• Home
  • »
  • News
  • »
  • trend
  • »
  • Viral Video: ಕಾರು ಚಾಲಕನ ನಿರ್ಲಕ್ಷ್ಯದಿಂದ ನಡೆದ ಈ ಅಪಘಾತದ ವಿಡಿಯೋ ನೋಡಿದ್ರೆ ಮೈ ಜುಂ ಅನ್ನುತ್ತೆ!

Viral Video: ಕಾರು ಚಾಲಕನ ನಿರ್ಲಕ್ಷ್ಯದಿಂದ ನಡೆದ ಈ ಅಪಘಾತದ ವಿಡಿಯೋ ನೋಡಿದ್ರೆ ಮೈ ಜುಂ ಅನ್ನುತ್ತೆ!

ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ

ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ

ಕಾರು ಚಾಲಕನೋರ್ವ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ಕಾರಿನಿಂದ ಇಳಿಯಲು ಮುಂದಾಗುತ್ತಾನೆ. ಆದರೆ ಡೋರ್​ ತೆಗೆದು ಇಳಿಯುವ ಮಂಪರಿನಲ್ಲಿ ಅತ್ತ ಇತ್ತ ಗಮನಿಸದೇ ಹಾಗೆಯೇ ಇಳಿಯಲು ಮುಂದಾಗುತ್ತಾನೆ.

  • Share this:

    ವಾಹನ ಚಲಾಯಿಸುವಾಗ ಮಾತ್ರವಲ್ಲ, ವಾಹನ ನಿಲ್ಲಿಸುವಾಗ, ರಸ್ತೆ ದಾಡುವಾಗ, ಅಷ್ಟೇ ಏಕೆ ವಾಹನದಿಂದ ಡೋರ್​ ತೆಗೆದು ಹೊರಬರುವಾಗಲು ಸರಿಯಾಗಿ ಗಮನಿಸಿ ಹೊರಬರಬೇಕು. ಏಕೆಂದರೆ ರಸ್ತೆ ಬದಿಯಲ್ಲಿ ಕಾರು (Car) ಸವಾರನೋರ್ವ ಡೋರ್ (Door)​ ತೆಗೆಯುವ ಮಂಪರಿನಿಂದಾಗಿ ಅಪಘಾತ (Accident) ಸಂಭವಿಸಿದೆ. ಈ ಬೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ (CCTV) ಸೆರೆಯಾಗಿದೆ. ಅಂದಹಾಗೆಯೇ ಕಾರು ಚಾಲಕನ ಅಸಡ್ಡೆತನವೇ ಈ ಅಪಘಾತಕ್ಕೆ ಕಾರಣ ಎಂಬುದು ಸಿಸಿಟಿವಿ ದೃಶ್ಯವಳಿಯ ಮೂಲಕ ತಿಳಿದು ಬಂದಿದೆ.


    ಕಾರು ಚಾಲಕನೋರ್ವ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ಕಾರಿನಿಂದ ಇಳಿಯಲು ಮುಂದಾಗುತ್ತಾನೆ. ಆದರೆ ಡೋರ್​ ತೆಗೆದು ಇಳಿಯುವ ಮಂಪರಿನಲ್ಲಿ ಅತ್ತ ಇತ್ತ ಗಮನಿಸದೇ ಹಾಗೆಯೇ ಇಳಿಯಲು ಮುಂದಾಗುತ್ತಾನೆ. ಆದರೆ ಅತ್ತ ಕಡೆಯಿಂದ ಬೈಕ್​ ಸವಾರ ಮತ್ತು ಆತನೊಂದಿಗೆ ಹಿಂಬದಿ ಸವಾರನು ಅದೇ ದಾರಿಯಲ್ಲಿ ಬರುತ್ತಿರುತ್ತಾರೆ. ಕಾರು ಚಾಲಕ ಡೋರ್ ತೆಗೆದ ರಭಸದಲ್ಲಿ ಬೈಕ್​ ಕಾರಿನ ಡೋರಿಗೆ ಡಿಕ್ಕಿ ಹೊಡೆಯುತ್ತದೆ.


    ಬೈಕ್​​ ಸವಾರ ಕಾರಿನ ಡೋರ್​ ತೆರೆಯುತ್ತಿದ್ದಂತೆ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಆದರೆ ಬೈಕ್​ ಸವಾರ ಮತ್ತು ಹಿಂಬಂದಿ ಸವಾರ ಕಾರಿನ ಡೋರ್​ಗೆ ಗುದ್ದಿದ ರಭಸದಲ್ಲಿ ಎಸೆಯಲ್ಪಡುತ್ತಾರೆ. ಇಬ್ಬರು ಕೂಡ ಅತ್ತ ಕಡೆಯಿಂದ ಬರುತ್ತಿದ್ದ ಲಾರಿಯ ಹಿಂಭಾಗದ ಚಕ್ಕಕ್ಕೆ ಗುದ್ದುತ್ತಾರೆ. ಮತ್ತೆ ಪುರ್ನ ಎಸೆಯಲ್ಪಡುತ್ತಾರೆ. ಈ ಬೀಕರ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಬೈಕ್​ನಲ್ಲಿದ್ದ ಇಬ್ಬರು ರಸ್ತೆ ಮೇಲೆ ಬೀಳುತ್ತಾರೆ.


    ಕಾರಿನ ಚಾಲಕದ ತಪ್ಪಿನಿಂದಾಗಿ ಬೈಕ್​ ಸವಾರ ಮತ್ತು ಹಿಂಬಂದಿ ಸವಾರನಿಗೆ ಅಪಘಾತವಾಗುತ್ತದೆ ಎಂದುದಕ್ಕೆ ಈ ಸಿಸಿಟಿವಿಯ ದೃಶ್ಯವೇ ಸಾಕ್ಷಿ. ಅಂದಹಾಗೆಯೇ ಟ್ವಿಟ್ಟರ್​ನಲ್ಲಿ ಈ ವಿಡಿಯೋ ವೈರಲ್​ ಆಗಿದೆ. ಉಪ ಪೊಲೀಸ್​ ಆಯ್ತು (ಪೂರ್ವ ವಿಭಾಗ) ಕಲಾ ಕೃಷ್ಣ ಸ್ವಾಮಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.


    ಡಿಸಿಪಿ ಹಂಚಿಕೊಂಡಿರುವ ವಿಡಿಯೋದ ಜೊತೆಗೆ ಟ್ವಿಟರ್‌ನಲ್ಲಿ "ನೀವು ನಿಮ್ಮ ವಾಹನದ ಬಾಗಿಲು ತೆರೆಯುವಾಗ ದಯವಿಟ್ಟು ಎಚ್ಚರವಹಿಸಿ ಮತ್ತು ಮಾರಣಾಂತಿಕ ಅವಘಡಗಳನ್ನು ತಪ್ಪಿಸಿ." ಎಂದು ಬರೆದುಕೊಂಡಿದ್ದಾರೆ.


    ವಿಶ್ವದಾದ್ಯಂತ ಇಂತಹ ಅಪಘಾತಗಳು ಕೇವಲ 1 ಪ್ರತಿಶತದಷ್ಟು ನಡೆದರೆ, ಭಾರತದಲ್ಲಿ ಎಲ್ಲಾ ಅಪಘಾತ-ಸಂಬಂಧಿತ ಸಾವುಗಳಲ್ಲಿ ಸುಮಾರು 10 ಪ್ರತಿಶತವನ್ನು ಹೊಂದಿದೆ ಎಂದು ವಿಶ್ವ ಬ್ಯಾಂಕ್​ ಹೇಳಿದೆ.


    ಇದನ್ನೂ ಓದಿ: Viral Video: ಅಬ್ಬಬ್ಬಾ! ಹಿಂಗೂ ಪ್ರಪೋಸ್ ಮಾಡ್ತಾರಾ? ಈ ವಿಡಿಯೋ ನೋಡಿದ್ರೆ ಏನ್​ ಗುರು ಇವ್ನು ಅನ್ನೋದು ಪಕ್ಕಾ


    ಅದರಲ್ಲೂ 70% ಕ್ಕಿಂತ ಹೆಚ್ಚು ಅಪಘಾತದ ಬಲಿಪಶುಗಳು ಕಡಿಮೆ-ಆದಾಯದ ಕುಟುಂಬಗಳಿಂದ ಬಂದವರು ಎಂಬುದನ್ನು ಹೇಲಿದೆ, ಹೆಚ್ಚಿನ ವೈದ್ಯಕೀಯ ವೆಚ್ಚಗಳು ಮತ್ತು ಸಾಮಾಜಿಕ ಸುರಕ್ಷತಾ ಜಾಲಗಳಿಗೆ ಸೀಮಿತ ಪ್ರವೇಶದಿಂದಾಗಿ ರಸ್ತೆ ಅಪಘಾತಗಳ ಸಾಮಾಜಿಕ-ಆರ್ಥಿಕ ಹೊರೆಯಲ್ಲಿ ಬಡ ಕುಟುಂಬಗಳು ಅಸಮಾನವಾದ ಪಾಲನ್ನು ಹೊಂದಿವೆ ಎಂಬುದನ್ನು ತಿಳಿಸಿದೆ.



    ವಿಶ್ವಬ್ಯಾಂಕ್ ರಸ್ತೆ ಅಪಘಾತದ ಬಗ್ಗೆ ಅಧ್ಯಯನ ನಡೆಸಿದ್ದು, ಅಪಘಾತದಿಂದ ಸಾಯುವ ಬಲಿಪಶುಗಳ ಬಗ್ಗೆ ಹೇಳಿದೆ. ಅದರಲ್ಲೂ ರಸ್ತೆ ಅಪಘಾತಗಳು ಭಾರತದ ಆರ್ಥಿಕತೆಗೆ ಪ್ರತಿ ವರ್ಷ GDP ಯ 5% ಮತ್ತು 7% ನಷ್ಟು ನಷ್ಟಿದೆ. ಭಾರತದಲ್ಲಿ ಪ್ರತಿ ವರ್ಷ ರಸ್ತೆ ಅಪಘಾತಗಳಿಂದ ಸುಮಾರು 150,000 ಜನರು ಸಾವಿಗೀಡಾಗಿದ್ದಾರೆ ಮತ್ತು 450,000 ಜನರು ಗಾಯಗೊಂಡಿದ್ದಾರೆ ಎಂದು ಸರ್ಕಾರದ ಅಧಿಕೃತ ಅಂಕಿಅಂಶಗಳು ತೋರಿಸುತ್ತದೆ.


    ಇದನ್ನೂ ಓದಿ: Life Hacks: ಕೋಪದ ಕೈಗೆ ಬುದ್ದಿ ಕೊಟ್ಟು ಈ ತಪ್ಪುಗಳನ್ನು ಮಾಡ್ಬೇಡಿ, ಆಮೇಲೆ ಸಮಸ್ಯೆ ತಪ್ಪಿದ್ದಲ್ಲ


    ರಸ್ತೆ ಅಪಘಾತದಲ್ಲಿ ಸಾಯುವ ಹೆಚ್ಚಿನ ಜನರು ಪಾದಚಾರಿಗಳು, ಸೈಕ್ಲಿಸ್ಟ್‌ಗಳು ಅಥವಾ ಮೋಟರ್‌ಸೈಕ್ಲಿಸ್ಟ್‌ಗಳಾಗಿದ್ದಾರೆ, 18 ರಿಂದ 60 ವರ್ಷ ವಯಸ್ಸಿನವರು ಹೆಚ್ಚಾಗಿ ಇಂತಹ ಅಪಘಾತದಿಂದ ಸಾವನ್ನಪ್ಪುತ್ತಾರೆ ಎಂಬುದು ಬೆಳಕಿಗೆ ಬಂದಿದೆ.

    Published by:Harshith AS
    First published: