• Home
 • »
 • News
 • »
 • trend
 • »
 • Court: ವಿಚಾರಣೆ ವೇಳೆ ಕೂಲ್​​ಡ್ರಿಂಕ್ಸ್ ಕುಡಿದ ಪೊಲೀಸ್ ಅಧಿಕಾರಿಗೆ ಕೋರ್ಟ್ ನೀಡಿದ ಶಿಕ್ಷೆ ಎಂಥದ್ದು ನೋಡಿ!

Court: ವಿಚಾರಣೆ ವೇಳೆ ಕೂಲ್​​ಡ್ರಿಂಕ್ಸ್ ಕುಡಿದ ಪೊಲೀಸ್ ಅಧಿಕಾರಿಗೆ ಕೋರ್ಟ್ ನೀಡಿದ ಶಿಕ್ಷೆ ಎಂಥದ್ದು ನೋಡಿ!

ಹುದ್ದೆಗೆ ಅರ್ಜಿ ಹಾಕಿ

ಹುದ್ದೆಗೆ ಅರ್ಜಿ ಹಾಕಿ

Virtual Hearing: ಈ ಹಿಂದೆ ವಿಚಾರಣೆ ವೇಳೆ ವಕೀಲರೊಬ್ಬರು ಸಮೋಸ ಸೇವನೆ ಮಾಡಿ ಅಶಿಸ್ತು ಪ್ರದರ್ಶನ ಮಾಡಿದರು.. ಈ ವೇಳೆ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರು ವಕೀಲರಿಗೂ ತರಾಟೆಗೆ ತೆಗೆದುಕೊಂಡಿದ್ದರು

 • Share this:

  ಸಾಮಾನ್ಯವಾಗಿ ತಪ್ಪು ಮಾಡಿದ ಅಪರಾಧಿಗಳಿಗೆ (Criminals) ಕೋರ್ಟ್(Court) ನೀಡುವ ಶಿಕ್ಷೆ (Punishment) ಬಹಳ ಕಠಿಣವಾಗಿರುತ್ತದೆ. ಆದರೆ ಇದಕ್ಕೆ ವಿರುದ್ಧವೆಂಬಂತೆ ಕೆಲವೊಂದು ಸಂದರ್ಭದಲ್ಲಿ ಕೋರ್ಟ್ ನೀಡುವ ತೀರ್ಪು ಚಿತ್ರವಿಚಿತ್ರವಾಗಿ ಇದ್ದು ಎಲ್ಲರಿಗೂ ಆಶ್ಚರ್ಯ ತರಿಸುತ್ತದೆ.. ಅದೆಷ್ಟು ವಿಚಿತ್ರವಾಗಿರುತ್ತದೆ ಅಂದರೆ ಕೋರ್ಟ್ ಕೂಡ ಇಷ್ಟೊಂದು ವಿಚಿತ್ರ ರೀತಿಯ ಶಿಕ್ಷೆ ನೀಡಲು ಸಾಧ್ಯವೇ ಎನ್ನುವ ಆಶ್ಚರ್ಯ ಎಲ್ಲರಿಗೂ ಉಂಟಾಗುತ್ತದೆ. ಅದೇ ರೀತಿಯಿಂದ ಆಶ್ಚರ್ಯ ಎನಿಸುವಂತಹ ಶಿಕ್ಷೆಯೊಂದನ್ನು ಗುಜರಾತ್ ಹೈಕೋರ್ಟ್ (Gujarat High Court)ಪೋಲಿಸ್ ಅಧಿಕಾರಿಯೊಬ್ಬರಿಗೆ(Police officer)ನೀಡಿದ್ದು ಎಲ್ಲರೂ ಅಚ್ಚರಿಪಡುವಂತೆ ಇದೆ.


  ವಿಚಾರಣೆ ವೇಳೆ ಕೂಲ್ ಡ್ರಿಂಕ್ಸ್ ಕುಡಿದಿದ್ದಕ್ಕೆ ಶಿಕ್ಷೆ


  ಕೋವಿಡ್ ಪ್ರಕರಣಗಳಲ್ಲಿ ಏರಿಕೆ ಹಾಗೂ ರೂಪಾಂತರ ವೈರಸ್ ಒಮಿಕ್ರಾನ್ ನ (Omicron ) ಪ್ರಕರಣಗಳಿಂದಾಗಿ ದೇಶಾದ್ಯಂತ ಮೂರನೇ ಅಲೆಯ (Third Wave) ಆತಂಕ ಹೆಚ್ಚಾಗಿದ್ದು, ಬಹುತೇಕ ಹೈಕೋರ್ಟ್ ಗಳು (High Courts) ಕಲಾಪಗಳನ್ನು ವರ್ಚುವಲ್ ಆಗಿ (Virtual Mode) ನಡೆಯುತ್ತಿವೆ.. ಅದೇ ರೀತಿ ಗುಜರಾತ್ ಹೈಕೋರ್ಟಿನ ಕಾರ್ಯಕಲಾಪಗಳು ಕೂಡ ವರ್ಚುವಲ್ ವೇದಿಕೆಯ ಮೂಲಕ ನಡೆಯುತ್ತಿವೆ. ಹೀಗಾಗಿ ಟ್ರಾಫಿಕ್​ ಜಂಕ್ಷನ್​​ನಲ್ಲಿ ಪೊಲೀಸ್​ ಅಧಿಕಾರಿ ಎ.ಎಂ.ರಾಥೋಡ್​ ಮತ್ತು ಇತರ ಪೊಲೀಸ್ ಅಧಿಕಾರಿಗಳು ಇಬ್ಬರು ಮಹಿಳೆಯರಿಗೆ ಥಳಿಸಿದ್ದಾರೆ ಎಂಬ ಆರೋಪ ಅರ್ಜಿಗೆ ಸಂಬಂಧಪಟ್ಟಂತೆ ಇವರು ಕೋರ್ಟ್​​ನ ವರ್ಚ್ಯುವಲ್​ ವಿಚಾರಣೆಗೆ ಹಾಜರಾಗಿದ್ದರು.


  ಇದನ್ನೂ ಓದಿ: ದೂರವಾದ ಆತಂಕ: ಚಾಮರಾಜನಗರ ಸರ್ಕಾರಿ ಮೆಡಿಕಲ್ ಕಾಲೇಜು ಪ್ರವೇಶಾತಿಗೆ ಹೈಕೋರ್ಟ್ ಆದೇಶ


  ವರ್ಚುವಲ್ ವೇದಿಕೆ ಮೂಲಕ ನಡೆಯುತ್ತಿದ್ದ ಈ ಕಲಾಪದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಕೂಲ್ ಡ್ರಿಂಕ್ಸ್ ಕುಡಿದು ಶಿಸ್ತು ಉಲ್ಲಂಘನೆ ಮಾಡಿದ್ದಾರೆ ಎನ್ನುವ ಕಾರಣಕ್ಕೆ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರು ನೀಡಿರುವ ಶಿಕ್ಷೆ ಈಗ ಎಲ್ಲರ ಗಮನ ಸೆಳೆಯುತ್ತಿದೆ.


  100 ಕ್ಯಾನ್​​ಗಳಷ್ಟು ತಂಪು ಪಾನೀಯ ವಿತರಿಸಲು ಸೂಚನೆ


  ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರ ನೇತೃತ್ವದಲ್ಲಿ ಪ್ರಕರಣವೊಂದರ ವರ್ಚುವಲ್ ವಿಚಾರಣೆ ನಡೆಯುತ್ತಿತ್ತು. ವಿಚಾರಣೆಯಲ್ಲಿ ವಕೀಲರು ಪೋಲಿಸರು ಕೂಡ ಭಾಗಿಯಾಗಿದ್ದರು.. ಈ ವೇಳೆ ಇದ್ದಕ್ಕಿದ್ದಂತೆ ಬಾಯಾರಿಕೆಯಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಒಂದೆರಡು ಗುಟುಕು ತಂಪು ಪಾನೀಯ ಸೇವಿಸಿದ್ದಾರೆ. ಇದನ್ನು ಗಮನಿಸಿದ ನ್ಯಾಯಮೂರ್ತಿ ಅರವಿಂದ್ ಕುಮಾರ್ ಇದು ಶಿಸ್ತಿನ ಕ್ರಮ ಎಂದು ಹೇಳಿದ್ದಾರೆ. ಹೀಗಾಗಿ ವಿಚಾರಣೆ ವೇಳೆ ಡ್ರಿಂಕ್ಸ್ ಕುಡಿದ ಪೊಲೀಸ್ ಅಧಿಕಾರಿಗೆ ಶಿಕ್ಷೆಯನ್ನು ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರು ನೀಡಿದ್ದು ಅವರು ನೀಡಿರುವ ಶಿಕ್ಷೆ ಈಗ ಎಲ್ಲರ ಗಮನ ಸೆಳೆಯುತ್ತಿದೆ..


  ಹೌದು ವಿಚಾರಣೆ ವೇಳೆ ಕೂಲ್ ಡ್ರಿಂಕ್ಸ್ ಕುಡಿದ ಪೊಲೀಸ್ ಅಧಿಕಾರಿಗೆ , ವಿಚಾರಣೆ ವರ್ಚ್ಯುವಲ್ ಆಗಿರಲಿ, ಭೌತಿಕವಾಗಿಯೇ ನಡೆಯುತ್ತಿರಲಿ, ಶಿಸ್ತು ಮುಖ್ಯ. ನೀವು ವಿಚಾರಣೆ ಮಧ್ಯೆ ತಂಪು ಪಾನೀಯದಂತೆ ಕಾಣುವ ಏನನ್ನೋ ಸೇವಿಸಿದ್ದೀರಿ. ಇದು ಸರಿಯಾದ ವರ್ತನೆಯಲ್ಲ, ಹೀಗಾಗಿ ಒಂದೋ ಶಿಸ್ತು ಕ್ರಮ ಎದುರಿಸಬೇಕು ಇಲ್ಲವೇ, ನಮ್ಮ ಹೈಕೋರ್ಟ್​ನ 100 ವಕೀಲರಿಗೆ ಕೋಲ್ಡ್​ ಡ್ರಿಂಕ್​ ವಿತರಿಸಬೇಕು ಎಂದು ನ್ಯಾಯಮೂರ್ತಿಗಳು ಹೇಳಿದರು


  ಇದನ್ನೂ ಓದಿ: ಮೊದಲ ಸೋದರ ಸಂಬಂಧಿಯೊಂದಿಗಿನ ಮದುವೆ ಕಾನೂನು ಬಾಹಿರ ಎಂದ ನ್ಯಾಯಾಲಯ


  ಸಮೋಸದಿಂದ ವಕೀಲರಿಗೂ ತರಾಟೆಗೆ ತೆಗೆದುಕೊಂಡಿದ್ದ ನ್ಯಾಯಮೂರ್ತಿಗಳು


  ಇನ್ನು ಈ ಹಿಂದೆ ವಿಚಾರಣೆ ವೇಳೆ ವಕೀಲರೊಬ್ಬರು ಸಮೋಸ ಸೇವನೆ ಮಾಡಿ ಅಶಿಸ್ತು ಪ್ರದರ್ಶನ ಮಾಡಿದರು.. ಈ ವೇಳೆ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರು ವಕೀಲರಿಗೂ ತರಾಟೆಗೆ ತೆಗೆದುಕೊಂಡಿದ್ದರು. ಸಮೋಸ ತಿನ್ನುತ್ತಿದ್ದ ವಕೀಲರಿಗೆ ನಾನು, ನೀವು ಸಮೋಸಾ ತಿನ್ನುವುದಕ್ಕೆ ನಮ್ಮಿಂದ ಏನೂ ಅಡ್ಡಿಯಿಲ್ಲ. ಆದರೆ ನಮ್ಮೆದುರಿಗೆ ನೀವು ತಿನ್ನುವಂತಿಲ್ಲ. ಒಂದೋ ಎಲ್ಲರಿಗೂ ಕೊಟ್ಟು ತಿನ್ನಬೇಕು ಇಲ್ಲವೇ ನೀವೂ ತಿನ್ನಬಾರದು ಎಂದು ಹೇಳಿದ್ದೆ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.

  Published by:ranjumbkgowda1 ranjumbkgowda1
  First published: