• ಹೋಂ
 • »
 • ನ್ಯೂಸ್
 • »
 • ಟ್ರೆಂಡ್
 • »
 • Alcohol: ಕುಡಿಯೋದು ಬಿಟ್ಟು ಒಂದು ವರ್ಷ ಆಯ್ತಂತೆ, ಪೋಸ್ಟರ್ ಅಂಟಿಸಿ ಫುಲ್ ಹಬ್ಬ ಮಾಡಿದ ವ್ಯಕ್ತಿ!

Alcohol: ಕುಡಿಯೋದು ಬಿಟ್ಟು ಒಂದು ವರ್ಷ ಆಯ್ತಂತೆ, ಪೋಸ್ಟರ್ ಅಂಟಿಸಿ ಫುಲ್ ಹಬ್ಬ ಮಾಡಿದ ವ್ಯಕ್ತಿ!

ವೈರಲ್​ ಆದ ವ್ಯಕ್ತಿ

ವೈರಲ್​ ಆದ ವ್ಯಕ್ತಿ

ಮಧ್ಯಪಾನ ಮಾಡುವವರು ಸಮಾಜದಲ್ಲಿ ಹಲವರಿದ್ದಾರೆ. ಆದರೆ, ಇಲ್ಲೊಬ್ಬನ ಕಥೆ ಕೇಳಿದ್ರೆ ನಿಜಕ್ಕೂ ಸ್ಪೂರ್ತಿದಾಯಕವಾಗಿದೆ.

 • News18 Kannada
 • 4-MIN READ
 • Last Updated :
 • Tamil Nadu, India
 • Share this:

ಪ್ರತಿ ವರ್ಷ ಅನೇಕ ಜನರು ತಮ್ಮ ಹುಟ್ಟುಹಬ್ಬ (Birthday), ವಿವಾಹ ವಾರ್ಷಿಕೋತ್ಸವಗಳನ್ನು ಆಚರಿಸುತ್ತಾರೆ. ಅದೇ ಈಗಿನ ಟ್ರೆಂಡಿಂಗ್​ ಅಂತ ಹೇಳಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಬ್ರೇಕಪ್​ ಆದ ದಿನಗಳು ಮತ್ತು ಡಿವೋರ್ಸ್​ ಆದ ದಿನಗಳನ್ನು ಕೂಡ ತುಂಬಾ ಜನರು ನೆನೆನಪಿಟ್ಟುಕೊಳ್ಳುವಂತಹವರು ಇದ್ದಾರೆ. ಹೊಸ ಬ್ರೇಕಪ್ ದಿನಗಳು, ನಿಶ್ಚಿತಾರ್ಥದ ದಿನಗಳು ಕೂಡ ಆಚರಿಸಲಾಗುತ್ತದೆ. ಆದರೆ ಈಗ ಮತ್ತೊಂದು ಹೊಸ ಟ್ರೆಂಡ್ ಶುರುವಾಗಿದೆ. ತಮಿಳುನಾಡಿನ ವ್ಯಕ್ತಿಯೊಬ್ಬರು ಈ ಹೊಸ ಟ್ರೆಂಡ್ (Trend) ಆರಂಭಿಸಿದ್ದಾರೆ. ಚೆಂಗಲ್‌ಪಟ್‌ನ ವ್ಯಕ್ತಿಯೊಬ್ಬರು ಹಾಕಿರುವ ಪೋಸ್ಟರ್‌ಗಳು (Poster) ಇದೀಗ ಕುತೂಹಲ ಮೂಡಿಸಿವೆ. ತಮಿಳುನಾಡಿನ (Tamilnad) ಚೆಂಗಲ್ ಪೇಟೆಯಲ್ಲಿನ ವ್ಯಕ್ತಿಯೊಬ್ಬರಯ ಮೂರು ವರ್ಷಕ್ಕಿಂತ ಹೆಚ್ಚು ಕಾಲ ಮದ್ಯವ್ಯಸನಿಯಾಗಿದ್ದ.


ಇಂದಿನ ಕಾಲದಲ್ಲಿ ಈ ಡ್ರಗ್ಸ್​, ಡ್ರಿಂಕ್ಸ್​ಗಳು ಹೆಚ್ಚಾಗ್ತಾ ಇದೆ. ಮಾದಕ ವ್ಯಸನಗಳಿಗೆ ಬಲಿಯಾಗುವ ಜನರ ಸಂಖ್ಯೆ ತುಂಬಾ ಹೆಚ್ಚಾಗ್ತಾ ಇದ್ದಾರೆ. ಅಂತಹ ಸಮಯದಲ್ಲಿ ನೂರಾರು ಮಧ್ಯವನ್ನು ಬಿಡಿಸಲು ಶಿಬಿರಗಳನ್ನು ಆರಂಭಿಸಲಾಗಿದೆ. ಇದರಲ್ಲಿ ಅನೇಕ ಜನರು ಕುಡಿಯುವುದನ್ನು ಬಿಟ್ಟಿದ್ದಾರೆ. ಇನ್ನೂ ಕೆಲವರು ಶಿಬಿರದಿಂದ ಹೊರ ಬಂದಾಗ ಮತ್ತೆ ಕುಡಿಯಲು ಆರಂಭ ಮಾಡಿರುತ್ತಾರೆ.


ಆದರೆ ಅತೀ ಚಿಕ್ಕ ವಯಸ್ಸಿಗೆ ಕುಡಿಯೋದು, ಸಿಗರೇಟ್​ ಸೇದೋದಕ್ಕೆ ಬಲಿ ಆಗಿರುತ್ತಾರೆ. ಪೋಷಕರಿಗೆ ತನ್ನ ಮಕ್ಕಳು ಹೀಗಾದ್ರಲ್ಲಾ ಅಂತ ಹೈರಾಣಾಗಿರುತ್ತಾರೆ. ಇಲ್ಲೊಂದು ವೈರಲ್​ ಆಗ್ತಾ ಇರುವಂತಹ ಸುದ್ಧಿಯನ್ನು ನೋಡ್ತಾ ಇದ್ರೆ ನಿಜವಾಗಿಯೂ  ಶಾಕ್​ ಆಗ್ತೀರ.


ಇದನ್ನೂ ಓದಿ: ಈ ದೇಶಕ್ಕೆ ನೀವು ಹಣ ಖರ್ಚ್ ಮಾಡ್ಕೊಂಡು ಹೋಗೋದು ಬೇಡ, ಅವರೇ ದುಡ್ಡು ಕೊಡ್ತಾರೆ!


ಆದರೆ ಒಂದು ವರ್ಷದಿಂದ ಅವರು ಮದ್ಯಪಾನವನ್ನು ನಿಲ್ಲಿಸಿದರು. ಈ ಸಂದರ್ಭದಲ್ಲಿ ಡ್ರಗ್ಸ್ ತ್ಯಜಿಸಿ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಗೋಡೆಗಳ ಮೇಲೆ ಪೋಸ್ಟರ್​ಗಳನ್ನು ಪ್ರದರ್ಶಿಸಿದರು. ವಾರ್ಷಿಕೋತ್ಸವಗಳನ್ನು ಸಾಮಾನ್ಯವಾಗಿ ವಿವಾಹಗಳು, ಜನ್ಮದಿನಗಳು ಮತ್ತು ಮರಣಗಳಂತಹ ಸಂದರ್ಭಗಳನ್ನು ಗುರುತಿಸಲು ಆಚರಿಸಲಾಗುತ್ತದೆ. ಆದರೆ ಲೇಟೆಸ್ಟ್ ವಿಷಯ ಏನಪ್ಪಾ ಅಂದ್ರೆ, ಈ ವ್ಯಕ್ತಿ ನಮ್ಮನ್ನು ಅಗಲಿ ಒಂದು ವರ್ಷಕ್ಕೂ ಹೆಚ್ಚು ಕಳೆದಿದೆ ವಾರ್ಷಿಕೋತ್ಸವದಂದು ಪೋಸ್ಟರ್​ಗಳನ್ನು ಹಾಕುತ್ತಿರುವುದು ನಗರದಲ್ಲಿ ಚರ್ಚೆಗೆ ಗ್ರಾಸವಾಗಿದೆ.


ಮನೋಹರನ್ ಎಂಬ 53 ವರ್ಷದ ವ್ಯಕ್ತಿ ತಮಿಳುನಾಡಿನ ಚೆಂಗಲ್‌ಪೇಟ್ ಜಿಲ್ಲೆಯ ಅತ್ತೂರ್‌ನಲ್ಲಿ ವಾಸಿಸುತ್ತಿದ್ದಾರೆ. 32 ವರ್ಷಗಳಿಂದ ಮದ್ಯವ್ಯಸನಿಯಾಗಿದ್ದ ಮನೋಹರನ್ ಕಳೆದ ವರ್ಷ ಮದ್ಯಪಾನ ತ್ಯಜಿಸಲು ನಿರ್ಧರಿಸಿದ್ದರು. ನಾನು ಫೆಬ್ರವರಿ 26, 2022 ರಿಂದ ಮದ್ಯಪಾನ ಮಾಡುವುದನ್ನು ನಿಲ್ಲಿಸಿದೆ. ಒಂದು ವರ್ಷದಿಂದ ಮದ್ಯ ಸೇವಿಸಿಲ್ಲ ಎಂದು ಮನೋಹರನ್ ಹೇಳಿದ್ದಾರೆ. ಆದರೆ ಈ ಸಂದರ್ಭವನ್ನು ಗುರುತಿಸಲು ಮನೋಹರನ್ ಅವರು ಮದ್ಯಪಾನದಿಂದ ದೂರವಿರುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪಟ್ಟಣದಾದ್ಯಂತ ಪೋಸ್ಟರ್‌ಗಳನ್ನು ಹಾಕಿದರು. ಮತ್ತು ಪೋಸ್ಟರ್‌ಗಳನ್ನು ಪ್ರದರ್ಶಿಸಲು, ಅವರು ಬೇರೆಡೆ ಪ್ರಾಯೋಜಕರನ್ನು ಸಹ ಕಂಡುಕೊಂಡರು.


ಮದ್ಯಪಾನದಿಂದ ಊರಿನಲ್ಲಿ ಮಾತ್ರವಲ್ಲದೆ ಸಂಸಾರದಲ್ಲಿಯೂ ಗೌರವ ಕಳೆದುಕೊಂಡಿದ್ದೇನೆ ಎಂದು ಮನೋಹರನ್ ಅಳಲು ತೋಡಿಕೊಂಡರು. ಮದ್ಯಕ್ಕೆ ನಿತ್ಯ 300ರಿಂದ 400 ರೂ. ಕೊನೆಗೆ ತನ್ನ ಮನೆಯನ್ನೂ ಮಾರಬೇಕಾಯಿತು ಎಂದರು. ಈಗ ಕುಡಿತ ಬಿಟ್ಟಿದ್ದು, ಮನೆಯಲ್ಲಿ ಹಾಗೂ ಅಕ್ಕಪಕ್ಕದವರು, ಬಂಧುಗಳಲ್ಲಿ ಗೌರವ ಹೆಚ್ಚಿದೆ ಎಂದರು. ಅವರ ಆರೋಗ್ಯವೂ ಸ್ಥಿರವಾಗಿದೆ ಎಂದು ತಿಳಿಸಿದರು.
ಮದ್ಯಪಾನದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಇತರರಿಗೆ ಅರಿವು ಮೂಡಿಸಲು ಭಿತ್ತಿಪತ್ರಗಳನ್ನು ಹಾಕಿದ್ದಾರೆ ಎಂದರು. ಮದ್ಯಪಾನ ಮಾಡುವವರು ಸಂಸ್ಥೆಗಳನ್ನು ತೊರೆದರೆ, ಸರ್ಕಾರಿ ಅಧಿಕಾರಿಗಳು ಸ್ವಯಂಚಾಲಿತವಾಗಿ ಮದ್ಯದ ಅಂಗಡಿಗಳನ್ನು ಮುಚ್ಚುತ್ತಾರೆ' ಎಂದು ಮನೋಹರನ್ ಹೇಳಿದರು. ಒಟ್ಟಿನಲ್ಲಿ ಮನೋಹರ್​ ಕುಡಿತ ಬಿಟ್ಟು ಅತೀ ಸಂತೋಷದಿಂದ ಇದ್ದಾರೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು