• Home
  • »
  • News
  • »
  • trend
  • »
  • ಬೆಂಗಳೂರಿನ ರೆಸ್ಟೊರೆಂಟ್​ನಲ್ಲಿ ಕ್ರಿಪ್ಟೋ ಖಾದ್ಯಗಳು, ಮೆನುವಿನಲ್ಲಿ ಏನೆಲ್ಲಾ ಇದೆ ನೋಡಿ..ಶಾಕ್ ಆಗ್ಬೇಡಿ ಅಷ್ಟೇ!

ಬೆಂಗಳೂರಿನ ರೆಸ್ಟೊರೆಂಟ್​ನಲ್ಲಿ ಕ್ರಿಪ್ಟೋ ಖಾದ್ಯಗಳು, ಮೆನುವಿನಲ್ಲಿ ಏನೆಲ್ಲಾ ಇದೆ ನೋಡಿ..ಶಾಕ್ ಆಗ್ಬೇಡಿ ಅಷ್ಟೇ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Crypto Samosa: ಈರುಳ್ಳಿ ಸಮೋಸ, ದಹಿ ಸಮೋಸ ಚಾಟ್‌ ,ಇರಾನಿ ಸಮೋಸಾ, ಪನೀರ್ ಟಿಕ್ಕಾ ಸಮೋಸ,ಆಲೂ ಸಮೋಸ ಹೀಗೆ ವೆರೈಟಿ ವೆರೈಟಿ ಸಮೋಸಗಳು ಸಂಜೆಯ ವೇಳೆಯ ಸ್ನ್ಯಾಕ್ಸ್ ಗೆ ಫರ್ಪೆಕ್ಟ್ ಆಗಿರುತ್ತೆ. ಇಂತಹ ಸಮೋಸವನ್ನ ಇಷ್ಟ ಪಡದವರೆ ಇಲ್ಲ.. ಹೀಗಾಗಿ ಇದನ್ನೆ ಬಂಡವಾಳವಾಗಿ ಮಾಡಿಕೊಂಡಿರೋ ಪಂಜಾಬಿ ರೆಸ್ಟೋರೆಂಟ್ ವೊಂದು ಕ್ರಿಪ್ಟೋ ಹೆಸರಿನಲ್ಲಿ ಚಿಕನ್ ಟಿಕಾ ಕ್ರಿಪ್ಟೋ ಸಮೋಸ ವನ್ನ ಮಾರಾಟ ಮಾಡಲು ಮುಂದಾಗಿದೆ..

ಮುಂದೆ ಓದಿ ...
  • Share this:

    ಭಾರತದಲ್ಲಿ(India) ಎಲ್ಲಿ ನೋಡಿದ್ರು ಕ್ರಿಪ್ಟೋ ಕರೆನ್ಸಿಯದ್ದೆ(Crypto Currency) ಸದ್ದು..ಮಾರ್ಕ್ ಕ್ಯೂಬನ್ ಮತ್ತು ಎಲಾನ್ ಮಸ್ಕ್(Elon Mask) ರಂತಹ ದೊಡ್ಡ ಪ್ರಭಾವಿ ವ್ಯಕ್ತಿಗಳು ಈಗಾಗಲೇ ಕ್ರಿಪ್ಟೋ ಕರೆನ್ಸಿ ಹಾಗೂ ಕ್ರಿಪ್ಟೋ ಕರೆನ್ಸಿ ಬಗ್ಗೆ ಜಾಗತಿಕ ಮಟ್ಟದಲ್ಲಿ ಮಾತನಾಡಿ ಸದ್ದು ಮಾಡುತ್ತಿದ್ದಾರೆ. ಇದರ ಜೊತೆಗೆ ಭಾರತದಲ್ಲಿ ಮೊನ್ನೆ ಮೊನ್ನೆ ಕಿಡಿಗೇಡಿಗಳು ಪ್ರಧಾನಿ ನರೇಂದ್ರ ಮೋದಿಯವರ(PM Modi) ಟ್ವೀಟರ್(Twitter) ಖಾತೆ ಹ್ಯಾಕ್ ಮಾಡಿ ಭಾರತದಲ್ಲಿ ಕ್ರಿಪ್ಟೋ ಕರೆನ್ಸಿ ಅಧಿಕೃತವಾಗಿದೆ ಎಂದು ನಕಲಿ ಟ್ವೀಟ್ ಮಾಡಿ ಸಾಕಷ್ಟು ಗೊಂದಲ ಮೂಡಿಸಿದ್ರು.. ಇಷ್ಟೆಲ್ಲಾ ಕ್ರಿಪ್ಟೋ ಕರೆನ್ಸಿ ಸುದ್ದಿಯಾಗುತ್ತಿರುವಾಗಲೇ ಇದನ್ನೇ ಬಂಡವಾಳವಾಗಿ ಇಟ್ಟುಕೊಂಡು ಲಾಭ ಮಾಡಿಕೊಳ್ಳೋದಕ್ಕೆ ಅನೇಕರು ಮುಂದಾಗಿದ್ದಾರೆ.


    ಡಾಗ್-ಥೀಮ್ ಕ್ರಿಪ್ಟೋಸ್ ಬಳಿಕ ಬಂತು ಕ್ರಿಪ್ಟೋ ಸಮೋಸ


    ಸದ್ಯ ಕ್ರಿಪ್ಟೋ ಕರೆನ್ಸಿ ವಿಚಾರ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಸುದ್ದಿಯಾಗುತ್ತಿರುವಾಗಲೆ, ಅನೇಕ ವಾಣಿಜ್ಯ ಸಂಸ್ಥೆಗಳು ಕ್ರಿಪ್ಟೋ ಹೆಸರಿನಲ್ಲಿ ಅನೇಕ ಪ್ರಾಡಕ್ಟ್ ತಂದು ಮಾರುಕಟ್ಟೆಗೆ ತಂದು ಬಿಟ್ಟಿದ್ದಾರೆ.. ಕೆಲವು ದಿನಗಳ ಹಿಂದಷ್ಟೆ ಡಾಗ್-ಥೀಮ್ ಕ್ರಿಪ್ಟೋಸ್ ಎಂಬ ಕಾಯಿನ್ ತಂದು ಸಾಕಷ್ಟು ಸುದ್ದಿಯಾಗಿತ್ತು. ಜೊತಗೆ ಮೀಮ್ಸ್ ಪೇಜ್ ಗಳಂತು ಕ್ರಿಪ್ಟೋ ಕರೆನ್ಸಿ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್ ಕೂಡ ಮಾಡಿದ್ರು. ಈಗ ಬೆಂಗಳೂರಲ್ಲಿ ರೆಸ್ಟೋರೆಂಟ್ ಒಂದು ಕ್ರಿಪ್ಟೋ ಹೆಸರಲ್ಲಿ ಸಮೋಸ ಮಾಡಿ ಸಿಕ್ಕಾಪಟ್ಟೆ ಸುದ್ದಿಯಾಗಿದೆ..


    ಇದನ್ನೂ ಓದಿ: ಮಳೆಗಾಲದಲ್ಲಿ ಟ್ರೈ ಮಾಡಲೇಬೇಕಾದ ಗರಿಗರಿ ಸ್ನ್ಯಾಕ್ಸ್​..!


    ಬೆಂಗಳೂರು ರೆಸ್ಟೋರೆಂಟ್ ನಿಂದ ಚಿಕನ್ ಟಿಕ್ಕಾ ಕ್ರಿಪ್ಟೋ ಸಮೋಸ


    ಐಟಿ ಹಬ್ ಅಂತಲೇ ಸಿಕ್ಕಾಪಟ್ಟೆ ಖ್ಯಾತಿ ಪಡೆದಿರೋ ಬೆಂಗಳೂರು ಇಲ್ಲಿನ ರೆಸ್ಟೋರೆಂಟ್ , ಲೈಫ್ ಸೈಲ್ ಪಬ್ ನಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡುತ್ತೆ. ಯುವಕರು ಸಿಕ್ಕಾಪಟ್ಟೆ ಇಷ್ಟಪಡೋ ಹಾಟ್ ಸ್ಪಾಟ್ ಆಗಿರೋ ಇಲ್ಲಿನ ರೆಸ್ಟೋರೆಂಟ್ ಗಳು ಒಂದೊಂದು ಬಗೆಯ ಫುಡ್ ನಿಂದ ಯುವಕರನ್ನ ಸೆಳೆಯುತ್ತಲೆ ಇರುತ್ತವೆ. ಅದ್ರಲ್ಲೂ ಬೆಂಗಳೂರಿನ ಚಳಿಗೆ ಸಿಗೋ ಸಮೋಸ ಐಟಿ ಹಬ್ ಬೆಂಗಳೂರಿನ ಯುವಕರಿಗೆ ಪಂಚಪ್ರಾಣ. ಈರುಳ್ಳಿ ಸಮೋಸ, ದಹಿ ಸಮೋಸ ಚಾಟ್‌ ,ಇರಾನಿ ಸಮೋಸಾ, ಪನೀರ್ ಟಿಕ್ಕಾ ಸಮೋಸ,ಆಲೂ ಸಮೋಸ ಹೀಗೆ ವೆರೈಟಿ ವೆರೈಟಿ ಸಮೋಸಗಳು ಸಂಜೆಯ ವೇಳೆಯ ಸ್ನ್ಯಾಕ್ಸ್ ಗೆ ಫರ್ಪೆಕ್ಟ್ ಆಗಿರುತ್ತೆ. ಇಂತಹ ಸಮೋಸವನ್ನ ಇಷ್ಟ ಪಡದವರೆ ಇಲ್ಲ.. ಹೀಗಾಗಿ ಇದನ್ನೆ ಬಂಡವಾಳವಾಗಿ ಮಾಡಿಕೊಂಡಿರೋ ಪಂಜಾಬಿ ರೆಸ್ಟೋರೆಂಟ್ ವೊಂದು ಕ್ರಿಪ್ಟೋ ಹೆಸರಿನಲ್ಲಿ ಚಿಕನ್ ಟಿಕಾ ಕ್ರಿಪ್ಟೋ ಸಮೋಸ ವನ್ನ ಮಾರಾಟ ಮಾಡಲು ಮುಂದಾಗಿದೆ..



    ಇದನ್ನೂ ಓದಿ: ಮಳೆಗಾಲದಲ್ಲಿ ಟ್ರೈ ಮಾಡಲೇಬೇಕಾದ ಗರಿಗರಿ ಸ್ನ್ಯಾಕ್ಸ್​..!


    ಕ್ರಿಪ್ಟೋ ಚಾಯ್ ವೂಶ್ ಎನ್ನುವ ಪಂಜಾಬಿ ರೆಸ್ಟೋರೆಂಟ್ ಚಿಕನ್ ಟಿಕಾ ಕ್ರಿಪ್ಟೋ ಸಮೋಸವನ್ನ ಮಾರಾಟ ಮಾಡಲು ಮುಂದಾಗಿದ್ದು, ಗ್ರಾಹಕರನ್ನ ತನ್ನತ್ತ ಸೆಳೆಯುತ್ತಿದೆ. ಅಲ್ಲದೆ ಈ ರೆಸ್ಟೋರೆಂಟ್ ನ ಸ್ಪೆಷಲ್ ಚಿಕನ್ ಟಿಕಾ ಕ್ರಿಪ್ಟೋ ಸಮೋಸ ಮೆನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಗ್ರಾಹಕರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಬೆಂಗಳೂರಿನ ಸ್ಥಿತಿ ನಾರ್ಮಲ್ ಆಗಿದೆ ಅಲ್ವಾ ಅಂತ ಪ್ರಶ್ನೆ ಮಾಡ್ತಾ ಇದ್ದಾರೆ. ಇನ್ನು ಕೆಲವರು ಕ್ರಿಪ್ಟೋ ಕರೆನ್ಸಿ ಇಷ್ಟ ಪಡೋರಿಗೆ ಇದು ಫರ್ಪೆಕ್ಟ್ ಮೆನು ಅಂತ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ

    Published by:ranjumbkgowda1 ranjumbkgowda1
    First published: