Viral Video: ನಾವ್ ಬರ್ತಾ ಇದ್ದೀವಿ, ಸೈಡ್ ಪ್ಲೀಸ್! ಬಾತುಕೋಳಿ ಕುಟುಂಬ ರಸ್ತೆ ದಾಟಿದ ವಿಡಿಯೋ ವೈರಲ್
ರಸ್ತೆ ದಾಟುತ್ತಿದ್ದ ಬಾತುಕೋಳಿ ಮತ್ತು ಅದರ ಪುಟ್ಟ ಪುಟ್ಟ ಮರಿಗಳಿಗೆ ಟ್ರಾಫಿಕ್ ದಟ್ಟಣೆಯನ್ನು ತಪ್ಪಿಸಿ ಅವುಗಳಿಗೆ ಹೋಗಲು ಅನುವು ಮಾಡಿಕೊಡುತ್ತಿರುವ ಟ್ರಾಫಿಕ್ ಪೊಲೀಸರ ವಿಡಿಯೋ ಸಖತ್ ಸುದ್ದಿಯಾಗಿದೆ. ಅಲ್ಲದೇ ತುಂಬಾ ಮುದ್ದಾಗಿರುವ ಈ ವಿಡಿಯೋ ಸಾಕಷ್ಟು ಮೆಚ್ಚುಗೆ ಪಡೆದು ವೈರಲ್ ಕೂಡ ಆಗುತ್ತಿದೆ.
ಮಾನವೀಯತೆ (Humanity) ಕೇವಲ ಮನುಷ್ಯರ ಮೇಲಿದ್ದರೆ ಸಾಲದು ಪ್ರಕೃತಿಯಲ್ಲಿ ಬದುಕುವ ಪ್ರತಿಯೊಂದು ಜೀವಿ ಮೇಲಿರಬೇಕು. ಏಕೆಂದರೆ, ಭೂಮಿ (Earth) ಮೇಲೆ ದೇವರು ಸೃಷ್ಟಿಸಿರುವ ಪ್ರತಿಯೊಂದು ಪ್ರಾಣಿ-ಪಕ್ಷಿಗೆ (Animals- Birds) ಮನುಷ್ಯರಂತೆಯೇ ಇಲ್ಲಿ ಬದುಕುವ ಸಮಾನವಾದ ಹಕ್ಕಿದೆ. ಪ್ರಾಣಿ, ಪಕ್ಷಿಗಳಿಗೆ ಮುಕ್ತವಾಗಿ ಓಡಾಡಲೂ, ಹಾರಾಡಲೂ ಬಿಡಬೇಕು. ಮನುಷ್ಯರು ಅವರ ಅನುಕೂಲಗಳಿಗೆ ತಕ್ಕಂತೆ ಮಾಡಿಕೊಂಡ ವ್ಯವಸ್ಥೆಯಲ್ಲಿ ಅವುಗಳನ್ನು ಬಂಧಿಸಬಾರದು. ಇದೇ ರೀತಿಯ ಸಂದೇಶ ಸಾರುವ ವಿಡಿಯೋವೊಂದು (Video) ಸಾಮಾಜಿಕ ಜಾಲತಾಣದಲ್ಲಿ (Social Media) ಹರಿದಾಡುತ್ತಿದೆ. ರಸ್ತೆ ದಾಟುತ್ತಿದ್ದ ಬಾತುಕೋಳಿ ಮತ್ತು ಅದರ ಪುಟ್ಟ ಪುಟ್ಟ ಮರಿಗಳಿಗೆ ಟ್ರಾಫಿಕ್ ದಟ್ಟಣೆಯನ್ನು ತಪ್ಪಿಸಿ ಅವುಗಳಿಗೆ ಹೋಗಲು ಅನುವು ಮಾಡಿಕೊಡುತ್ತಿರುವ ಟ್ರಾಫಿಕ್ ಪೊಲೀಸರ ವಿಡಿಯೋ ಸಖತ್ ಸುದ್ದಿಯಾಗಿದೆ. ಅಲ್ಲದೇ ತುಂಬಾ ಮುದ್ದಾಗಿರುವ ಈ ವಿಡಿಯೋ ಸಾಕಷ್ಟು ಮೆಚ್ಚುಗೆ ಪಡೆದು ವೈರಲ್ ಕೂಡ ಆಗುತ್ತಿದೆ.
ಕೆಲ ದಿನಗಳ ಹಿಂದಷ್ಟೇ ಈ ಬಾತುಕೋಳಿ ಮತ್ತು ಮರಿಗಳು ಕೆಫೆ ಒಳಗೆ ಬಂದು ಓಡಾಡಿದ ವಿಡಿಯೋವನ್ನು ನಾವೆಲ್ಲಾ ನೋಡಿದ್ದೆವು. ನೆಟ್ಟಿಗರು ಬಾತುಕೋಳಿಗಳದ್ದು ಎಷ್ಟು ಬಿಲ್ ಆಯಿತೂ, ಬಿಲ್ ಕೊಟ್ಟು ಹೋದರಾ ಇಲ್ಲಾ ಅಂತಾ ಕಾಲೆಳೆದಿದ್ದರು. ಈಗ ಈ ಪುಟ್ಟ ಬಾತುಕೋಳಿಯ ಸಂಸಾರ ಪ್ಯಾರಿಸ್ ನಲ್ಲಿ ರಸ್ತೆ ದಾಟುವ ವಿಡಿಯೋ ಸಹ ಜನಪ್ರಿಯವಾಗುತ್ತಿದೆ.
ವಿಡಿಯೋದಲ್ಲಿ ಏನಿದೆ? ಬಾತುಕೋಳಿಗಳನ್ನು ಟ್ರಾಫಿಕ್ ಪೊಲೀಸರು ರಸ್ತೆ ದಾಟಿಸುತ್ತಿರುವ ಈ ಘಟನೆಯು ಪ್ಯಾರಿಸ್ನ ಕೆನಾರ್ಡ್ ಸ್ಟ್ರೀಟ್ನಲ್ಲಿ ನಡೆದಿದೆ. ಬಾತುಕೋಳಿ ಮತ್ತು ಅದರ ಮೂರು ಮರಿಗಳು ವಾಹನ ತುಂಬಿದ ರಸ್ತೆಯಲ್ಲಿ ಆಕಸ್ಮಿಕವಾಗಿ ಬಂದಿವೆ. ಹೀಗೆ ಅವುಗಳನ್ನು ಸುರಕ್ಷಿತವಾಗಿ ರಸ್ತೆ ದಾಟಿಸಲು ಟ್ರಾಫಿಕ್ ಪೊಲೀಸರು ಅಕ್ಕಪಕ್ಕದ ವಾಹನಗಳಿಗೆ ಬರದಂತೆ ಸೂಚಿಸಿ ಅವುಗಳನ್ನು ಸುರಕ್ಷಿತವಾದ ಸ್ಥಳಕ್ಕೆ ತಲುಪುವಂತೆ ಮಾಡಿದ್ದಾರೆ.
ವಾಹನ ಸವಾರರು ಸಹ ಪೊಲೀಸರ ಜೊತೆ ಕೈಜೋಡಿಸಿ ಅವುಗಳಿಗೆ ಹೋಗಲು ನೆರವು ಮಾಡಿಕೊಟ್ಟರು. ವಿಡಿಯೋದಲ್ಲಿ ಬಸ್ ಸೇರಿ ಸೈಕಲ್ ಸವಾರರು ಬಾತುಕೋಳಿಗಳಿಗೆ ಜಾಗ ಬಿಟ್ಟುಕೊಟ್ಟು ನಿಂತಿರುವುದನ್ನು ಕಾಣಬಹುದು. ಜನರು ಕೂಡ ಈ ಮುದ್ದಾದ ಮರಿಗಳು ಅಮ್ಮನನ್ನೇ ಹಿಂಬಾಲಿಸಿ ಅದರ ಹಿಂದೆ ತಮ್ಮ ಪುಟ್ಟ ಪುಟ್ಟ ಹೆಜ್ಜೆಯನ್ನು ಹಾಕಿ ಹೋಗುತ್ತಿರುವುದನ್ನು ನೋಡಿ ಖುಷಿ ಪಟ್ಟರು.
ಸಿಕ್ಕಾಪಟ್ಟೆ ವೈರಲ್ ಆಯ್ತು ಬಾತುಕೋಳಿಯ ವಿಡಿಯೋ ಲಿಖ್ಸು ಎಂಬ ಇನ್ಸ್ಟಾಗ್ರಾಮ್ ಪುಟದಲ್ಲಿ ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. "ಪ್ಯಾರಿಸ್ನಲ್ಲಿ ಒಂದು ಮುದ್ದಾ ಕ್ಷಣ," ಎಂಬ ಶೀರ್ಷಿಕೆ ನೀಡಿ ಬಾತುಕೋಳಿ ಮತ್ತು ಅದರ ಮೂರು ಮರಿಗಳು ರಸ್ತೆ ದಾಟುತ್ತಿರುವ ಮತ್ತು ಸಹಾಯ ಮಾಡುತ್ತಿರುವ ಇಬ್ಬರು ಅಧಿಕಾರಿಗಳ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ಜೂನ್ 17 ರಂದು ಪೋಸ್ಟ್ ಮಾಡಲಾಗಿದ್ದ ವಿಡಿಯೋ ಈಗ ಸಾಕಷ್ಟು ಟ್ರೆಡಿಂಗ್ ಆಗಿದೆ. ಮಾನವೀಯತೆ ಮತ್ತು ಮುದ್ದುತನವನ್ನು ತೊರಿಸುವ ವಿಡಿಯೋವನ್ನು ನೆಟ್ಟಿಗರು ಸಹ ಮೆಚ್ಚಿಕೊಂಡಿದ್ದು 6 ಲಕ್ಷಕ್ಕೂ ಹೆಚ್ಚಿನ ಲೈಕ್ಸ್ ನೀಡಿದ್ದಾರೆ. ಜೊತೆಗೆ ಒಂದಿಷ್ಟು ಕಾಮೆಂಟ್ಸ್ ಗಳನ್ನು ಸಹ ನೀಡಿದ್ದಾರೆ. "ಓ ಮೈ ಗಾಡ್ ಎಷ್ಟು ಮುದ್ದಾಗಿದೆ ಈ ವಿಡಿಯೋ" ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಮತ್ತೊಬ್ಬರು ಚಪ್ಪಾಳೆ ತಟ್ಟುವ ಮತ್ತು ಹೃದಯಗಳ ಎಮೋಜಿಗಳೊಂದಿಗೆ ಕಾಮೆಂಟ್ ಮಾಡಿದ್ದಾರೆ.
ವಿಡಿಯೋ ನೋಡಲು ಮನಸ್ಸಿಗೆ ಮುದ ನೀಡುತ್ತದೆ ಎನ್ನುವುದರ ಜೊತೆ ಪೊಲೀಸ್ ಅಧಿಕಾರಿಗಳ ಮಾನವೀಯತೆ ಸಹ ಇಲ್ಲಿ ಗಮನಿಸಬೇಕಾದ ವಿಚಾರವಾಗಿದೆ. ರಸ್ತೆಯಲ್ಲಿ ಕೆಲವೊಮ್ಮೆ ನೋಡಿಯೋ ನೋಡದಂತೆ ಅದೆಷ್ಟೋ ಪ್ರಾಣಿಗಳನ್ನು ವಾಹನ ಚಾಲಕರು ಹೊಡೆದುಕೊಂಡು ಹೋಗಿ ಬಿಡುತ್ತಾರೆ. ಅವುಗಳಿಗೂ ಕುಟುಂಬವಿದೆ ಇವನ್ನೇಲ್ಲಾ ಯೋಚಿಸಿದೆ ಅವುಗಳಿಗೆ ಅಪಘಾತ ಮಾಡಿ ಹಾಗೇ ನಡೆದೇ ಬಿಡುತ್ತಾರೆ. ಬದಲಿಗೆ ಒಂದು ಕ್ಷಣ ವಾಹನವನ್ನು ನಿಲ್ಲಿಸಿ ಅವುಗಳು ಹೋಗುವವರೆಗೂ ಕಾದು ನಿಂತರೆ ಆ ಪುಟ್ಟ ಪ್ರಾಣಿಗಳನ್ನು ಬದುಕಿಸಿದ ಪುಣ್ಯ ನಮ್ಮದಾಗುತ್ತದೆ.
Published by:Ashwini Prabhu
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ