ನಡುರಸ್ತೆಯಲ್ಲೇ ತೋರಿಸಿದರು ಪೋರ್ನ್​ ವೀಡಿಯೊ..!

ಪುಣೆಯ ನಡುರಸ್ತೆಯಲ್ಲಿ ಹಾಡಹಗಲೇ ಪೋರ್ನ್ ವಿಡಿಯೋ ಪ್ರದರ್ಶಿಸಲಾಗಿತ್ತು. ಜಾಹೀರಾತು ಸ್ಕ್ರೀನ್​ನಲ್ಲಿ ಅಶ್ಲೀಲ ವಿಡಿಯೋ ಪ್ರದರ್ಶಿಸುತ್ತಿರುವುದನ್ನು ಕಂಡ ಯುವತಿಯೊಬ್ಬಳು ಅದರ ಫೋಟೋ ಕ್ಲಿಕ್ಕಿಸಿಕೊಂಡಿದ್ದಳು. ಅಲ್ಲದೆ ಅದನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಳು.


Updated:January 10, 2019, 6:35 PM IST
ನಡುರಸ್ತೆಯಲ್ಲೇ ತೋರಿಸಿದರು ಪೋರ್ನ್​ ವೀಡಿಯೊ..!
ಸಾಂದರ್ಭಿಕ ಚಿತ್ರ
  • Share this:
ಚೀನಾ ದೇಶವು ಕಳೆದ ವರ್ಷ ನಾಲ್ಕು ಸಾವಿರಕ್ಕಿಂತಲೂ ಹೆಚ್ಚು ಪೋರ್ನ್​ ವೆಬ್​ಸೈಟ್​ಗಳನ್ನು ಬ್ಯಾನ್​ ಮಾಡಿ ಭಾರೀ ಸುದ್ದಿಯಾಗಿತ್ತು. ಇದೀಗ ಮತ್ತೊಮ್ಮೆ ಪೋರ್ನ್​ ವಿಷಯದಿಂದ ಸಖತ್ ಸುದ್ದಿಯಾಗುತ್ತಿದೆ. ಆದರೆ ಈ ಬಾರಿ ಉದ್ಯೋಗಿಯೊಬ್ಬರ ಅಜಾಗರೂಕತೆಯಿಂದ ಎಂಬುದಷ್ಟೇ ವ್ಯತ್ಯಾಸ.

ಜಿಯಾಂಗ್ಸುನ ಲಿಯಾಂಗ್​ ನಗರದಲ್ಲಿ ಇತ್ತೀಚೆಗೆ ಸೆಕ್ಸ್​ ವೀಡಿಯೊ ಪ್ರದರ್ಶಿಸಲಾಗಿದೆ. ಅದು ಕೂಡ ಪ್ರತಿನಿತ್ಯ ಸಾವಿರಾರು ಜನರು ನಡೆದಾಡುವ ಸ್ಥಳದಲ್ಲಿ. ನಗರ ಜಾಹೀರಾತು ಪರದೆಯಲ್ಲಿ ಆ್ಯಡ್​ ಬದಲಾಗಿ ಸೆಕ್ಸ್​ ವೀಡಿಯೊವನ್ನು ಪ್ರದರ್ಶಿಸಲಾಗಿದೆ. 90 ನಿಮಿಷಗಳ ಕಾಲ  ಈ​ ವೀಡಿಯೊ ಉಚಿತ ಪ್ರದರ್ಶನಗೊಂಡಿದ್ದು, ಇದರಿಂದ ಸಾರ್ವಜನಿಕರಿಗೆ ಪೋರ್ನ್​ ಬ್ಯಾನ್​ ನಂತರ ಬಿಟ್ಟಿ ಮನರಂಜನೆ ಸಿಕ್ಕಂತಾಗಿದೆ.

ರಾತ್ರಿ ವೇಳೆಯಲ್ಲಿ ಆ್ಯಡ್​ ಸ್ಕ್ರೀನ್​ ನಿಯಂತ್ರಿಸುತ್ತಿದ್ದ ವ್ಯಕ್ತಿಯು ತನ್ನ ಕಂಪ್ಯೂಟರ್​ನಲ್ಲಿ ಅಶ್ಲೀಲ ವೀಡಿಯೊ ವೀಕ್ಷಿಸಿದ್ದಾನೆ. ಆದರೆ ಈ ವೇಳೆ ತನ್ನ ಕಂಪ್ಯೂಟರ್​ ಕನೆಕ್ಷನ್​ನಿಂದ ಜಾಹೀರಾತು ಪರದೆಯನ್ನು ಆಫ್​ ಮಾಡಲು ಮರೆತಿದ್ದಾನೆ. ಇದರಿಂದ ಸ್ಕ್ರೀನ್​ನಲ್ಲಿ ಭರ್ಜರಿಯಾಗಿ ಸೆಕ್ಸ್​ ವೀಡಿಯೊ ಪ್ಲೇ ಆಗಿದೆ.

ಕೆಲವರಿಗೆ ಇದರಿಂದ ಇರಿಸು ಮುರಿಸು ಉಂಟಾಗಿದ್ದರೆ, ಪಡ್ಡೆಗಳು ಮಾತ್ರ ದೊಡ್ಡ ಸ್ಕ್ರೀನ್​ನಲ್ಲೇ ಸೆಕ್ಸ್​ ವೀಡಿಯೊ ವೀಕ್ಷಿಸಿ ಎಂಜಾಯ್ ಮಾಡಿಕೊಂಡಿದ್ದಾರೆ. ಅದೇ ರೀತಿ ಹಲವರು ಈ ವೀಡಿಯೊ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಕೆಲ ಹೊತ್ತಿನ ನಂತರ ಸಹೋದ್ಯೋಗಿ ಹೊರಗಿನ ಪರಿಸ್ಥಿತಿ ತಿಳಿಸುವಷ್ಟರಲ್ಲಿ ಅದಾಗಲೇ ಒಂದೂವರೆ ಗಂಟೆ ಮೀರಿಯಾಗಿತ್ತು.

ಇದನ್ನೂ ಓದಿ: ಆ್ಯಪಲ್​ ಏರ್​ಪೋಡ್​ಗೆ ಪ್ರಬಲ ಪೈಪೋಟಿ: ಅಗ್ಗದ ಬೆಲೆಗೆ ಮೀ ಏರ್​ಡಾಟ್ಸ್​ ಬಿಡುಗಡೆ

ಭಾರತದಲ್ಲೂ ನಡೆದಿತ್ತು ಇಂತಹದ್ದೇ ಘಟನೆ..!

ಪುಣೆಯ ನಡುರಸ್ತೆಯಲ್ಲಿ ಹಾಡಹಗಲೇ ಪೋರ್ನ್ ವಿಡಿಯೋ ಪ್ರದರ್ಶಿಸಲಾಗಿತ್ತು. ಜಾಹೀರಾತು ಸ್ಕ್ರೀನ್​ನಲ್ಲಿ ಅಶ್ಲೀಲ ವಿಡಿಯೋ ಪ್ರದರ್ಶಿಸುತ್ತಿರುವುದನ್ನು ನೋಡಿದ ಯುವತಿಯೊಬ್ಬಳು ಈ ವಿಷಯವನ್ನು ತನ್ನ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಳು.ಇದನ್ನೂ ಓದಿ: ಯಾವ ಸಮಯದಲ್ಲಿ ಲೈಂಗಿಕ ಕ್ರಿಯೆ ಉತ್ತಮ?: ಸಂಶೋಧನೆಯಿಂದ ತಿಳಿದು ಬಂತು ಹೊಸ ಸತ್ಯ

ನಗರದ ಕರ್ವೆ ರಸ್ತೆಯ ಆ್ಯಡ್ ಸ್ಕ್ರೀನ್​ನಲ್ಲಿ ಪೋರ್ನ್​ ವೀಡಿಯೊ ದೃಶ್ಯಗಳನ್ನು ಪ್ರದರ್ಶಿಸಲಾಗಿತ್ತು. ವಿಚಿತ್ರ ಅಂದರೆ ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ದೃಶ್ಯ ಪ್ರದರ್ಶಿಸಿದ್ದನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಕೆಲ ಹೊತ್ತಿನ ನಂತರ ವೀಡಿಯೊವನ್ನು ಬಂದ್ ಮಾಡಿದ್ದರು.

ಇದನ್ನೂ ಓದಿ: ಸ್ಟೇಟ್​ ಬ್ಯಾಂಕ್ ಆಫ್​ ಇಂಡಿಯಾ ನೇರ ನೇಮಕಾತಿ: ವಾರ್ಷಿಕ ವೇತನ 52 ಲಕ್ಷ ರೂ.

First published: January 10, 2019, 6:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading