• Home
 • »
 • News
 • »
 • trend
 • »
 • Trending Video: ಸಂಸ್ಕೃತದಲ್ಲಿ ಮಾತಾಡಿ ಜನರಿಂದ ಮೆಚ್ಚುಗೆ ಪಡೆದ ದೆಹಲಿ ಕ್ಯಾಬ್ ಚಾಲಕ ಮತ್ತು ಪ್ರಯಾಣಿಕ! ಇಲ್ಲಿದೆ ನೋಡಿ ವೀಡಿಯೋ

Trending Video: ಸಂಸ್ಕೃತದಲ್ಲಿ ಮಾತಾಡಿ ಜನರಿಂದ ಮೆಚ್ಚುಗೆ ಪಡೆದ ದೆಹಲಿ ಕ್ಯಾಬ್ ಚಾಲಕ ಮತ್ತು ಪ್ರಯಾಣಿಕ! ಇಲ್ಲಿದೆ ನೋಡಿ ವೀಡಿಯೋ

ದೆಹಲಿ ಕ್ಯಾಬ್ ಡ್ರೈವರ್

ದೆಹಲಿ ಕ್ಯಾಬ್ ಡ್ರೈವರ್

ಇತ್ತೀಚೆಗೆ ಈ ದೊಡ್ಡ ದೊಡ್ಡ ನಗರಗಳಲ್ಲಿ ಕಾರು ಓಡಿಸುವ ಚಾಲಕರು ವಿಮಾನ ನಿಲ್ದಾಣಗಳಲ್ಲಿ ಬಂದಿಳಿದ ವಿದೇಶಿಗರ ಜೊತೆಗೆ ಇಂಗ್ಲೀಷ್ ನಲ್ಲಿ ಮಾತಾಡುವುದನ್ನು ನಾವೆಲ್ಲಾ ನೋಡಿರುತ್ತೇವೆ ಮತ್ತು ಅದರ ಬಗ್ಗೆ ತುಂಬಾನೇ ಕೇಳಿರುತ್ತೇವೆ. ಆದರೆ ಇಲ್ಲೊಬ್ಬ ದೆಹಲಿಯ ಕ್ಯಾಬ್ ಚಾಲಕನೊಬ್ಬ ತನ್ನ ಪ್ರಯಾಣಿಕನೊಂದಿಗೆ ನಿರರ್ಗಳವಾಗಿ ಸಂಸ್ಕೃತದಲ್ಲಿ ಮಾತನಾಡಿದ್ದಾರೆ ನೋಡಿ.

ಮುಂದೆ ಓದಿ ...
 • Share this:

  ಭಾರತದ ಪ್ರಾಚೀನ ಭಾಷೆಗಳಲ್ಲೊಂದಾದ ಸಂಸ್ಕೃತ ಕರ್ನಾಟಕದಲ್ಲಿ ಬಹು ಹಿಂದಿನಿಂದಲೂ ಪ್ರಚಾರದಲ್ಲಿದ್ದು ದೀರ್ಘವಾದ ಇತಿಹಾಸವನ್ನು ಹೊಂದಿದೆ ಅಂತ ಬಹುತೇಕ ಎಲ್ಲರಿಗೂ ಗೊತ್ತಿದೆ. ಶಾಲೆಯಲ್ಲಿ ಈ ಸಂಸ್ಕೃತ ಭಾಷೆಯನ್ನು ಓದುತ್ತಿರುವ ವಿದ್ಯಾರ್ಥಿಗಳು ನಿರರ್ಗಳವಾಗಿ ಓದುವುದನ್ನು ಮತ್ತು ಮಾತಾಡುವುದನ್ನು ನಾವು ನೋಡಿರುತ್ತೇವೆ. ಸಂಸ್ಕೃತ ಭಾಷೆಯನ್ನು 'ದೇವತೆಗಳ ಭಾಷೆ' ಎಂದು ಸಹ ಪರಿಗಣಿಸಲಾಗುತ್ತದೆ. ಸಂಸ್ಕೃತವು ಭಾರತದ ಪ್ರಾಚೀನ ಭಾಷೆಗಳಲ್ಲಿ ಒಂದಾಗಿದ್ದರೂ ಸಹ ಇದನ್ನು ಈಗ ಒಂದು ಪ್ರತಿಶತಕ್ಕಿಂತಲೂ ಕಡಿಮೆ ಭಾರತೀಯರು ಮಾತನಾಡುತ್ತಾರೆ ಮತ್ತು ಹೆಚ್ಚಾಗಿ ಧಾರ್ಮಿಕ ಸಮಾರಂಭಗಳಲ್ಲಿ ಹಿಂದೂ ಪುರೋಹಿತರು ಇದನ್ನು ಬಳಸುತ್ತಾರೆ ಎಂದು ಬಿಬಿಸಿ ವರದಿಯೊಂದು ತಿಳಿಸಿದೆ.


  ಅದೃಷ್ಟವಶಾತ್ ಕೆಲವು ಜನರು ಇನ್ನೂ ಈ ಶ್ರೀಮಂತ ಭಾಷೆಯನ್ನು ಮಾತನಾಡುವ ಮತ್ತು ಮಂತ್ರಗಳನ್ನು ಸಂಸ್ಕೃತದಲ್ಲಿ ಪಠಿಸುತ್ತ ಇನ್ನೂ ಜೀವಂತವಾಗಿರಿಸಿದ್ದಾರೆ.


  ಇತ್ತೀಚೆಗೆ ಈ ದೊಡ್ಡ ದೊಡ್ಡ ನಗರಗಳಲ್ಲಿ ಕಾರು ಓಡಿಸುವ ಚಾಲಕರು ವಿಮಾನ ನಿಲ್ದಾಣಗಳಲ್ಲಿ ಬಂದಿಳಿದ ವಿದೇಶಿಗರ ಜೊತೆಗೆ ಇಂಗ್ಲೀಷ್ ನಲ್ಲಿ ಮಾತಾಡುವುದನ್ನು ನಾವೆಲ್ಲಾ ನೋಡಿರುತ್ತೇವೆ ಮತ್ತು ಅದರ ಬಗ್ಗೆ ತುಂಬಾನೇ ಕೇಳಿರುತ್ತೇವೆ. ಆದರೆ ಇಲ್ಲೊಬ್ಬ ದೆಹಲಿಯ ಕ್ಯಾಬ್ ಚಾಲಕನೊಬ್ಬ ತನ್ನ ಪ್ರಯಾಣಿಕನೊಂದಿಗೆ ನಿರರ್ಗಳವಾಗಿ ಸಂಸ್ಕೃತದಲ್ಲಿ ಮಾತನಾಡಿದ್ದಾರೆ ನೋಡಿ.


  ಸಂಸ್ಕೃತದಲ್ಲಿ ನಿರರ್ಗಳವಾಗಿ ಮಾತಾಡಿದ ಚಾಲಕ ಮತ್ತು ಪ್ರಯಾಣಿಕ


  ಇವರಿಬ್ಬರು ಕ್ಯಾಬ್ ನಲ್ಲಿ ನಿರರ್ಗಳವಾಗಿ ಸಂಸ್ಕೃತದಲ್ಲಿ ಮಾತನಾಡಿದ ನಂತರ ಅವರ ಸಂಭಾಷಣೆಯ ವೀಡಿಯೋ ಮಾಡಿ ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ತದನಂತರ ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವೀಡಿಯೋ ನೋಡಿ ತುಂಬಾನೇ ಮೆಚ್ಚಿಕೊಂಡಿರುವ ಅಪರೂಪದ ಘಟನೆ ನಮ್ಮ ದೇಶದ ರಾಜಧಾನಿಯಾದ ದೆಹಲಿಯಲ್ಲಿ ನಡೆದಿದೆ. ದೆಹಲಿಯ ಇಂಡಿಯಾ ಗೇಟ್ ಬಳಿ ಇರುವ ರಸ್ತೆಯಲ್ಲಿ ಹೋಗುವಾಗ ಈ ವೀಡಿಯೋವನ್ನು ರೆಕಾರ್ಡ್ ಮಾಡಲಾಗಿದೆ.


  ವೈರಲ್ ಆದ ವಿಡಿಯೋ:  ಈ ವೀಡಿಯೋವನ್ನು ಚಿದ್‌ಸಂಸ್ಕೃತಮ್ ಎಂಬ ಹೆಸರಿನ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಪೋಸ್ಟ್ ಮಾಡಲಾಗಿದೆ ಮತ್ತು "ಅದ್ಭುತ.. ದೆಹಲಿಯ ಈ ಕಾರು ಚಾಲಕ ಇಂದು ಬೆಳಿಗ್ಗೆ ನನ್ನೊಂದಿಗೆ ಸಂಸ್ಕೃತ ಭಾಷೆಯಲ್ಲಿ ಮಾತನಾಡಿದ್ದಾರೆ" ಎಂದು ಶೀರ್ಷಿಕೆಯನ್ನು ಸಹ ಅದಕ್ಕೆ ಬರೆದಿದ್ದಾರೆ. ಇದರ ಬಯೋ ಪ್ರಕಾರ, ವ್ಯಕ್ತಿಯ ಮಾತೃಭಾಷೆ ಸಂಸ್ಕೃತ ಅಂತ ಹೇಳಲಾಗುತ್ತಿದೆ.


  ನೆಟ್ಟಿಗರಿಗೆ ತುಂಬಾನೇ ಇಷ್ಟವಾದ ವೀಡಿಯೋದಲ್ಲಿ ಏನಿದೆ?


  ಈ ವೀಡಿಯೋದಲ್ಲಿ ಪ್ರಯಾಣಿಕನು ತನ್ನ ಕ್ಯಾಬ್ ಚಾಲಕನೊಂದಿಗೆ ಸಂಸ್ಕೃತದಲ್ಲಿ ಸಂಭಾಷಣೆಯನ್ನು ಪ್ರಾರಂಭಿಸುವುದನ್ನು ತೋರಿಸುತ್ತದೆ. ಅವರಿಗೆ ಆಶ್ಚರ್ಯವಾಗುವಂತೆ, ಚಾಲಕನು ಸಹ ಅದೇ ಭಾಷೆಯಲ್ಲಿ ಪ್ರತಿಕ್ರಿಯಿಸಿದನು. ಪ್ರಯಾಣಿಕನು ಚಾಲಕನ ಊರಿನ ಬಗ್ಗೆಯೂ ವಿಚಾರಿಸಿದನು, ಅದಕ್ಕೆ ಅವನು ತನ್ನ ಹೆಸರು ಅಶೋಕ್ ಮತ್ತು ಅವನು ಉತ್ತರ ಪ್ರದೇಶದ ಗೊಂಡಾ ಮೂಲದವನು ಎಂದು ಉತ್ತರಿಸಿದನು. ಚಾಲಕನನ್ನು ಅವನ ಕುಟುಂಬ ಸದಸ್ಯರ ಬಗ್ಗೆಯೂ ಕೇಳಲಾಯಿತು ಮತ್ತು ಅವನು ಎಲ್ಲಾ ಪ್ರಶ್ನೆಗಳಿಗೆ ನಿರರ್ಗಳವಾಗಿ ಸಂಸ್ಕೃತದಲ್ಲಿಯೇ ಉತ್ತರಿಸಿದನು.


  ಈ ವೀಡಿಯೋ 2.62 ಲಕ್ಷಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ ಮತ್ತು 2,400 ಕ್ಕೂ ಹೆಚ್ಚು ರೀಟ್ವೀಟ್ ಗಳನ್ನು ಗಳಿಸಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಆಹ್ಲಾದಕರ ಸಂಭಾಷಣೆಯಿಂದ ಪ್ರಭಾವಿತರಾಗಿದ್ದಾರೆ ಮತ್ತು ವೀಡಿಯೋದಲ್ಲಿನ ಜನರನ್ನು ಶ್ಲಾಘಿಸಿದ್ದಾರೆ.


  ಈ ವೀಡಿಯೋಗೆ ಸೋಷಿಯಲ್ ಮೀಡಿಯಾದಲ್ಲಿ ಬಂದ ಕಮೆಂಟ್ ಗಳು :


  ಕೆಲವರು ಸಂಸ್ಕೃತದಲ್ಲಿ ಬರೆಯುವ ಮೂಲಕ ಈ ವೀಡಿಯೋಗೆ ಪ್ರತಿಕ್ರಿಯಿಸಿದರು. "ಈ ಭಾಷೆಯನ್ನು ಪುನರುಜ್ಜೀವನಗೊಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ, ಈ ಭಾಷೆಯನ್ನು ನಾವು ಪ್ರಚಾರ ಮಾಡಬೇಕು" ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಇನ್ನೊಬ್ಬರು "ಇದು ಕೇಳಲು ತುಂಬಾ ಸಂತೋಷಕರವಾಗಿದೆ" ಎಂದು ಕಾಮೆಂಟ್ ಮಾಡಿದ್ದಾರೆ.


  "ಬ್ಯೂಟಿಫುಲ್!! ಸರಿಯಾದ ಸಂಸ್ಕೃತ ಸಂಭಾಷಣೆಯನ್ನು ಕೇಳಲು ತುಂಬಾ ಸಂತೋಷವಾಗಿದೆ. ಸಾಮಾನ್ಯ ಚಿಟ್-ಚಾಟ್ ಕೂಡ ಒಂದು ಪೂಜೆಗೆ ಮಂತ್ರ ಹೇಳಿದಂತೆ ಭಾಸವಾಗುತ್ತದೆ" ಎಂದು ಮೂರನೇಯವರು ಕಾಮೆಂಟ್ ಮಾಡಿದ್ದಾರೆ.


  ಕಳೆದ ತಿಂಗಳು, ಅದೇ ಪ್ರಯಾಣಿಕ ಹುಡುಗರ ಗುಂಪಿನ ನಡುವಿನ ಗಲ್ಲಿ ಪಂದ್ಯದ ನೇರ ವ್ಯಾಖ್ಯಾನವನ್ನು ಸಂಸ್ಕೃತದಲ್ಲಿ ಮಾಡಿದ ನಂತರ ವೈರಲ್ ಆಗಿತ್ತು. ಅವರ ನಿರರ್ಗಳವಾದ ಉಚ್ಚಾರಣೆಯು ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿತು.

  Published by:Prajwal B
  First published: