HOME » NEWS » Trend » PORN MOVIE SHOT IN BAGAN MYANMAR TOURIST HOTSPOT AND HOLY SITE TRIGGERS OUTRAGE RMD

ದೇವಾಲಯದಲ್ಲಿ ಪಾರ್ನ್ ಸಿನಿಮಾ ಶೂಟ್; ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ

ಈ ಬೆಳವಣಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ‘ಬಗಾನ್​ ನಮ್ಮ ಸಾಂಸ್ಕೃತಿಕ ಪ್ರದೇಶ. ಇದು ನಮ್ಮಯ ಹೆಮ್ಮೆ. ಇಲ್ಲಿ ನೀಲಿ ಚಿತ್ರ ಶೂಟ್​ ಮಾಡಿದ್ದು ನಿಜಕ್ಕೂ ಹೇಯ ಕೃತ್ಯ ಎಂದು ಅನೇಕರು ಬರೆದುಕೊಂಡಿದ್ದಾರೆ.

news18-kannada
Updated:February 14, 2020, 1:37 PM IST
ದೇವಾಲಯದಲ್ಲಿ ಪಾರ್ನ್ ಸಿನಿಮಾ ಶೂಟ್; ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ
ಬಗಾನ್​ ದೇವಾಲಯ
  • Share this:
ಸಿನಿಮಾ ಇಂಡಸ್ಟ್ರಿ ರೀತಿಯಲ್ಲೇ ನೀಲಿ ಚಿತ್ರಗಳು ಕೂಡ ದೊಡ್ಡ ಉದ್ಯಮ. ಸಿನಿಮಾದಲ್ಲಿ ಹೇಗೆ ಸ್ಕ್ರಿಪ್ಟ್​ ಇರುತ್ತದೆಯೋ, ಕೆಲ ಪಾರ್ನ್​ ವಿಡಿಯೋಗಳನ್ನು ಶೂಟ್​ ಮಾಡಲು ಸ್ಕ್ರಿಪ್ಟ್​ ಬರೆಯುತ್ತಾರೆ. ಇದಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಲಾಗುತ್ತದೆ. ಜನರನ್ನು ಆಕರ್ಷಿಸಲು ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಹೀಗೆ ಮಾಡಲು ಹೋಗಿ  ಈಗ ಜೋಡಿಯೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ.

ಇಟಲಿ ಮೂಲದ ಜೋಡಿಯ ಪಾರ್ನ್​ ವಿಡಿಯೋ ವೈರಲ್​ ಆಗಿದೆ. ಇದನ್ನು ಮ್ಯಾನ್ಮಾರ್​ನ ಖ್ಯಾತ ಪ್ರವಾಸಿ ತಾಣ ಹಾಗೂ ಬೌದ್ಧ ದೇವಾಲಯ ಬಗಾನ್​ನಲ್ಲಿ ಶೂಟ್​ ಮಾಡಲಾಗಿದೆ! ಬಗಾನ್​ ಯುನೆಸ್ಕೋ ಪಾರಂಪರಿಕ ತಾಣ ಎಂದು ಗುರುತಿಸಿಕೊಂಡಿದೆ. ಇಂಥ ಪ್ರದೇಶದಲ್ಲಿ ಪಾರ್ನ್​ ಸಿನಿಮಾ ಶೂಟ್​ ಆಗಿರುವುದು ಅನೇಕರ ಆಕ್ರೋಶಕ್ಕೆ ಕಾರಣವಾಗಿದೆ.

23 ವರ್ಷದ ಇಟಲಿ ಮೂಲದ ಜೋಡಿ ಈ ವಿಡಿಯೋ ಪೋಸ್ಟ್​ ಮಾಡಿದ್ದಾರೆ. ಇಬ್ಬರೂ ಕಳೆದ 11 ತಿಂಗಳಿಂದ ಪಾರ್ನ್​ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ವಿಡಿಯೋಗಳಿಗೆ ಭಾರೀ ವೀಕ್ಷಣೆ ದೊರೆಯುತ್ತಿದೆ. ಅಚ್ಚರಿ ಎಂದರೆ, ಬಗಾನ್​ನಲ್ಲಿ ಶೂಟ್​ ಮಾಡಲಾದ ವಿಡಿಯೋಗ ಲೈಕ್ಸ್​ಗಿಂತ ಹೆಚ್ಚಾಗಿ ಡಿಸ್​ಲೈಕ್​ ಬಂದಿರುವುದೇ ಹೆಚ್ಚು.

ಇನ್ನು, ಈ ಬೆಳವಣಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ‘ಬಗಾನ್​ ನಮ್ಮ ಸಾಂಸ್ಕೃತಿಕ ಪ್ರದೇಶ. ಇದು ನಮ್ಮಯ ಹೆಮ್ಮೆ. ಇಲ್ಲಿ ನೀಲಿ ಚಿತ್ರ ಶೂಟ್​ ಮಾಡಿದ್ದು ನಿಜಕ್ಕೂ ಹೇಯ ಕೃತ್ಯ’ ಎಂದು ಅನೇಕರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:  ಈ ಪ್ರೀತಿ ಪ್ರೇಮ ಅಂತಾರಲ್ಲ ಅದನ್ನ ಗೆಲ್ಲಲು ಒಂದು ತಂತ್ರವಿದೆ!

ಇನ್ನು, ಭದ್ರತಾ ಲೋಪದ ಬಗ್ಗೆಯೂ ಅನೇಕರು ಕಿಡಿಕಾರಿದ್ದಾರೆ. “ಈ ಭಾಗದಲ್ಲಿ ಭದ್ರತಾ ಲೋಪ ಉಂಟಾಗಿದೆ. ಪಾರ್ನ್​ ವಿಡಿಯೋ ಶೂಟ್​ ಮಾಡುವವರೆಗೆ ಅಲ್ಲಿನ ಭದ್ರತಾ ಸಿಬ್ಬಂದಿ ಏನು ಮಾಡುತ್ತಿದ್ದರು?,” ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.
Youtube Video
First published: February 14, 2020, 1:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories