ಈ ವಿಡಿಯೋ ಮಾಡಿ ನಾಲ್ವರು ಯುವಕರು ಕಂಬಿ ಎಣಿಸಿದರು!


Updated:August 3, 2018, 2:51 PM IST
ಈ ವಿಡಿಯೋ ಮಾಡಿ ನಾಲ್ವರು ಯುವಕರು ಕಂಬಿ ಎಣಿಸಿದರು!

Updated: August 3, 2018, 2:51 PM IST
ನ್ಯೂಸ್​ 18 ಕನ್ನಡ

ಮುಂಬೈ: ಇಲ್ಲಿನ ಸ್ಥಳೀಯ ರೈಲಿನಲ್ಲಿ ಯುವಕರು ಸ್ಟಂಟ್​ ಪ್ರದರ್ಶಿಸುವ ವಿಡಿಯೋವೊಂದು ಸಾಕಷ್ಟು ವೈರಲ್​ ಆಗಿದ್ದು, ಈ ವಿಡಿಯೋ ವೀಕ್ಷಿಸಿದ ಪೊಲೀಸರು ಯುವಕರನ್ನು ಬಂಧಿಸಿದ ಘಟನೆ ನಡೆದಿದೆ. ಆದರೆ ಕೇವಲ ಒಂದು ವಿಡಿಯೋದಿಂದ ಪೊಲೀಸರು ಬಂಧಿಸುತ್ತಾರ? ಎಂದು ಪ್ರಶ್ನಿಸುವ ಮುನ್ನ ಈ ಸ್ಟೋರಿ ಓದಿ

ಮುಂಬೈನ ಚುನಭಟ್ಟಿ ನಿಲ್ದಾಣದಿಂದ ಜಿಟಿಬಿ ನಗರ ನಿಲ್ದಾಣ ಕಡೆ ಚಲಿಸುತ್ತಿದ್ದ ಹರ್ಬರ್​ ಲೈನ್​ ರೈಲಿನಲ್ಲಿ, ನಾಲ್ಕೈದು ಯುವಕರು ದಾರಿಯುದ್ದಕ್ಕೂ ಸಾಕಷ್ಟು ಸ್ಟಂಟ್​ಗಳನ್ನು ಮಾಡುತ್ತಾ ಬಂದಿದ್ದರು. ಇಷ್ಟಕ್ಕೇ ಸುಮ್ಮನಿದ್ದರೆ ಪರವಾಗಿಲ್ಲ, ಗುಂಪಿನಲ್ಲಿದ್ದ ಯುವಕನೊಬ್ಬ ಸ್ಟೇಷನ್​ವೊಂದರಲ್ಲಿ ನಿಂತಿದ್ದ ವ್ಯಕ್ತಿಯ ಮೊಬೈಲ್​ನ್ನು ಕಸಿದುಕೊಂಡಿದ್ದಾನೆ.


Loading...

ಯುವಕ ಮೊಬೈಲ್​ ಕಸಿಯುವ ದೃಶ್ಯ ವಿಡಿಯೋದಲ್ಲಿ ರೆಕಾರ್ಡ್​ ಆಗಿದ್ದು, ಬಳಿಕ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಆ ಯುವಕರೇ ಶೇರ್​ ಮಾಡಿದ್ದಾರೆ. ಇದು ವೈರಲ್​ ಆಗಿದ್ದು ಕಳ್ಳತನದ ದೃಶ್ಯ ಗಮನಿಸಿದ ಆರ್​ಪಿಎಫ್​ ಅಧಿಕಾರಿಗಳು ವಿಡಿಯೋ ಚಿತ್ರೀಕರಿಸಿದವನ ಹಿಂದೆ ಬಿದ್ದಿದ್ದು ಬಂಧಿಸಿದ್ದಾರೆ. ಈ ಕುರಿತು ಎಎನ್​ಐ ವರದಿ ಮಾಡಿದ್ದು ವಿಡಿಯೋದಲ್ಲಿದ್ದ ಅಷ್ಟೂ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.ವರ್ಷದ ಹಿಂದೆ ಬೆಂಗಳೂರಿನ ರೈಲಿನಲ್ಲಿ ಯುವಕನ ಮೊಬೈಲ್​ನ್ನು ಕಸಿಯುವ ವಿಡಿಯೋ ಭಾರೀ ವೈರಲ್​ ಆಗಿತ್ತು, ಅಲ್ಲದೇ 2016ರಲ್ಲಿ ಮುಂಬೈನಲ್ಲೇ ಯುವಕನೊಬ್ಬ ರೈಲಿನಲ್ಲಿ ಸ್ಟಂಟ್​ ಮಾಡಲು ಹೋಗಿ ಜೀವ ಕಳೆದುಕೊಂಡ ಘಟನೆಯೂ ಸಂಚಲನ ಮೂಡಿಸಿತ್ತು.
First published:August 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...