Work From Home: ಕೆಲಸದ ಟೈಂ ಮುಗಿದ ಮೇಲೆ ಉದ್ಯೋಗಿಗಳಿಗೆ ಕಾಟ​ ಕೊಡುವಂತಿಲ್ಲ- ಪೋರ್ಚುಗಲ್​ನಲ್ಲಿ ಹೊಸಾ ರೂಲ್ಸ್!

Stress of Work: ಕೆಲಸದ ಸಮಯದ ನಂತರ ವ್ಯವಸ್ಥಾಪಕರು ಮತ್ತು ಮೇಲಾಧಿಕಾರಿಗಳು ತಮ್ಮ ಉದ್ಯೋಗಿಗಳನ್ನು ಸಂಪರ್ಕಿಸುವುದನ್ನು ಕಾನೂನುಬಾಹಿರ ಮಾಡುವ ಮೂಲಕ ಪೋರ್ಚುಗಲ್ ತನ್ನ ಉದ್ಯೋಗಿಗಳಿಗೆ ಹೆಚ್ಚಿನ ಕೆಲಸದ ಹೊರೆಯನ್ನು ತಪ್ಪಿಸಲು ಒಂದು ಹೆಜ್ಜೆಯನ್ನು ಇಟ್ಟಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಸಾಂಕ್ರಾಮಿಕ ಮಹಾಮಾರಿ ಕೊರೋನಾ (Covid Pandemic) ವೈರಸ್‍ನಿಂದ ಇಡೀ ಜೀವನವೇ ಅಸ್ತವ್ಯಸ್ತಗೊಂಡಿತು. ಅದರಲ್ಲೂ ಉದ್ಯೊಗಿಗಳ ಪಾಡಂತೂ ಹೇಳತೀರದ ಬವಣೆಯನ್ನೇ ಅನುಭವಿಸಿತು ಎಂದು ಹೇಳಬಹುದು. ಒಟ್ಟಾರೆ ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯವನ್ನು (Physical and Mental Health) ಹದಗೆಡಿಸಿತು ಎಂದು ಹೇಳಿದರೆ ತಪ್ಪಾಗಲಾರದು. ಉದ್ಯೋಗಿಗಳು ಪ್ರಪಂಚದಾದ್ಯಂತ ಸುಮಾರು ಎರಡು ವರ್ಷಗಳಿಂದ ತಡೆರಹಿತವಾಗಿ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ (Work from Home). ಕಾರ್ಯಾಚರಣೆಗಳು ರಿಮೋಟ್ ರೀತಿಯಾಗಿದ್ದು, ಜನರು ತಮ್ಮ ಕೆಲಸವನ್ನು ಪೂರ್ಣಗೊಳಿಸಲು ಇಡೀ ದಿನ ತಮ್ಮ ಮನೆಗಳಿಗೆ ಸೀಮಿತರಾಗಿದ್ದಾರೆ. ಅನೇಕರು ಹೆಚ್ಚುವರಿ ಗಂಟೆಗಳ ಕೆಲಸ ಮಾಡಬೇಕಾಗುತ್ತದೆ. ಇದು ಆತಂಕಕಾರಿಯಾಗಿದ್ದು, ಮಾನಸಿಕ ಮತ್ತು ದೈಹಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ.

ಕೆಲಸದ ಸಮಯ ಮುಗಿದ ಮೇಲೆ ಕಾಟ ಕೊಡುವಂತಿಲ್ಲ!

ವಿಪರೀತ ಕೆಲಸದ ಒತ್ತಡವನ್ನು ಕಡಿಮೆ ಮಾಡುವ ಮಾರ್ಗಗಳ ಕುರಿತು ರಾಷ್ಟ್ರಗಳು ಯೋಚಿಸುತ್ತಿದ್ದಂತೆ, ಕೆಲಸದ ಸಮಯದ ನಂತರ ವ್ಯವಸ್ಥಾಪಕರು ಮತ್ತು ಮೇಲಾಧಿಕಾರಿಗಳು ತಮ್ಮ ಉದ್ಯೋಗಿಗಳನ್ನು ಸಂಪರ್ಕಿಸುವುದನ್ನು ಕಾನೂನುಬಾಹಿರ ಮಾಡುವ ಮೂಲಕ ಪೋರ್ಚುಗಲ್ ತನ್ನ ಉದ್ಯೋಗಿಗಳಿಗೆ ಹೆಚ್ಚಿನ ಕೆಲಸದ ಹೊರೆಯನ್ನು ತಪ್ಪಿಸಲು ಒಂದು ಹೆಜ್ಜೆಯನ್ನು ಇಟ್ಟಿದೆ. ಈ ಹಂತವು ಉದ್ಯೋಗಿಗಳ ಮಾನಸಿಕ ಆರೋಗ್ಯ ಮತ್ತು ಸ್ಥಿರತೆಯನ್ನು ಪರಿಗಣಿಸುವ ಹೊಸ ಆಯಾಮ ಆಗಿದೆ. ಕೆಲಸದ ಸಮಯದ ನಂತರ ಅವರು ತಮ್ಮ ಉದ್ಯೋಗಿಗಳನ್ನು ಸಂಪರ್ಕಿಸಿದರೆ ಮೇಲಧಿಕಾರಿಯನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಮತ್ತು ಮನೆಯಿಂದ ವ್ಯಾಪಕವಾಗಿ ಕೆಲಸ ಮಾಡಿದರೆ ಹೆಚ್ಚಿದ ಅನಿಲ ಮತ್ತು ವಿದ್ಯುತ್ ದರಗಳನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿದೆ.

'ಡಿಜಿಟಲ್ ಅಲೆಮಾರಿಗಳನ್ನು' ಆಕರ್ಷಿಸಲು ಈ ರೂಲ್ಸ್​!

ಪೋರ್ಚುಗಲ್ ನ ಕಾರ್ಮಿಕ ಮತ್ತು ಸಾಮಾಜಿಕ ಭದ್ರತೆ ಸಚಿವ ಅನಾ ಮೆಂಡೆಸ್ ಗೊಡಿನ್ಹೋ, "ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ಅಗತ್ಯವನ್ನು ವೇಗಗೊಳಿಸಿದೆ. ಪೋರ್ಚುಗಲ್ ಅನ್ನು ಕೆಲಸ ಮಾಡುವ ಉತ್ತಮ ಸ್ಥಳಗಳಲ್ಲಿ ಒಂದನ್ನಾಗಿ ಮಾಡುವಲ್ಲಿ ಇದು ಪರಿಣಾಮಕಾರಿ ಹೆಜ್ಜೆಯಾಗಿರಬಹುದು ಎಂದು ಅವರು ಹೇಳಿಕೊಂಡಿದ್ದಾರೆ. ಇದು ಪೋರ್ಚುಗಲ್ ಗೆ 'ಡಿಜಿಟಲ್ ಅಲೆಮಾರಿಗಳನ್ನು' ಆಕರ್ಷಿಸಲು ಉತ್ತಮ ಮಾರ್ಗವಾಗಿದೆ. ‘ಡಿಜಿಟಲ್ ಅಲೆಮಾರಿಗಳು’ ಎಂದರೆ ವಿಶ್ವದ ಎಲ್ಲಿಂದಲಾದರೂ ಆನ್‍ಲೈನ್‍ನಲ್ಲಿ ಸರಿಯಾಗಿ ಕೆಲಸ ಮಾಡಬಹುದು.

ಇದನ್ನೂ ಓದಿ: Working Women: ಉದ್ಯೋಗಸ್ಥ ಮಹಿಳೆಯರೇ ಆರೋಗ್ಯದ ಕಡೆ ಗಮನ ಕೊಟ್ಟು ಇಷ್ಟು ಮಾಡಿ ಸಾಕು..

ಮಾನಸಿಕ ಒತ್ತಡದಿಂದ ಬಳಲುತ್ತಿರುವ ಉದ್ಯೋಗಿಗಳು

ಅನೇಕ ಕಂಪನಿಗಳು ಮತ್ತು ವ್ಯವಹಾರಗಳು ತಮ್ಮ ಉದ್ಯೋಗಿಗಳನ್ನು ತಮ್ಮ ಆರೋಗ್ಯ ಮತ್ತು ಸುರಕ್ಷತೆಯ ಕಾಳಜಿಯನ್ನು ಪರಿಗಣಿಸದೆ ಹೆಚ್ಚಿನ ಕೆಲಸಕ್ಕೆ ನೂಕುತ್ತಿವೆ. ಅವಧಿಗಳನ್ನು ಪರಿಗಣನೆಗೆ ತೆಗೆದುಕೊಳ್ಳದೇ ದುಡಿಸಿಕೊಳ್ಳುತ್ತಿವೆ. ಸಾಕಷ್ಟು ಅಧ್ಯಯನಗಳು ಮತ್ತು ಸಂಶೋಧನೆಗಳು ಹೆಚ್ಚಿನ ಶೇಕಡಾವಾರು ಜನರು ಕನಿಷ್ಠ ಒಂದು ಪ್ರಮುಖ ಮಾನಸಿಕ ಅಸ್ವಸ್ಥತೆ ಅಥವಾ ಇತರ ಗಮನಾರ್ಹ ಆರೋಗ್ಯ ಸಮಸ್ಯೆಯನ್ನು ಅನುಭವಿಸಿದ್ದಾರೆ ಎಂದು ತಿಳಿದು ಬಂದಿದೆ.

ಹೃದಯಾಘಾತಗಳ ಸಂಖ್ಯೆ ಹೆಚ್ಚಳ

ಕಳೆದ ವರ್ಷದಲ್ಲಿ, ಎಡೆಬಿಡದ ಕೆಲಸದ ಸಮಯದಿಂದಾಗಿ ಮಾನಸಿಕ ಕಾಯಿಲೆಗಳು ಮತ್ತು ಹೃದಯಾಘಾತಗಳ ಸಂಖ್ಯೆಯು  ಹೆಚ್ಚಾಗಿದೆ. ಆರೋಗ್ಯದ ಅಪಾಯಗಳ ಜೊತೆಗೆ, ಸಂಬಂಧಗಳು ಹದಗೆಟ್ಟಿದೆ. ಏಕೆಂದರೆ ರಿಮೋಟ್ ರೀತಿಯ ಕೆಲಸವು ಜಾರಿಗೆ ಬಂದಾಗಿನಿಂದ ಆದ್ಯತೆಗಳನ್ನು ಬದಲಾಯಿಸಿವೆ. ವೈಯಕ್ತಿಕ ಮತ್ತು ವೃತ್ತಿಪರ ಜೀವನದ ನಡುವಿನ ಗಡಿಗಳ ಕೊರತೆಯು ನಿರ್ಲಕ್ಷ್ಯ ಮತ್ತು ಅಜ್ಞಾನದಿಂದಾಗಿ ಮನೆಯಲ್ಲಿನ ನೆಮ್ಮದಿಯನ್ನು ಹಾಳು ಮಾಡಿದೆ.

ಇದನ್ನೂ ಓದಿ: ಮನೆಯಿಂದ ಮಾಡುವ ಕೆಲಸ ಮತ್ತು ಮನೆಯ ಕೆಲಸ ಎರಡನ್ನೂ ಸುಲಭಗೊಳಿಸುತ್ತವೆ ಈ ಉಪಕರಣಗಳು

ಉತ್ಪಾದಕತೆಯ ಮಟ್ಟವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ, ಕಂಪನಿಗಳು ಇಡೀ ಸಂಸ್ಥೆಯನ್ನು ನಿರ್ವಹಿಸುವ ಪ್ರಮುಖ ಅಂಶವನ್ನು ಮರೆತುಬಿಡುತ್ತವೆ. ಉದ್ಯೋಗಿಗಳ ಮನಸ್ಸಿನ ಸ್ಥಿತಿ ಅತ್ಯುತ್ತಮವಾಗಿದ್ದರೆ ಮಾತ್ರ ಯಾವುದೇ ಕಂಪೆನಿಯಲ್ಲಿ ಲಾಭ ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಉದ್ಯೋಗಿಗಳ ಸಂಖ್ಯೆಯಲ್ಲಿ ಕಡಿಮೆಯಾಗಿ ಕಂಪೆನಿಯ ಮೌಲ್ಯ ಕುಸಿಯುತ್ತದೆ.
Published by:Soumya KN
First published: