ಫೆಬ್ರವರಿ ತಿಂಗಳು ಯುವ ಪ್ರೇಮಿಗಳಲ್ಲಿ ಪ್ರೇಮ ಜ್ವರದ ಬಿಸಿ ಸ್ವಲ್ಪ ಜೋರಾಗಿಯೇ ಇರುತ್ತದೆ ಅಂತ ಹೇಳಿದರೆ ಸುಳ್ಳಾಗುವುದಿಲ್ಲ. ಫೆಬ್ರವರಿ 14 ರಂದು ಪ್ರೇಮಿಗಳು ಆಚರಿಸುವ ‘ವ್ಯಾಲೆಂಟೈನ್ಸ್ ಡೇ’ ಗೆ ಇನ್ನೂ ಕೆಲವು ದಿನಗಳು ಬಾಕಿ ಇರುವಾಗ ಎಲ್ಲಿ ನೋಡಿದರೂ ಪ್ರೇಮಿಗಳು ಹಾಗೆ ಮಾಡಿದ್ರು, ಈ ಪ್ರೇಮಿಗಳು ಹೀಗೆ ಮಾಡಿದ್ರು ಅಂತ ಅನೇಕ ರೀತಿಯ ಸುದ್ದಿಗಳು ಹರಿದಾಡುವುದನ್ನು ನಾವು ನೋಡುತ್ತೇವೆ ಅಂತ ಹೇಳಬಹುದು. ಈ ಇಡೀ ವಾರವನ್ನು ಯುವ ಪ್ರೇಮಿಗಳು ವ್ಯಾಲೆಂಟೈನ್ಸ್ ವೀಕ್ ಅಂತ ಪ್ರತಿದಿನ ರೋಸ್ ಡೇ, ಚಾಕೋಲೇಟ್ ಡೇ ಹೀಗೆ ಒಂದೊಂದು ವಿಶೇಷ ದಿನಗಳನ್ನು ಆಚರಿಸುತ್ತಾರೆ ಅಂತ ಹೇಳಬಹುದು. ವರ್ಷದ ಬೇರೆ ದಿನಗಳಿಗಿಂತಲೂ ಈ ವಾರದಲ್ಲಿ ಯಾವುದೇ ಪಾರ್ಕ್ ಗೆ ಹೋದರೂ ಅಲ್ಲಿ ಕುಳಿತುಕೊಳ್ಳುವ ಬೆಂಚ್ಗಳ ಮೇಲೆ ಯುವ ಪ್ರೇಮಿಗಳು ಗಂಟೆಗಟ್ಟಲೆ ಕೂತು ಕೈ ಕೈ ಹಿಡಿದುಕೊಂಡು ಮಾತನಾಡುತ್ತಾ ಕುಳಿತಿರುವುದನ್ನು ನೋಡಬಹುದು.
ಕೆಲವು ಕಡೆಗಳಲ್ಲಿಯಂತೂ ಕೆಲ ಪ್ರೇಮಿಗಳು ಸಾರ್ವಜನಿಕ ಸ್ಥಳ ಅನ್ನೋದನ್ನ ಮರೆತು ಒಬ್ಬರಿಗೊಬ್ಬರು ತಬ್ಬಿಕೊಂಡು ಚುಂಬಿಸುತ್ತಾ ಕೂತಿರುತ್ತಾರೆ ಅಂತ ಹೇಳಬಹುದು. ಇಂತಹ ಅನೇಕ ವಿಡಿಯೋಗಳನ್ನು ನಾವು ಸಾಮಾಜಿಕ ಮಾಧ್ಯಮಗಳಲ್ಲಿ ನೋಡಿರುತ್ತೇವೆ.
ಬೈಕ್ ಮೇಲೆ ರೋಮಾನ್ಸ್ ಮಾಡಿದ ಪ್ರೇಮಿಗಳು..
ಇಲ್ಲಿಯೂ ಸಹ ಅಂತಹದೇ ಒಂದು ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವೀಡಿಯೋದಲ್ಲಿ ಯುವ ಪ್ರೇಮಿಗಳಿಬ್ಬರು ಬೈಕ್ ಮೇಲೆ ರಸ್ತೆಯ ಮೇಲೆ ಹೋಗುವಾಗಲೇ ಒಳ್ಳೆ ಸಿನೆಮಾ ಸ್ಟೈಲ್ ನಲ್ಲಿ ರೋಮಾನ್ಸ್ ಮಾಡಿದ್ದಾರೆ ನೋಡಿ.
ವೈರಲ್ ಆಗಿರುವ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಗಮನ ಸೆಳೆದಿದೆ. ಈ ವೀಡಿಯೋ ರಾಜಸ್ಥಾನದ ಅಜ್ಮೀರ್ ನಿಂದ ಬಂದಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಆಕಾಶದಿಂದ ನೋಡಿದ್ರೆ ಭೂಮಿ ಹೇಗೆ ಕಾಣುತ್ತದೆ ಗೊತ್ತಾ? ನಾಸಾ ಹಂಚಿಕೊಂಡಿದೆ ಬ್ಯೂಟಿಫುಲ್ ಫೋಟೋಸ್
ವಿಡಿಯೋದಲ್ಲಿ, ಯುವಕನೊಬ್ಬ ಬೈಕ್ ಚಲಾಯಿಸುತ್ತಿದ್ದು, ಅವನ ಗೆಳತಿ ಅವನಿಗೆ ಎದುರಾಗಿ ಬೈಕಿನ ಮುಂದಿರುವ ಟ್ಯಾಂಕ್ ಮೇಲೆ ಕುಳಿತಿದ್ದಾಳೆ. ಅಜ್ಮೀರ್ ನ ನೌಸರ್ ವ್ಯಾಲಿಗೆ ಹೋಗುವ ರೀಜನಲ್ ಕಾಲೇಜ್ ಕ್ರಾಸ್ರೋಡ್ ನ ಜನನಿಬಿಡ ರಸ್ತೆಯಲ್ಲಿ ಈ ಜೋಡಿ ಹಕ್ಕಿ ಬೈಕ್ ಸವಾರಿ ನಡೆದಿದೆ. ಬೈಕ್ ಸವಾರನನ್ನು ಹುಡುಗಿ ಗಟ್ಟಿಯಾಗಿ ತಬ್ಬಿಕೊಂಡು ಕಿಸ್ ಮಾಡುವುದನ್ನು ನೋಡಬಹುದು.
ಇವರಿಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರಂತೆ ಪೊಲೀಸರು
ಆದಾಗ್ಯೂ, ಪೊಲೀಸರು ಇವರಿಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದರಿಂದ ಬೈಕ್ ಮೇಲೆ ಮಾಡಿದ ರೋಮಾನ್ಸ್ ಶೀಘ್ರದಲ್ಲಿಯೇ ಈ ಜೋಡಿಗೆ ತೊಂದರೆಗೆ ಸಿಲುಕುವಂತೆ ಮಾಡಿದೆ.
ಪೊಲೀಸರು ಈ ಲವ್ ಬರ್ಡ್ಸ್ ಅನ್ನು 24 ವರ್ಷದ ಸಾಹಿಲ್ ಮಾಸ್ಸಿ ಮತ್ತು ಅವನ ಗೆಳತಿ ಎಂದು ಗುರುತಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲತೆ, ಜೀವವನ್ನು ಅಪಾಯಕ್ಕೆ ತಳ್ಳುವುದು ಮತ್ತು ನಿರ್ಲಕ್ಷ್ಯದ ನಡವಳಿಕೆಯ ಆರೋಪದ ಮೇಲೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
#Ajmer में बाइक पर लड़की को आगे बैठाकर रोमांस का वीडियो हुआ वायरल, आमजन ने कहा शहर में ऐसी अश्लीलता पर हो कार्यवाही। #Rajasthan @AjmerpoliceR @PoliceRajasthan @RajCMO #अजमेर pic.twitter.com/UtsBbekKAx
— MTTV INDIA (@MTTVINDIA) February 6, 2023
ಈ ಹಿಂದೆ ಸಹ ಇಂತಹ ವೀಡಿಯೋಗಳು ಹೊರ ಬಂದಿದ್ದವು.
ಈ ಹಿಂದೆ ಛತ್ತೀಸ್‌ಘಡ್ ಮತ್ತು ಉತ್ತರ ಪ್ರದೇಶದಲ್ಲೂ ಇದೇ ರೀತಿಯ ವೀಡಿಯೋಗಳು ಹೊರ ಬಂದಿದ್ದವು. ಛತ್ತೀಸ್‌ಘಡ್ ದ ಭಿಲಾಯ್ ನಲ್ಲಿ ಜೋಡಿಯೊಂದು ರೋಮಾನ್ಸ್ ಮಾಡುವಾಗ ಸಿಕ್ಕಿಬಿದ್ದಿದ್ದರು.
ಮತ್ತೊಂದು ಘಟನೆಯಲ್ಲಿ, ಉತ್ತರ ಪ್ರದೇಶದ ಲಕ್ನೋದ ಹಜರತ್ ಗಂಜ್ ನಲ್ಲಿ ಜೋಡಿಯೊಂದು ಸ್ಕೂಟಿಯಲ್ಲಿ ಅಪಾಯಕಾರಿ ಸವಾರಿಯನ್ನು ಆನಂದಿಸುತ್ತಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ