HOME » NEWS » Trend » POTATO CHIPS CURRY BECAME VIRAL OVERNIGHT IN SOCIAL MEDIA KVD

Potato Chips Curry: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ ಚಿಪ್ಸ್ ಕರಿ: ಟೇಸ್ಟ್ ಹೇಗಿರುತ್ತೆ ಗೊತ್ತಾ?

ಕಳೆದ ವರ್ಷದ ಲಾಕ್​ಡೌನ್​ನಲ್ಲಿ ಅಡುಗೆ ಕಲಿತವರು ಈ ಲಾಕ್​ಡೌನ್​ನಲ್ಲಿ ಅಡುಗೆ ಮಾಡಿದರೆ ಹೀಗೆ ಇರುತ್ತೆ ಎಂದು ನೆಟ್ಟಿಗರು ನಗೆ ಚಟಾಕಿ ಹಾರಿಸಿದ್ದಾರೆ.

Kavya V | news18-kannada
Updated:June 10, 2021, 4:51 PM IST
Potato Chips Curry: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ ಚಿಪ್ಸ್ ಕರಿ: ಟೇಸ್ಟ್ ಹೇಗಿರುತ್ತೆ ಗೊತ್ತಾ?
ಚಿಪ್ಸ್​ ಕರಿ
  • Share this:
ನಾವೆಲ್ಲಾ ಈಗ ಸೋಷಿಯಲ್​ ಮೀಡಿಯಾ ಯುಗದಲ್ಲಿ ಬದುಕುತ್ತಿದ್ದೇವೆ. ಬೇಕೋ ಬೇಡವೋ ವಿನಾಕಾರಣ, ವಿಲಕ್ಷಣ ಸಂಗತಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಗಮನ ಸೆಳೆದು ಬಿಡುತ್ತವೆ. ರಾತ್ರೋರಾತ್ರಿ ಯಾವುದೋ ವಿಷಯ ವೈರಲ್​​ ಆಗಿ ಬಿಡುತ್ತೆ. ಅದನ್ನು ನೋಡಲು, ಶೇರ್​ ಮಾಡಲು ಮಿಲಿಯನ್​​​ಗಟ್ಟಲೇ ಜನ ಸೋಷಿಯಲ್​​ ಮೀಡಿಯಾದಲ್ಲಿದ್ದಾರೆ. ಅದೇ ರೀತಿ ಈಗ ಪೊಟ್ಯಾಟೋ ಚಿಪ್ಸ್​​ ಕರಿ (ಆಲೂಗಡ್ಡೆ ಚಿಪ್ಸ್​​​ ಗೊಜ್ಜು) ನೆಟ್ಟಿಗರ ಗಮನ ಸೆಳೆದಿದೆ. ಚಿಪ್ಸ್​ನಿಂದ ಮಾಡಿರುವ ಕರಿ ಫೋಟೋ ಎಲ್ಲೆಲ್ಲೂ ಹರಿದಾಡುತ್ತಿದೆ.

ವಿಭಿನ್ನ, ವಿಚಿತ್ರ ಫುಡ್​ ಕಾಂಬಿನೇಷನ್​​ನ ಈ ಅಡುಗೆಗೆ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದರ ಮೇಲೆ ಟ್ರೋಲ್​​, ಮಿಮ್ಸ್​ಗಳನ್ನು ಹರಿಬಿಟ್ಟು ಬಿಟ್ಟಿ ಮನೋರಂಜನೆ ಪಡೆಯುತ್ತಿದ್ದಾರೆ. ಇನ್ನು ಕೆಲವರು ವೈರಲ್​ ಅಡುಗೆಯ ರುಚಿ ನೋಡೇ ಬಿಡೋಣ ಎಂದು ಅಡುಗೆ ಮನೆಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಅಂಗಡಿಗಳಲ್ಲಿ 5, 10 ರೂಪಾಯಿಗಳಿಗೆ ಸಿಗುವ ಚಿಪ್ಸ್​ನಿಂದ ಕರಿ/ಸಾರು/ಗೊಜ್ಜು ಮಾಡಬಹುದೇ ಎಂದೇ ಹಲವರು ಪ್ರಯೋಗಗಳನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: ಹೆಣ್ಣುಮಕ್ಕಳಿಗೆ ಮೊಬೈಲ್ ಕೊಟ್ಟಿರುವುದರಿಂದಲೇ ರೇಪ್​​ಗಳು ಆಗುತ್ತಿವೆ: ಮಹಿಳಾ ಆಯೋಗದ ಸದಸ್ಯೆ ವಿವಾದ

ಉತ್ತರ ಭಾರತದ ಅಡುಗೆಗಳಲ್ಲಿ ಆಲೂ/ ಆಲೂಗಡ್ಡೆಯನ್ನು ಹೆಚ್ಚಾಗಿ ಬಳಸುತ್ತಾರೆ. ಈಗ ಲೇಸ್​ ಚಿಪ್ಸ್​​ ಬಳಸುತ್ತಿರುವುದ್ದಕ್ಕೆ ಅನೇಕ ಮಹಿಳೆಯರು ಮೂಗು ಮುರಿದಿದ್ದಾರೆ. ಚಿಪ್ಸ್​​​​ ಏಕೆ ತಂಪು ಪಾನೀಯಗಳನ್ನೂ ಹಾಕಿ ಸಾಂಬಾರ್​ ಮಾಡಬಹುದಲ್ಲಾ ಎಂದು ವ್ಯಂಗ್ಯವಾಡಿದ್ದಾರೆ. ಕಳೆದ ವರ್ಷದ ಲಾಕ್​ಡೌನ್​ನಲ್ಲಿ ಅಡುಗೆ ಕಲಿತವರು ಈ ಲಾಕ್​ಡೌನ್​ನಲ್ಲಿ ಅಡುಗೆ ಮಾಡಿದರೆ ಹೀಗೆ ಇರುತ್ತೆ ಎಂದು ನೆಟ್ಟಿಗರು ನಗೆ ಚಟಾಕಿ ಹಾರಿಸಿದ್ದಾರೆ.

ಟ್ರೋಲ್​​, ಮಿಮ್ಸ್​ ಪೇಜ್​​ಗಳಿಗಂತೂ ಈ ಚಿಪ್ಸ್​ ಕರಿ ಭರ್ಜರಿ ಆಹಾರವಾಗಿದೆ. ಇದು ಮನುಷತ್ವದ ಮೇಲೆ ಆದ ದಾಳಿ ಎಂದು ಟ್ರೋಲ್​ ಮಾಡುತ್ತಿದ್ದಾರೆ. ಇಂದಿನ ಯುವತಿಯರು ಯೂಟ್ಯೂಬ್​ ನೋಡಿಕೊಂಡು ಅಡುಗೆ ಮಾಡಿದ್ರೆ ಹೀಗೆ ಇರುತ್ತೆ ಎಂದು ಯುವತಿಯನ್ನು ಇದಕ್ಕೆ ಎಳೆದು ಛೀಮಾರಿ ಹಾಕಿಸಿಕೊಳ್ಳುತ್ತಿದ್ದಾರೆ. ಚಿಪ್ಸ್​ ಪ್ರಿಯರಂತೂ ಈ ಕರಿಗೆ ಬಹುಪರಾಕ್​​ ಹೇಳುತ್ತಿದ್ದಾರೆ. ಲೇಸ್​ ಚಿಪ್ಸ್​​​ ಇಷ್ಟಪಡುವ ಬಹುತೇಕ ಯುವತಿಯರು ಈ ಕರಿಗೆ ಮಾರು ಹೋಗಿದ್ದಾರೆ. ಅದೇನೇ ಇರಲಿ ಡಿಫರೆಂಟ್​ ಫುಡ್​ ಟೇಸ್ಟ್​ ಮಾಡುವ ಕ್ರೇಜ್​ ಇರುವವರು ಒಮ್ಮೆ ಈ ಚಿಪ್ಸ್​​ ಕರಿನ ಟ್ರೈ ಮಾಡಬಹುದು.
Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by: Kavya V
First published: June 10, 2021, 4:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories