ವಿಶ್ವದ ಶ್ರೀಮಂತ ರಾಷ್ಟ್ರಗಳಲ್ಲಿ ದುಬೈ (Dubai) ಕೂಡ ಒಂದು. ಹಾಗಾಗಿಯೇ ಜಗತ್ತಿನ ಬೇರೆ ಬೇರೆ ರಾಷ್ಟ್ರಗಳ ಜನರು ಅಲ್ಲಿಗೆ ದುಡಿಯಲು ಹೋಗುತ್ತಾರೆ. ಶ್ರೀಮಂತರಾಗುವ ಕನಸು ಹೊತ್ತು ಕೆಲಸ ಮಾಡುತ್ತಾರೆ. ಆದರೆ ಇಂದಿನ ದಿನಗಳಲ್ಲಿ ಬೆಲೆ ಏರಿಕೆ ಅನ್ನೋದು ಜಾಗತಿಕ ಸಮಸ್ಯೆಯಾಗಿದೆ (Global Problem). ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಇಡೀ ಜಗತ್ತು ಕಂಗಾಲಾಗಿದೆ. ಇದಕ್ಕೆ ದುಬೈ ಕೂಡ ಹೊರತಾಗಿಲ್ಲ. ಆದ್ರೆ ಈ ನಿಟ್ಟಿನಲ್ಲಿ ಬಡವರ ಹಸಿವನ್ನು (Hunger) ತಣಿಸಲು ದುಬೈ ಸರ್ಕಾರ ಒಂದೊಂದೇ ಹೆಜ್ಜೆ ಇಡುತ್ತಿದೆ. ಗಗನಚುಂಬಿ ಕಟ್ಟಡಗಳೇ ತುಂಬಿರುವ ಈ ರಾಷ್ಟ್ರ ತನ್ನ ಎಲ್ಲಾ ಆಹಾರವನ್ನು (Food) ಆಮದು ಮಾಡಿಕೊಳ್ಳುತ್ತದೆ ಅನ್ನೋದು ವಿಶೇಷ.
ಶ್ರೀಮಂತ ಗಲ್ಫ್ ಎಮಿರೇಟ್ ದುಬೈನಲ್ಲಿ ಗ್ರಾಹಕರು ಏರುತ್ತಿರುವ ಬೆಲೆಯಿಂದಾಗಿ ಅಗತ್ಯ ವಸ್ತುಗಳ, ಆಹಾರ ಪದಾರ್ಥಗಳ ಖರೀದಿಗೆ ಕಷ್ಟ ಪಡುವಂತಾಗಿದೆ. ಉಕ್ರೇನ್ ರಷ್ಯಾ ಯುದ್ಧದ ಬಳಿಕವಂತೂ ಬೆಲೆ ಏರಿಕೆ ದುಬೈನಲ್ಲೂ ಮುಗಿಲುಮುಟ್ಟಿದೆ.
ಬಡವರಿಗಾಗಿ ಬ್ರೆಡ್ ಹಂಚುವ ಮಷಿನ್!
ಜಗತ್ತಿನ ಶ್ರೀಮಂತ ರಾಷ್ಟ್ರ ದುಬೈನಲ್ಲಿ ಬಡವರಿಗಾಗಿ ಬ್ರೆಡ್ ಹಂಚುವ ಮಷಿನ್ ಗಳನ್ನು ಪರಿಚಯಿಸಲಾಗಿದೆ. ಅದೂ ಉಚಿತವಾಗಿ, ಬಿಸಿ ಬಿಸಿ ಬ್ರೆಡ್ ಅನ್ನು ಬಡವರಿಗಾಗಿ ನೀಡಲಾಗುತ್ತಿದೆ. ದುಬೈನ ಸೂಪರ್ ಮಾರ್ಕೆಟ್ ಗಳಲ್ಲಿ 10 ಬ್ರೆಡ್ ವಿತರಣಾ ಯಂತ್ರಗಳನ್ನು ಹಾಕಲಾಗಿದೆ. ಕಂಪ್ಯೂಟರ್ ಟಚ್ ಸ್ಕ್ರೀನ್‌ನೊಂದಿಗೆ ಜನರು ವಿವಿಧ ಪ್ರಕಾರದ ಬ್ರೆಡ್ ಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಹೊಂದಿರುತ್ತಾರೆ.
ಸ್ಯಾಂಡ್‌ವಿಚ್‌ಗಳು, ಪಿಜ್ಜಾ ಬ್ರೆಡ್ ಅಥವಾ ಭಾರತೀಯ ಶೈಲಿಯ ಚಪಾತಿ ಈ ಯಂತ್ರದಲ್ಲಿ ದೊರೆಯುತ್ತದೆ. ಯಂತ್ರವು ಕ್ರೆಡಿಟ್ ಕಾರ್ಡ್ ರೀಡರ್ ಅನ್ನು ಹೊಂದಿದೆ. ಆದರೆ ಇದು ದೇಣಿಗೆಗಾಗಿಯೇ ಹೊರತು ಪಾವತಿಗಾಗಿ ಅಲ್ಲ. ಲಕ್ಷಾಂತರ ಏಷ್ಯನ್ ವಲಸಿಗರಂತೆ, ಬಿಗದಂರ್ ಕೂಡ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಅದೃಷ್ಟ ಹುಡುಕಿಕೊಂಡು ಬಂದವರು. "ಉಚಿತ ಬ್ರೆಡ್ ಇದೆ ಎಂದು ಸ್ನೇಹಿತ ಹೇಳಿದ್ದಾನೆ, ಹಾಗಾಗಿ ನಾನು ಬಂದಿದ್ದೇನೆ" ಎಂದು ಕಾರ್ ವಾಶ್ ಕೆಲಸ ಮಾಡುವ ನೇಪಾಳದ ಯುವಕ ಬಿಗಂದರ್ ಹೇಳುತ್ತಾನೆ. ನನಗೆ ಉದ್ಯೋಗ ನೀಡಿದವ ವಸತಿ ಹಾಗೂ ವಾಹನ ವ್ಯವಸ್ಥೆ ಮಾಡಿದ್ದಾನೆಯೇ ಹೊರತು ಆಹಾರವನ್ನಲ್ಲ ಎಂದಿದ್ದಾನೆ.
ಇದನ್ನೂ ಓದಿ: Old Monk: ವರ್ಷಕ್ಕೆ 80 ಲಕ್ಷ ಬಾಟಲಿ ಮಾರಾಟ! ಭಾರತೀಯ ಬ್ರಾಂಡ್ ಮದ್ಯ ವಿಶ್ವದಲ್ಲೇ ಅತ್ಯುತ್ತಮವಂತೆ
ಬ್ರೆಡ್ ಯಂತ್ರಗಳು ದುಬೈನ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್-ಮಕ್ತೌಮ್ ಅವರಿಗೆ ಸೇರಿದ ಫೌಂಡೇಷನ್ ನಿಂದ ಸ್ಥಾಪಿಸಲಾಗಿದೆ. "ಹಿಂದುಳಿದ ಕುಟುಂಬಗಳು ಹಾಗೂ ಕಾರ್ಮಿಕರು ನಮ್ಮ ಬಳಿಗೆ ಬರುವ ಅಲ್ಲಿಗೆ ಗೆ ಹೋಗುವುದು ಇದರ ಉದ್ದೇಶವಾಗಿದೆ. ಅಗತ್ಯವಿರುವ ಯಾರಾದರೂ ಈಗ "ಒಂದು ಗುಂಡಿಯನ್ನು ಒತ್ತುವ ಮೂಲಕ" ಬಿಸಿ ಬ್ರೆಡ್ ಪಡೆಯಬಹುದು”ಎಂದು ಫೌಂಡೇಶನ್‌ನ ನಿರ್ದೇಶಕಿ ಝೈನಾಬ್ ಜೌಮಾ ಅಲ್-ತಮಿಮಿ ಹೇಳಿದ್ದಾರೆ.
ದುಬೈನಲ್ಲೂ ಬೆಲೆ ಏರಿಕೆ ಬಿಸಿ!
ದುಬೈ ಸ್ಟಾಟಿಸ್ಟಿಕ್ಸ್ ಸೆಂಟರ್ ನ ಸರ್ಕಾರಿ ಅಂಕಿಅಂಶಗಳ ಪ್ರಕಾರ, ಒಂದು ಬುಟ್ಟಿ ಆಹಾರ ಸರಕುಗಳ ಬೆಲೆಯಲ್ಲಿ ವರ್ಷದಿಂದ ವರ್ಷಕ್ಕೆ 8.75 ಪ್ರತಿಶತದಷ್ಟು ಏರಿಕೆಯಾಗಿದೆ. ಹೀಗಂತ ಇಲ್ಲಿನ ಮಾಸಿಕ ಬದಲಾವಣೆಯನ್ನು ಪತ್ತೆಹಚ್ಚುವ ಆಹಾರ ಬೆಲೆ ಸೂಚ್ಯಂಕ ತಿಳಿಸಿದೆ. ಅಲ್ಲದೇ ಸಾರಿಗೆ ವೆಚ್ಚ ಶೇ.38ಕ್ಕಿಂತ ಹೆಚ್ಚಿದೆ ಎನ್ನಲಾಗಿದೆ.
ದುಬೈನಲ್ಲಿ ಶೇ. 90 ರಷ್ಟು ವಿದೇಶಿಗರು!
ಅಂದಹಾಗೆ ತೈಲ-ಸಮೃದ್ಧ ಯುಎಇ ಸುಮಾರು 10 ಮಿಲಿಯನ್ ಜನರನ್ನು ಹೊಂದಿದೆ. ಅದರಲ್ಲಿ ಶೇ 90 ರಷ್ಟು ಜನರು ವಿದೇಶಿಗರು. ಅದರಲ್ಲೂ ಹೆಚ್ಚಿನ ಜನರು ಏಷ್ಯಾ ಹಾಗೂ ಆಫ್ರಿಕಾದಿಂದ ಬಂದವರು. ಯುಎನ್ ವರ್ಲ್ಡ್ ಮೈಗ್ರೇಶನ್ ರಿಪೋರ್ಟ್ ಪ್ರಕಾರ, ಯುಎಇ ಸುಮಾರು 8.7 ಮಿಲಿಯನ್ ವಲಸಿಗರಿಗೆ ನೆಲೆಯಾಗಿದೆ, ಮುಖ್ಯವಾಗಿ ಭಾರತ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಬಂದವರೇ ಆಗಿದ್ದಾರೆ. UAE ಯ ವಾಣಿಜ್ಯ ಹೃದಯವಾಗಿರುವ ದುಬೈ, ಗಗನಚುಂಬಿ ಕಟ್ಟಡಗಳನ್ನು ನಿರ್ಮಿಸಲು ಮತ್ತು ಸೇವಾ ಕ್ಷೇತ್ರಕ್ಕೆ ಈ ಕಾರ್ಮಿಕರನ್ನೇ ಅಲವಂಬಿಸಿದೆ. ಅದರ ಮೇಲೆಯೇ ರಿಯಲ್ ಎಸ್ಟೇಟ್‌ನಿಂದ ಐಷಾರಾಮಿ ಪ್ರವಾಸೋದ್ಯಮದವರೆಗೆ, ಅದರ ಮೇಲೆ ತನ್ನ ಖ್ಯಾತಿಯನ್ನು ನಿರ್ಮಿಸಿದೆ.
ಇದನ್ನೂ ಓದಿ: Lottery: ಏನ್ ಅದೃಷ್ಟ ಗುರು ಈ ಮನುಷ್ಯಂದು! ಒಂದಲ್ಲ, ಎರಡಲ್ಲ ಮೂರು ಲಾಟರಿ ಹೊಡೆದಿದೆ
ಒಟ್ಟಾರೆ, ಬಡವರ ಹಸಿವು ನೀಗಿಸಲು ದುಬೈ ಇಂಥದ್ದೊಂದು ಕ್ರಮ ಕೈಗೊಂಡಿರುವುದು ಮೆಚ್ಚವ ವಿಷಯವೇ ಹೌದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ