ಕಿ.ಮೀ ದೂರದಲ್ಲಿ ಭೂಮಿಯ ಹತ್ತಿರ ಬರುತ್ತಿದೆ. ಇದು ಮನೆಯೊಂದರ ಗಾತ್ರವಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:Family Pension: ಕೋವಿಡ್​ ಸಮಯದಲ್ಲಿ ಫ್ಯಾಮಿಲಿ ಪೆನ್ಶನ್​ ನಿಯಮಗಳಲ್ಲಿ ಬದಲಾವಣೆಅಲ್ಲದೆ, 2021 ಕೆಎನ್2 6 ಮೀ. ಗಾತ್ರವಿದ್ದು, 144,519 ಕಿ.ಮೀ ದೂರದಲ್ಲಿ ಭೂಮಿಯನ್ನು ಸಮೀಪಿಸುತ್ತಿದ್ದು, ಇದು ಬಸ್‌ನ ಗಾತ್ರವಿದೆ ಎಂದೂ ತಿಳಿದುಬಂದಿದೆ.

ಕ್ಷುದ್ರಗ್ರಹ ಹೊಡೆತಗಳಿಂದ ಭೂಮಿಯು ಸುರಕ್ಷಿತವಾಗಿದೆಯೇ..?
ಸುಮಾರು 66 ದಶಲಕ್ಷ ವರ್ಷಗಳ ಹಿಂದೆ ಕ್ಷುದ್ರಗ್ರಹವೊಂದು ಭೂಮಿಗೆ ಅಪ್ಪಳಿಸಿತು. ಇದರಿಂದ ಡೈನೋಸಾರ್‌ಗಳ ನಾಶವಾಯ್ತು ಎಂದು ಹೇಳಲಾಗುತ್ತದೆ. ಅಂದಿನಿಂದ, ಅಂತಹ ಯಾವುದೇ ವಿನಾಶಕಾರಿ ವಸ್ತುವು ಭೂಮಿಗೆ ಅಪ್ಪಳಿಸಲಿಲ್ಲ ಮತ್ತು ಮಾನವ ವಿಕಾಸವನ್ನು ನಿರ್ಧರಿಸುವಲ್ಲಿ ಇದು ನಿರ್ಣಾಯಕ ಪಾತ್ರ ವಹಿಸಿದೆ. ಆದರೂ, ಡಾ. ಇಯಾನ್ ಮೆಕ್ಡೊನಾಲ್ಡ್ ಸೇರಿದಂತೆ ಹಲವಾರು ಉನ್ನತ ವೈದ್ಯಕೀಯ ತಜ್ಞರು ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸುವುದು ಆ ಕಾಲದಲ್ಲಿ ಮಾತ್ರ ಸೀಮಿತವಾಗಿಲ್ಲ. ಭವಿಷ್ಯದಲ್ಲಿಯೂ ಸಹ ಸಂಭವಿಸುತ್ತದೆ ಎಂದು ಹೇಳುತ್ತಾರೆ.
Youtube Video

ಅಮೆರಿಕದ ಜನಪ್ರಿಯ ಭೌತವಿಜ್ಞಾನಿ ನೀಲ್ ಡಿಗ್ರಾಸ್ ಟೈಸನ್ ಕೂಡ ಇದೇ ರೀತಿಯ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ ಮತ್ತು ಭವಿಷ್ಯದಲ್ಲಿ ಕ್ಷುದ್ರಗ್ರಹದ ಹೊಡೆತದ ನಂತರ ಭೂಮಿಯ ಮೇಲೆ ವಿನಾಶದ ಆರಂಭವಾಗಬಹುದು ಎಂದು ಅವರು ನಂಬುತ್ತಾರೆ.
Published by: Latha CG
First published: June 1, 2021, 11:33 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories