ಸೆಲ್ಫಿ ಕ್ರೇಜ್​ ನಿಮಗಿದೆಯಾ, ಇದ್ರಿಂದ ನಿಮ್ಮಲ್ಲಿ ಆಗೋ ಬದಲಾವಣೆ ಏನು ಗೊತ್ತಾ!

ಸೆಲ್ಫಿ ತೆಗೆದುಕೊಳ್ಳುವರಲ್ಲಿ ಸ್ವ ಪ್ರಶಂಸೆ ಮೂಡಿ ಅವರಲ್ಲಿನ ಆತ್ಮಾಸಕ್ತಿಯನ್ನು  ಹೆಚ್ಚಿಸುತ್ತದೆ. ಈ ಆತ್ಮ ಪ್ರಶಂಸೆ ಎಷ್ಟು ಒಳ್ಳೆಯದೊ ಅಷ್ಟೇ ಅಪಾಯಕಾರಿ ಕೂಡ

Seema.R | news18
Updated:November 12, 2018, 5:14 PM IST
ಸೆಲ್ಫಿ ಕ್ರೇಜ್​ ನಿಮಗಿದೆಯಾ, ಇದ್ರಿಂದ ನಿಮ್ಮಲ್ಲಿ ಆಗೋ ಬದಲಾವಣೆ ಏನು ಗೊತ್ತಾ!
ಸೆಲ್ಫಿ ತೆಗೆದುಕೊಳ್ಳುವರಲ್ಲಿ ಸ್ವ ಪ್ರಶಂಸೆ ಮೂಡಿ ಅವರಲ್ಲಿನ ಆತ್ಮಾಸಕ್ತಿಯನ್ನು  ಹೆಚ್ಚಿಸುತ್ತದೆ. ಈ ಆತ್ಮ ಪ್ರಶಂಸೆ ಎಷ್ಟು ಒಳ್ಳೆಯದೊ ಅಷ್ಟೇ ಅಪಾಯಕಾರಿ ಕೂಡ
  • Advertorial
  • Last Updated: November 12, 2018, 5:14 PM IST
  • Share this:
ನ್ಯೂಸ್​ 18 ಕನ್ನಡ

ಸ್ಮಾರ್ಟ್​ ಫೋನುಗಳು ಬಂದ್ಮೇಲಂತೂ ಜನರಿಗೆ ತಮ್ಮ ಪೋಟೊ ತೆಗೆದುಕೊಳ್ಳುವ ಹುಚ್ಚು ಹೆಚ್ಚಾಗಿದೆ ಎಂದರು ತಪ್ಪಿಲ್ಲ. ಕಣ್ಣು, ಮೂತಿ ಸೊಟ್ಟಗೆ ಮಾಡಿ ಎದ್ದರು, ಕೂತರು ತಮ್ಮ ಪೋಟೋವನ್ನು ತಾವೇ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕ್ತಾ ಪ್ರಶಂಸೆ ಪಡೆಯುತ್ತಾರೆ.

ಒಂದು ರೀತಿಯಲ್ಲಿ ಅತಿರೇಕ ಎನ್ನಿಸುವಷ್ಟು ಜನರಲ್ಲಿ ಸೆಲ್ಫಿ ಹುಚ್ಚಿದ್ದು, ಇದಕ್ಕಾಗಿ ಅನೇಕರು ಪ್ರಾಣ ಕಳೆದುಕೊಂಡಿರುವುದು ಸುಳ್ಳಲ್ಲ. ಈ ರೀತಿ ಸೆಲ್ಫಿ ತೆಗೆದುಕೊಳ್ಳುವುದರಿಂದ ಎಷ್ಟು ಅಪಾಯವೋ ಎಷ್ಟೆ ಲಾಭಾ ಕೂಡ ಇದೆ.

ಈ ಬಗ್ಗೆ ಇತ್ತೀಚೆಗೆ ಇಂಗ್ಲೆಡ್​ನ ಸ್ಟಾನ್ಸೇ  ಮತ್ತು ಇಟಲಿಯ ಮಿಲನ ವಿಶ್ವವಿದ್ಯಾಲಯ ಸಂಶೋಧನೆಯನ್ನು ನಡೆಸಿದೆ.

ಸೆಲ್ಫಿ ತೆಗೆದುಕೊಳ್ಳುವರಲ್ಲಿ ಸ್ವ ಪ್ರಶಂಸೆ ಮೂಡಿ ಅವರಲ್ಲಿನ ಆತ್ಮಾಸಕ್ತಿಯನ್ನು  ಹೆಚ್ಚಿಸುತ್ತದೆ. ಈ ಬೆಳವಣಿಗೆ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಫೋಟೋ ಪೋಸ್ಟ್​ ಮಾಡು ಶೇ. 25ರಷ್ಟು ಜನರಲ್ಲಿ ಕಂಡು ಬರುತ್ತದೆ.

ಈ ಆತ್ಮ ಪ್ರಶಂಸೆ ಎಷ್ಟು ಒಳ್ಳೆಯದೊ ಅಷ್ಟೇ ಅಪಾಯಕಾರಿ ಕೂಡ. ನಮ್ಮಲ್ಲಿ ಸ್ವಪ್ರಶಂಸೆ ಹೆಚ್ಚಿದಷ್ಟು, ಜನರ ಮುಂದೆ ತಮ್ಮನ್ನು ಪ್ರದರ್ಶಿಸಿಕೊಳ್ಳಬೇಕು ಎಂಬ ಆಸೆ ಹೆಚ್ಚಿರುತ್ತದೆ ಅಷ್ಟೇ ಅಲ್ಲದೇ, ಇದು ಬೇರೆಯವನ್ನು ಕೀಳಾಗಿ ಕಾಣುವ ಮನೋಭಾವನೆ ಮೂಡಿಸುತ್ತದೆ ಎಂದಿದ್ದಾರೆ.

ಇದನ್ನು ಓದಿ : ಶ್ವಾಸಕೋಶದ ಕ್ಯಾನ್ಸರ್: ಆರಂಭದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿಫೇಸ್​ಬುಕ್​ ಬಳಸುವ ಶೇ 60, ಇನ್ಸ್ಟಾಗ್ರಾಂ ಬಳಸುವ ಶೇ 25 ಹಾಗೂ ಟ್ವಿಟರ್​ ಬಳಸುವ ಶೇ 13ರಷ್ಟು ಜನರನ್ನು ಈ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ. ಇದರಲ್ಲಿ  ಮೂರನೇ ಎರಡರಷ್ಟು ಜನರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಇಮೇಜ್​ಗಳನ್ನು ಪ್ರಕಟಿಸುವರಾಗಿದ್ದಾರೆ.

ಈ ಅಧ್ಯಯನದ ಪ್ರಕಾರ ಶೇ.20ರಷ್ಟು ಜನರಿಗೆ ತಮಗೆ ತಿಳಿಯದಂತೆ ಆತ್ಮಪ್ರಶಂಸೆ ಬಂದಿರುತ್ತದೆ. ಈ ಮೂಲಕ ಅವರು ತಮಗೆ ಗೊತ್ತಿಲ್ಲದಂತೆ ಸಾಮಾಜಿಕ ಮಾಧ್ಯಮವನ್ನು ಅತಿ ಹೆಚ್ಚು ಬಳಸುತ್ತಿರುತ್ತಾರೆ. ಅಷ್ಟೇ ಅಲ್ಲದೇ ನಾವು ಆಕರ್ಷಣೆಯ ಕೇಂದ್ರ ಬಿಂದು ಎಂಬ ಭಾವನೆ ಅವರಲ್ಲಿ ಮೂಡಿ, ಬೇರೆಯವರ ಬಗ್ಗೆ ತಾತ್ಸಾರ ಮನೋಭಾವ ಮೂಡುತ್ತದೆ ಎಂದಿದ್ದಾರೆ.

First published:November 12, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ