Viral News: ಕಳ್ಳತನ ಮಾಡಲು ಬಂದು ಕುಡಿದ ಮತ್ತಿನಲ್ಲಿ ಪೊಲೀಸರ ಅತಿಥಿಯಾದ ಭೂಪ..

ಆ ಕದಿಯಲು ಬಂದಂತಹ ವ್ಯಕ್ತಿಯನ್ನು ಲೀ ರೋಚ್ ಎಂದು ಗುರುತಿಸಲಾಗಿದ್ದು, ಆ ವ್ಯಕ್ತಿ ಹ್ಯಾರಿಸನ್ಸ್ ಬಾರ್ ಗೆ ಕಳ್ಳತನ ಮಾಡುವ ಉದ್ದೇಶದಿಂದ ನುಗ್ಗಿದ್ದನು ಎಂದು ಹೇಳಲಾಗುತ್ತಿದೆ. ಆದರೆ ಅವನು ತುಂಬಾ ಕುಡಿದು ನಂತರ, ಅವನು ಬಾರ್‌ನ ಹಿಂಬದಿಗೆ ಹೋಗಿದ್ದನು ಎಂದು ಹೇಳಲಾಗಿದೆ.

ಬಂಧಿತನಾದ ಕಳ್ಳ

ಬಂಧಿತನಾದ ಕಳ್ಳ

  • Share this:

ಸಾಮಾನ್ಯವಾಗಿ ಮನೆಯಲ್ಲಿರುವ ಬೆಲೆಬಾಳುವಂತಹ ಚಿನ್ನಾಭರಣಗಳನ್ನು(Gold) ದೋಚಿಕೊಂಡು ಹೋಗಲೆಂದೇ ಕಳ್ಳರು ಮನೆಗೆ ನುಗ್ಗುತ್ತಾರೆ. ಹಾಗೆಯೇ ಕಳ್ಳರು ಈ ದೊಡ್ಡ ಅಂಗಡಿಗಳಲ್ಲಿ ಮತ್ತು ಇತ್ತೀಚೆಗೆ ಈ ಬಾರ್(Bar) ಮತ್ತು ರೆಸ್ಟೋರೆಂಟ್‌ಗಳಿಗೂ ಸಹ ನುಗ್ಗಿ ಹಣವನ್ನು ಕದಿಯಲು ಪ್ರಯತ್ನಿಸಿ ವಿಫಲವಾಗಿರುವಂತಹ ಘಟನೆಗಳು ನಾವು ನೋಡುತ್ತಿದ್ದೇವೆ.ಆದರೆ ಇಲ್ಲೊಬ್ಬ ವ್ಯಕ್ತಿಯು ಕಳ್ಳತನ ಮಾಡುವ ಉದ್ದೇಶದಿಂದ ಬಾರ್ ಗೆ ನುಗ್ಗಿದ್ದು, ಏನು ಅವಾಂತರ ಮಾಡಿಕೊಂಡಿದ್ದಾನೆ ನೀವೇ ನೋಡಿ.


ಇತ್ತೀಚೆಗೆ ಲೀವರ್ ಪೂಲ್ ನಲ್ಲಿರುವಂತಹ ಒಂದು ಪಬ್ ಗೆ ನುಗ್ಗಿದ ವ್ಯಕ್ತಿ ಕಂಠಪೂರ್ತಿಯಾಗಿ ಕುಡಿದು ತಾನು ಕದಿಯಲು ಬಂದಿರುವುದನ್ನೇ ಮರೆತು ಅಲ್ಲೇ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದು, ಆ ಕಳ್ಳನನ್ನು ಪೊಲೀಸರು ಬಂಧಿಸಿ ಕರೆದೊಯ್ದಂತಹ ಘಟನೆಯ ಸುದ್ದಿಯು ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾನೇ ವೈರಲ್ ಆಗಿದೆ.


ಆ ಕದಿಯಲು ಬಂದಂತಹ ವ್ಯಕ್ತಿಯನ್ನು ಲೀ ರೋಚ್ ಎಂದು ಗುರುತಿಸಲಾಗಿದ್ದು, ಆ ವ್ಯಕ್ತಿ ಹ್ಯಾರಿಸನ್ಸ್ ಬಾರ್ ಗೆ ಕಳ್ಳತನ ಮಾಡುವ ಉದ್ದೇಶದಿಂದ ನುಗ್ಗಿದ್ದನು ಎಂದು ಹೇಳಲಾಗುತ್ತಿದೆ. ಆದರೆ ಅವನು ತುಂಬಾ ಕುಡಿದು ನಂತರ, ಅವನು ಬಾರ್‌ನ ಹಿಂಬದಿಗೆ ಹೋಗಿದ್ದನು ಎಂದು ಹೇಳಲಾಗಿದೆ.


ಮರುದಿನ ಬೆಳಿಗ್ಗೆ ಬಾರ್ ಅನ್ನು ಸ್ವಚ್ಛಗೊಳಿಸಲು ಕೆಲಸಗಾರರು ಬಂದಾಗ ಆ ವ್ಯಕ್ತಿಯನ್ನು ಗುರುತಿಸಿದರು. ಆಗ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಂತಹ ವ್ಯಕ್ತಿಯನ್ನು ಎಬ್ಬಿಸಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ರೋಚ್ 'ಕಿಟಕಿಯನ್ನು ಮುರಿಯುವ' ಮೂಲಕ ಪಬ್ ಪ್ರವೇಶಿಸಿದನು ಎಂದು ಹೇಳಲಾಗುತ್ತಿದೆ. ಪೊಲೀಸ್ ಠಾಣೆಯಲ್ಲಿ ಅವನನ್ನು ಪರಿಶೀಲಿಸಿದಾಗ ಅವನ ಚೀಲದಲ್ಲಿ ಮದ್ಯದ ಬಾಟಲಿಗಳು ಮತ್ತು $10,000 ನಕಲಿ ಹಣವನ್ನು ಕಂಡುಕೊಂಡರು.


ಇದನ್ನೂ ಓದಿ: ಬರೋಬ್ಬರಿ 15 ಸಾವಿರ ವರ್ಷಗಳ ಕಾಲ ಬದುಕುತ್ತದೆ ಈ ಪ್ರಾಣಿ, ಇದು ಪ್ರಪಂಚದ ವಿಚಿತ್ರವಲ್ಲದೆ ಮತ್ತೇನು!

ಆಗಸ್ಟ್ 16 ರಂದು ಈ ಘಟನೆ ನಡೆದಿದ್ದು, ಮರುದಿನ ಬೆಳಿಗ್ಗೆ 9:20 ರ ಸುಮಾರಿಗೆ ಅಡುಗೆ ಮನೆಯನ್ನು ಸ್ವಚ್ಛ ಗೊಳಿಸುತ್ತಿರುವಾಗ ಹ್ಯಾರಿಸನ್ ಬಾರ್ ನ ಸಿಬ್ಬಂದಿ ರೋಚ್ ಅವರನ್ನು ಗಮನಿಸಿದರು ಎಂದು ಪ್ರಾಸಿಕ್ಯೂಟರ್ ಮೈಕ್ ಸ್ಟೀಫನ್ಸನ್ ಹೇಳಿದ್ದಾರೆ.


ನ್ಯಾಯಾಲಯದಲ್ಲಿ ಕಳ್ಳತನ ಮಾಡಲೆಂದು ಬಾರ್ ಗೆ ನುಗ್ಗಿದ್ದನ್ನು ಒಪ್ಪಿಕೊಂಡ ರೋಚ್, ಇದುವರೆಗೂ ತಾನು 161 ಅಪರಾಧಗಳನ್ನು ಮಾಡಿದ್ದು, ಅದರಲ್ಲಿ ಸುಮಾರು 90 ಅಪರಾಧಗಳಿಗೆ ಶಿಕ್ಷೆಯನ್ನು ಅನುಭವಿಸಿದ್ದಾನೆ. ಇದರಲ್ಲಿ 86 ಕಳ್ಳತನದ ಅಪರಾಧಗಳು ಸೇರಿವೆ ಎಂದು ತಿಳಿದು ಬಂದಿದೆ.


ಕಳೆದ ವರ್ಷ ಸಹ ಇಂತಹದೇ ರೀತಿಯ ಘಟನೆಯೊಂದು ನಡೆದಿದ್ದು, ಅಲಬಾಮಾದ ರೆಸ್ಟೋರೆಂಟ್ ಅನ್ನು ದೋಚಲು ಪ್ರಯತ್ನಿಸುತ್ತಿದ್ದ ಒಬ್ಬ ವ್ಯಕ್ತಿಯು ಕದ್ದ ನಂತರ ಕಂಠಪೂರ್ತಿಯಾಗಿ ಕುಡಿದು ತಾನು ಕದ್ದ ಹಣ ಮತ್ತು ಮದ್ಯವನ್ನು ಅಲ್ಲಿಯೇ ಬಿಟ್ಟು ಹೋಗಿದ್ದನು.


ಇದನ್ನೂ ಓದಿ: ಸ್ವಿಮ್​ಸೂಟ್​ ತೊಟ್ಟು ಪೂಲ್​ ಪಾರ್ಟಿ ಎಂಜಾಯ್ ಮಾಡಿದ ಗರ್ಭಿಣಿ ನಟಿ Neha Dhupia

ಈ ಘಟನೆಯು ಅಲ್ಲೇ ಇದ್ದಂತಹ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮುಖವಾಡ ಧರಿಸಿದ ಕಳ್ಳನು ಅಲಬಾಮಾದಲ್ಲಿರುವ ರೆಸ್ಟೋರೆಂಟ್ ಅನ್ನು ಮುಚ್ಚಿರುವಾಗ ಪ್ರವೇಶಿಸಿದ್ದು ಅದರಲ್ಲಿ ನೋಡಬಹುದಾಗಿದೆ. ಅವನು ಹೆಚ್ಚು ಕುಡಿದ ನಂತರ ಕದ್ದಂತಹ ಹಣವನ್ನು ಅಲ್ಲಿಯೇ ಬಿಟ್ಟು ಹೋಗಿರುವ ಘಟನೆ ನಡೆದಿತ್ತು.



First published: