ಹಣ ಹೂಡಿಕೆ ಮಾಡುವಾಗ, ಹೂಡಿಕೆದಾರರು ಭದ್ರತೆ ಮತ್ತು ಉತ್ತಮ ಲಾಭ ಇವೆರಡು ವಿಚಾರಗಳನ್ನು ತಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತಾರೆ. ಈ ಎರಡಕ್ಕೂ ಖಾತರಿ ನೀಡುವಂತಹ ಅಂಚೆ ಇಲಾಖೆಯು ಅನೇಕ ಉಳಿತಾಯ ಯೋಜನೆಗಳನ್ನು ಹೊಂದಿದೆ.
ಈ ಪೈಕಿ ಇಂಡಿಯಾ ಪೋಸ್ಟ್ ನೀಡುವ ಇಂತಹ ಒಂದು ಯೋಜನೆ ಎಂದರೆ ಅದು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC).ಈ ಸ್ಕೀಂ ಬಗ್ಗೆ ವಿವರವಾದ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಈ ಮೂಲಕ ನೀವು ಹೆಚ್ಚಿನ ಹಣ ಗಳಿಸುವ ಜತೆಗೆ ತೆರಿಗೆಯನ್ನೂ ಉಳಿಸಬಹುದಾಗಿದೆ. ಹೀಗೆ ಎರಡು ಪ್ರಯೋಜನಗಳನ್ನು ನೀಡುತ್ತದೆ ಅಂಚೆ ಕಚೇರಿಯ ಈ ಉಳಿತಾಯ ಯೋಜನೆ.
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC)
ನೀವು ಅನೇಕ ಬ್ಯಾಂಕ್ಗಳಲ್ಲಿ ಸ್ಥಿರ ಠೇವಣಿ (ಎಫ್ಡಿ) ದರಗಳಿಗಿಂತ ಹೆಚ್ಚಿನ ಬಡ್ಡಿಯನ್ನು ಈ ಸ್ಕೀಂನಡಿ ಪಡೆಯಬಹುದು. ಅಂಚೆ ಕಚೇರಿಯ NSC ಯೋಜನೆ ಪ್ರಸ್ತುತ 6.8% ಬಡ್ಡಿದರ ನೀಡುತ್ತಿದೆ. ನೀವು NSCಯಲ್ಲಿ ಹೂಡಿಕೆ ಮಾಡುವ ಹಣವು ವಾರ್ಷಿಕವಾಗಿ ಬಡ್ಡಿಯನ್ನು ಸೇರಿಸುವುದನ್ನು ಮುಂದುವರಿಸುತ್ತದೆ ಎಂಬುದನ್ನು ನೆನಪಿನಲ್ಲಿಡಿ, ಆದರೆ, ಆ ಹಣವನ್ನು ಸ್ಕಿಂನ ಮೆಚ್ಯೂರಿಟಿ ಅವಧಿ ಮುಗಿದ ಬಳಿಕ ಪಾವತಿಸಲಾಗುತ್ತದೆ.
NSC ಯೋಜನೆಯ ಮುಕ್ತಾಯ ಅವಧಿ 5 ವರ್ಷಗಳು. ಆದರೆ, ನೀವು ಬಯಸಿದಲ್ಲಿ ಅವಧಿ ಮುಕ್ತಾಯದ ನಂತರ ಇನ್ನೊಂದು 5 ವರ್ಷಗಳವರೆಗೆ ನಿಮ್ಮ ಹೂಡಿಕೆಯನ್ನು ಹೆಚ್ಚಿಸಬಹುದು. ನೀವು NSCಯಲ್ಲಿ ಕನಿಷ್ಠ 100 ರೂ. ಗಳನ್ನು ಹೂಡಿಕೆ ಮಾಡಬೇಕಾಗುತ್ತದೆ ಅಂದರೆ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಸ್ಕೀಂನಡಿ ಇದು ಕನಿಷ್ಠ ಹೂಡಿಕೆಯ ಮೊತ್ತ. ಆದರೆ, ಈ ಸ್ಕೀಂನಡಿ ಯಾವುದೇ ಗರಿಷ್ಠ ಹೂಡಿಕೆಯ ಮಿತಿ ಇಲ್ಲ.
ಇದನ್ನೂ ಓದಿ: ಕೆಳ, ಅಧೀನ ನ್ಯಾಯಾಲಯಗಳಲ್ಲಿ ಬಾಕಿ ಇವೆ 3.93 ಕೋಟಿ ಪ್ರಕರಣಗಳು
5 ವರ್ಷಗಳಲ್ಲಿ 6 ಲಕ್ಷ ರೂ. ಬಡ್ಡಿ ಗಳಿಸಿ..!
ಹೂಡಿಕೆದಾರರು ಎನ್ಎಸ್ಸಿಯಲ್ಲಿ 15 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದರೆ, ಹೂಡಿಕೆದಾರರು 5 ವರ್ಷಗಳಲ್ಲಿ 6.8% ಬಡ್ಡಿದರದಲ್ಲಿ , 20.85 ಲಕ್ಷ ರೂ. ಅಂದರೆ 5 ವರ್ಷಗಳಲ್ಲಿ ಸುಮಾರು 6 ಲಕ್ಷ ರೂ ಬಡ್ಡಿ ಪಡೆಯಬಹುದಾಗಿದೆ. ಈ ಹಿನ್ನೆಲೆ ನೀವು ಒಂದು ತಿಂಗಳಿಗೆ 25 ಸಾವಿರ ರೂ. ಹೂಡಿಕೆ ಮಾಡಿದರೆ 5 ವರ್ಷಗಳಲ್ಲಿ 15 ಲಕ್ಷ ರೂ. ಹೂಡಿಕೆ ಮಾಡಿದಂತಾಗುತ್ತದೆ. ಇದರಿಂದ ನೀವು 21 ಲಕ್ಷ ರೂ. ವರೆಗೆ ಹಣ ಗಳಿಸಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ