Exoplanet Planet: ಭೂಮಿಯಿಂದ 1500 ವರ್ಷಗಳ ದೂರದಲ್ಲಿ ಪತ್ತೆಯಾಯ್ತು ಆಲೂಗೆಡ್ಡೆ ಆಕಾರದ ಗ್ರಹ.. ಇಲ್ಲಿದೆ ನೋಡಿ ಡೀಟೈಲ್ಸ್

ಅಪಾರ ಪ್ರಮಾಣದ ಅಂಕಿ ಅಂಶವು ಖಗೋಳಶಾಸ್ತ್ರಜ್ಞರಿಗೆ ಗ್ರಹಗಳು ಹೇಗೆ ರೂಪುಗೊಳ್ಳುತ್ತವೆ ಮತ್ತು ಅದರದ್ದೇ ಆದಂತಹ ವ್ಯವಸ್ಥೆಗಳು ಹೇಗೆ ಹೊಂದಿಕೊಳ್ಳುತ್ತವೆ ಎಂಬುದನ್ನು ಪರಿಷ್ಕರಿಸಲು ಸಹಾಯ ಮಾಡುತ್ತದೆ

 ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ವರ್ಷಗಳ ಹಿಂದೆಯೇ ಪತ್ತೆಯಾದ ಎಕ್ಸೋಪ್ಲಾನೆಟ್ (Exoplanet) (ಸೌರಾತೀತ ಗ್ರಹ) ಹೆಚ್ಚುಕಡಿಮೆ ಆಲೂಗಡ್ಡೆಯ ಆಕಾರದಲ್ಲಿದೆ ಎಂಬುದಾಗಿ ಖಗೋಳಶಾಸ್ತ್ರಜ್ಞರು (Astronomers) ಅಂತಿಮವಾಗಿ ಘೋಷಿಸಿದ್ದಾರೆ. ಎಕ್ಸೋಪ್ಲಾನೆಟ್ ಎಂಬುದು ಸೌರವ್ಯೂಹದ (Solar System) ಹೊರಗಿನ ನಕ್ಷತ್ರವನ್ನು ಸುತ್ತುವ ಸೌರಾತೀತ ಗ್ರಹವಾಗಿದೆ. ಸುದ್ದಿ ಸಂಸ್ಥೆ AFP ಉಲ್ಲೇಖಿಸಿರುವಂತೆ, ಗ್ರಹ WASP-103b ಭೂಮಿಯಿಂದ(Earth) 1500 ಬೆಳಕಿನ ವರ್ಷಗಳ ದೂರದಲ್ಲಿದ್ದು ಎಫ್-ಆಕಾರದ ನಕ್ಷತ್ರದಲ್ಲಿ ನೆಲೆಸಿದೆ ಹಾಗೂ ಇದು ಆಲೂಗಡ್ಡೆಯ ಆಕಾರದಲ್ಲಿದ್ದು ಸಾಮಾನ್ಯವಾಗಿರುವ ಗೋಳಾಕಾರದಲ್ಲಿಲ್ಲ ಎಂಬುದಾಗಿ ವರದಿ ಉಲ್ಲೇಖಿಸಿದೆ.

WASP-103b ರಚನೆ ಹೇಗಿದೆ?
WASP-103b ಗ್ರಹವನ್ನು ಯುರೋಪ್‌ನ ಬಾಹ್ಯಾಕಾಶ ಏಜೆನ್ಸಿ (ESA) ಮೂಲಕ ಅನ್ವೇಷಿಸಲಾಗಿದ್ದು ಇದನ್ನು ಕುರಿತು 2014 ರಲ್ಲಿ ಎಕ್ಸೋಪ್ಲಾನೆಟ್ ಸ್ಯಾಟಲೈಟ್ ಯೋಜನೆಯಲ್ಲಿ ವಿವರಿಸಲಾಗಿದೆ. ESA ಪ್ರಕಾರ ಗ್ರಹವು ಹರ್ಕ್ಯೂಲಸ್‌ ನಕ್ಷತ್ರ ಪುಂಜದಲ್ಲಿದ್ದು ಗ್ರಹ ಹಾಗೂ ಅದರ ಬಿಸಿ ನಕ್ಷತ್ರ WASP-103 ಯ ನಡುವಿನ ಪ್ರಬಲ ಉಬ್ಬರವಿಳಿತ ಶಕ್ತಿಗಳಿಂದ ವಿರೂಪಗೊಂಡಿದೆ. ಈ ನಕ್ಷತ್ರವು ಸುಮಾರು 200 ಡಿಗ್ರಿಗಳಷ್ಟು ಬಿಸಿಯಾಗಿರುತ್ತದೆ ಮತ್ತು ನಮ್ಮ ಸೂರ್ಯನಿಗಿಂತ 1.7 ಪಟ್ಟು ದೊಡ್ಡದಾಗಿದೆ.

CHEOPS ಯೋಜನೆಯ ಮೂಲಕ ಸಂಗ್ರಹಿಸಲಾದ ಅಂಕಿ ಅಂಶಗಳ ಪ್ರಕಾರ ಈ ಎಕ್ಸೋಪ್ಲಾನಟ್ WASP-103 ಅನ್ನು 22 ಗಂಟೆಗಳ ಕಾಲ ಸುತ್ತುತ್ತದೆ ಎಂದಾಗಿದೆ. ಇದು ಅತ್ಯಂತ ಕಡಿಮೆ ಸುತ್ತುವಿಕೆ ಸಮಯವಲ್ಲದೇ ಇದ್ದರೂ ESA ತಿಳಿಸಿರುವ ಪ್ರಕಾರ ಕೆಲವೊಂದು ಎಕ್ಸೋಪ್ಲಾನೆಟ್‌ಗಳು ಹತ್ತಕ್ಕಿಂತ ಕಡಿಮೆ ಅವಧಿಯ ಸಮಯಗಳಲ್ಲಿ ಸುತ್ತಿರುವುದು ಕಂಡುಬಂದಿದೆ. ಆದರೆ WASP-103b ಅನ್ನು ವ್ಯಾಖ್ಯಾನಿಸಲು ಈ ಮಾಹಿತಿ ಕಡಿಮೆ ಇದೆ.

ಇದನ್ನೂ ಓದಿ: ಕುತೂಹಲಕಾರಿ ಸಂಗತಿ: ಭೂಮಿಯು ಸುತ್ತುವುದನ್ನು ನಿಲ್ಲಿಸಿದರೆ ಏನಾಗುತ್ತೆ?

ಗುರುಗ್ರಹದ ದುಪ್ಪಟ್ಟು ಆಕಾರ
ಸಂಶೋಧನೆ ನಡೆಸಲು, ಖಗೋಳಶಾಸ್ತ್ರಜ್ಞರು ಗ್ರಹದ ಉಬ್ಬರವಿಳಿತದ ವಿರೂಪವನ್ನು ಹಾಗೂ ನಶಿಸುವಿಕೆಯನ್ನು ಅಂದಾಜು ಮಾಡಲು WASP-103bಯ 12 ಚಲನೆ ಬೆಳಕಿನ ವಕ್ರಾಕೃತಿಗಳನ್ನು ಗಮನಿಸಿದ್ದಾರೆ. WASP-103b ಗುರುಗ್ರಹದ ದುಪ್ಪಟ್ಟು ಆಕಾರದಲ್ಲಿದೆ ಎಂಬುದಾಗಿ ಇತ್ತೀಚಿನ ಸಂಶೋಧನೆಗಳು ತಿಳಿಸಿವೆ.

WASP-103b ಯು ಇತರ ಯಾಂತ್ರಿಕೃತೆಯ ಜೊತೆಗೆ ಅದರ ನಕ್ಷತ್ರದ ಬಿಸಿಯಿಂದಾಗಿ ತುಂಬಾ ಉಬ್ಬಿಕೊಳ್ಳುತ್ತದೆ ಎಂಬುದಾಗಿ ತಿಳಿಸಿದ್ದಾರೆ. WASP-103b ಘನ ಪದರವನ್ನು ಹೊಂದಿದೆ, ದ್ರವ ಪದರದಿಂದ ಮುಚ್ಚಲ್ಪಟ್ಟಿದೆ ಮತ್ತು ಗುರುಗ್ರಹದಂತೆಯೇ ಅನಿಲ ವಾತಾವರಣದಿಂದ ಆವೃತವಾಗಿದೆ ಎಂದು ವಿಜ್ಞಾನಿಗಳು ಊಹಿಸುತ್ತಿದ್ದಾರೆ ಎಂದು AFP ವರದಿ ಮಾಡಿದೆ.

ಬೆಳಕಿನ ವಕ್ರಾಕೃತಿ
ಯುರೋಪಿಯನ್ ಸ್ಪೇಸ್ ಏಜೆನ್ಸಿಯ CHEOPS ಮಿಷನ್ ಮತ್ತು NASAದ ಹಬಲ್ ಮತ್ತು ಸ್ಪಿಟ್ಜರ್ ಬಾಹ್ಯಾಕಾಶ ದೂರದರ್ಶಕಗಳ ಡೇಟಾವನ್ನು ಬಳಸಿಕೊಂಡು ತಂಡವು WASP-103bನ ವಿಲಕ್ಷಣ ಆಕಾರವನ್ನು ಒಟ್ಟುಗೂಡಿಸಿದೆ. ಅಂತೆಯೇ ಗ್ರಹವು ಎಷ್ಟು ಮಸುಕಾಗಿದೆ ಎಂಬ ಮಾಹಿತಿಯನ್ನು ಕಲೆಹಾಕಿದೆ. ಮಬ್ಬಾಗಿಸುವಿಕೆಯು ಅದರ ಗಾತ್ರವನ್ನು ಒಳಗೊಂಡಂತೆ ಗ್ರಹದ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡುತ್ತದೆ. ಆದರೆ ಈ ಅಧ್ಯಯನವು ಅದರ ಗ್ರಹದ ಆಕಾರವನ್ನು ನಿರ್ಧರಿಸಲು WASP-103 ನಿಂದ ಬರುವ ಬೆಳಕಿನ ವಕ್ರಾಕೃತಿಗಳನ್ನು ವಿಶ್ಲೇಷಿಸುವ ಮೂಲಕ ವಿಭಿನ್ನ ವಿಧಾನವನ್ನು ತೆಗೆದುಕೊಳ್ಳುತ್ತದೆ.

ಇದನ್ನೂ ಓದಿ: ಚೀನಾದಲ್ಲಿ 72 ಮಿಲಿಯನ್‌ ವರ್ಷದ ಡೈನೋಸಾರ್ ಭ್ರೂಣ ಪತ್ತೆ

ಖಗೋಳಶಾಸ್ತ್ರಜ್ಞರಿಗೆ ಸಹಾಯ
ಇದೇ ರೀತಿಯ ಮತ್ತೊಂದು ಗ್ರಹ, WASP-12b ಒಂದೇ ಗಾತ್ರ, ಆಯತಾಕಾರದ ಆಕಾರ ಮತ್ತು ಇದೇ ರೀತಿಯ ಕಕ್ಷೆಯ ಅವಧಿಯನ್ನು ಹೊಂದಿದೆ, ಆದರೆ ಇದು ಅದರ ಹೋಮ್ ಸ್ಟಾರ್‌ನಿಂದ ವಿಭಜಿಸಲ್ಪಟ್ಟಿದೆ ಮತ್ತು ವೀಕ್ಷಣೆಗಳಲ್ಲಿ ಅಷ್ಟು ವಿವರವಾಗಿಲ್ಲ. ಇಲ್ಲಿಯವರೆಗೆ, ಖಗೋಳಶಾಸ್ತ್ರಜ್ಞರು 4,884 ಗ್ರಹಗಳನ್ನು ಕಂಡುಹಿಡಿದಿದ್ದಾರೆ.

ಈ ಗ್ರಹಗಳೆಲ್ಲವೂ ವಿಭಿನ್ನ ಆಕಾರಗಳು, ಗಾತ್ರಗಳು ಮತ್ತು ಸಂರಚನೆಗಳನ್ನು ಹೊಂದಿವೆ. ಈ ಅಪಾರ ಪ್ರಮಾಣದ ಅಂಕಿ ಅಂಶವು ಖಗೋಳಶಾಸ್ತ್ರಜ್ಞರಿಗೆ ಗ್ರಹಗಳು ಹೇಗೆ ರೂಪುಗೊಳ್ಳುತ್ತವೆ ಮತ್ತು ಅದರದ್ದೇ ಆದಂತಹ ವ್ಯವಸ್ಥೆಗಳು ಹೇಗೆ ಹೊಂದಿಕೊಳ್ಳುತ್ತವೆ ಎಂಬುದನ್ನು ಪರಿಷ್ಕರಿಸಲು ಸಹಾಯ ಮಾಡುತ್ತದೆ ಎಂದಾಗಿದೆ.
Published by:vanithasanjevani vanithasanjevani
First published: